RCB vs RR , IPL 2021 Match 16 Result: ಕೊಹ್ಲಿ- ಪಡಿಕ್ಕಲ್ ಅಮೋಘ ಜೊತೆಯಾಟ; ಆರ್​ಸಿಬಿಗೆ 10 ವಿಕೆಟ್​ಗಳ ಭರ್ಜರಿ ಗೆಲುವು

| Updated By: ganapathi bhat

Updated on:Nov 30, 2021 | 12:13 PM

RCB vs RR Scorecard: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 16ನೇ ಪಂದ್ಯದ ಲೈವ್ ಅಪ್ಡೇಟ್​ಗಳು ಇಲ್ಲಿದೆ.

RCB vs RR , IPL 2021 Match 16 Result: ಕೊಹ್ಲಿ- ಪಡಿಕ್ಕಲ್ ಅಮೋಘ ಜೊತೆಯಾಟ; ಆರ್​ಸಿಬಿಗೆ 10 ವಿಕೆಟ್​ಗಳ ಭರ್ಜರಿ ಗೆಲುವು
ಕೊಹ್ಲಿ- ಪಡಿಕ್ಕಲ್ ಅದ್ಭುತ ಜೊತೆಯಾಟ

ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. 16.3 ಓವರ್‌ಗಳಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೆ 178 ರನ್ ಟಾರ್ಗೆಟ್ ತಲುಪಿದ್ದಾರೆ. ರಾಜಸ್ಥಾನ್ ರಾಯಲ್ಸ್ ಆರ್‌ಸಿಬಿ ವಿರುದ್ಧ ಹೀನಾಯ ಸೋಲು ಕಂಡಿದೆ. ರಾಯಲ್‌ ಚಾಲೆಂಜರ್ಸ್ ಪರ ದೇವದತ್ ಪಡಿಕ್ಕಲ್ ಆಕರ್ಷಕ ಶತಕ ದಾಖಲಿಸಿದ್ದಾರೆ. 52 ಬಾಲ್‌ಗೆ 101 ರನ್ ಪೇರಿಸಿದ್ದಾರೆ. ಮತ್ತೊಂದೆಡೆ ನಾಯಕ ಕೊಹ್ಲಿ 47 ಬಾಲ್​‌ಗೆ 72 ರನ್ ದಾಖಲಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗೆ 9 ವಿಕೆಟ್ ಕಳೆದುಕೊಂಡು 177 ರನ್ ದಾಖಲಿಸಿತ್ತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 178 ರನ್ ಟಾರ್ಗೆಟ್ ನೀಡಿತ್ತು. ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳು ಅಲ್ಪಮೊತ್ತಕ್ಕೆ ಕುಸಿದಿದ್ದರು.‌ ಆದರೆ, 4 ವಿಕೆಟ್‌ಗಳ ಬಳಿಕ ಜೊತೆಯಾದ ರಿಯಾನ್ ಪರಾಗ್ ಹಾಗೂ ಶಿವಂ ದುಬೆ ತಂಡಕ್ಕೆ ಆಸರೆಯಾಗಿದ್ದರು. ಶಿವಂ‌ ದುಬೆ 32 ಬಾಲ್‌ಗೆ 46 ರನ್ ಗಳಿಸಿದರೆ, ತೆವಾಟಿಯಾ 23 ಬಾಲ್‌ಗೆ 40 ರನ್ ದಾಖಲಿಸಿದ್ದರು. ರಿಯಾನ್ ಪರಾಗ್ 25, ಹಾಗೂ ಸಂಜು ಸ್ಯಾಮ್ಸನ್ 21 ರನ್ ಪೇರಿಸಿ ತಂಡದ ಮೊತ್ತ ಹೆಚ್ಚಿಸಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೊಹಮ್ಮದ್ ಸಿರಾಜ್ ಹಾಗೂ ಹರ್ಷಲ್ ಪಟೇಲ್ ತಲಾ 3 ವಿಕೆಟ್ ಕಬಳಿಸಿದ್ದರು. ಜಾಮಿಸನ್, ರಿಚರ್ಡ್‌ಸನ್ ಮತ್ತು ಸುಂದರ್ ತಲಾ 1 ವಿಕೆಟ್ ಪಡೆದಿದ್ದರು.

LIVE NEWS & UPDATES

The liveblog has ended.
  • 22 Apr 2021 11:04 PM (IST)

    ಆರ್​ಸಿಬಿಗೆ ಸತತ 4ನೇ ಗೆಲುವು

    ರಾಜಸ್ಥಾನ್ ರಾಯಲ್ಸ್ ವಿರುದ್ಧದ ಟೂರ್ನಿಯ 16ನೇ ಪಂದ್ಯದಲ್ಲಿ ಆರ್​ಸಿಬಿ 10 ವಿಕೆಟ್​ಗಳ ಭರ್ಜರಿ ದಾಖಲಿಸಿದೆ.

  • 22 Apr 2021 10:54 PM (IST)

    ದೇವದತ್ ಪಡಿಕ್ಕಲ್ ಶತಕ!

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ದೇವದತ್ ಪಡಿಕ್ಕಲ್ ಆಕರ್ಷಕ ಶತಕ ದಾಖಲಿಸಿದ್ದಾರೆ. 51 ಬಾಲ್​ಗೆ 6 ಸಿಕ್ಸರ್, 11 ಬೌಂಡರಿ ಸಹಿತ 101 ರನ್ ಬಾರಿಸಿದ್ದಾರೆ. ಆರ್​ಸಿಬಿ ಗೆಲ್ಲಲು 23 ಬಾಲ್​ಗೆ 4 ರನ್ ಗಳಿಸಬೇಕಿದೆ. ವಿರಾಟ್ ಕೊಹ್ಲಿ ಮತ್ತೊಂದೆಡೆ ಬ್ಯಾಟ್ ಬೀಸುತ್ತಿದ್ದು 71 ರನ್ ಗಳಿಸಿದ್ದಾರೆ.

  • 22 Apr 2021 10:48 PM (IST)

    ರಾಯಲ್ ಚಾಲೆಂಜರ್ಸ್ 162/0 (15 ಓವರ್)

    15 ಓವರ್​ಗಳ ಅಂತ್ಯಕ್ಕೆ ಆರ್​ಸಿಬಿ ತಂಡ ವಿಕೆಟ್ ನಷ್ಟವಿಲ್ಲದೆ 162 ರನ್ ದಾಖಲಿಸಿದೆ. ತಂಡ ಗೆಲ್ಲಲು 30 ಬಾಲ್​ಗೆ 16 ರನ್ ಬೇಕಿದೆ.

  • 22 Apr 2021 10:42 PM (IST)

    ಆರ್​ಸಿಬಿ ಗೆಲ್ಲಲು 36 ಬಾಲ್​ಗೆ 19 ರನ್ ಬೇಕು

    ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಓವರ್​ಗೆ 159 ರನ್ ಗಳಿಸಿದೆ. ಗೆಲ್ಲಲು 36 ಬಾಲ್​ಗೆ 19 ರನ್ ಬೇಕಾಗಿದೆ.

  • 22 Apr 2021 10:37 PM (IST)

    ಕೊಹ್ಲಿ ಅರ್ಧಶತಕ- 6,000 ರನ್ ದಾಖಲೆ

    ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಪೂರೈಸಿದ್ದಾರೆ. 36 ಬಾಲ್​ಗೆ 55 ರನ್ ಗಳಿಸಿ ಆಡುತ್ತಿದ್ದಾರೆ. ಈ ನಡುವೆ ಐಪಿಎಲ್​ನಲ್ಲಿ 6,000 ರನ್ ಪೂರೈಸಿದ ದಾಖಲೆಯನ್ನು ಕೂಡ ಕೊಹ್ಲಿ ಮಾಡಿದ್ದಾರೆ. 13 ಓವರ್ ಅಂತ್ಯಕ್ಕೆ ಆರ್​ಸಿಬಿ 142 ರನ್ ಗಳಿಸಿದೆ. ವಿಕೆಟ್ ಕಳೆದುಕೊಂಡಿಲ್ಲ.

  • 22 Apr 2021 10:29 PM (IST)

    ಆರ್​ಸಿಬಿ ಗೆಲ್ಲಲು 54 ಬಾಲ್​ಗೆ 61 ರನ್ ಬೇಕು

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲು 54 ಬಾಲ್​ಗೆ 61 ರನ್ ಬೇಕಾಗಿದೆ. ತಂಡದ ಪರ ಪಡಿಕ್ಕಲ್ ಅದ್ಭುತವಾದ ಆಟವಾಡಿದ್ದಾರೆ. ಕೊಹ್ಲಿ, ಪಡಿಕ್ಕಲ್​ಗೆ ಉತ್ತಮ ಜೊತೆಯಾಗಿದ್ದಾರೆ. ಆರ್​ಸಿಬಿ ಸ್ಕೋರ್ 11 ಓವರ್​ಗೆ 117/0 ಆಗಿದೆ.

  • 22 Apr 2021 10:23 PM (IST)

    100 ರನ್ ಜೊತೆಯಾಟ ನೀಡಿದ ಕೊಹ್ಲಿ- ಪಡಿಕ್ಕಲ್ ಜೋಡಿ

    ರಾಯಲ್ ಚಾಲೆಂಜರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಜೊತೆಯಾಟ ನೀಡಿದ್ದಾರೆ. ಆರ್​ಸಿಬಿ 10 ಓವರ್​ಗೆ ವಿಕೆಟ್ ನಷ್ಟವಿಲ್ಲದೆ 107 ರನ್ ದಾಖಲಿಸಿದೆ. ಪಡಿಕ್ಕಲ್ ಅಬ್ಬರದ ಆಟವಾಡುತ್ತಿದ್ದಾರೆ. 36 ಬಾಲ್​ಗೆ 80 ರನ್ ನೀಡಿದ್ದಾರೆ. ಆರ್​ಸಿಬಿ ಗೆಲ್ಲಲು 60 ಬಾಲ್​ಗೆ 71 ರನ್ ಬೇಕಿದೆ.

  • 22 Apr 2021 10:18 PM (IST)

    ಪಡಿಕ್ಕಲ್ ಸಿಕ್ಸರ್-ಸಿಕ್ಸರ್

    ರಾಹುಲ್ ತೆವಾಟಿಯಾ ಓವರ್​ಗೆ ಪಡಿಕ್ಕಲ್ ಎರಡು ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ತಂಡದ ಮೊತ್ತ 9 ಓವರ್​ಗೆ 96 ಆಗಿದೆ. ಆರ್​ಸಿಬಿ ವಿಕೆಟ್ ಕಳೆದುಕೊಂಡಿಲ್ಲ. ಘಟಾನುಘಟಿ ದಾಂಡಿಗರು ಇನ್ನೂ ವಿಕೆಟ್ ಉಳಿಸಿಕೊಂಡಿದ್ದಾರೆ. ಆರ್​ಸಿಬಿ ಗೆಲ್ಲಲು 66 ಬಾಲ್​ಗೆ 82 ರನ್ ಬೇಕಿದೆ.

  • 22 Apr 2021 10:12 PM (IST)

    ಪಡಿಕ್ಕಲ್ಆಕರ್ಷಕ ಅರ್ಧಶತಕ

    ದೇವದತ್ ಪಡಿಕ್ಕಲ್ ರಾಯಲ್ ಚಾಲೆಂಜರ್ಸ್ ಪರ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. 27 ಬಾಲ್​ಗೆ 52 ರನ್ ಪೇರಿಸಿದ್ದಾರೆ. ಆರ್​ಸಿಬಿ ಗೆಲ್ಲಲು 74 ಬಾಲ್​ಗೆ 104 ರನ್ ಬೇಕಿದೆ.

  • 22 Apr 2021 10:10 PM (IST)

    ರಾಯಲ್ ಚಾಲೆಂಜರ್ಸ್ 67/0 (7 ಓವರ್)

    7 ಓವರ್​ಗಳ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 67 ರನ್ ದಾಖಲಿಸಿದೆ. ಆರ್​ಸಿಬಿ ಪರ ಪಡಿಕ್ಕಲ್ 25 ಬಾಲ್​ಗೆ 47 ರನ್​ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ 17 ಬಾಲ್​ಗೆ 19 ರನ್ ಗಳಿಸಿ ಉತ್ತಮ ಜೊತೆಯಾಟ ನೀಡುತ್ತಿದ್ದಾರೆ.

  • 22 Apr 2021 09:54 PM (IST)

    ಕೊಹ್ಲಿ- ಪಡಿಕಲ್ ಉತ್ತಮ ಆರಂಭ

    ಆರಂಭಿಕರಾಗಿ ಕಣಕ್ಕಿಳಿದಿರುವ ಕೊಹ್ಲಿ ಹಾಗೂ ಪಡಿಕಲ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ. ಈಗಾಗಲೇ 4 ಓವರ್ ಆಡಿರುವ ಈ ಜೋಡಿ ಬರೋಬ್ಬರಿ 39 ರನ್ ಗಳಿಸಿದೆ. ಉಭಯ ಆಟಗಾರರು ಬೌಂಡರಿಗಳ ಅಬ್ಬರ ಶುರು ಮಾಡಿದ್ದಾರೆ. ಪಡಿಕಲ್ 24 ರನ್ ಗಳಿಸಿದ್ದರೆ, ಕೊಹ್ಲಿ 15 ರನ್ ಗಳಿಸಿ ಬ್ಯಾಟಿಂಗ್​ನಲ್ಲಿದ್ದಾರೆ.

  • 22 Apr 2021 09:47 PM (IST)

    ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ

    ರಾಜಸ್ಥಾನ್ ನೀಡಿರುವ ಬೃಹತ್ ಮೊತ್ತವನ್ನು ಬೆನ್ನತ್ತಿರುವ ಆರ್ಸಿಬಿಗೆ ಆರಂಭಿಕರಾಗಿ ಕೊಹ್ಲಿ ಹಾಗೂ ಪಡಿಕಲ್​ ಬ್ಯಾಟಿಂಗ್ ಆರಂಭಿಸಿದ್ದಾರೆ. ಮೊದಲ 2 ಓವರ್​ಗಳಲ್ಲಿ ಕೊಹ್ಲಿಯ ಅಮೋಘ ಸಿಕ್ಸರ್​ನೊಂದಿಗೆ ತಂಡ ಉತ್ತಮ ಅಡಿಪಾಯ ಹಾಕಿದೆ.

  • 22 Apr 2021 09:25 PM (IST)

    ಆರ್​ಆರ್​ 177/9; ಆರ್​ಸಿಬಿಗೆ 178 ಟಾರ್ಗೆಟ್

    ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್​ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 177 ರನ್ ದಾಖಲಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ 178 ರನ್ ಪೇರಸಿಬೇಕಿದೆ.

  • 22 Apr 2021 09:23 PM (IST)

    ಮಾರಿಸ್ ಹಾಗೂ ಸಕರಿಯಾ ಔಟ್; ಹರ್ಷಲ್​ಗೆ ವಿಕೆಟ್

    ತೆವಾಟಿಯಾ ಔಟ್ ಆದ ಬೆನ್ನಲ್ಲೇ ಕ್ರಿಸ್ ಮಾರಿಸ್ ಹಾಗೂ ಸಕರಿಯಾ ಹರ್ಷಲ್ ಪಟೇಲ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಮಾರಿಸ್ 10 ರನ್ ಗಳಿಸಿದರೆ ಸಕರಿಯಾ ಸೊನ್ನೆ ಸುತ್ತಿದ್ದಾರೆ. ಹರ್ಷಲ್ ಪಟೇಲ್ ವಿಕೆಟ್ ಗಳಿಕೆ ಇಂದು ಕೂಡ ಮುಮದುವರಿದಿದೆ. ರಾಜಸ್ಥಾನ್ ರಾಯಲ್ಸ್ ಪರ ಮುಸ್ತಫಿಜುರ್ ಹಾಗೂ ಶ್ರೇಯಸ್ ಗೋಪಾಲ್ ಆಡುತ್ತಿದ್ದಾರೆ.

  • 22 Apr 2021 09:19 PM (IST)

    ತೆವಾಟಿಯಾ ಔಟ್!

    ಕೊನೆಯ ಓವರ್​ನಲ್ಲಿ ಸಿಕ್ಸರ್ ಸಿಡಿಸಲು ಮುಂದಾದ ರಾಹುಲ್ ತೆವಾಟಿಯಾ ಸಿರಾಜ್​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಹುಲ್ ತೆವಾಟಿಯಾ ಶಹಬಾಜ್​ಗೆ ಕ್ಯಚ್ ನೀಡಿದ್ದಾರೆ. 40 ರನ್​ಗಳಿಸಿ ನಿರ್ಗಮಿಸಿದ್ದಾರೆ.

  • 22 Apr 2021 09:18 PM (IST)

    ತೆವಾಟಿಯಾ ವೇಗದ ಆಟ

    ಅಂತಿಮ ಓವರ್​ಗಳಲ್ಲಿ ರಾಹುಲ್ ತೆವಾಟಿಯಾ ಉತ್ತಮ ಆಟವಾಡುತ್ತಿದ್ದಾರೆ. 23 ಬಾಲ್​ಗೆ 2 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 40 ರನ್ ಗಳಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ 170 ರನ್​ಗೆ 7 ವಿಕೆಟ್ ಕಳೆದುಕೊಂಡಿದೆ.

  • 22 Apr 2021 09:13 PM (IST)

    ಮಾರಿಸ್ ಸಿಕ್ಸರ್

    ರಾಜಸ್ಥಾನ್ ರಾಯಲ್ಸ್ 18 ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 157 ರನ್ ದಾಖಲಿಸಿದೆ. 18ನೇ ಓವರ್ ಕೊನೆಯ ಬಾಲ್​ಗೆ ಕ್ರಿಸ್ ಮಾರಿಸ್ ಸಿಕ್ಸರ್ ಸಿಡಿಸಿದ್ದಾರೆ. ಮಾರಿಸ್ 6 ಬಾಲ್ 10 ಹಾಗೂ ರಾಹುಲ್ ತೆವಾಟಿಯಾ 18 ಬಾಲ್​ಗೆ 28 ರನ್ ಪೇರಿಸಿ ಆಡುತ್ತಿದ್ದಾರೆ.

  • 22 Apr 2021 08:59 PM (IST)

    ಶಿವಂ ದುಬೆ ಔಟ್

    ಕೈಲ್ ರಿಚರ್ಡ್​ಸನ್ ಬಾಲ್​ನ್ನು ಬೌಂಡರಿಯತ್ತ ಬಾರಿಸಿದ ಶಿವಂ ದುಬೆ ಗ್ಲೆನ್ ಮ್ಯಾಕ್ಸ್​ವೆಲ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ರಾಹುಲ್ ತೆವಾಟಿಯಾಗೆ ಕ್ರಿಸ್ ಮಾರಿಸ್ ಜೊತೆಯಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್​ 16 ಓವರ್ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 136 ರನ್ ಗಳಿಸಿದೆ.

  • 22 Apr 2021 08:55 PM (IST)

    ದುಬೆ- ತೆವಾಟಿಯ ಅಬ್ಬರ!

    ಶಿವಂ ದುಬೆ ಹಾಗೂ ರಾಹುಲ್ ತೆವಾಟಿಯಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್​ಗಳನ್ನು ದಂಡಿಸುತ್ತಿದ್ದಾರೆ. 15 ಓವರ್​ಗಳ ಅಂತ್ಯಕ್ಕೆ 128 ರನ್​ಗೆ 5 ವಿಕೆಟ್ ಕಳೆದುಕೊಂಡು ರಾಜಸ್ಥಾನ್ ರಾಯಲ್ಸ್ ಆಟಗಾರರು ಇನ್ನಿಂಗ್ಸ್ ಕಟ್ಟುತ್ತಿದ್ದಾರೆ.

  • 22 Apr 2021 08:49 PM (IST)

    120 ರನ್ ಗಳಿಸಿದ ರಾಜಸ್ಥಾನ್

    14 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡ 120 ರನ್ ದಾಖಲಿಸಿದೆ. ಶಿವಂ ದುಬೆ ಹಾಗೂ ರಾಹುಲ್ ತೆವಾಟಿಯಾ ಕ್ರೀಸ್​ನಲ್ಲಿದ್ದಾರೆ.

  • 22 Apr 2021 08:46 PM (IST)

    ರಿಯಾನ್ ಪರಾಗ್ ಔಟ್

    ಶಿವಂ ದುಬೆ ಕ್ಯಾಚ್ ಡ್ರಾಪ್ ಆದ ಬೆನ್ನಲ್ಲೇ ರಿಯಾನ್ ಪರಾಗ್ ಔಟ್ ಆಗಿದ್ದಾರೆ. 16 ಬಾಲ್​ಗೆ 25 ರನ್ ಗಳಿಸಿ ಆಡುತ್ತಿ್ದ್ದ ಪರಾಗ್ ಹರ್ಷಲ್ ಪಟೇಲ್ ಬೌಲಿಂಗ್​ಗೆ ಚಹಾಲ್​ಗೆ ಕ್ಯಾಚ್ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ 13.3 ಓವರ್​ಗೆ 5 ವಿಕೆಟ್ ಕಳೆದುಕೊಂಡು 109 ರನ್ ಗಳಿಸಿದೆ.

  • 22 Apr 2021 08:43 PM (IST)

    ಜೀವದಾನ ಪಡೆದುಕೊಂಡ ದುಬೆ!

    13ನೇ ಓವರ್ ಅಂತ್ಯದಲ್ಲಿ ಜಾಮಿಸನ್ ಕೊನೆಯ ಬಾಲ್​ಗೆ ಶಿವಂ ದುಬೆ ಹೊಡೆತವನ್ನು ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಕೈಚೆಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಶಿವಂ ದುಬೆ 28 ಬಾಲ್​ಗೆ 41 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದಾರೆ.

  • 22 Apr 2021 08:37 PM (IST)

    ರಾಜಸ್ಥಾನ್ ರಾಯಲ್ಸ್ 96/4 (12 ಓವರ್)

    ರಾಜಸ್ಥಾನ್ ರಾಯಲ್ಸ್ ತಂಡ 12 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 96 ರನ್ ದಾಖಲಿಸಿದೆ. ಶಿವಂ ದುಬೆ 25 ಬಾಲ್​ಗೆ 37 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ರಿಯಾನ್ ಪರಾಗ್ 11 ಬಾಲ್​ಗೆ 16 ರನ್ ಗಳಿಸಿ ಆಡುತ್ತಿದ್ದಾರೆ.

  • 22 Apr 2021 08:27 PM (IST)

    ರಾಜಸ್ಥಾನ್ ರಾಯಲ್ಸ್ 70/4 (10 ಓವರ್)

    10 ಓವರ್​ಗಳ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್ ಕಳೆದುಕೊಂಡು 70 ರನ್ ಗಳಿಸಿದೆ. ಶಿವಂ ದುಬೆ ಹಾಗೂ ರಿಯಾನ್ ಪರಾಗ್ ಉತ್ತಮ ಜೊತೆಯಾಟ ನೀಡುತ್ತಿದ್ದಾರೆ. 4 ವಿಕೆಟ್​ಗಳ ಬಳಿಕವೂ ರಾಜಸ್ಥಾನ್ ಬ್ಯಾಟಿಂಗ್ ಚೇತರಿಸಿಕೊಂಡಿದೆ.

  • 22 Apr 2021 08:19 PM (IST)

    ಶಿವಂ ದುಬೆ ಸಿಕ್ಸರ್

    ರಾಜಸ್ಥಾನ್ ರಾಯಲ್ಸ್ ಆಟಗಾರ ಶಿವಂ ದುಬೆ ಚಹಲ್ ಓವರ್​ನಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿದ್ದಾರೆ. ಉತ್ತಮ ರನ್ ಕಲೆಹಾಕಿದ್ದಾರೆ. ಆರ್​ಆರ್​ ತಂಡ 9 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 64 ರನ್ ದಾಖಲಿಸಿದೆ.

  • 22 Apr 2021 08:15 PM (IST)

    ರಾಜಸ್ಥಾನ್ ರಾಯಲ್ಸ್ 47/4 (8 ಓವರ್)

    ರಾಜಸ್ಥಾನ್ ರಾಯಲ್ಸ್ 8 ಓವರ್ ಅಂತ್ಯಕ್ಕೆ 4 ವಿಕೆಟ ಕಳೆದುಕೊಂಡು 47 ರನ್ ಗಳಿಸಿದೆ. ಶಿವಂ ದುಬೆ ಹಾಗೂ ರಿಯಾನ್ ಪರಾಗ್ ಕ್ರಿಸ್​ನಲ್ಲಿದ್ದಾರೆ.

  • 22 Apr 2021 08:13 PM (IST)

    ಸ್ಯಾಮ್ಸನ್ ಔಟ್!

    ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ವಾಷಿಂಗ್ಟನ್ ಸುಂದರ್​ಗೆ ವಿಕೆಟ್ ಒಪ್ಪಿಸಿದ್ದಾರೆ. 18 ಬಾಲ್​ಗೆ 21 ರನ್ ಗಳಿಸಿ ಮ್ಯಾಕ್ಸ್​ವೆಲ್​ಗೆ ಕ್ಯಾಚ್ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ 7.2 ಓವರ್​ಗೆ 4 ವಿಕೆಟ್ ಕಳೆದುಕೊಂಡು 43 ರನ್ ಗಳಿಸಿದೆ.

  • 22 Apr 2021 08:05 PM (IST)

    ಪವರ್​ಪ್ಲೇ ಅಂತ್ಯಕ್ಕೆ 32/3

    6 ಓವರ್​ಗಳ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ 3 ವಿಕೆಟ್ ಕಳೆದುಕೊಂಡು 32 ರನ್ ಕಲೆಹಾಕಿದೆ. ತಂಡದ ಪರ ಸ್ಯಾಮ್ಸನ್ 12 ಬಾಲ್​ಗೆ 12 ಹಾಗೂ ದುಬೆ 5 ಬಾಲ್ 4 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. ಆರ್​ಸಿಬಿ ಪರ ಸಿರಾಜ್ 2 ಹಾಗೂ ಜಾಮಿಸನ್ 1 ವಿಕೆಟ್ ಪಡೆದಿದ್ದಾರೆ.

  • 22 Apr 2021 08:01 PM (IST)

    ಶೂನ್ಯಕ್ಕೆ ನಿರ್ಗಮಿಸಿದ ಮಿಲ್ಲರ್

    ರಾಜಸ್ಥಾನ್ ರಾಯಲಸ್ ದಾಂಡಿಗ ಡೇವಿಡ್ ಮಿಲ್ಲರ್ ಸೊನ್ನೆ ಸುತ್ತಿದ್ದಾರೆ. ಆರ್​ಸಿಬಿ ಪರ ಸಿರಾಜ್​ಗೆ ಮತ್ತೊಂದು ವಿಕೆಟ್ ಲಭ್ಯವಾಗಿದೆ. ಸಂಜು ಸ್ಯಾಮ್ಸನ್ ಜೊತೆಗೆ ಶಿವಂ ದುಬೆ ಕ್ರಿಸ್​ನಲ್ಲಿ ಇದ್ದಾರೆ. 5 ಓವರ್​ಗಳ ಅಂತ್ಯಕ್ಕೆ ರಾಜಸ್ಥಾನ್ ತಂಡ 3 ವಿಕೆಟ್ ಕಳೆದುಕೊಂಡು 25 ರನ್ ಗಳಿಸಿದೆ.

  • 22 Apr 2021 07:51 PM (IST)

    ವೋಹ್ರಾ ವಿಕೆಟ್ ಪತನ!

    ಮನನ್ ವೋಹ್ರಾ 9 ಬಾಲ್​ಗೆ 7 ರನ್ ಗಳಿಸಿ ಔಟ್ ಆಗಿದ್ದಾರೆ. ಜಾಮಿಸನ್ ಬಾಲ್​ಗೆ ರಿಚರ್ಡ್​ಸನ್​ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ. ನಾಯಕ ಸಂಜು ಸ್ಯಾಮ್ಸನ್​ಗೆ ಡೇವಿಡ್ ಮಿಲ್ಲರ್ ಜೊತೆಯಾಗಿದ್ದಾರೆ. 4 ಓವರ್​ಗಳ ಅಂತ್ಯಕ್ಕೆ ರಾಜಸ್ಥಾನ್ ತಂಡ 2 ವಿಕೆಟ್ ಕಳೆದುಕೊಂಡು 17 ರನ್ ಕಲೆಹಾಕಿದೆ.

  • 22 Apr 2021 07:45 PM (IST)

    ಬಟ್ಲರ್ ಔಟ್

    ವೇಗದ ಆಟಕ್ಕೆ ಮುಂದಾಗಿದ್ದ ಜಾಸ್ ಬಟ್ಲರ್ ಸಿರಾಜ್​ಗೆ ವಿಕೆಟ್ ಒಪ್ಪಿಸಿದ್ದಾರೆ. 8 ಬಾಲ್​ಗೆ 8 ರನ್​ಗಳಿಸಿ ಬೌಲ್ಡ್ ಆಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಮೊದಲ ವಿಕೆಟ್ ಕಳೆದುಕೊಂಡಿದೆ. 3 ಓವರ್​ನ ಅಂತ್ಯಕ್ಕೆ ಆರ್​ಆರ್​ 14 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಸಂಜು ಸ್ಯಾಮ್ಸನ್​ ಕ್ರೀಸ್​ಗೆ ಇಳಿದಿದ್ದಾರೆ.

  • 22 Apr 2021 07:40 PM (IST)

    ವೇಗದ ಆಟಕ್ಕೆ ಮುಂದಾದ ರಾಜಸ್ಥಾನ್

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ರಾಜಸ್ಥಾನ್ ರಾಯಲ್ಸ್ ವೇಗದ ಆಟಕ್ಕೆ ಮುಂದಾಗಿದೆ. 2 ಓವರ್​ನಲ್ಲಿ ವಿಕೆಟ್ ನಷ್ಟವಿಲ್ಲದೆ 13 ರನ್ ಕಲೆಹಾಕಿದೆ. ತಂಡದ ಪರ ವೋಹ್ರಾ ಹಾಗೂ ಬಟ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೈಲ್ ಜಾಮಿಸನ್ ಎರಡನೇ ಓವರ್ ಬೌಲಿಂಗ್ ಮಾಡಿದ್ದಾರೆ.

  • 22 Apr 2021 07:37 PM (IST)

    ರಾಜಸ್ಥಾನ್ ರಾಯಲ್ಸ್ 8/0 (1 ಓವರ್)

    ಮೊಹಮ್ಮದ್ ಸಿರಾಜ್ ಮೊದಲ ಓವರ್​ನಲ್ಲಿ 8 ರನ್ ಬಿಟ್ಟುಕೊಟ್ಟಿದ್ದಾರೆ. ಬಟ್ಲರ್ ಹಾಗೂ ಮನನ್ ವೋಹ್ರಾ ಬ್ಯಾಟಿಂಗ್​ಗೆ ಇಳಿದಿದ್ದಾರೆ. ಬಟ್ಲರ್ ಮೊದಲ ಓವರ್​ನ್ಲೇ ಎರಡು ಬೌಂಡರಿ ಸಿಡಿಸಿದ್ದಾರೆ.

  • 22 Apr 2021 07:10 PM (IST)

    ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್

    ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್ ಹೀಗಿದೆ..

  • 22 Apr 2021 07:08 PM (IST)

    ಆರ್​ಸಿಬಿ ಪ್ಲೇಯಿಂಗ್ ಇಲೆವೆನ್

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ ಇಲೆವೆನ್ ಹೀಗಿದೆ.. ಕೇನ್ ರಿಚರ್ಡ್​ಸನ್ ಈ ಸೀಸನ್​ನ ಮೊದಲ ಪಂದ್ಯ ಆಡುತ್ತಿದ್ದಾರೆ. ರಜತ್ ಪಾಟಿದಾರ್ ಬದಲು ಕೇನ್ ರಿಚರ್ಡ್​ಸನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

  • 22 Apr 2021 07:05 PM (IST)

    ರಾಯಲ್ ಚಾಲೆಂಜರ್ಸ್ ಟಾಸ್ ವಿನ್

    ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲಿಂಗ್ ಆಯ್ದುಕೊಂಡಿದೆ. ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಮಾಡಲಿದೆ.

  • Published On - Apr 22,2021 11:04 PM

    Follow us
    ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
    ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
    ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
    ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
    ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
    ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
    ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
    ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
    ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
    ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
    ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
    ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
    20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
    20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
    ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
    ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
    ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
    ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
    ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
    ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ