IPL 2020: ಪಂಜಾಬ್ ಹಾಗೂ ರಾಜಸ್ಥಾನ್ ನಡುವಿನ ಪಂದ್ಯದ ರೋಚಕ ಕ್ಷಣಗಳು

|

Updated on: Sep 28, 2020 | 5:05 PM

ದುಬೈನ ಶಾರ್ಜಾದಲ್ಲಿ ನಡೆದ ಐಪಿಎಲ್​ ಪಂದ್ಯಾವಳಿಯ 9ನೇ ಮ್ಯಾಚ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್​ ವಿರುದ್ದ ರಾಜಸ್ಥಾನ್​ ​ರಾಯಲ್ಸ್​ ವೀರಾವೇಶದ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ್ ಐಪಿಎಲ್​ನಲ್ಲಿ ದಾಖಲೆಯ 224 ರನ್​ಗಳ ಗುರಿ ಮುಟ್ಟಿ ಚರಿತ್ರೆ ಸೃಷ್ಟಿಸಿದೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್, ಈ ಆವೃತ್ತಿಯಲ್ಲಿ ಎರಡನೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಬಾಚಿಕೊಂಡ್ರು. 42 ಎಸೆತಗಳಲ್ಲಿ 7 ಸಿಕ್ಸರ್ ಬಾರಿಸಿದ ಸಂಜು 85 ರನ್ ಗಳಿಸಿದ್ರು. ಆರೆಂಜ್ ಕ್ಯಾಪ್ ತನ್ನಲ್ಲೇ […]

IPL 2020: ಪಂಜಾಬ್ ಹಾಗೂ ರಾಜಸ್ಥಾನ್ ನಡುವಿನ ಪಂದ್ಯದ ರೋಚಕ ಕ್ಷಣಗಳು
Follow us on

ದುಬೈನ ಶಾರ್ಜಾದಲ್ಲಿ ನಡೆದ ಐಪಿಎಲ್​ ಪಂದ್ಯಾವಳಿಯ 9ನೇ ಮ್ಯಾಚ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್​ ವಿರುದ್ದ ರಾಜಸ್ಥಾನ್​ ​ರಾಯಲ್ಸ್​ ವೀರಾವೇಶದ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ್ ಐಪಿಎಲ್​ನಲ್ಲಿ ದಾಖಲೆಯ 224 ರನ್​ಗಳ ಗುರಿ ಮುಟ್ಟಿ ಚರಿತ್ರೆ ಸೃಷ್ಟಿಸಿದೆ.


ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್, ಈ ಆವೃತ್ತಿಯಲ್ಲಿ ಎರಡನೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಬಾಚಿಕೊಂಡ್ರು. 42 ಎಸೆತಗಳಲ್ಲಿ 7 ಸಿಕ್ಸರ್ ಬಾರಿಸಿದ ಸಂಜು 85 ರನ್ ಗಳಿಸಿದ್ರು.


ಆರೆಂಜ್ ಕ್ಯಾಪ್ ತನ್ನಲ್ಲೇ ಉಳಿಸಿಕೊಳ್ಳುವಳ್ಳಿ ಕೆ.ಎಲ್.ರಾಹುಲ್ ಯಶಸ್ವಿಯಾಗಿದ್ದಾರೆ. ರಾಜಸ್ಥಾನ ವಿರುದ್ಧ 69ರನ್ ಗಳಿಸಿದ ರಾಹುಲ್, 13 ಆವೃತ್ತಿಯಲ್ಲಿ ಒಟ್ಟು 222 ರನ್ ಕಲೆಹಾಕಿದ್ದಾರೆ. ಇದ್ರಲ್ಲಿ 23 ಬೌಂಡರಿ, 9 ಸಿಕ್ಸರ್​ಗಳಿವೆ.


ನಿನ್ನೆ ಪಂದ್ಯದಲ್ಲಿ ನಿಕೋಲಸ್ ಪೂರನ್ ಸೂಪರ್​ಮ್ಯಾನ್​ನಂತೆ ಫೀಲ್ಡಿಂಗ್ ಮಾಡಿದ್ದಾರೆ. ಸ್ಯಾಮ್ಸನ್ ಬೌಂಡರಿ ಗೆರೆ ಆಚೆ ಬೀಳುವಂತೆ ಸಿಕ್ಸರ್ ಬಾರಿಸಿದ್ರು. ಆದ್ರೆ ಬೌಂಡರಿ ಗೆರೆಯಲ್ಲೇ ನಿಂತಿದ್ದ ಪೂರನ್ ಕ್ಯಾಚ್ ಹಿಡಿದು, ಸಿಕ್ಸ್ ತಡೆದಿದ್ದಾರೆ. ಇನ್ನೂ ಈ ಕ್ಯಾಚ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿನ್ ತೆಂಡೂಲ್ಕರ್​ ನಾನು ನನ್ನ ವೃತ್ತಿ ಜೀವನದಲ್ಲಿ ನೋಡಿದ ಅದ್ಭುತ ಫೀಲ್ಡಿಂಗ್ ಎಂದು ಪೂರನ್ ಅವರನ್ನು ಕೊಂಡಾಡಿದ್ದಾರೆ.


ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ ಕೊನೇ ಐದು ಓವರ್​ನಲ್ಲಿ 86 ರನ್ ಬಾರಿಸಿದೆ. ಇನ್ನೇನು ಸೋತೇ ಬಿಟ್ವಿ ಅಂದುಕೊಂಡಿದ್ದ ರಾಜಸ್ಥಾನ, ರಾಹುಲ್ ತೆವಾಟಿಯಾ ಬಾರಿಸಿದ 5 ಸಿಕ್ಸ್​ನಿಂದ ಗೆಲುವು ದಾಖಲಿಸಿತು.


ರಾಜಸ್ಥಾನ್ ವಿರುದ್ಧ 50 ಎಸೆತಗಳನ್ನ ಎದುರಿಸಿದ ಮಯಾಂಕ್ ಅಗರ್ವಾಲ್ 10 ಬೌಂಡರಿ, 07 ಸಿಕ್ಸರ್​ಗಳ ನೆರವಿನಿಂದ 106 ರನ್ ಗಳಿಸಿದರು.


ಇನ್ನೂ ಮಯಾಂಕ್ ಹಾಗೂ ರಾಹುಲ್ 183 ರನ್​ಗಳ ಜೊತೆಯಾಟವಾಡೋದ್ರೊಂದಿಗೆ ಇತಿಹಾಸ ಬರಿಯಿತು. ಐಪಿಎಲ್​ನಲ್ಲಿ ಅತಿ ಹೆಚ್ಚಿನ ರನ್ ಕಲೆ ಹಾಕಿದ 3ನೇ ಆರಂಭಿಕ ಜೋಡಿ ಅನ್ನೋ ಹಿರಿಮೆಗೆ ಪಾತ್ರವಾಯಿತು.


ರಾಜಸ್ಥಾನ ರಾಯಲ್ಸ್ ವಿರುದ್ಧ ಮೂರು ವಿಕೆಟ್ ಪಡೆದ ಮೊಹಮ್ಮದ್ ಶಮಿ, ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ. ಈ ಸೀಸನ್​ನಲ್ಲಿ 3 ಪಂದ್ಯಗಳನ್ನಾಡಿರೋ ಮೊಹಮ್ಮದ್ ಶಮಿ ಒಟ್ಟು 7 ವಿಕೆಟ್ ಕಬಳಸಿದ್ದಾರೆ.

Published On - 4:56 pm, Mon, 28 September 20