ಚೆನ್ನೈ: ಹೋಟೆಲ್ ಗ್ರ್ಯಾಂಡ್ ಚೋಲಾದಲ್ಲಿ ಐಪಿಎಲ್ 2021 ರ ಮಿನಿ ಹರಾಜು ಇನ್ನೇನೂ ಕೆಲವು ಗಂಟೆಗಳಲ್ಲಿ ಆರಂಭವಾಗಲಿದೆ. ಕ್ರಿಕೆಟಿಗರ ಈ ಮಿನಿ ಮಂಡಿಯಲ್ಲಿ, 292 ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ. ಆದರೆ ಅವರಲ್ಲಿ 61 ಮಂದಿ ಮಾತ್ರ ಹರಾಜಿನಲ್ಲಿ ಆಯ್ಕೆಯಾಗಲಿದ್ದಾರೆ. ವಾಸ್ತವವಾಗಿ, ಐಪಿಎಲ್‌ನ 14 ನೇ ಆವೃತ್ತಿಯಲ್ಲಿ ಕೇವಲ 61 ಆಟಗಾರರನ್ನು ಮಾತ್ರ ಹರಾಜಿನಲ್ಲಿ ಕೊಂಡುಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಈ ಹರಾಜು ಪ್ರಕ್ರಿಯೆಯಲ್ಲಿ ಐಪಿಎಲ್ ಆಡಳಿತ ಮಂಡಳಿ ವಿಧಿಸಿರುವ 6 ನಿಯಮಗಳನ್ನು ಎಲ್ಲಾ ಪ್ರಾಂಚೈಸಿಗಳು ಕಟ್ಟುನಿಟ್ಟಾಗಿ ಪಾಲಿಸಲೇಬೇಕು.
ಐಪಿಎಲ್ 2021 ರ ಹರಾಜಿಗೆ ಒಂದು ದಿನ ಬಾಕಿ ಇರುವಾಗಲೇ ಎಲ್ಲಾ ಫ್ರಾಂಚೈಸಿಗಳೊಂದಿಗೆ ಸಂಬಂಧ ಹೊಂದಿರುವ ಸದಸ್ಯರು ಚೆನ್ನೈಗೆ ಆಗಮಿದ್ದಾರೆ. ಧೋನಿ ಮತ್ತು ಫ್ಲೆಮಿಂಗ್ CSK ಹರಾಜಿನಲ್ಲಿ ನೇರವಾಗಿ ಭಾಗವಹಿಸುವುದಿಲ್ಲ. ಆದರೆ ಇಬ್ಬರೂ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹರಾಜಿನಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಕೂಡ ಹರಾಜಿನಲ್ಲಿ ಭಾಗವಹಿಸುವುದಿಲ್ಲ. ಸಹಾಯಕ ಕೋಚ್ ಮೊಹಮ್ಮದ್ ಕೈಫ್ ಹರಾಜಿನಲ್ಲಿ ದೆಹಲಿ ಪರ ಪಾಲ್ಗೊಳ್ಳಲ್ಲಿದ್ದಾರೆ. ಆದರೆ ಹರಾಜಿನ ಸಮಯದಲ್ಲಿ ಎಲ್ಲಾ ಫ್ರಾಂಚೈಸಿಗಳು ಐಪಿಎಲ್ ಆಡಳಿತ ಮಂಡಳಿ ವಿಧಿಸಿರುವ ಆ 6 ನಿಯಮಗಳನ್ನು ನೆನಪಿನಲ್ಲಿಟ್ಟುಕೊಂಡು ಹರಾಜು ಪ್ರಕ್ರಿಯೆ ನಡೆಸಬೇಕಾಗುತ್ತದೆ.
ಐಪಿಎಲ್ 2021ರ ಹರಾಜಿನ 6 ನಿಯಮಗಳು ಹೀಗಿವೆ..
ನಿಯಮ 1: ಯಾವುದೇ ಫ್ರ್ಯಾಂಚೈಸ್ ತನ್ನ ಪರ್ಸ್‌ನಲ್ಲಿ ಉಳಿದಿರುವ ಹಣಕ್ಕಿಂತ ಹೆಚ್ಚಿನದನ್ನು ಬಿಡ್ ಮಾಡುವುದಿಲ್ಲ. ಉದಾಹರಣೆಗೆ, ಅವರು ಒಂದೇ ಶ್ರೇಣಿಯೊಳಗೆ ಬಿಡ್ ಮಾಡುತ್ತಾರೆ, ಅದು ಅವರ ಪರ್ಸ್‌ನಲ್ಲಿರುತ್ತದೆ. ಐಪಿಎಲ್ 2021 ಹರಾಜಿನಲ್ಲಿ ಸಿಎಸ್‌ಕೆ 19.9 ಕೋಟಿ, ದೆಹಲಿಯಲ್ಲಿ 12.9 ಕೋಟಿ, ಪಂಜಾಬ್ ಕಿಂಗ್ಸ್‌ಗೆ 53.2 ಕೋಟಿ, ಕೆಕೆಆರ್ 10.75 ಕೋಟಿ, ಮುಂಬೈ ಇಂಡಿಯನ್ಸ್ 15.35 ಕೋಟಿ, ರಾಜಸ್ಥಾನ್ ರಾಯಲ್ಸ್ 34.85 ಕೋಟಿ, ಆರ್‌ಸಿಬಿಗೆ 35.9 ಕೋಟಿ ರೂ. ಎಸ್‌ಆರ್‌ಹೆಚ್ ಖಾತೆಯಲ್ಲಿ 10.75 ಕೋಟಿ ರೂ.
ನಿಯಮ 2: ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಯ ನಿಯಮಗಳ ಪ್ರಕಾರ, ಎಲ್ಲಾ ಫ್ರಾಂಚೈಸಿಗಳು ಒಟ್ಟು ಮೊತ್ತದ ಕನಿಷ್ಠ 75 ಪ್ರತಿಶತವನ್ನು ಆಟಗಾರರಿಗಾಗಿ ಖರ್ಚು ಮಾಡಬೇಕಾಗುತ್ತದೆ. ಯಾವುದೇ ಫ್ರ್ಯಾಂಚೈಸೀ ಇದಕ್ಕಿಂತ ಕಡಿಮೆ ಖರ್ಚು ಮಾಡಿದರೆ, ಉಳಿದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ನಿಯಮ 3: ಆರ್‌ಟಿಎಂ ಎಂದರೆ ರೈಟ್ ಟು ಮ್ಯಾಚ್ ಕಾರ್ಡ್ ಬಳಸಲಾಗುವುದಿಲ್ಲ. ಇದು ಮಿನಿ ಹರಾಜು ಆಗಿರುವುದರಿಂದ, ಆಟಗಾರನನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳು ಆರ್‌ಟಿಎಂ ಅನ್ನು ಬಳಸಲಾಗುವುದಿಲ್ಲ. ಮೆಗಾ ಹರಾಜಿನಲ್ಲಿ ಮಾತ್ರ ಆರ್‌ಟಿಎಂ ಬಳಕೆಗೆ ಅವಕಾಶ ಇರಲಿದೆ. ಮುಂದಿನ ವರ್ಷ 2 ತಂಡಗಳು ಹೊಸದಾಗಿ ಸೇರ್ಪಡೆಯಾಗಲಿವೆ. ಹೀಗಾಗಿ ಮುಂದಿನ ವರ್ಷ ಮೆಗಾ ಹರಾಜು ಇರಲಿದೆ.
ನಿಯಮ 4: ಎಲ್ಲಾ ಐಪಿಎಲ್ ಫ್ರಾಂಚೈಸಿಗಳಲ್ಲಿ ಆಟಗಾರರ ಸಂಖ್ಯೆ 25ಕ್ಕಿಂತ ಹೆಚ್ಚಿರಬಾರದು. ಹಾಗೆಯೇ ಫ್ರ್ಯಾಂಚೈಸ್ ತಂಡದಲ್ಲಿ 18 ಕ್ಕಿಂತ ಕಡಿಮೆ ಆಟಗಾರರು ಇರಬಾರದು. ಈಗಾಗಲೇ ಎಲ್ಲಾ ತಂಡಗಳು ತಮಗೆ ಅವಶ್ಯಕತೆ ಇಲ್ಲದ ಆಟಗಾರರನ್ನು ತಂಡದಿಂದ ಕೈಬಿಟ್ಟಿವೆ. ಹೀಗಾಗಿ ಎಲ್ಲಾ ತಂಡಗಳು ತಮ್ಮ ಬಳಿಯಿರುವ ಹಣದಲ್ಲಿ ಐಪಿಎಲ್ ನಿಯಾಮವಳಿಯಂತೆ ತಂಡವನ್ನು ಕಟ್ಟಿಕೊಳ್ಳಲಿದ್ದಾರೆ.
ನಿಯಮ 5: ಒಂದು ತಂಡದಲ್ಲಿ ಭಾರತೀಯ ಆಟಗಾರರ ಸಂಖ್ಯೆ ಕನಿಷ್ಠ 17 ಮತ್ತು 25 ರವರೆಗೆ ಇರಬಹುದಾಗಿದೆ. ಫ್ರಾಂಚೈಸಿಗಳು ಸಾಮಾನ್ಯವಾಗಿ 17 ಭಾರತೀಯ ಆಟಗಾರರು ಹಾಗೂ 8 ವಿದೇಶಿ ಆಟಗಾರರನ್ನು ಖರೀದಿಸುವ ಯೋಚನೆಯಲ್ಲಿರುತ್ತಾರೆ. ಆದರೆ ಫ್ರಾಂಚೈಸಿ ಇಚ್ಚಿಸಿದ್ದಲ್ಲಿ, 25 ಭಾರತೀಯ ಆಟಗಾರರನ್ನೇ ಖರೀದಿಸುವ ಅವಕಾಶವಿದೆ. ಆದರೆ ಇದುವರೆಗೆ ಯಾವುದೇ ಫ್ರಾಂಚೈಸಿ ಈ ರೀತಿ ಯೋಚನೆಗೆ ಮುಂದಾಗಿಲ್ಲ. ಏಕೆಂದರೆ ಸ್ಟಾರ್ ಆಟಗಾರರು ಇದ್ದರೆ ಮಾತ್ರ ತಂಡದ ಮೌಲ್ಯ ಹೆಚ್ಚಾಗುವುದರಿಂದ ಎಲ್ಲಾ ಫ್ರಾಂಚೈಸಿಗಳು ವಿದೇಶಿ ಸ್ಟಾರ್ ಆಟಗಾರರನನ್ನು ಖರೀದಿಸುವ ಇರಾದೆ ಹೊಂದಿರುತ್ತಾರೆ.
ನಿಯಮ 6: ಐಪಿಎಲ್ ತಂಡವು ಗರಿಷ್ಠ 8 ಅಂತರರಾಷ್ಟ್ರೀಯ ಆಟಗಾರರನ್ನು ಹೊಂದಬಹುದು. ಆದರೆ 4 ಆಟಗಾರರಿಗೆ ಮಾತ್ರ ತಂಡದಲ್ಲಿ ಆಡಲು ಅವಕಾಶ ನೀಡಲಾಗಿದೆ.
ಐಪಿಎಲ್ ಮೆಗಾ ಮತ್ತು ಮಿನಿ ಹರಾಜುಗಳ ನಡುವಿನ ವ್ಯತ್ಯಾಸ..
ಚೆನ್ನೈನಲ್ಲಿ ಫೆಬ್ರವರಿ 18 ರಂದು ನಡೆಯಲಿರುವ ಹರಾಜು ಮಿನಿ ಆಗಿರುವುದರಿಂದ, ಇದು ಐಪಿಎಲ್ ಮೆಗಾ ಹರಾಜಿನಿಂದ ಸ್ವಲ್ಪ ಭಿನ್ನವಾಗಿದೆ. ಪ್ರತಿ 3 ವರ್ಷಗಳಿಗೊಮ್ಮೆ ಮೆಗಾ ಹರಾಜು ನಡೆಯುತ್ತದೆ. ಅದೇ ಸಮಯದಲ್ಲಿ, ಆ 3 ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ ಮಿನಿ ಹರಾಜು ನಡೆಯುತ್ತದೆ. ಮಿನಿ ಮತ್ತು ಮೆಗಾ ಹರಾಜಿನ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಮೆಗಾ ಹರಾಜಿನ ಮೊದಲು, ಪ್ರತಿ ತಂಡವು ಗರಿಷ್ಠ 5 ಆಟಗಾರರನ್ನು ಉಳಿಸಿಕೊಳ್ಳಬಹುದು. ಆದರೆ ಮಿನಿ ಹರಾಜಿನಲ್ಲಿ ಆಟಗಾರರನ್ನು ಉಳಿಸಿಕೊಳ್ಳಲು ಯಾವುದೇ ಮಿತಿಯಿಲ್ಲ.
Published On - 12:19 pm, Wed, 17 February 21