IPL 2021: ಟಾಸ್ ಗೆಲ್ಲುವ ಅಭ್ಯಾಸ ನನಗಿಲ್ಲ! ತಾನು ಟಾಸ್ ಗೆದ್ದಿರುವುದನ್ನೇ ಮರೆತ ಕೊಹ್ಲಿ.. ಗಹಗಹಿಸಿ ನಕ್ಕ ಟಾಸ್ ಪ್ರೆಸೆಂಟರ್
IPL 2021: ತಪ್ಪನ್ನು ತಕ್ಷಣ ಅರಿತುಕೊಂಡ ಕೊಹ್ಲಿ, ಅಯ್ಯೋ ಟಾಸ್ ನಾನು ಗೆದ್ದಿದ್ದೇನೆ ಎಂದು ಹೇಳುತ್ತಾ ಟಾಸ್ ಪ್ರೆಸೆಂಟರ್ ಮುಂದೆ ಬಂದು ನಿಂತು ಬೌಲಿಂಗ್ ಆಯ್ದುಕೊಂಡರು.
ಐಪಿಎಲ್ 2021 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಒಂದು ಹಾಸ್ಯಸ್ಪದ ಘಟನೆ ನಡೆಯಿತು. ಟಾಸ್ ಗೆದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಾನು ಟಾಸ್ ಗೆದ್ದಿರುವುದನ್ನು ಮರೆತು, ಸಂಜು ಸ್ಯಾಮ್ಸನ್‌ರನ್ನು ವಿಜೇತರೆಂದು ಪರಿಗಣಿಸಿ ಸ್ಯಾಮ್ಸನ್ನನ್ನು ಮುಂದೆ ಕಳುಹಿಸಿದರು. ಆದರೆ ತಪ್ಪನ್ನು ತಕ್ಷಣ ಅರಿತುಕೊಂಡ ಕೊಹ್ಲಿ, ಅಯ್ಯೋ ಟಾಸ್ ನಾನು ಗೆದ್ದಿದ್ದೇನೆ ಎಂದು ಹೇಳುತ್ತಾ ಟಾಸ್ ಪ್ರೆಸೆಂಟರ್ ಮುಂದೆ ಬಂದು ನಿಂತು ಬೌಲಿಂಗ್ ಆಯ್ದುಕೊಂಡರು.
ಇದನ್ನು ನೋಡಿ ಅಲ್ಲಿ ಹಾಜರಿದ್ದವರೆಲ್ಲರೂ ನಕ್ಕರು. ಟಾಸ್ ಪ್ರೆಸೆಂಟರ್ ಇಯಾನ್ ಬಿಷಪ್ ಕೂಡ ಸ್ವಲ್ಪ ಸಮಯದವರೆಗೆ ನಗಲು ಪ್ರಾರಂಭಿಸಿದರು. ಇದರೊಂದಿಗೆ ಮಾತು ಆರಂಭಿಸಿದ ಕೊಹ್ಲಿ ಟಾಸ್ ಗೆಲ್ಲುವ ಅಭ್ಯಾಸ ತನಗೆ ಇಲ್ಲ, ಈ ಕಾರಣದಿಂದಾಗಿ ಗೊಂದಲ ಉಂಟಾಗಿದೆ ಎಂದು ಒಪ್ಪಿಕೊಂಡರು. ಜೊತೆಗೆ ಇಯಾನ್ ಬಿಷಪ್ ಅವರ ಕ್ಷಮೆಯಾಚಿಸಿದರು.
"I'm not used to winning tosses" ? @imVkohli #RCB have the toss and they will bowl first against #RR #VIVOIPL pic.twitter.com/a0bX6JNGak
— IndianPremierLeague (@IPL) April 22, 2021
ಕೊಹ್ಲಿ ಫೀಲ್ಡಿಂಗ್ ಮಾಡಲು ನಿರ್ಧರಿಸಿದರು ಈ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಇಲ್ಲಿ ಇಬ್ಬನಿ ಕಾಣಿಸಿಕೊಂಡಿದೆ ಅಲ್ಲದೆ, ರನ್ಗಳ ಮಳೆ ಹರಿಯುವ ನಿರೀಕ್ಷೆ ಇದೆ ಎಂದರು. ಅಲ್ಲದೆ ಆರ್ಸಿಬಿಯ ತಂಡದ ಬ್ಯಾಟಿಂಗ್ ಕೂಡ ಈಗ ಉತ್ತಮವಾಗಿದೆ ಮತ್ತು ಯಾವುದೇ ಸ್ಕೋರ್ ಅನ್ನು ಬೆನ್ನಟ್ಟಬಹುದಾದ ಸಾಮಥ್ರ್ಯ ಹೊಂದಿದೆ. ಜೊತೆಗೆ ಬೌಲಿಂಗ್ ಕೂಡ ಉತ್ತಮವಾಗಿದೆ ಅದರ ಲಾಭವನ್ನು ಸಹ ಪಡೆಯಬಹುದು. ಮುಂಬೈನ ವಾಂಖೆಡೆ ಮೈದಾನದ ಬಗ್ಗೆ ಮಾತಾನಾಡಿದ ಕೊಹ್ಲಿ, ನನ್ನಂತಹ ಬ್ಯಾಟ್ಸ್‌ಮನ್‌ಗೆ ಇದು ತುಂಬಾ ರೋಮಾಂಚನಕಾರಿ. ನಾವು ಹೊಸ ಚೆಂಡಿನ ಲಾಭವನ್ನು ಪಡೆದುಕೊಳ್ಳಬೇಕು ಎಂದರು.
ಎರಡೂ ತಂಡಗಳು ಒಂದೊಂದು ಬದಲಾವಣೆಗಳನ್ನು ಮಾಡಿವೆ. ರಜತ್ ಪಾಟಿದಾರ್ ಬದಲಿಗೆ ಆರ್‌ಸಿಬಿ ಕೇನ್ ರಿಚರ್ಡ್‌ಸನ್‌ರನ್ನು ಇಲೆವೆನ್‌ನಲ್ಲಿ ನೇಮಕ ಮಾಡಿದ್ದರೆ, ಜಯದೇವ್ ಉನಾದ್‌ಕತ್ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ ಶ್ರೇಯಸ್ ಗೋಪಾಲ್ಗೆ ಸ್ಥಾನ ನೀಡಿದೆ. ಬ್ಯಾಟಿಂಗ್ ಆರಂಭಿಸಿರುವ ರಾಜಸ್ಥಾನ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿದೆ.