ಅಭ್ಯಾಸದ ವೇಳೆ ಟ್ರೆಂಟ್ ಬೌಲ್ಟ್ ಎಸೆದ ಯಾರ್ಕರ್​ಗೆ ಮಿಡ್ಲ್​ ವಿಕೆಟ್ ಪೀಸ್ ಪೀಸ್!

ಅಭ್ಯಾಸದ ವೇಳೆ ಟ್ರೆಂಟ್ ಬೌಲ್ಟ್ ಎಸೆದ ಯಾರ್ಕರ್​ಗೆ ಮಿಡ್ಲ್​ ವಿಕೆಟ್ ಪೀಸ್ ಪೀಸ್!

ಅಭ್ಯಾಸ ವೇಳೆ ವೇಗಿ ಟ್ರೆಂಟ್ ಬೌಲ್ಟ್ ಎಸೆದ ಡೆಡ್ಲಿ ಯಾರ್ಕರ್​ಗೆ ಮಿಡೆಲ್ ವಿಕೆಟ್ ಪೀಸ್ ಪೀಸ್ ಆಗಿದೆ. ವಿಕೆಟ್ ಮುರಿದು ಹೋಗಿರೋ ವಿಡಿಯೋವನ್ನ ಮುಂಬೈ ತಂಡ ಟ್ವೀಟ್ ಮಾಡಿದ್ದು, ಕ್ಲೀವ್ ಬೌಲ್ಟ್ ಟ್ರೆಂಟ್ ಅರೈವ್ ಅಂತ ಶೀರ್ಷಿಕೆ ನೀಡಿದೆ.

ಕೋಚಿಂಗ್ ಆಟಗಾರರ ಮೇಲಿನ ನಂಬಿಕೆ
ಆರ್​ಸಿಬಿ ತಂಡದ ಹೆಡ್ ಕೋಚ್ ಸಿಮೊನ್ ಕಾಟಿಚ್, ಕೋಚಿಂಗ್ ತುಂಬಾ ಕಠಿಣವಾದದ್ದು. ಆದ್ರೆ ಎಲ್ರೂ ಕೋಚಿಂಗ್ ಮಾಡೋದಕ್ಕೆ ಭಯಸ್ತಾರೆ. ನನ್ನ ಪ್ರಕಾರ ಕೋಚಿಂಗ್ ಅನ್ನೋದು ಆಟಗಾರರ ಮೇಲಿನ ನಂಬಿಕೆ ಎಂದಿದ್ದಾರೆ.

ಟ್ರೆಂಟ್ ಬೌಲ್ಟ್ ಅಭ್ಯಾಸ ಶುರು
ಮುಂಬೈ ಇಂಡಿಯನ್ಸ್ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಟ್ರೆಂಟ್ ಬೌಲ್ಟ್, ಪ್ರಾಕ್ಟೀಸ್ ಸೆಷನ್ ಆರಂಭಿಸಿದ್ದಾರೆ. 6ದಿನಗಳ ಕ್ವಾರಂಟೈನ್ ಮುಗಿಸಿರೋ ಬೌಲ್ಟ್, ಬೌಲಿಂಗ್ ಅಭ್ಯಾಸ ನಡೆಸಿದ್ರು. ಬೌಲ್ಟ್ ಕಳೆದ ಸೀಸನ್​ನಲ್ಲಿ ಡೆಲ್ಲಿ ಪರ ಆಡಿದ್ರು.

ಐಪಿಎಲ್​ನಲ್ಲಿ ಹೊಸ ಅನುಭವ
ಕೊರೊನಾ ನಡುವೆ ಐಪಿಎಲ್ ಆಡ್ತಿರೋದು ಹೊಸ ಅನುಭವ ನೀಡ್ತಿದೆ ಎಂದು ಮುಂಬೈ ಇಂಡಿಯನ್ಸ್​ನ ಜಯಂತ್ ಜಾಧವ್ ಹೇಳಿದ್ದಾರೆ. ಡ್ರೆಸ್ಸಿಂಗ್ ರೂಮ್​ನಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸಬೇಕಿದೆ. ಹಾಗಿದ್ರೂ ಐಪಿಎಲ್ ಆಡ್ತಿರೋದು ಖುಷಿ ನೀಡಿದೆ ಎಂದಿದ್ದಾರೆ.

ದುಬೈಗೆ ಬಂದಿಳಿದ ಪೊಲ್ಲಾರ್ಡ್ ಫ್ಯಾಮಿಲಿ
ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್​ರೌಂಡರ್ ಕಿರಾನ್ ಪೊಲ್ಲಾರ್ಡ್ ಹಾಗೂ ರುದರ್​ಫೋರ್ಡ್ ದುಬೈಗೆ ಬಂದಿಳಿದಿದ್ದಾರೆ. ಇಬ್ಬರು ಆಟಗಾರರು ಫ್ಯಾಮಿಲಿ ಜೊತೆ ಬಂದಿದ್ದು, 6ದಿನಗಳ ಹೋಟೆಲ್ ಕ್ವಾರಂಟೈನ್ ಆಗಲಿದ್ದಾರೆ.

ಧೋನಿ, ವ್ಯಾಟ್ಸನ್ ಭರ್ಜರಿ ಅಭ್ಯಾಸ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಶೇನ್ ವ್ಯಾಟ್ಸನ್ ರಾತ್ರಿಯಾದ್ರೂ ಅಭ್ಯಾಸ ನಡೆಸಿದ್ರು. ಇವರಿಬ್ಬರೂ ಟೈಮ್ ಲೆಸ್ ಆಟಗಾರರು ಎಂದು ಚೆನ್ನೈ ತಂಡ ವಿಡಿಯೋ ಪೋಸ್ಟ್ ಮಾಡಿದೆ.

ರಾಹುಲ್ ಪ್ರಾಕ್ಟೀಸ್
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕನ್ನಡಿಗ ಕೆ.ಎಲ್.ರಾಹುಲ್, ನೆಟ್ಸ್​ನಲ್ಲಿ ಭರ್ಜರಿ ಪ್ರಾಕ್ಟೀಸ್ ಮಾಡ್ತಿದ್ದಾರೆ. ರಾತ್ರಿ ನಡೆದ ಬ್ಯಾಟಿಂಗ್ ಸೆಷನ್​​ನಲ್ಲಿ ರಾಹುಲ್, ಡಿಫರೆಂಟ್ ಡಿಫರೆಂಟ್ ಶಾಟ್​ಗಳನ್ನ ಬಾರಿಸಿದ್ರು.

ರಶೀದ್, ನಬಿ ಆಗಮನ
ಸಿಪಿಎಲ್​ನಲ್ಲಿ ಭಾಗಿವಹಿಸಿದ್ದ ಅಫ್ಘಾನಿಸ್ತಾ ತಂಡದ ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ, ದುಬೈಗೆ ಬಂದಿಳಿದಿದ್ದಾರೆ. ಸನ್​ರೈಸರ್ಸ್ ತಂಡದ ಬೌಲಿಂಗ್ ಶಕ್ತಿಯಾಗಿರೋ ಈ ಇಬ್ಬರೂ ಸ್ಪಿನ್ನರ್​ಗಳು, ಒಂದು ವಾರ ಹೊಟೇಲ್ ಕ್ವಾರಂಟೈನ್ ಆಗಲಿದ್ದಾರೆ.

ಪಾರ್ಕಿಂಗ್​ಗೆ ಹೋಗಿ ಬಾಲ್ ತಂದ ಮಾರ್ಷ್
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಬಾರಿಸಿದ ಸಿಕ್ಸ್, ಕಾರ್ ಪಾರ್ಕಿಂಗ್​ನಲ್ಲಿ ಬಿದ್ದಿತ್ತು. ಬಯೋ ಬಬಲ್ ನಿಯಮ ಇರೋದ್ರಿಂದ ಮಿಚೆಲ್ ಮಾರ್ಷ್ ಚೆಂಡನ್ನ ಹುಡುಕಿಕೊಂಡು ಬಂದಿದ್ದಾರೆ.

ಡೆಲ್ಲಿ ಆಟಗಾರರ ವರ್ಕೌಟ್
ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಮೈದಾನವಲ್ಲದೇ, ಜಿಮ್​ನಲ್ಲೂ ಭರ್ಜರಿ ಕಸರತ್ತನ್ನ ನಡೆಸ್ತಿದ್ದಾರೆ. ಶ್ರೇಯಸ್ ಐಯ್ಯರ್, ಪೃಥ್ವಿ ಶಾ, ಶಿಖರ್ ಧವನ್ ಜಿಮ್ ಸೆಂಟರ್​ನಲ್ಲಿ ದೇಹವನ್ನ ದಂಡಿಸಿದ್ದಾರೆ.

Click on your DTH Provider to Add TV9 Kannada