ಐಪಿಎಲ್ 2021 ಏಪ್ರಿಲ್ 9 ರಿಂದ ಪ್ರಾರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಆದರೆ, ನಾಳೆ ನಡೆಯುವ ಪಂದ್ಯದಲ್ಲಿ, ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಎಂಬ ಇಬ್ಬರು ಸ್ನೇಹಿತರು ಐಪಿಎಲ್ 2021 ಪ್ರಾರಂಭವಾಗುವ ಮೊದಲು ಮುಖಾಮುಖಿಯಾಗಲಿದ್ದಾರೆ. ಈ ಇಬ್ಬರು ಸ್ನೇಹಿತರು ಎದುರಾಳಿ ತಂಡಗಳ ಬಲವನ್ನು ಎದುರಿಸುವ ಮೊದಲು ತಮ್ಮ ವೇಗವನ್ನು ಪರೀಕ್ಷಿಸುವ ಸ್ಪರ್ಧೆಗೆ ಪರಸ್ಪರ ಮುಂದಾಗಿದ್ದಾರೆ.
ಈ ಇಬ್ಬರ ನಡುವೆ ಟ್ವಿಟರ್ ವಾರ್
ಈ ಇಬ್ಬರ ನಡುವಿನ ವಾರ್ ವಿರಾಟ್ ಕೊಹ್ಲಿ ಅವರ ಟ್ವೀಟ್ನೊಂದಿಗೆ ಪ್ರಾರಂಭವಾಯಿತು, ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿದ ನಂತರ ಕೊಹ್ಲಿ, ತಾವು ಥ್ರೆಡ್‌ಮಿಲ್ ಮೇಲೆ ಓಡುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿ ವಿಶ್ರಾಂತಿಯೇ ಇಲ್ಲ. ಇಲ್ಲಿಂದ ಏನಿದ್ದರೂ ವೇಗಕ್ಕೆ ಪ್ರಾಮುಖ್ಯತೆ ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಬಿಡಿ, ನಿಮ್ಮ ಲಯ ಖುಷಿ ನೀಡುತ್ತಿದೆ. ತಂಡ ಸೇರಿಕೊಳ್ಳಲು ಹೊರಟಿದ್ದೇನೆ ಎಂದು, ತಾವು ಬ್ಯಾಗ್ ತೋಟ್ಟಿರುವ ಫೋಟೋವೊಂದನ್ನು ಹರಿಬಿಟ್ಟರು. ಇದಕ್ಕೆ ಉತ್ತರಿಸಿದ ಕೊಹ್ಲಿ, ನೀವು ವಿಕೆಟ್ಸ್ ಮಧ್ಯೆ ಈಗಲೂ ಅತಿವೇಗದ ಓಟಗಾರರಾಗಿದ್ದೀರಿ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಬಿಡಿ ನಾಳೆ ಇಬ್ಬರು ಒಟ್ಟಿಗೆ ಓಡಿ ಪರೀಕ್ಷಿಸೋಣ ಎಂದಿದ್ದಾರೆ
ಈ ಬಾರಿ ಐಸಿಎಲ್ 2021 ಗಾಗಿ ಆರ್‌ಸಿಬಿಯ ನೋಟ ಬದಲಾಗಿದೆ. ಈ ಬಾರಿ ಪವರ್ ಹಿಟ್ಟರ್ ಆಗಿ, ಈ ತಂಡವು ವಿರಾಟ್ ಮತ್ತು ಎಬಿಡಿಯನ್ನು ಮಾತ್ರವಲ್ಲದೆ ಮ್ಯಾಕ್ಸ್ ವೆಲ್ ಅನ್ನು ಸಹ ಹೊಂದಿರುತ್ತದೆ, ಐಸಿಎಲ್ 2021 ರ ಹರಾಜಿನಲ್ಲಿ ಆರ್ಸಿಬಿ ಮ್ಯಾಕ್ಸ್ ವೆಲ್ ಅವರನ್ನು ದುಬಾರಿ ಬೆಲೆ ನೀಡಿ ಕೊಂಡುಕೊಂಡಿದೆ. ಹೀಗಾಗಿ ಈ ಆವೃತ್ತಿಯಲ್ಲಿ ಮ್ಯಾಕ್ಸ್ ವೆಲ್ ಮೇಲೆ ಆರ್ಸಿಬಿ ಹೆಚ್ಚಿನ ಆಟವನ್ನು ನಿರೀಕ್ಷಿಸುತ್ತಿದೆ.
No rest days. From here on its all about speed #IPL pic.twitter.com/ULkpYmO1uI
— Virat Kohli (@imVkohli) March 29, 2021
Loving the form @imVkohli .. I’m all packed to join the team pic.twitter.com/6rBIV3T3EH
— AB de Villiers (@ABdeVilliers17) March 29, 2021
Hope you're still fast between the wickets.
— Virat Kohli (@imVkohli) March 29, 2021
Let’s race tomorrow to find out
— AB de Villiers (@ABdeVilliers17) March 29, 2021
ಮುಂಬೈ ಇಂಡಿಯನ್ಸ್ ಮೊದಲ ಪಂದ್ಯದ ಎದುರಾಳಿ
ಐಸಿಎಲ್‌ನ 14 ನೇ ಸೀಸನ್ ಆರ್‌ಸಿಬಿಯ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಏಪ್ರಿಲ್ 9 ರಂದು ಚೆನ್ನೈನಲ್ಲಿ ನಡೆಯುವ ಆವೃತ್ತಿಯ ಮೊದಲ ಪಂದ್ಯದಲ್ಲಿ, 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಆರ್‌ಸಿಬಿ ಎದುರು ಇರಲಿದೆ. ಈ ಆವೃತ್ತಿಯು ಮೇ 30 ರವರೆಗೆ ನಡೆಯಲಿದ್ದು, ಇದರಲ್ಲಿ 60 ಪಂದ್ಯಗಳು ನಡೆಯಲಿವೆ. ಕೊರೊನಾವೈರಸ್ ಕಾರಣ, ಈ ಬಾರಿ ಪಂದ್ಯಾವಳಿಯನ್ನು 6 ಸ್ಥಳಗಳಲ್ಲಿ ಆಯೋಜಿಸಲಾಗುತ್ತಿದ್ದು, ಅಂತಿಮ ಪಂದ್ಯ ಮೇ 30 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.