IPL 2020: ಪಂಜಾಬ್- ಬೆಂಗಳೂರು ನಡುವಿನ ರೋಚಕ ಕದನದ ದೃಶ್ಯಾವಳಿಗಳು..

ಕೊನೇ ಓವರ್.. ಕೊನೇ ಎಸೆತದವರೆಗೂ ಅಭಿಮಾನಿಗಳ ಉಸಿರನ್ನ ಬಿಗಿ ಹಿಡಿಯುವಂತೆ ಆರ್​ಸಿಬಿ ವಿರುದ್ಧ ರಣರೋಚಕ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಗೂ ಗೆಲುವು ಸಾಧಿಸಿದೆ. ಕಿಂಗ್ಸ್ ಇಲೆವೆನ್ ಪಂಜಾನ್ ವಿರುದ್ಧ ಕಣಕ್ಕಿಳಿಯೋದ್ರೊಂದಿಗೆ ವಿರಾಟ್ ಕೊಹ್ಲಿ, ಆರ್​ಸಿಬಿ ಪರ 200ನೇ ಪಂದ್ಯವಾಡಿದ್ರು. ಐಪಿಎಲ್​ನಲ್ಲಿ ಒಂದೇ ಫ್ರಾಂಚೈಸಿ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿದ ದಾಖಲೆಯನ್ನ ವಿರಾಟ್ ಕೊಹ್ಲಿ ಬರೆದರು. ಆರ್​ಸಿಬಿ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಕೆ.ಎಲ್.ರಾಹುಲ್, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ಪಡೆದುಕೊಂಡ್ರು. ಆರಂಭಿಕನಾಗಿ ಕಣಕ್ಕಿಳಿದ ರಾಹುಲ್, 49 ಎಸೆತಗಳಲ್ಲಿ […]

IPL 2020: ಪಂಜಾಬ್- ಬೆಂಗಳೂರು ನಡುವಿನ ರೋಚಕ ಕದನದ ದೃಶ್ಯಾವಳಿಗಳು..
ಸಾಧು ಶ್ರೀನಾಥ್​

Updated on: Oct 16, 2020 | 4:48 PM

ಕೊನೇ ಓವರ್.. ಕೊನೇ ಎಸೆತದವರೆಗೂ ಅಭಿಮಾನಿಗಳ ಉಸಿರನ್ನ ಬಿಗಿ ಹಿಡಿಯುವಂತೆ ಆರ್​ಸಿಬಿ ವಿರುದ್ಧ ರಣರೋಚಕ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಗೂ ಗೆಲುವು ಸಾಧಿಸಿದೆ.


ಕಿಂಗ್ಸ್ ಇಲೆವೆನ್ ಪಂಜಾನ್ ವಿರುದ್ಧ ಕಣಕ್ಕಿಳಿಯೋದ್ರೊಂದಿಗೆ ವಿರಾಟ್ ಕೊಹ್ಲಿ, ಆರ್​ಸಿಬಿ ಪರ 200ನೇ ಪಂದ್ಯವಾಡಿದ್ರು. ಐಪಿಎಲ್​ನಲ್ಲಿ ಒಂದೇ ಫ್ರಾಂಚೈಸಿ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿದ ದಾಖಲೆಯನ್ನ ವಿರಾಟ್ ಕೊಹ್ಲಿ ಬರೆದರು.


ಆರ್​ಸಿಬಿ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಕೆ.ಎಲ್.ರಾಹುಲ್, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ಪಡೆದುಕೊಂಡ್ರು. ಆರಂಭಿಕನಾಗಿ ಕಣಕ್ಕಿಳಿದ ರಾಹುಲ್, 49 ಎಸೆತಗಳಲ್ಲಿ 5 ಸಿಕ್ಸರ್, 1 ಬೌಂಡರಿ ನೆರವಿನಿಂದ ಅಜೇಯ 61 ರನ್ ಗಳಿಸಿದರು.


ಕೊನೇ ಎಸೆತದವರೆಗೂ ರಣರೋಚಕತೆ ಕಾಯ್ದುಕೊಂಡ ಪಂದ್ಯದಲ್ಲಿ ನಿಕೋಲಸ್ ಪೂರನ್, ಭರ್ಜರಿ ಸಿಕ್ಸರ್ ಬಾರಿಸೋದ್ರೊಂದಿಗೆ ಪಂಜಾಬ್​ಗೆ ಗೆಲುವು ತಂದುಕೊಟ್ಟರು.


ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ ಕ್ರಿಸ್ ಗೇಲ್ ಬೌಂಡರಿ ಹಾಗೂ ಸಿಕ್ಸರ್​ನಿಂದಲೇ 10 ಸಾವಿರ ರನ್ ಪೂರೈಸಿದ್ದಾರೆ. ಹತ್ತು ಸಾವಿರ ರನ್​ಗಳಲ್ಲಿ 1027 ಬೌಂಡರಿ, 982 ಸಿಕ್ಸರ್​ಗಳು ಸೇರಿದೆ. ಗೇಲ್ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್​ಮನ್ ಆಗಿದ್ದಾರೆ.


ನಿನ್ನೆಯ ಪಂದ್ಯದಲ್ಲಿ 16 ರನ್ ಗಳಿಸ್ತಿದ್ದಂತೆ ಕ್ರಿಸ್ ಗೇಲ್, 4500 ರನ್ ಗಳಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡ್ರು. ಗೇಲ್ ಈ ಸಾಧನೆ ಮಾಡಿದ 8ನೇ ಆಟಗಾರ ಎನಿಸಿಕೊಂಡ್ರು. ಎಬಿಡಿ, ವಾರ್ನರ್ ಬಳಿಕ ಈ ಸಾಧನೆ ಮಾಡಿದ ಮೂರನೇ ವಿದೇಶಿ ಆಟಗಾರನಾಗಿದ್ದಾರೆ.


ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ವಿಕೆಟ್ ಪಡೆದ ಯಜ್ವಿಂದರ್ ಚಹಲ್, ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ 200 ವಿಕೆಟ್ ಕಬಳಿಸಿದ ಸಾಧನೆಯನ್ನ ಚಹಲ್ ಮಾಡಿದ್ರು. ಐಪಿಎಲ್​ನಲ್ಲಿ ಚಹಲ್ 111 ವಿಕೆಟ್ ಪಡೆದುಕೊಂಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us