ತಪ್ಪದೇ ನೋಡಿ ಈ Video.. ಕೊಹ್ಲಿ ಬಳಗದಲ್ಲಿ ಯಾರ್ಕರ್​ಗಳದ್ದೇ ಹವಾ!

ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮದಲ್ಲಿ ರನ್ ಮಳೆ ಹರಿಸೋದಕ್ಕೆ ಆರ್​ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಹೇಗೆಲ್ಲಾ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿ ಖುಷಿಯಾಗಿದ್ದಾರೆ ಅನ್ನೋದನ್ನ ನೀವೆಲ್ಲಾ ಗಮನಿಸಿದ್ದೀರಾ. ಈಗ ಬೌಲರ್​ಗಳ ಸರದಿ. ಯಾರ್ಕರ್ ಕಾಂಪಿಟೇಷನ್.. ಬ್ಯಾಟಿಂಗ್​ನಲ್ಲಿ ಆರ್​ಸಿಬಿ ಕೊಹ್ಲಿಯಂತೆ ದೈತ್ಯ ಆಟಗಾರರನ್ನೇ ಹೊಂದಿದೆ. ಹೀಗಾಗಿ ಆರ್​ಸಿಬಿ ಕ್ಯಾಂಪ್​ನಲ್ಲಿ ಈಗ ಬೌಲರ್​ಗಳ ವಿಚಾರದಲ್ಲಿ ಹೆಚ್ಚಿನ ಗಮನ ನೀಡಲಾಗ್ತಿದೆ. ಇದೇ ಕಾರಣಕ್ಕೆ ಭಾನುವಾರ ಆರ್​ಸಿಬಿ ಬೌಲಿಂಗ್ ಕೋಚ್ ಌಡಮ್ ಗ್ರಿಫ್ತ್, ಬೌಲರ್​ಗಳಿಗೆ ಯಾರ್ಕರ್ ಕಾಂಪಿಟೇಷನ್ ಏರ್ಪಡಿಸಿದ್ರು. ಮೊದಲಿಗೆ ಌಡಮ್ ಗ್ರಿಪ್ತ್ ಕ್ರಿಸ್ ಅಕ್ಕ […]

ತಪ್ಪದೇ ನೋಡಿ ಈ Video.. ಕೊಹ್ಲಿ ಬಳಗದಲ್ಲಿ ಯಾರ್ಕರ್​ಗಳದ್ದೇ ಹವಾ!
Follow us
ಸಾಧು ಶ್ರೀನಾಥ್​
|

Updated on:Sep 14, 2020 | 11:19 AM

ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮದಲ್ಲಿ ರನ್ ಮಳೆ ಹರಿಸೋದಕ್ಕೆ ಆರ್​ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಹೇಗೆಲ್ಲಾ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿ ಖುಷಿಯಾಗಿದ್ದಾರೆ ಅನ್ನೋದನ್ನ ನೀವೆಲ್ಲಾ ಗಮನಿಸಿದ್ದೀರಾ. ಈಗ ಬೌಲರ್​ಗಳ ಸರದಿ.

ಯಾರ್ಕರ್ ಕಾಂಪಿಟೇಷನ್.. ಬ್ಯಾಟಿಂಗ್​ನಲ್ಲಿ ಆರ್​ಸಿಬಿ ಕೊಹ್ಲಿಯಂತೆ ದೈತ್ಯ ಆಟಗಾರರನ್ನೇ ಹೊಂದಿದೆ. ಹೀಗಾಗಿ ಆರ್​ಸಿಬಿ ಕ್ಯಾಂಪ್​ನಲ್ಲಿ ಈಗ ಬೌಲರ್​ಗಳ ವಿಚಾರದಲ್ಲಿ ಹೆಚ್ಚಿನ ಗಮನ ನೀಡಲಾಗ್ತಿದೆ. ಇದೇ ಕಾರಣಕ್ಕೆ ಭಾನುವಾರ ಆರ್​ಸಿಬಿ ಬೌಲಿಂಗ್ ಕೋಚ್ ಌಡಮ್ ಗ್ರಿಫ್ತ್, ಬೌಲರ್​ಗಳಿಗೆ ಯಾರ್ಕರ್ ಕಾಂಪಿಟೇಷನ್ ಏರ್ಪಡಿಸಿದ್ರು.

ಮೊದಲಿಗೆ ಌಡಮ್ ಗ್ರಿಪ್ತ್ ಕ್ರಿಸ್ ಅಕ್ಕ ಪಕ್ಕ ಎರಡು ವಿಕೆಟ್​ಗಳನ್ನ ಇಟ್ಟು, ಮಧ್ಯದಲ್ಲಿ ಒಂದು ಪ್ಲಾಸ್ಟಿಕ್ ಕ್ಯಾಪ್ ಇಡ್ತಾರೆ. ಎರಡು ಬದಿಯ ವಿಕೆಟ್ ತುದಿಗೆ ಬಾಲ್ ಬಿದ್ರೆ ಒಂದು ಪಾಯಿಂಟ್.. ಮಧ್ಯದಲ್ಲಿ ಬಿದ್ರೆ ಮೂರು ಪಾಯಿಂಟ್.. ಪ್ಲಾಸ್ಟಿಕ್ ಕ್ಯಾಪ್​ಗೆ ಬಿದ್ರೆ ಐದು ಪಾಯಿಂಟ್ ನೀಡೋದಾಗಿ, 10 ಬಾಲ್​ಗಳಲ್ಲಿ 6 ಯಾರ್ಕರ್ ಬಾಲ್​ಗಳನ್ನ ಎಸೆಯುವಂತೆ ತಿಳಿಸ್ತಾರೆ. ಅಲ್ಲಿಗೆ ಶುರುವಾಯ್ತು ನೋಡಿ.. ಆರ್​ಸಿಬಿ ಬೌಲರ್​ಗಳ ಶಾರ್ಪ್ ಶೂಟಿಂಗ್.

ಬೌಲರ್​ಗಳಿಗೆ ಕೊಹ್ಲಿ ನೀಡಿದ ಸ್ಫೂರ್ತಿ ಅದ್ಭುತವಾಗಿತ್ತು.. ಇಲ್ಲಿ ನಿಮಗೊಂದು ಇಂಟ್ರಸ್ಟಿಂಗ್ ವಿಷಯವನ್ನು ಹೇಳಲೇಬೇಕು. ಈ ಸ್ಫರ್ದೆಯಲ್ಲಿ ವಿರಾಟ್ ಇರೋದಿಲ್ಲ ಅನ್ನೋದು ಗೊತ್ತಿರೋ ವಿಚಾರ. ಆದ್ರೆ ಆರ್​ಸಿಬಿ ಬೌಲರ್​ಗಳಿಗೆ ಕೊಹ್ಲಿ ನೀಡಿದ ಸ್ಫೂರ್ತಿ ಅದ್ಭುತವಾಗಿತ್ತು. ಮೊದಲಿಗೆ ಗುರುಕೀರತ್ ಸಿಂಗ್, ಪವನ್ ದೇಶಪಾಂಡೆ, ವಾಷಿಂಗ್ಟನ್ ಸುಂದರ್ ಅಕ್ಕ ಪಕ್ಕದ ವಿಕೆಟ್​ಗೆ ಬಾಲ್ ಎಸೆದು ಮೂರು ಪಾಯಿಂಟ್​ಗಳನ್ನ ಪಡೀತಾರೆ.

ಆ ಬಳಿಕ ಲಂಕಾ ವೇಗಿ ಇಸುರು ಉದಾನಾ ಮತ್ತು ಉಮೇಶ್ ಯಾದವ್ ಯಾರ್ಕರ್ ಎಸೆದ್ರೂ, ವಿಕೆಟ್​ಗೆ ಬೀಳೋದಿಲ್ಲ. ಹೀಗಾಗಿ ಕೊಹ್ಲಿ ಸೇರಿದಂತೆ ಆರ್​ಸಿಬಿ ಆಟಗಾರರೆಲ್ಲ ಸರಿಯಾಗೇ ಕಿಚಾಯಿಸ್ತಾರೆ. ಇನ್ನು ನವದೀಪ್ ಸೈನಿ ಮೊದಲ ಬಾಲ್​ನಲ್ಲೇ ವಿಕೆಟ್​ಗೆ ಯಾರ್ಕರ್ ಎಸೆದ್ರೆ, ನೋ ಬಾಲ್ ಆಗಿ ಬಿಡ್ತು. ಆದ್ರೆ 2ನೇ ಬಾಲ್​ನಲ್ಲಿ ಸೈನಿ ಪರ್ಫೆಕ್ಟ್ ಯಾರ್ಕರ್ ಎಸೆದು ಗೆದ್ದು ಬೀಗ್ತಾರೆ.

ಸೈನಿ, ದುಬೆ ಯಾರ್ಕರ್​ಗೆ ಫಿದಾ ಆದ ಕೊಹ್ಲಿ ಸಂಭ್ರಮ! ನಂತರ ಶಿವಂ ದುಬೆ ಮತ್ತು ಮೊಹಮ್ಮದ್ ಸಿರಾಜ್ ಪರ್ಫೆಕ್ಟ್ ಯಾರ್ಕರ್ ಬಾಲ್ ಹಾಕಿ, ಆರ್​ಸಿಬಿ ಆಟಗಾರರು ಹುಚ್ಚೆದ್ದು ಕುಣಿಯುವಂತೆ ಮಾಡ್ತಾರೆ. ಅದ್ರಲ್ಲೂ ನಾಯಕ ವಿರಾಟ್ ಕೊಹ್ಲಿ ಸಂಬ್ರಮಕ್ಕೆ ಪಾರವೇ ಇರಲಿಲ್ಲ. ಪರ್ಫೆಕ್ಟ್ ಯಾರ್ಕರ್ ಎಸೆದ ಶಿವಂ ದುಬೆ ಮತ್ತು ನವದೀಪ್ ಸೈನಿಯನ್ನ ತಬ್ಬಿಕೊಂಡು ಸಂಬ್ರಮಿಸ್ತಾರೆ.

ಬ್ಯಾಟಿಂಗ್​ನಲ್ಲಿ ಆರ್​ಸಿಬಿಗೆ ಯಾವುದೇ ಸಮಸ್ಯೆ ಇಲ್ಲ. ಆದ್ರೆ ಪ್ರತಿ ಸೀಸನ್​ನಲ್ಲಿ ಆರ್​ಸಿಬಿ ಬೌಲರ್​ಗಳಿಂದಲೇ ಎಡವ್ತಾ ಇತ್ತು. ಆದ್ರೀಗ ವಿರಾಟ್ ಗ್ಯಾಂಗ್​ನಲ್ಲಿ ಪಕ್ಕಾ ಯಾರ್ಕರ್ ಎಸೆಯೋ ಶಾರ್ಪ್ ಶೂಟರ್​ಗಳೆ ತುಂಬಿದ್ದಾರೆ. ನಿಜ.. ತಮ್ಮ ತಂಡದ ಬೌಲರ್​ಗಳ ಶಾರ್ಪ್ ಶೂಟಿಂಗ್ ಯಾರ್ಕರ್​ಗೆ ಕ್ಯಾಪ್ಟನ್ ಕೊಹ್ಲಿ ಫುಲ್ ಫಿದಾ ಆಗಿದ್ದಾರೆ. ಇನ್ಮುಂದೆ ಆರ್​ಸಿಬಿ ಸೋಲಿಗೆ ಬೌಲರ್​ಗಳು ಕಾರಣವಾಗೋದಿಲ್ಲ ಅನ್ನೋ ವಿಶ್ವಾಸ ಬಂದಿದೆ. ಹೀಗಾಗೇ ವಿರಾಟ್ ಪ್ರತಿ ಯಾರ್ಕರ್​ಗೂ ಕುಣಿದು ಕುಪ್ಪಳಿಸಿದ್ರು.

Published On - 11:12 am, Mon, 14 September 20

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!