ನವದೆಹಲಿ: ಕೊರೊನಾ ಸೋಂಕಿನ ಹಾವಳಿಯಿಂದಾಗಿ ಕ್ರಿಕೆಟ್ ಜಗತ್ತಿನಲ್ಲಿ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ BCCI, ಕ್ರಿಕೆಟ್ ಆಟಗಾರರ ಮತ್ತು ಸಿಬ್ಬಂದಿಗಳ ವೇತನವನ್ನು ಕಡಿತಗೊಳಿಸಲು ಚಿಂತಿಸಿದೆ ಎನ್ನಲಾಗಿದೆ.
ಇಲ್ಲಿಯವರೆಗೂ ಯಾವೊಬ್ಬ ಸಿಬ್ಬಂದಿಯ ಹಾಗೂ ಆಟಗಾರರ ವೇತನವನ್ನು ಕಡಿತಗೊಳಿಸದ ಬಿಸಿಸಿಐನ ಈ ನಿರ್ಧಾರ ಐಪಿಎಲ್ ಆಟದ ಭವಿಷ್ಯದ ಮೇಲೆ ನಿರ್ಧಾರಗೊಳ್ಳಲಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಸುಳಿವು ನೀಡಿದ್ದಾರೆ.
ಐಪಿಎಲ್ ಈಗ ನಡೆಯುತ್ತಿರುವುದರಿಂದ ನಾವು ಇದನ್ನು ಚರ್ಚಿಸುತ್ತೇವೆ. ಐಪಿಎಲ್‌ನ ಯಶಸ್ಸಿನ ಮೇಲೆ ಈ ನಿರ್ಧಾರ ಸಾಕಷ್ಟು ಅವಲಂಬಿತವಾಗಿರುತ್ತದೆ. ಶೀರ್ಷಿಕೆ ಪ್ರಾಯೋಜಕತ್ವ ಒಪ್ಪಂದವು (222 ಕೋಟಿ ರೂ.) ಹಿಂದಿನದಕ್ಕೆ ಹೋಲಿಸಿದರೆ (ವಿವೊ ಅವರ 440 ಕೋಟಿ ರೂ.) ಅಷ್ಟು ದೊಡ್ಡದಲ್ಲ. ಆದ್ದರಿಂದ ನಾವು ಕನಿಷ್ಠ ಹಾನಿಯೊಂದಿಗೆ ಏನು ಮಾಡಬಹುದೆಂದು ನೋಡಿ, ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಇತರ ಮಂಡಳಿಗಳಾದ ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ, ವೆಸ್ಟ್ ಇಂಡೀಸ್ ಕ್ರಿಕೆಟ್ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರರು ಮತ್ತು ಸಿಬ್ಬಂದಿಗಳ ವೇತನವನ್ನು ಈಗಾಗಲೇ ಕಡಿಮೆ ಮಾಡಿವೆ.