AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಸಲಕ್ಕೆ ಒಂದು ಎಸೆತದ ಬಗ್ಗೆ ಮಾತ್ರ ಯೋಚಿಸುತ್ತೇನೆ: ಬುಮ್ರಾ

ಒಬ್ಬ ಬೌಲರ್, ಸ್ಪಿನ್ನರ್ ಆಗಿರಲಿ ಅಥವಾ ವೇಗಿ, ಅವನ ಗುರಿ ವಿಶ್ವದ ಖ್ಯಾತ ಬ್ಯಾಟ್ಸ್​ಮನ್​ಗಳನ್ನು ಔಟ್ ಮಾಡುವುದಾಗಿರುತ್ತದೆ. ಉದಯೋನ್ಮುಖ ಬೌಲರ್​​ನೊಬ್ಬನನ್ನು ನೀವೊಮ್ಮೆ ಕೇಳಿ ನೋಡಿ, ಆವನು ಅದನ್ನೇ ಹೇಳುತ್ತಾನೆ, ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್, ಜೊ ರೂಟ್ ಮೊದಲಾದವರನ್ನು ಕನಿಷ್ಠ ಒಮ್ಮೆಯಾದರೂ ಔಟ್ ಮಾಡಬೇಕು! ಭಾರತ ಮತ್ತು ಮುಂಬೈ ಇಂಡಿಯನ್ಸ್ ಟೀಮಿನ ಪ್ರಮುಖ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾಗೂ ತನ್ನ ಕರೀಯರ್ ಶುರುವಾಗುವ ಸಂದರ್ಭದಲ್ಲಿ ಅಂಥ ಮಹತ್ವಾಕಾಂಕ್ಷೆ ಇದ್ದೀತು. ಈಗ ಬಿಡಿ, ಅವರು ವಿಶ್ವದ […]

ಒಂದು ಸಲಕ್ಕೆ ಒಂದು ಎಸೆತದ ಬಗ್ಗೆ ಮಾತ್ರ ಯೋಚಿಸುತ್ತೇನೆ: ಬುಮ್ರಾ
ಜಸ್ಪ್ರೀತ್ ಬುಮ್ರಾ
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 29, 2020 | 6:49 PM

Share

ಒಬ್ಬ ಬೌಲರ್, ಸ್ಪಿನ್ನರ್ ಆಗಿರಲಿ ಅಥವಾ ವೇಗಿ, ಅವನ ಗುರಿ ವಿಶ್ವದ ಖ್ಯಾತ ಬ್ಯಾಟ್ಸ್​ಮನ್​ಗಳನ್ನು ಔಟ್ ಮಾಡುವುದಾಗಿರುತ್ತದೆ. ಉದಯೋನ್ಮುಖ ಬೌಲರ್​​ನೊಬ್ಬನನ್ನು ನೀವೊಮ್ಮೆ ಕೇಳಿ ನೋಡಿ, ಆವನು ಅದನ್ನೇ ಹೇಳುತ್ತಾನೆ, ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್, ಜೊ ರೂಟ್ ಮೊದಲಾದವರನ್ನು ಕನಿಷ್ಠ ಒಮ್ಮೆಯಾದರೂ ಔಟ್ ಮಾಡಬೇಕು!

ಭಾರತ ಮತ್ತು ಮುಂಬೈ ಇಂಡಿಯನ್ಸ್ ಟೀಮಿನ ಪ್ರಮುಖ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾಗೂ ತನ್ನ ಕರೀಯರ್ ಶುರುವಾಗುವ ಸಂದರ್ಭದಲ್ಲಿ ಅಂಥ ಮಹತ್ವಾಕಾಂಕ್ಷೆ ಇದ್ದೀತು. ಈಗ ಬಿಡಿ, ಅವರು ವಿಶ್ವದ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರೆಂದು ಗುರುತಿಸಿಕೊಳ್ಳುತ್ತಾರೆ. ಗೆಳೆಯರಿಂದ ಮತ್ತು ಆತ್ಮೀಯರಿಂದ ಬೂಮ್ ಬೂಮ್ ಎಂದು ಕರೆಸಿಕೊಳ್ಳುವ ಬುಮ್ರಾ ಬುಧವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಾರಕ ಬೌಲಿಂಗ್ ಪ್ರದರ್ಶನ ನೀಡಿ ಕೇವಲ 14 ರನ್​ಗಳಿಗೆ 3 ವಿಕೆಟ್ ಪಡೆದು ಮುಂಬೈ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅಂದಹಾಗೆ, ಬುಮ್ರಾ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ 100 ವಿಕೆಟ್ ಪಡೆದ ಸಾಧನೆಯನ್ನು ಸಹ ಈ ಪಂದ್ಯದಲ್ಲಿ ಮಾಡಿದರು. ಆವರ ಈ ಸಾಧನೆಯ ವೈಶಿಷ್ಟ್ಯತೆಯೇನು ಗೊತ್ತಾ? ಐಪಿಎಲ್​ನಲ್ಲಿ ಅವರ ಮೊದಲ ಮತ್ತು 100 ನೇ ವಿಕೆಟ್ ವಿರಾಟ್ ಕೊಹ್ಲಿ!

ನಿಖರವಾಗಿ ಯಾರ್ಕರ್​ಗಳನ್ನು ಎಸೆಯುತ್ತಿದ್ದರಿಂದ ಬುಮ್ರಾರನ್ನು ಮೊದಲೆಲ್ಲ ಸೀಮಿತ ಓವರ್​ಗಳ ಸ್ಪೆಷಲಿಸ್ಟ್ ಎನ್ನುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಅವರೊಬ್ಬ ಪರಿಪೂರ್ಣ ಬೌಲರ್ ಆಗಿ ರೂಪುಗೊಂಡು, ಟೆಸ್ಟ್​ಗಳಲ್ಲೂ ಅದೇ ವೇಗ, ಮೊನಚು, ನಿಖರತೆ, ಸ್ವಿಂಗ್ ಮತ್ತು ಸೀಮ್ ಹಾಗೂ ಅದ್ಭುತ ನಿಯಂತ್ರಣದೊಂದಿಗೆ ಆಕ್ರಮಣ ನಡೆಸಿ ಭಾರತಕ್ಕೆ ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ.

ಬುಮ್ರಾ, ಸೀಮಿತ ಓವರ್ ಪಂದ್ಯಗಳಲ್ಲಿ ಡೆತ್ ಓವರ್​ಗಳನ್ನು ಅಥವಾ ವಿಶಿಷ್ಟ ಸಂದರ್ಭಗಳಲ್ಲಿ ಬೌಲ್ ಮಾಡಬೇಕಾಗುವ ಸೂಪರ್ ಓವರ್​ಗಳನ್ನು ಎಸೆಯುವುದರಲ್ಲಿ, ಕೇವಲ ಪರಿಣಿತರು ಮಾತ್ರವಲ್ಲ, ನಿಷ್ಣಾತರೂ ಹೌದು. ಈ ಐಪಿಎಲ್ ಸೀಸನ್​ನಲ್ಲಿ ಮುಂಬೈ ಟೀಮಿನ ನಿಷ್ಠಾವಂತ ಬೌಲರ್ ಲಸಿತ್ ಮಲಿಂಗ ಆಡುತ್ತಿಲ್ಲವಾದ್ದರಿಂದ ಡೆತ್ ಓವರಗಳನ್ನು ಎಸೆಯುವ ಜವಾಬ್ದಾರಿ ಬುಮ್ರಾ ಮೇಲೆ ಜಾಸ್ತಿಯಿದೆ. ಕ್ರಿಕೆಟ್ ಪ್ರೇಮಿಗಳು ಸದರಿ ಸೀಸನ್​ನಲ್ಲಿ ಬುಮ್ರಾ ಬೌಲಿಂಗ್ ಆಕ್ರಮಣದ ಪ್ಯಾಟರ್ನ್ ಗಮನಿಸಿರಬಹುದು. ಆರಂಭದಲ್ಲಿ ಅಂದರೆ, ಪವರ್ ಪ್ಲೇ ಜಾರಿಯಲ್ಲಿರುವಾಗ ಒಂದು ಓವರ್ ಎಸೆಯುತ್ತಾರೆ; ನಂತರ, ಮಿಡ್ಲ್ ಒವರ್​ಗಳಲ್ಲಿ ಇನ್ನೊಂದು ಓವರ್ ಬೌಲ್ ಮಾಡುತ್ತಾರೆ, ಮತ್ತು ಅಂತಿಮವಾಗಿ 18 ಮತ್ತು 20 ನೇ ಇಲ್ಲವೇ 17 ಮತ್ತು 19ನೇ ಓವರ್​ಗಳನ್ನು ಬೌಲ್ ಮಾಡುತ್ತಾರೆ.

ಹಾಗಾದರೆ, ಡೆತ್ ಬೌಲರ್​ಗಳಲ್ಲಿ ಬುಮ್ರಾ ಯಾಕೆ ಹೆಚ್ಚು ಯಶ ಕಾಣುತ್ತಾರೆ, ಬೇರೆ ಬೌಲರ್​ಗಳಿಗಿಂತ ಭಿನ್ನವಾಗಿ ಬೌಲ್ ಮಾಡುವುದು ಅವರಿಗೆ ಹೇಗೆ ಸಾಧ್ಯವಾಗುತ್ತದೆ?

ಕ್ರಿಕೆಟ್ ವೆಬ್​ಸೈಟೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬುಮ್ರಾ ತಮ್ಮ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಡೆತ್ ಓವರ್​ಗಳನ್ನು ಹೀಗೇಯೇ ಅಂತ ವ್ಯಾಖ್ಯಾನಿಸುವುದು ಕಷ್ಟವೆಂದು ಬುಮ್ರಾ ಹೇಳುತ್ತಾರೆ. ಪ್ರತಿಯೊಬ್ಬ ಬೌಲರ್ ಭಿನ್ನವಾಗಿ ಯೋಚಿಸುತ್ತಾನೆ ಮತ್ತು ತನ್ನದೇ ಆದ ಯೋಜನೆಯೊಂದಿಗೆ ದಾಳಿಗಿಳಿಯುತ್ತಾನೆ ಅಂತ ಅವರು ವಿವರಿಸುತ್ತಾರೆ.

‘‘ನನ್ನದು ಬಹಳ ಸರಳವಾದ ತಂತ್ರಗಾರಿಕೆ. ಮೊದಲು ನಾನು ಪಿಚ್ ಹೇಗಿದೆ, ಹೇಗೆ ವರ್ತಿಸುತ್ತಿದೆ ಎನ್ನುವುದನ್ನು ಗಣನೆಗೆ ತೆಗೆದುಕೊಂಡು ಮ್ಯಾಚ್ ಯಾವ ಸ್ಥಿತಿಯಲ್ಲಿದೆ ಅಂತ ಯೋಚಿಸುತ್ತೇನೆ. ಕೊನೆಯಲ್ಲಿ, ಯಾವ ಎಸೆತ ಸೂಕ್ತವಾದದ್ದ್ದು ಅಂತ ನಿರ್ಧರಿಸಿ ಬೌಲ್ ಮಾಡುತ್ತೇನೆ. ಹೊರಗಡೆ ಕೂತು ಯಾರ್ಕರ್ ಎಸೆಯಬೇಕು, ಸ್ಲೋ ಬೌನ್ಸರ್ ಎಸೆಯಬೇಕು ಅಂತ ಹೇಳುವುದು ಸುಲಭ. ಆದರೆ ಬೌಲರ್ ಆ ಸಂದರ್ಭದಲ್ಲಿ ತನ್ನೆಲ್ಲ ವಿವೇಕ ಮತ್ತು ಬುದ್ಧಿಮತ್ತೆಯನ್ನು ಬಳಸಬೇಕಾಗುತ್ತದೆ. ನಾನು ಒಂದು ಸಲಕ್ಕೆ ಒಂದು ಎಸೆತದ ಬಗ್ಗೆ ಮಾತ್ರ ಯೋಚಿಸುತ್ತೇನೆ,’’ ಎಂದು ಬುಮ್ರಾ ಹೇಳಿದ್ದಾರೆ.

ಪ್ರಸಕ್ತ ಸೀಸನ್​ನಲ್ಲಿ 17 ವಿಕೆಟ್​ಗಳನ್ನು ಪಡೆದಿರುವ ಮತ್ತು ಎರಡು ಸೂಪರ್ ಓವರ್​ಗಳನ್ನು ಬೌಲ್ ಮಾಡಿರುವ ಬುಮ್ರಾ ತನ್ನ ನಿಯಂತ್ರಣದಲ್ಲಿರುವ ಆಯಾಮಗಳನ್ನಷ್ಟೇ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳುತ್ತಾರೆ.

‘‘ನನ್ನ ನಿಯಂತ್ರಣದಲ್ಲಿರುವುದನ್ನು ಮತ್ತು ನನಗೆ ಸಾಧ್ಯವಾಗಬಹುದಾದನ್ನು ಮಾತ್ರ ಮಾಡಲು ಪ್ರಯತ್ನಿಸುತ್ತೇನೆ. ನನ್ನ ಗಮನವೆಲ್ಲ ವರ್ತಮಾನದ ಮೇಲಿರುತ್ತದೆ. ಒತ್ತಡಕ್ಕೆ ಸಿಲುಕಿಕೊಂಡಾಗ ನನ್ನನ್ನು ನಾನು ಪ್ರಶ್ನಿಸಿಕೊಳ್ಳುತ್ತೇನೆ, ‘ಈ ಸಂದರ್ಭದಲ್ಲಿ ನಾನು ಏನು ಮಾಡುವುದನ್ನು ಟೀಮು ನಿರೀಕ್ಷಿಸುತ್ತಿದೆ,’ ಅಂತ ಯೋಚಿಸಿ ಇಡೀ ಸನ್ನಿವೇಶವನ್ನು ನನ್ನಿಂದ ಪ್ರತ್ಯೇಕಿಸುತ್ತೇನೆ. ಯಾವ ಎಸೆತ ಸೂಕ್ತ ಅಂತ ಅಂದುಕೊಳ್ಳುತ್ತೇನೆಯೋ ಅದನ್ನೇ ಬೌಲ್ ಮಾಡುತ್ತೇನೆ. ಏನೆಲ್ಲ ಯೋಚಿಸುವುದಕ್ಕಿಂತ ವಾಸ್ತವದಲ್ಲಿ ನೆಲೆಗೊಂಡಿರುವುದು ನನಗೆ ಬಹಳ ನೆರವಾಗುತ್ತದೆ,’’ ಎಂದು ಬುಮ್ರಾ ಹೇಳುತ್ತಾರೆ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ