ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮದಲ್ಲಿ ರನ್ ಮಳೆ ಹರಿಸೋದಕ್ಕೆ ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಹೇಗೆಲ್ಲಾ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿ ಖುಷಿಯಾಗಿದ್ದಾರೆ ಅನ್ನೋದನ್ನ ನೀವೆಲ್ಲಾ ಗಮನಿಸಿದ್ದೀರಾ. ಈಗ ಬೌಲರ್ಗಳ ಸರದಿ.
ಯಾರ್ಕರ್ ಕಾಂಪಿಟೇಷನ್..
ಬ್ಯಾಟಿಂಗ್ನಲ್ಲಿ ಆರ್ಸಿಬಿ ಕೊಹ್ಲಿಯಂತೆ ದೈತ್ಯ ಆಟಗಾರರನ್ನೇ ಹೊಂದಿದೆ. ಹೀಗಾಗಿ ಆರ್ಸಿಬಿ ಕ್ಯಾಂಪ್ನಲ್ಲಿ ಈಗ ಬೌಲರ್ಗಳ ವಿಚಾರದಲ್ಲಿ ಹೆಚ್ಚಿನ ಗಮನ ನೀಡಲಾಗ್ತಿದೆ. ಇದೇ ಕಾರಣಕ್ಕೆ ಭಾನುವಾರ ಆರ್ಸಿಬಿ ಬೌಲಿಂಗ್ ಕೋಚ್ ಌಡಮ್ ಗ್ರಿಫ್ತ್, ಬೌಲರ್ಗಳಿಗೆ ಯಾರ್ಕರ್ ಕಾಂಪಿಟೇಷನ್ ಏರ್ಪಡಿಸಿದ್ರು.
ಮೊದಲಿಗೆ ಌಡಮ್ ಗ್ರಿಪ್ತ್ ಕ್ರಿಸ್ ಅಕ್ಕ ಪಕ್ಕ ಎರಡು ವಿಕೆಟ್ಗಳನ್ನ ಇಟ್ಟು, ಮಧ್ಯದಲ್ಲಿ ಒಂದು ಪ್ಲಾಸ್ಟಿಕ್ ಕ್ಯಾಪ್ ಇಡ್ತಾರೆ. ಎರಡು ಬದಿಯ ವಿಕೆಟ್ ತುದಿಗೆ ಬಾಲ್ ಬಿದ್ರೆ ಒಂದು ಪಾಯಿಂಟ್.. ಮಧ್ಯದಲ್ಲಿ ಬಿದ್ರೆ ಮೂರು ಪಾಯಿಂಟ್.. ಪ್ಲಾಸ್ಟಿಕ್ ಕ್ಯಾಪ್ಗೆ ಬಿದ್ರೆ ಐದು ಪಾಯಿಂಟ್ ನೀಡೋದಾಗಿ, 10 ಬಾಲ್ಗಳಲ್ಲಿ 6 ಯಾರ್ಕರ್ ಬಾಲ್ಗಳನ್ನ ಎಸೆಯುವಂತೆ ತಿಳಿಸ್ತಾರೆ. ಅಲ್ಲಿಗೆ ಶುರುವಾಯ್ತು ನೋಡಿ.. ಆರ್ಸಿಬಿ ಬೌಲರ್ಗಳ ಶಾರ್ಪ್ ಶೂಟಿಂಗ್.
ಬೌಲರ್ಗಳಿಗೆ ಕೊಹ್ಲಿ ನೀಡಿದ ಸ್ಫೂರ್ತಿ ಅದ್ಭುತವಾಗಿತ್ತು..
ಇಲ್ಲಿ ನಿಮಗೊಂದು ಇಂಟ್ರಸ್ಟಿಂಗ್ ವಿಷಯವನ್ನು ಹೇಳಲೇಬೇಕು. ಈ ಸ್ಫರ್ದೆಯಲ್ಲಿ ವಿರಾಟ್ ಇರೋದಿಲ್ಲ ಅನ್ನೋದು ಗೊತ್ತಿರೋ ವಿಚಾರ. ಆದ್ರೆ ಆರ್ಸಿಬಿ ಬೌಲರ್ಗಳಿಗೆ ಕೊಹ್ಲಿ ನೀಡಿದ ಸ್ಫೂರ್ತಿ ಅದ್ಭುತವಾಗಿತ್ತು. ಮೊದಲಿಗೆ ಗುರುಕೀರತ್ ಸಿಂಗ್, ಪವನ್ ದೇಶಪಾಂಡೆ, ವಾಷಿಂಗ್ಟನ್ ಸುಂದರ್ ಅಕ್ಕ ಪಕ್ಕದ ವಿಕೆಟ್ಗೆ ಬಾಲ್ ಎಸೆದು ಮೂರು ಪಾಯಿಂಟ್ಗಳನ್ನ ಪಡೀತಾರೆ.
ಆ ಬಳಿಕ ಲಂಕಾ ವೇಗಿ ಇಸುರು ಉದಾನಾ ಮತ್ತು ಉಮೇಶ್ ಯಾದವ್ ಯಾರ್ಕರ್ ಎಸೆದ್ರೂ, ವಿಕೆಟ್ಗೆ ಬೀಳೋದಿಲ್ಲ. ಹೀಗಾಗಿ ಕೊಹ್ಲಿ ಸೇರಿದಂತೆ ಆರ್ಸಿಬಿ ಆಟಗಾರರೆಲ್ಲ ಸರಿಯಾಗೇ ಕಿಚಾಯಿಸ್ತಾರೆ. ಇನ್ನು ನವದೀಪ್ ಸೈನಿ ಮೊದಲ ಬಾಲ್ನಲ್ಲೇ ವಿಕೆಟ್ಗೆ ಯಾರ್ಕರ್ ಎಸೆದ್ರೆ, ನೋ ಬಾಲ್ ಆಗಿ ಬಿಡ್ತು. ಆದ್ರೆ 2ನೇ ಬಾಲ್ನಲ್ಲಿ ಸೈನಿ ಪರ್ಫೆಕ್ಟ್ ಯಾರ್ಕರ್ ಎಸೆದು ಗೆದ್ದು ಬೀಗ್ತಾರೆ.
ಸೈನಿ, ದುಬೆ ಯಾರ್ಕರ್ಗೆ ಫಿದಾ ಆದ ಕೊಹ್ಲಿ ಸಂಭ್ರಮ!
ನಂತರ ಶಿವಂ ದುಬೆ ಮತ್ತು ಮೊಹಮ್ಮದ್ ಸಿರಾಜ್ ಪರ್ಫೆಕ್ಟ್ ಯಾರ್ಕರ್ ಬಾಲ್ ಹಾಕಿ, ಆರ್ಸಿಬಿ ಆಟಗಾರರು ಹುಚ್ಚೆದ್ದು ಕುಣಿಯುವಂತೆ ಮಾಡ್ತಾರೆ. ಅದ್ರಲ್ಲೂ ನಾಯಕ ವಿರಾಟ್ ಕೊಹ್ಲಿ ಸಂಬ್ರಮಕ್ಕೆ ಪಾರವೇ ಇರಲಿಲ್ಲ. ಪರ್ಫೆಕ್ಟ್ ಯಾರ್ಕರ್ ಎಸೆದ ಶಿವಂ ದುಬೆ ಮತ್ತು ನವದೀಪ್ ಸೈನಿಯನ್ನ ತಬ್ಬಿಕೊಂಡು ಸಂಬ್ರಮಿಸ್ತಾರೆ.
ಬ್ಯಾಟಿಂಗ್ನಲ್ಲಿ ಆರ್ಸಿಬಿಗೆ ಯಾವುದೇ ಸಮಸ್ಯೆ ಇಲ್ಲ. ಆದ್ರೆ ಪ್ರತಿ ಸೀಸನ್ನಲ್ಲಿ ಆರ್ಸಿಬಿ ಬೌಲರ್ಗಳಿಂದಲೇ ಎಡವ್ತಾ ಇತ್ತು. ಆದ್ರೀಗ ವಿರಾಟ್ ಗ್ಯಾಂಗ್ನಲ್ಲಿ ಪಕ್ಕಾ ಯಾರ್ಕರ್ ಎಸೆಯೋ ಶಾರ್ಪ್ ಶೂಟರ್ಗಳೆ ತುಂಬಿದ್ದಾರೆ. ನಿಜ.. ತಮ್ಮ ತಂಡದ ಬೌಲರ್ಗಳ ಶಾರ್ಪ್ ಶೂಟಿಂಗ್ ಯಾರ್ಕರ್ಗೆ ಕ್ಯಾಪ್ಟನ್ ಕೊಹ್ಲಿ ಫುಲ್ ಫಿದಾ ಆಗಿದ್ದಾರೆ. ಇನ್ಮುಂದೆ ಆರ್ಸಿಬಿ ಸೋಲಿಗೆ ಬೌಲರ್ಗಳು ಕಾರಣವಾಗೋದಿಲ್ಲ ಅನ್ನೋ ವಿಶ್ವಾಸ ಬಂದಿದೆ. ಹೀಗಾಗೇ ವಿರಾಟ್ ಪ್ರತಿ ಯಾರ್ಕರ್ಗೂ ಕುಣಿದು ಕುಪ್ಪಳಿಸಿದ್ರು.
Our bowling coach, Adam Griffith, comes up with a fun and challenging competition to help our bowlers fire in those yorkers.
Safe to say all our bowlers are sharpshooters! ? ?#PlayBold #IPL2020 #WeAreChallengers pic.twitter.com/Nkjv97aQZc— Royal Challengers Bangalore (@RCBTweets) September 13, 2020
Published On - 11:12 am, Mon, 14 September 20