IPL 2021: ಆಗ್ಲೆ ಹಾಂಗೆ, ಇನ್ನು ಈಗ ಬಿಡ್ತೀವಾ? ; ಸಖತ್ ವೈರಲ್ ಆಗ್ತಿದೆ ಕೊಹ್ಲಿಯ 18 ವರ್ಷಗಳ ಹಿಂದಿನ ಶಾಲಾ ಪತ್ರ! ಫೋಟೋ ನೋಡಿ

|

Updated on: Apr 22, 2021 | 5:02 PM

IPL 2021: ಕೊಹ್ಲಿ ಶಾಲಾ ದಿನಗಳಿಗೆ ಸಂಬಂಧಿಸಿದ 18 ವರ್ಷದ ಹಿಂದಿನ ಪತ್ರವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಬಲಗೈ ಬ್ಯಾಟ್ಸ್‌ಮನ್‌ನನ್ನು ತನ್ನ ಶಾಲಾ ತಂಡದ ನಾಯಕನಾಗಿ ಆಯ್ಕೆ ಮಾಡುವ ಬಗ್ಗೆ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

IPL 2021: ಆಗ್ಲೆ ಹಾಂಗೆ, ಇನ್ನು ಈಗ ಬಿಡ್ತೀವಾ? ; ಸಖತ್ ವೈರಲ್ ಆಗ್ತಿದೆ ಕೊಹ್ಲಿಯ 18 ವರ್ಷಗಳ ಹಿಂದಿನ ಶಾಲಾ ಪತ್ರ! ಫೋಟೋ ನೋಡಿ
ಕೊಹ್ಲಿಯ 18 ವರ್ಷಗಳ ಹಿಂದಿನ ಶಾಲಾ ಪತ್ರ
Follow us on

ಕ್ರಿಕೆಟ್​ ದುನಿಯಾದ ರನ್ ಮೆಷಿನ್ ಎಂದು ಕರೆಯಲ್ಪಡುವ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಸಾಮರ್ಥ್ಯ ಮತ್ತು ಸ್ಕೋರ್ ಮಾಡುವ ಹಸಿವು ಕೊಹ್ಲಿಯನ್ನು ಕ್ರಿಕೆಟ್ ಜಗತ್ತಿನಲ್ಲಿ ಸಾಮ್ರಾಟನನ್ನಾಗಿ ಮಾಡಿದೆ. ಏಕದಿನ ಪಂದ್ಯಗಳಲ್ಲಿ ಹಲವು ವರ್ಷಗಳಿಂದ ನಂ .1 ಸ್ಥಾನ ಪಡೆದಿದ್ದ, ಟೆಸ್ಟ್ ಕ್ರಿಕೆಟ್‌ನಲ್ಲಿ ನಂ .2 ಮತ್ತು ಟಿ 20 ಐಗಳಲ್ಲಿ ನಂ .3 ಸ್ಥಾನ ಪಡೆದಿರುವ ಸ್ಟೈಲಿಸ್ಟ್ ಬ್ಯಾಟ್ಸ್‌ಮನ್ ವರ್ಷದಿಂದ ವರ್ಷಕ್ಕೆ ಹೇಗೆ ವಿಕಸನಗೊಂಡಿದ್ದಾರೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿಯಾಗಿವೆ. ಈ ಕ್ರಿಕೆಟ್​ ಕಿಂಗ್ 2008 ರ ಐಸಿಸಿ ಅಂಡರ್​ 19 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತೀಯ ತಂಡದ ನಾಯಕರಾಗಿದ್ದ ಕಿಂಗ್ ಕೊಹ್ಲಿ ಅಂದಿನಿಂದ ಹಿಂತಿರುಗಿ ನೋಡಿದ್ದೆ ಇಲ್ಲ.

ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಸಕ್ರಿಯ
ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ಬಲಗೈ ಬ್ಯಾಟ್ಸ್‌ಮನ್ ತಮ್ಮ ಅತ್ಯುನ್ನತ ಬ್ಯಾಟಿಂಗ್ ಪ್ರದರ್ಶನದ ಹಿನ್ನಲೆಯಲ್ಲಿ ದೇಶವನ್ನು ಅನೇಕ ವೈಭವಗಳತ್ತ ಕೊಂಡೊಯ್ದಿದ್ದಾರೆ ಮತ್ತು ಪ್ರಸ್ತುತ 32 ವರ್ಷದ ಈ ರನ್ ಮಷಿನ್ ಐಪಿಎಲ್ ಫ್ರ್ಯಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗೆ ತೊಡಗಿಸಿಕೊಂಡಿದ್ದಾರೆ. 2008 ರಲ್ಲಿ ಅಂಡರ್ -19 ವಿಶ್ವಕಪ್‌ನಲ್ಲಿ ನಾಯಕನಾಗಿ ಮಾಡಿದ ಸಾಧನೆಯ ನಂತರ ಮೊದಲ ಬಾರಿಗೆ ಬೆಳಕಿಗೆ ಬಂದ ಪ್ರಸ್ತುತ ಟೀಮ್ ಇಂಡಿಯಾ ನಾಯಕ, ನಂತರ ಅಭಿಮಾನಿಗಳ ಮೆಚ್ಚಿನವನಾಗಿದ್ದಾನೆ. ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ. ಆಗಾಗ್ಗೆ ತಮ್ಮ ಹಳೆಯ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಕೊಹ್ಲಿ ತನ್ನ ಅಭಿಮಾನಿಗಳಿಗೆ ಬರಪೂರ ಮನರಂಜನೆ ನೀಡುತ್ತಿರುತ್ತಾರೆ. ಈಗ ಅಂತಹದೆ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಕೊಹ್ಲಿಯ ಈ ಕ್ರಿಕೆಟ್​ ಸಾಧನೆಗೆ ಕನ್ನಡಿ ಹಿಡಿದಂತಿದೆ.

18 ವರ್ಷದ ಹಿಂದಿನ ಪತ್ರ
ಬುಧವಾರ, ಕೊಹ್ಲಿ ಶಾಲಾ ದಿನಗಳಿಗೆ ಸಂಬಂಧಿಸಿದ 18 ವರ್ಷದ ಹಿಂದಿನ ಪತ್ರವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಬಲಗೈ ಬ್ಯಾಟ್ಸ್‌ಮನ್‌ನನ್ನು ತನ್ನ ಶಾಲಾ ತಂಡದ ನಾಯಕನಾಗಿ ಆಯ್ಕೆ ಮಾಡುವ ಬಗ್ಗೆ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವರದಿಗಳ ಪ್ರಕಾರ, ಕೊಹ್ಲಿ 10 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗ, ಅವರು ತಮ್ಮ ಶಾಲೆಯ ಅಂಡರ್ -15 ಕ್ರಿಕೆಟ್ ತಂಡದ ನಾಯಕರಾಗಿದ್ದರು, ಅವರ ಬಾಲ್ಯದ ದಿನಗಳಿಂದಲೇ ನಾಯಕನಾಗಿ ಅಭಿವೃದ್ಧಿ ಹೊಂದುವ ಸಾಮರ್ಥ್ಯದ ಹಿನ್ನೆಲೆಯನ್ನು ಈ ಪತ್ರದಲ್ಲಿ ಕಾಣಬಹುದಾಗಿದೆ.

2008 ರಲ್ಲಿ, ಕೊಹ್ಲಿಯನ್ನು ಆರ್‌ಸಿಬಿ ತಂಡದಲ್ಲಿ ಸೇರಿಸಿಕೊಳ್ಳಲಾಯಿತು. 2013 ರಲ್ಲಿ ಕೊಹ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಲು ಪ್ರಾರಂಭಿಸಿದರು. 2016 ರಲ್ಲಿ ಪ್ರಮುಖ ರನ್-ಸ್ಕೋರರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಕೊಹ್ಲಿ ಒಂಬತ್ತನೇ ಆವೃತ್ತಿಯ ಕೊನೆಯಲ್ಲಿ ಆರೆಂಜ್ ಕ್ಯಾಪ್ ಧರಿಸಿ ಮಿಂಚಿದರು. ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಗಿದ್ದಾರೆ. ಐಪಿಎಲ್ 2018 ಪ್ಲೇಯರ್ ಹರಾಜಿಗೆ ಮುಂಚಿತವಾಗಿ ತನ್ನ ಫ್ರ್ಯಾಂಚೈಸ್‌ನಿಂದ ಉಳಿಸಿಕೊಂಡ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದಲ್ಲದೇ ಈ ಬಾರಿಯು ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.