IPL 2020: ಪಂಜಾಬ್​ ಕಿಂಗ್ಸ್​ ಮೇಲೆ ಚೆನ್ನೈ ಸೂಪರ್​ ರೈಡ್​ ಮಾಡಿದ ಫೋಟೊಗಳಿವು..

|

Updated on: Oct 05, 2020 | 5:05 PM

ದುಬೈನಲ್ಲಿ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕಿಂಗ್ಸ್‌ ಎಲೆವನ್‌ ಪಂಜಾಬ್‌ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪಂಜಾಬ್‌ ಕಿಂಗ್ಸ್‌ ಮೇಲೆ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಂಜಾಬ್​ಗೆ ವೇಗವಾಗಿ ರನ್ ಹರಿದು ಬರಲಿಲ್ಲ. 26 ರನ್​ಗಳಿಸಿದ್ದ ಮಯಾಂಕ್ ಅಗರ್ವಾಲ್, ಪಿಯೂಷ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು. ನಾಯಕ ಕೆ.ಎಲ್.ರಾಹುಲ್ ಏಕಾಂಗಿ ಹೋರಾಟ ನಡೆಸಿದ್ರೂ, ಸ್ಫೋಟಕ ಆಟವಾಡ್ಲಿಲ್ಲ. 52 ಎಸೆತಗಳನ್ನ ಎದುರಿಸಿದ ರಾಹುಲ್ 63ರನ್ ಗಳಿಸಿದ್ರು. ಕಿಂಗ್ಸ್ ಇಲೆವೆನ್ ಬೌಲರ್​ಗಳನ್ನ […]

IPL 2020: ಪಂಜಾಬ್​ ಕಿಂಗ್ಸ್​ ಮೇಲೆ ಚೆನ್ನೈ ಸೂಪರ್​ ರೈಡ್​ ಮಾಡಿದ ಫೋಟೊಗಳಿವು..
Follow us on

ದುಬೈನಲ್ಲಿ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕಿಂಗ್ಸ್‌ ಎಲೆವನ್‌ ಪಂಜಾಬ್‌ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪಂಜಾಬ್‌ ಕಿಂಗ್ಸ್‌ ಮೇಲೆ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.


ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಂಜಾಬ್​ಗೆ ವೇಗವಾಗಿ ರನ್ ಹರಿದು ಬರಲಿಲ್ಲ. 26 ರನ್​ಗಳಿಸಿದ್ದ ಮಯಾಂಕ್ ಅಗರ್ವಾಲ್, ಪಿಯೂಷ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು.


ನಾಯಕ ಕೆ.ಎಲ್.ರಾಹುಲ್ ಏಕಾಂಗಿ ಹೋರಾಟ ನಡೆಸಿದ್ರೂ, ಸ್ಫೋಟಕ ಆಟವಾಡ್ಲಿಲ್ಲ. 52 ಎಸೆತಗಳನ್ನ ಎದುರಿಸಿದ ರಾಹುಲ್ 63ರನ್ ಗಳಿಸಿದ್ರು.


ಕಿಂಗ್ಸ್ ಇಲೆವೆನ್ ಬೌಲರ್​ಗಳನ್ನ ಸರಿಯಾಗೇ ಬೆಂಡಿತ್ತಿದ ವ್ಯಾಟ್ಸನ್-ಡುಪ್ಲೆಸಿಸ್ ಜೋಡಿ, 181 ರನ್​ಗಳಿಸೋದ್ರೊಂದಿಗೆ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ರು.


ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಕ್ಯಾಚ್ ಹಿಡಿದ ಮಹೇಂದ್ರ ಸಿಂಗ್ ಧೋನಿ, ಹೊಸ ದಾಖಲೆ ಬರೆದ್ರು. ಐಪಿಎಲ್​ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಎರಡನೇ ವಿಕೆಟ್ ಕೀಪರ್ ಅನ್ನೋ ಖ್ಯಾತಿಗೆ ಎಂ.ಎಸ್.ಧೋನಿ ಭಾಜನರಾದ್ರು.


ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ಶೇನ್‌ ವಾಟ್ಸನ್‌ ಅಜೇಯ 83 ರನ್ ಗಳಿಸಿ ಚೆನ್ನೈ ಗೆಲುವಿಗೆ ಕಾರಣಕರ್ತರಾದರು.


ಐಪಿಎಲ್​ ಆರಂಭದಿಂದಲೂ ಉತ್ತಮವಾಗಿ ಆಡುತ್ತಿರುವ ಫ್ಯಾಫ್‌ ಡು ಫ್ಲೆಸಿಸ್‌ ಅಜೇಯ 87 ರನ್‌ ಗಳಿಸಿ ಚೆನ್ನೈಗೆ 10 ವಿಕೆಟ್‌ಗಳ ಜಯ ಭರ್ಜರಿ ಜಯ ತಂದು ಕೊಟ್ಟರು.