IPL 2021: ಆರ್​ಸಿಬಿ ಆಟಗಾರನ ರನ್​ಔಟ್ ಮಾಡದೆ ಜೀವದಾನ ನೀಡಿದ ರಸೆಲ್! ಶಾಕ್​ ಆದ ಕೊಹ್ಲಿ, ಎಬಿಡಿ.. ವಿಡಿಯೋ ನೋಡಿ

IPL 2021: ಆರ್ಸಿಬಿ ಇನ್ನಿಂಗ್ಸ್ ಮುಗಿಯಲು ಇನ್ನೇನು ಕೊನೆಯ ಎಸೆತವೊಂದು ಬಾಕಿ ಇತ್ತು. ಹೀಗಾಗಿ ಜಾಮಿಸನ್ ಅವರನ್ನು ರನ್​ ಔಟ್ ಮಾಡಿದರು ಸಹ ಅದು ತಂಡಕ್ಕೆ ಯಾವುದೇ ವ್ಯತ್ಯಾಸ ಮಾಡುವುದಿಲ್ಲ ಎಂಬುದನ್ನು ಅರಿತ ರಸೆಲ್ ಈ ತೀರ್ಮಾನ ಕೈಗೊಂಡಿದ್ದಾರೆ

IPL 2021: ಆರ್​ಸಿಬಿ ಆಟಗಾರನ ರನ್​ಔಟ್ ಮಾಡದೆ ಜೀವದಾನ ನೀಡಿದ ರಸೆಲ್! ಶಾಕ್​ ಆದ ಕೊಹ್ಲಿ, ಎಬಿಡಿ.. ವಿಡಿಯೋ ನೋಡಿ
ರನ್ ಔಟ್ ಮಾಡದೆ ಸುಮ್ಮನಾದ ಌಂಡ್ರೋ ರಸ್ಸೆಲ್
Follow us
ಪೃಥ್ವಿಶಂಕರ
|

Updated on: Apr 19, 2021 | 4:38 PM

ಆರ್ಸಿಬಿ ತನ್ನ ರಾಯಲ್ ಆಟವನ್ನ ಮುಂದುವರೆಸಿದ್ದು, ಮೂರನೇ ಪಂದ್ಯದಲ್ಲೂ ಗೆಲುವಿನ ಕೇಕೆ ಹಾಕಿದೆ. ಮ್ಯಾಕ್ಸ್ವೆಲ್ ರನ್ ಮಾರುತ ಹಾಗೂ ಎಬಿ ಡಿವಿಲಿಯರ್ಸ್ ಸುಂಟರಗಾಳಿ ಅಬ್ಬರಕ್ಕೆ, ಕೊಲ್ಕತ್ತಾ ಕಂಗಾಲಾಗಿ ಹೋಯ್ತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆರ್ಸಿಬಿ, ಎರಡನೇ ಓವರ್ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯ್ತು. ವಿರಾಟ್ ಕೊಹ್ಲಿ 5, ರಾಜತ್ ಪಾಟಿದಾರ್ 1ರನ್ ಗಳಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದ್ರು. ಪಡಿಕ್ಕಲ್ 25ರನ್ಗೆ ಔಟಾದ್ರು. ನಂತ್ರ ಚೆಪಾಕ್ ಅಂಗಳದಲ್ಲಿ ಶುರುವಾಗಿದ್ದೇ ಮ್ಯಾಕ್ಸ್ವೆಲ್ ಹಾಗೂ ಎಬಿ ಡಿವಿಲಿಯರ್ಸ್ ರನ್ ಸುನಾಮಿ. ಸ್ಪಿನ್ ಪಿಚ್ನಲ್ಲಿ ಹೊಡಿಬಡಿ ಆಟವಾಡಿದ ಮ್ಯಾಕ್ಸ್ವೆಲ್ ಹಾಗೂ ಎಬಿಡಿ, ಕೆಕೆಆರ್ ಬೌಲರ್ಗಳನ್ನ ಮನಬಂದಂತೆ ಚೆಂಡಾಡಿದ್ರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ ಸಿಡಿಸಿದ ಸೂಪರ್ಸ್ಟಾರ್ ಬ್ಯಾಟ್ಸ್ಮನ್ಗಳು, ತಲಾ ಅರ್ಧಶತಕ ಸಿಡಿಸಿದ್ರು.

ಸತತ ಎರಡನೇ ಅರ್ಧಶತಕ ಬಾರಿಸಿದ್ರು ಗ್ಲೇನ್ ಮ್ಯಾಕ್ಸ್ವೆಲ್ 49ಬಾಲ್ಗಳಲ್ಲಿ 78ರನ್ ಗಳಿಸಿದ್ರು. ಈ ಮೂಲಕ ಮ್ಯಾಕ್ಸ್ವೆಲ್ ಸತತ ಎರಡನೇ ಅರ್ಧಶತಕ ಬಾರಿಸಿದ್ರು. ಇನ್ನೂ ಡೆತ್ ಓವರ್ಗಳಲ್ಲಿ ತ್ರಿಮಿಕ್ರಮನ ಆಟವಾಡಿದ ಎಬಿಡಿ ರನ್ ಮಳೆಯನ್ನೇ ಹರಿಸಿದ್ರು. ಕೇವಲ 34ಬಾಲ್ಗಳಲ್ಲಿ ಮಿಸ್ಟರ್ 360 ಬ್ಯಾಟ್ಸ್ಮನ್, ಅಜೇಯ 76ರನ್ ಗಳಿಸಿದ್ರು. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ ಮ್ಯಾಕ್ಸ್ವೆಲ್ ಹಾಗೂ ಎಬಿಡಿ ಇಬ್ಬರೂ ಕಾಕತಾಳೀಯ ಎಂಬಂತೆ ತಲಾ 9ಬೌಂಡರಿ, 3ಸಿಕ್ಸರ್ ಸಿಡಿಸಿದ್ರು. ಈ ಮೂಲಕ ಆರ್ಸಿಬಿ 4 ವಿಕೆಟ್ ನಷ್ಟಕ್ಕೆ 204ರನ್ ಗಳಿಸ್ತು.

ಌಂಡ್ರೋ ರಸ್ಸೆಲ್ 31ರನ್ ಗಳಿಸಿದ್ರು ಫಲ ಸಿಗಲಿಲ್ಲ 205ರನ್ಗಳ ಗುರಿ ಬೆನ್ನತ್ತಿದ್ದ ಕೆಕೆಆರ್, 66ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಳ್ತು. ಶುಭಮನ್ ಗಿಲ್ 21, ರಾಹುಲ್ ತ್ರಿಪಾಠಿ 25, ನಿತೀಶ್ ರಾಣಾ 18ರನ್ ಗಳಿಸಿ ಔಟಾದ್ರು. ಕ್ಯಾಪ್ಟನ್ ಇಯಾನ್ ಮಾರ್ಗನ್ 29ರನ್ ಗಳಸಲಷ್ಟೇ ಶಕ್ತರಾದ್ರು. ಆರ್ಸಿಬಿ ಬೌಲರ್ಗಳ ಕರಾರುವಾಕ್ ದಾಳಿಗೆ ಬಳಲಿ ಬೆಂಡಾದ ಕೊಲ್ಕತ್ತಾ, ರನ್ ಗಳಿಸೋಕೆ ತಿಣಕಾಡ್ತು. 7ನೇ ಕ್ರಮಾಂಕದಲ್ಲಿ ಕ್ರೀಸ್ಗಳಿದ ಌಂಡ್ರೋ ರಸ್ಸೆಲ್ 31ರನ್ ಗಳಿಸಿದ್ರು ಫಲ ಸಿಗಲಿಲ್ಲ. ಅಂತಿಮವಾಗಿ ಕೆಕೆಆರ್ 8 ವಿಕೆಟ್ ಕಳೆದುಕೊಂಡು 166ರನ್ ಗಳಿಸ್ತು.

ರನ್​ಔಟ್ ಮಾಡದ ರಸೆಲ್ ಆರ್ಸಿಬಿ ಎದುರು ದುಬಾರಿ ಬೌಲರ್​ ಆದ ರಸೆಲ್ ಎಬಿ ಡಿವಿಲಿಯರ್ಸ್​ ಅಬ್ಬರದೆದೂರು ಮಂಕಾಗಿ ಹೋಗಿದ್ದರು. 2 ಓವರ್ ಎಸೆದ ರಸೆಲ್​ ಬೌಲಿಂಗನ್ನು ಡಿವಿಲಿಯರ್ಸ್​ ಸರಿಯಾಗಿಯೇ ದಂಡಿಸಿದ್ದರು. ಎಬಿಡಿ ಅಬ್ಬರದೆದುರು ಮಂಕಾಗಿ ಹೋಗಿದ್ದ ರಸೆಲ್, ತಮಗೆ ಉಚಿತವಾಗಿ ಸಿಗುತ್ತಿದ್ದ ವಿಕೆಟನ್ನು ಪಡೆದುಕೊಳ್ಳದೆ ಜೀವದಾನ ಮಾಡಿದ ಘಟನೆ ನೆನ್ನೆಯ ಪಂದ್ಯದಲ್ಲಿ ನಡೆಯಿತು.

ಕೊನೆಯ ಓವರ್ ಎಸೆಯಲು ಬಂದ ರಸೆಲ್​ನ ಮೊದಲ 4 ಎಸೆತಗಳಲ್ಲಿ ಸಿಕ್ಸರ್​ ಬೌಂಡರಿ ಮಳೆ ಸುರಿಸಿದ ಎಬಿಡಿ 5ನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಲು ಯತ್ನಿಸಿದರು. ಆದರೆ ರಸೆಲ್​ನ 5ನೇ ಎಸೆತವನ್ನು ಸರಿಯಾಗಿ ಜಡ್ಜ್ ಮಾಡದ ಎಬಿಡಿ ಸೀದಾ ರಸೆಲ್​ನತ್ತ ಬಾರಿಸಿದರು. ಇತ್ತ ಬೌಲಿಂಗ್ ಎಂಡ್​ನಲ್ಲಿ ನಿಂತಿದ್ದ ಜಾಮಿಸನ್ ಅಷ್ಟರಲ್ಲಾಗಲೇ ಪಿಚ್ ಅರ್ಧ ಭಾಗಕ್ಕೆ ಓಡಿ ಹೋಗಿದ್ದರು. ಹೀಗಾಗಿ ರಸೆಲ್ ಸುಲಭವಾಗಿ ರನ್ ಔಟ್ ಮಾಡಬಹುದಿತ್ತು. ಆದರೆ ರಸೆಲ್ ರನ್​ಔಟ್​ ಮಾಡಲು ಯತ್ನಿಸಿ, ನಂತರ ಸುಮ್ಮನಾದರು. ರಸೆಲ್ ಅವರ ಈ ತೀರ್ಮಾನ ನಾಯಕ ಮೋರ್ಗನನ್ನು ಅಚ್ಚರಿಗೊಳಿಸಿದಲ್ಲದೆ, ಆರ್ಸಿಬಿ ನಾಯಕ ಕೊಹ್ಲಿ ಹಾಗೂ ಎದುರಿದ್ದ ಡಿವಿಲಿಯರ್ಸ್​ನನ್ನು ಅಚ್ಚರಿಗೊಳಿಸಿತ್ತು.

ರಸೆಲ್ ಅವರ ತೀರ್ಮಾನದ ಹಿಂದೆ ಒಂದು ಬಲವಾದ ಕಾರಣವೂ ಸಹ ಇದೆ. ಆರ್ಸಿಬಿ ಇನ್ನಿಂಗ್ಸ್ ಮುಗಿಯಲು ಇನ್ನೇನು ಕೊನೆಯ ಎಸೆತವೊಂದು ಬಾಕಿ ಇತ್ತು. ಹೀಗಾಗಿ ಜಾಮಿಸನ್ ಅವರನ್ನು ರನ್​ ಔಟ್ ಮಾಡಿದರು ಸಹ ಅದು ತಂಡಕ್ಕೆ ಯಾವುದೇ ವ್ಯತ್ಯಾಸ ಮಾಡುವುದಿಲ್ಲ ಎಂಬುದನ್ನು ಅರಿತ ರಸೆಲ್ ಈ ತೀರ್ಮಾನ ಕೈಗೊಂಡಿದ್ದಾರೆ ಎಂಬುದು ಕ್ರಿಕೆಟ್​ ಪಂಡಿತರ ವಿವರಣೆಯಾಗಿದೆ.