ಕ್ಯಾಪ್ಟನ್​ ಕೂಲ್​ ಧೋನಿಯ ಹೃದಯ ವೈಶಾಲ್ಯತೆಗೆ Fans ಫುಲ್​ ಫಿದಾ

|

Updated on: Aug 23, 2020 | 1:51 PM

ಕ್ಯಾಪ್ಟನ್​ ಕೂಲ್​ ಎಂದೇ ಖ್ಯಾತಿ ಪಡೆದಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಸರಳ ವ್ಯಕ್ತಿತ್ವದಿಂದ ಮತ್ತೊಮ್ಮೆ ಕ್ರಿಕೆಟ್​ ಪ್ರಿಯರ ಹೃದಯಗಳನ್ನು ಗೆದ್ದಿದ್ದಾರೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಧೋನಿ ಮತ್ತು ಆಲ್‌ರೌಂಡರ್ ಸುರೇಶ್ ರೈನಾ UAEನಲ್ಲಿ ನಡೆಯಲಿರುವ IPL 2020 ಕ್ಕೆ ಶುಕ್ರವಾರ ತಮ್ಮ ಚೆನ್ನೈ ಸೂಪರ್​ ಕಿಂಗ್ಸ್​ ತಂಡದವರೊಂದಿಗೆ ವಿಮಾನದಲ್ಲಿ UAEಗೆ ತೆರಳಿದರು. ಈ ವೇಳೆ, ಧೋನಿ ತನ್ನ ​ಬಿಸಿನೆಸ್​ ಕ್ಲಾಸ್​ ಸೀಟನ್ನು ಫ್ರ್ಯಾಂಚೈಸ್ ನಿರ್ದೇಶಕರಾದ ಕೆ. ಜಾರ್ಜ್ […]

ಕ್ಯಾಪ್ಟನ್​ ಕೂಲ್​ ಧೋನಿಯ ಹೃದಯ ವೈಶಾಲ್ಯತೆಗೆ Fans ಫುಲ್​ ಫಿದಾ
Follow us on

ಕ್ಯಾಪ್ಟನ್​ ಕೂಲ್​ ಎಂದೇ ಖ್ಯಾತಿ ಪಡೆದಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಸರಳ ವ್ಯಕ್ತಿತ್ವದಿಂದ ಮತ್ತೊಮ್ಮೆ ಕ್ರಿಕೆಟ್​ ಪ್ರಿಯರ ಹೃದಯಗಳನ್ನು ಗೆದ್ದಿದ್ದಾರೆ.

ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಧೋನಿ ಮತ್ತು ಆಲ್‌ರೌಂಡರ್ ಸುರೇಶ್ ರೈನಾ UAEನಲ್ಲಿ ನಡೆಯಲಿರುವ IPL 2020 ಕ್ಕೆ ಶುಕ್ರವಾರ ತಮ್ಮ ಚೆನ್ನೈ ಸೂಪರ್​ ಕಿಂಗ್ಸ್​ ತಂಡದವರೊಂದಿಗೆ ವಿಮಾನದಲ್ಲಿ UAEಗೆ ತೆರಳಿದರು.

ಈ ವೇಳೆ, ಧೋನಿ ತನ್ನ ​ಬಿಸಿನೆಸ್​ ಕ್ಲಾಸ್​ ಸೀಟನ್ನು ಫ್ರ್ಯಾಂಚೈಸ್ ನಿರ್ದೇಶಕರಾದ ಕೆ. ಜಾರ್ಜ್ ಜಾನ್‌ಗೆ ಬಿಟ್ಟುಕೊಟ್ಟು, ಅವರು ಕುಳಿತಿದ್ದ ಎಕಾನಮಿ ಕ್ಲಾಸ್​ ಸೀಟ್​ನಲ್ಲಿ ತಾವು ಕುಳಿತು UAEಗೆ ಪ್ರಯಾಣ ಬೆಳೆಸಿದ್ದಾರೆ. ಜಾರ್ಜ್​ರ ಕಾಲುಗಳು ಬಹಳ ಉದ್ದವಾಗಿದ್ದು ಎಕಾನಮಿ ಕ್ಲಾಸ್​ ಸೀಟ್​ನಲ್ಲಿ ಕೂರಲು ಕಷ್ಟ ಪಡುತ್ತಿದ್ದುದ್ದನ್ನು ಕಂಡ ಧೋನಿ,ತಾವು ಕೂತಿದ್ದ ಬಿಸಿನೆಸ್​ ಕ್ಲಾಸ್​ ಸೀಟನ್ನು ಜಾರ್ಜ್​‌ಗೆ ಬಿಟ್ಟುಕೊಟ್ಟಿದ್ದಾರೆ.ಈ ವಿಚಾರವನ್ನು ಖುದ್ದು ಜಾರ್ಜ್ ಜಾನ್‌ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದೇ IPL ನಲ್ಲಿ ಪಾಲ್ಗೊಳ್ಳಲು ಮೊನ್ನೆ RCB ತಂಡದ ನಾಯಕ ವಿರಾಟ್​ ಕೊಹ್ಲಿ ಕೊವಿಡ್ ಮುಂಜಾಗ್ರತಾ ಕ್ರಮವಾಗಿ ಏಕಾಂಗಿಯಾಗಿ ಮುಂಬೈ ಟು ದುಬೈ ವಿಮಾನದಲ್ಲಿ ಹಾರಿದ್ದರು ಎಂಬುದು ಗಮನಾರ್ಹ.

Published On - 1:46 pm, Sun, 23 August 20