ಮರಳುನಾಡಿನ ಮಹಾಯುದ್ಧದಲ್ಲಿ ಸತತ ಎರಡು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದ ಡೆಲ್ಲಿ ಕ್ಯಾಪಿಟಲ್ಸ್ಗೆ, ಸನ್ ರೈಸರ್ಸ್ ಹೈದ್ರಾಬಾದ್ ಮೊದಲ ಸೋಲಿನ ಶಾಕ್ ನೀಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಹೈದ್ರಾಬಾದ್ನ ರಶೀದ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು. 4 ಓವರ್ಗಳಲ್ಲಿ 14 ರನ್ ನೀಡಿದ ರಶೀದ್ ಪ್ರಮುಖ ಮೂರು ವಿಕೆಟ್ ಪಡೆಯೋದ್ರೊಂದಿಗೆ, ತಂಡಕ್ಕೆ ಗೆಲುವು ತಂದುಕೊಟ್ಟರು.
ಕಳೆದೆರೆಡು ಪಂದ್ಯಗಳಲ್ಲಿ ಒಂದು ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದ್ದ ಭುವನೇಶ್ವರ್, ಡೆಲ್ಲಿ ವಿರುದ್ಧ ಎರಡು ವಿಕೆಟ್ ಪಡೆದರು. 4 ಓವರ್ಗಳಲ್ಲಿ 25 ರನ್ ನೀಡಿದ ಭುವನೇಶ್ವರ್, ಪೃಥ್ವಿ ಶಾ ಹಾಗೂ ಶಿಮ್ರಾನ್ ಹೇಟ್ಮೆರ್ ವಿಕೆಟ್ ಪಡೆದರು.
ಹೈದ್ರಾಬಾದ್ ವಿರುದ್ಧ ಎರಡು ವಿಕೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ನ ಕಗಿಸೋ ರಬಾಡ, ಮೊಹಮ್ಮದ್ ಶಮಿ ಜೊತೆಗೆ ಪರ್ಪಲ್ ಕ್ಯಾಪ್ ಹಂಚಿಕೊಂಡಿದ್ದಾರೆ. ಮೊಹಮ್ಮದ್ ಶಮಿ ಹಾಗೂ ರಬಾಡ ಇಬ್ಬರೂ ವೇಗಿಗಳು ತಲಾ 7 ವಿಕೆಟ್ ಕಬಳಿಸಿದ್ದಾರೆ.
ಈ ಬಾರಿಯ ಐಪಿಎಲ್ನ ಮೊದಲ ಪಂದ್ಯದಲ್ಲೇ ಬರೋಬ್ಬರಿ 162 ಸಿಕ್ಸರ್ಗಳು ದಾಖಲಾಗಿವೆ. ಶಾರ್ಜಾ ಕ್ರಿಕೆಟ್ ಮೈದಾನದಲ್ಲೇ 2 ಪಂದ್ಯಗಳ ಪೈಕಿ 62 ಸಿಕ್ಸರ್ ದಾಖಲಾಗಿದ್ದು, ದುಬೈನಲ್ಲಿ 5 ಪಂದ್ಯಗಳ ಪೈಕಿ 58 ಸಿಕ್ಸ್ಗಳು ದಾಖಲಾಗಿವೆ.
ಈ ಸೀಸನ್ನಲ್ಲಿ ಮೊದಲ ಪಂದ್ಯವಾಡಿದ ಕೇನ್ ವಿಲಿಯಮ್ಸನ್, ಸ್ಫೋಟಕ ಬ್ಯಾಟಿಂಗ್ ಮಾಡೋದ್ರೊಂದಿಗೆ ತಂಡದ ಸ್ಕೋರ್ ಹೆಚ್ಚಿಸಿದರು. 26 ಎಸೆತಗಳಲ್ಲಿ 5 ಬೌಂಡರಿ ಬಾರಿಸಿದ ವಿಲಿಯಮ್ಸನ್, 41 ರನ್ ಗಳಿಸಿದರು.
ಹಾಗೇ ಕ್ಯಾಪ್ಟನ್ ವಾರ್ನರ್ಗೆ ಸಾಥ್ ನೀಡಿದ ಬೇರಿಸ್ಟೋ ಕೂಡ ಅರ್ಧಶತಕ ಬಾರಿಸಿ ಮಿಂಚಿದರು. 48 ಎಸೆತಗಳನ್ನ ಎದುರಿಸಿದ ಬೇರಿಸ್ಟೋ, 53 ರನ್ ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು.
ಈ ಬಾರಿಯ ಐಪಿಎಲ್ನ ಮೊದಲೆರೆಡು ಪಂದ್ಯಗಳಲ್ಲಿ ಸೋತಿದ್ದ ಸನ್ರೈಸರ್ಸ್ ಹೈದ್ರಾಬಾದ್, ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ಓಪನ್ ಮಾಡಿದೆ. ಹೈದ್ರಾಬಾದ್ ಮೈನಸ್ 0.22 ರನ್ರೇಟ್ನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
Published On - 4:01 pm, Wed, 30 September 20