ಚೆನ್ನೈ ಫ್ರಾಂಚೈಸಿಯೊಂದಿಗೆ ಮನಸ್ತಾಪ ಮಾಡಿಕೊಂಡು ತವರಿಗೆ ವಾಪಸ್ ಬಂದಿರೋ ಸುರೇಶ್ ರೈನಾಗೆ, ತನ್ನ ತಪ್ಪಿನ ಅರಿವಾಗಿದೆ. ತನ್ನ ತಪ್ಪಿನ ಅರಿವಾಗಿ ರೈನಾ, ಮತ್ತೆ ಚೆನ್ನೈ ತಂಡವನ್ನ ಸೇರಿಕೊಳ್ಳೋ ಆಸೆಯಿಂದ ಅಭ್ಯಾಸ ಮಾಡ್ತಿದ್ದಾರೆ. ಆದ್ರೀಗ ರೈನಾಗೆ ಚೆನ್ನೈ ತಂಡದ ಬಾಗಿಲು ಬಹುತೇಕ ಮುಚ್ಚೋದು ಖಚಿತವಾಗಿದೆ.
ಬಾಲ್ಕನಿ ರೂಮ್ ಸಿಗಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ, ಅರ್ಧಕ್ಕೆ ಚೆನ್ನೈ ತಂಡವನ್ನ ಬಿಟ್ಟು ಬಂದಿದ್ದ ರೈನಾ ಈಗ ತಮ್ಮ ತಪ್ಪಿಗೆ ಪಶ್ಚಾತಾಪ ಪಡ್ತಿದ್ದಾರೆ. ಆದ್ರೆ ಇದನ್ನ ಗಂಭೀರವಾಗಿ ಪರಿಗಣಿಸಿರೋ ಚೆನ್ನೈ ಫ್ರಾಂಚೈಸಿ, ರೈನಾ ಪ್ಲೇಸ್, ರಿಪ್ಲೇಸ್ ಮಾಡೋದಕ್ಕೆ ಮುಂದಾಗಿದೆ.
ಡೇವಿಡ್ ಮಲನ್ ವಿಶ್ವದ ನಂ.1
T20 ಬ್ಯಾಟ್ಸ್ಮನ್..
ಚೆನ್ನೈ ಫ್ರಾಂಚೈಸಿ ರೈನಾ ವಿಚಾರದಲ್ಲಿ ಮನಸ್ಸು ಮುರಿದುಕೊಂಡಿದೆ. ಹೀಗಾಗಿ ರೈನಾ ಸ್ಥಾನಕ್ಕೆ ಅಂತಿಂಥ ಆಟಗಾರನಲ್ಲ.. ವಿಶ್ವದ ನಂಬರ್ ಒನ್ ಬ್ಯಾಟ್ಸ್ಮನ್ನನ್ನ ತರೋದಕ್ಕೆ ಮುಂದಾಗಿದೆ. ಆತ ಬೇರ್ಯಾರೂ ಅಲ್ಲ.. ಇಂಗ್ಲೆಂಡ್ ತಂಡದ ಡೇವಿಡ್ ಮಲನ್.
ಡೇವಿಡ್ ಮಲನ್.. ಇಂಗ್ಲೆಂಡ್ ತಂಡದ ಡೈನಾಮಿಕ್ ಬ್ಯಾಟ್ಸ್ಮನ್. ಅದ್ರಲ್ಲೂ ಟಿಟ್ವೆಂಟಿ ಕ್ರಿಕೆಟ್ನಲ್ಲಿ ಮಲನ್, ಇಡೀ ಕ್ರಿಕೆಟ್ ಜಗತ್ತೇ ಹೌಹಾರುವಂತಹ ಪ್ರದರ್ಶನ ನೀಡ್ತಿದ್ದಾನೆ. ಸದ್ಯ ಐಸಿಸಿ ಟಿಟ್ವೆಂಟಿ ರ್ಯಾಂಕಿಂಗ್ನಲ್ಲಿ ಮಲನ್, ನಂಬರ್ ವನ್ ಬ್ಯಾಟ್ಸ್ಮನ್.
ಟಿಟ್ವೆಂಟಿ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಪರ 15 ಪಂದ್ಯಗಳನ್ನಾಡಿರುವ ಡೇವಿಡ್ ಮಲನ್, 682 ರನ್ಗಳಿಸಿದ್ದಾರೆ. ಇದ್ರಲ್ಲಿ ಅಜೇಯ 103 ರನ್ ಗರಿಷ್ಠ ಮೊತ್ತವಾಗಿದ್ರೆ, 7 ಅರ್ಧಶತಕ ಸಿಡಿಸಿದ್ದಾನೆ. ಇಲ್ಲೇ ಗೊತ್ತಾಗುತ್ತೆ.. ಮಲನ್ ಟಿಟ್ವೆಂಟಿ ಕ್ರಿಕೆಟ್ನಲ್ಲಿ ಎಂತ ಡೆಡ್ಲಿ ಬ್ಯಾಟ್ಸ್ಮನ್ ಅನ್ನೋದು.
ಧೋನಿ ಕಣ್ಣು ಡೇವಿಡ್ ಮಲನ್ ಮೇಲೆ ಬಿದ್ದಿದ್ದೇಕೆ?
ನಾಯಕ ಮಹೇಂದ್ರ ಸಿಂಗ್ ಧೋನಿ, ಇಂಗ್ಲೆಂಡ್ನ ಡೇವಿಡ್ ಮಲನ್ನನ್ನೇ ರೈನಾ ಪ್ಲೇಸ್ಗೆ ಕರೆತರೋದಕ್ಕೆ ಒಂದು ಕಾರಣವಿದೆ. ರೈನಾರಂತೆ ಮಲನ್, ಎಡಗೈ ಬ್ಯಾಟ್ಸ್ಮನ್ ಆಗಿದ್ದು, ರೈನಾರಂತೆ 3ನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಮಾಡ್ತಾನೆ. ಹೀಗಾಗೇ ಧೋನಿ ಕಣ್ಣು ಮಲನ್ ಮೇಲೆ ಬಿದ್ದಿದೆ.
ಸದ್ಯ ಚೆನ್ನೈ ಫ್ರಾಂಚೈಸಿ ಡೇವಿಡ್ ಮಲನ್ನನ್ನ ರೈನಾ ಪ್ಲೇಸ್ಗೆ ರಿಪ್ಲೇಸ್ ಮಾಡೋದಕ್ಕೆ ಮೊದಲ ಸುತ್ತಿನ ಮಾತುಕತೆ ನಡೆಸಿದೆ. ಈ ಬಗ್ಗೆ ಚೆನ್ನೈ ತಂಡದ ಶೇನ್ ವ್ಯಾಟ್ಸನ್ ಕೂಡ ನಾಯಕ ಧೋನಿಗೆ, ಮಲನ್ ಆಯ್ಕೆ ಅದ್ಭುತ ಎಂದು ಸಲಹೆ ನೀಡಿದ್ದಾರೆ.
ರೈನಾ ಮೇಲೆ ಸಹಜವಾಗೇ ಮಾಹಿಗೆ ಮುನಿಸಿದೆ..
ಚೆನ್ನೈ ತಂಡ ಡೇವಿಡ್ ಮಲನ್ಗೆ ಮಣೆ ಹಾಕೋದಕ್ಕೆ ಮುಂದಾಗಿರೋದ್ರ ಹಿಂದೆ, ನಾಯಕ ಧೋನಿಯಿದ್ದಾರೆ. ಯಾಕಂದ್ರೆ ತನ್ನ ಮಾತನ್ನ ಮೀರಿ ಚೆನ್ನೈ ತಂಡವನ್ನ ತೊರೆದ ರೈನಾ ಮೇಲೆ, ಸಹಜವಾಗೇ ಮಾಹಿಗೆ ಮುನಿಸಿದೆ. ಇದೇ ಕಾರಣಕ್ಕೆ ಚೆನ್ನೈ ಫ್ರಾಂಚೈಸಿ ರೈನಾ ಬದಲಿ ಆಟಗಾರನ ಆಯ್ಕೆಗೆ ಮುಂದಾಗಿದೆ.
ಸದ್ಯ ಚೆನ್ನೈ ತಂಡದಲ್ಲಾಗಿರೋ ಬೆಳವಣಿಗೆಯನ್ನ ನೋಡಿದ್ರೆ, ರೈನಾಗೆ ದುಬೈ ಐಪಿಎಲ್ ಬಾಗಿಲು ಬಹುತೇಕ ಮುಚ್ಚಿದೆ. ರೈನಾ ದುರಹಂಕಾರದಿಂದಾಗಿ ಐಪಿಎಲ್ಗೆ ವಿಶ್ವದ ನಂ.1 ಟಿಟ್ವೆಂಟಿ ಬ್ಯಾಟ್ಸ್ಮನ್ ಡೇವಿಡ್ ಮಲನ್ಗೆ, ಭಾಗ್ಯದ ಬಾಗಿಲು ತೆರೆದಂತಾಗಿದೆ.
Published On - 10:33 am, Sat, 12 September 20