IPL 2021 KKR vs DC Live Streaming: ಪಂದ್ಯ ಆರಂಭವಾಗುವ ಸಮಯ, ಲೈವ್ ಸ್ಟ್ರೀಮಿಂಗ್, ಯಾವ ಚಾನೆಲ್​ನಲ್ಲಿ ವೀಕ್ಷಣೆ, ಇಲ್ಲಿದೆ ಮಾಹಿತಿ

| Updated By: Skanda

Updated on: Apr 29, 2021 | 9:58 AM

IPL 2021: ಇಂದು ನಡೆಯಲ್ಲಿರುವ ಮೊದಲ ಪಂದ್ಯದಲ್ಲಿ ಎಂಐಐ ರಾಜಸ್ಥಾನ್ ರಾಯಲ್ಸ್ (ಆರ್ಆರ್) ವಿರುದ್ಧ ಸೋತರೆ ಕೆಕೆಆರ್ ನಾಲ್ಕನೇ ಸ್ಥಾನಕ್ಕೆ ಏರುತ್ತದೆ.

IPL 2021 KKR vs DC Live Streaming: ಪಂದ್ಯ ಆರಂಭವಾಗುವ ಸಮಯ, ಲೈವ್ ಸ್ಟ್ರೀಮಿಂಗ್, ಯಾವ ಚಾನೆಲ್​ನಲ್ಲಿ ವೀಕ್ಷಣೆ, ಇಲ್ಲಿದೆ ಮಾಹಿತಿ
ಕೋಲ್ಕತ್ತಾ ನೈಟ್ ರೈಡರ್ಸ್​, ಡೆಲ್ಲಿ ಕ್ಯಾಪಿಟಲ್ಸ್
Follow us on

ಕೆಕೆಆರ್ ಅಂತಿಮವಾಗಿ ಸೋಮವಾರ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಗೆಲುವಿನ ಮೂಲಕ ಜಯದ ಹಾದಿಗೆ ಮರಳಲು ಯಶಸ್ವಿಯಾದರೆ, ಡಿಸಿ ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ವಿರುದ್ಧದ ಸೋಲಿನಿಂದ ಆಘಾತಕ್ಕೊಳಗಾಗಿದೆ. ರಿಷಭ್ ಪಂತ್ ಮತ್ತು ಕಂಪನಿ, ವಿರಾಟ್ ಕೊಹ್ಲಿಯ ಬಳಗದ ಎದುರು ಒಂದು ರನ್​ನಿಂದ ಸೋಲೊಪ್ಪಿಕೊಂಡರು, ಶಿಮ್ರಾನ್ ಹೆಟ್ಮಿಯರ್ (53 *) ಮತ್ತು ಪಂತ್ (58 *) ಇನ್ನಿಂಗ್ಸ್ ವ್ಯರ್ಥವಾಯಿತು. ಆ ಗೆಲುವು ಅಂತಿಮವಾಗಿ ಆರ್‌ಸಿಬಿಯನ್ನು 10 ಪಾಯಿಂಟ್‌ಗಳಿಗೆ ಕೊಂಡೊಯ್ದಿತು.

ಕೆಕೆಆರ್​ಗೆ ತಮ್ಮ ಬ್ಯಾಟ್ಸ್‌ಮನ್‌ಗಳಿಂದ ಆಲ್ರೌಂಡ್ ಸ್ಥಿರ ಪ್ರದರ್ಶನ ಬೇಕಾಗಿದೆ. ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ (ಎಂಐ) ನಂತರ ಕೆಕೆಆರ್ (ನಾಲ್ಕು ಪಾಯಿಂಟ್‌ಗಳು) ಐದನೇ ಸ್ಥಾನದಲ್ಲಿದೆ. ಇಂದು ನಡೆಯಲಿರುವ ಪಂದ್ಯದಲ್ಲಿ ಎಂಐ ರಾಜಸ್ಥಾನ್ ರಾಯಲ್ಸ್ (ಆರ್​ಆರ್​) ವಿರುದ್ಧ ಸೋತರೆ ಕೆಕೆಆರ್​ಗೆ ಕೊಂಚ ಅನುಕೂಲವಾಗಲಿದೆ. ಪಂಜಾಬ್​ ವಿರುದ್ಧ ಅಲ್ಪ ಮೊತ್ತವಾದ 124 ರನ್‌ಗಳ ಬೆನ್ನಟ್ಟಿದ ಕೆಕೆಆರ್ ಮೊದಲ ಮೂರು ಓವರ್‌ಗಳಲ್ಲಿಯೇ ನಿತೀಶ್ ರಾಣಾ, ಶುಬ್ಮನ್ ಗಿಲ್ ಮತ್ತು ಸುನಿಲ್ ನರೈನ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು, ಆದರೆ ನಂತರ ತ್ರಿಪಾಠಿ ರಕ್ಷಣೆಗೆ ಬಂದರು. ಅವರು ನಾಯಕ ಮೋರ್ಗನ್ ಅವರೊಂದಿಗೆ 66 ರನ್ ಗಳಿಸಿದರು ಆದರೆ ವಿಜಯದಿಂದ ಕೆಲವೇ ರನ್​ಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿದರು. ಸುಮಾರು ನಾಲ್ಕು ಓವರ್‌ಗಳ ನಂತರ ಆಂಡ್ರೆ ರಸ್ಸೆಲ್‌ರನ್ನು ಕಳೆದುಕೊಂಡರೂ ಸಹ, ಮೋರ್ಗನ್ ಮತ್ತು ದಿನೇಶ್ ಕಾರ್ತಿಕ್ (12 *) ಕೊನೆಯಲ್ಲಿ ಸಾಕಷ್ಟು ಆರಾಮದಾಯಕವಾಗಿ ಆಡಿ 16.4 ಓವರ್​ಗಳಲ್ಲಿಯೇ ಗುರಿ ಮುಟ್ಟಿ ತಂಡವನ್ನು ಗೆಲ್ಲಿಸಿದರು.

ಇದೀಗ ಗೆಲುವಿನ ವಿಶ್ವಾಸದಲ್ಲಿರುವ ಕೋಲ್ಕತ್ತಾ ಹುಡುಗರು ಡೆಲ್ಲಿ ತಂಡದವರೊಂದಿಗೆ ಮೈದಾನದಲ್ಲಿ ಸೆಣೆಸಲಿದ್ದಾರೆ.

ಡಿಸಿ ಮತ್ತು ಕೆಕೆಆರ್ ನಡುವಿನ ಐಪಿಎಲ್‌ನ 25 ನೇ ಪಂದ್ಯ ಯಾವಾಗ ನಡೆಯಲಿದೆ?
ಡಿಸಿ ಮತ್ತು ಕೆಕೆಆರ್ ನಡುವಿನ ಐಪಿಎಲ್‌ನ 25 ನೇ ಪಂದ್ಯವು 2021 ಏಪ್ರಿಲ್ 29 ರಂದು ನಡೆಯಲಿದೆ.

ಪಂದ್ಯದ ಸ್ಥಳ ಯಾವುದು?
ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂದ್ಯವು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ?
ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಯಾವ ಟಿವಿ ಚಾನೆಲ್‌ಗಳು ಪಂದ್ಯವನ್ನು ಪ್ರಸಾರ ಮಾಡುತ್ತವೆ?
ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ.

ತಂಡಗಳು:
ದೆಹಲಿ ಕ್ಯಾಪಿಟಲ್ಸ್:
ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ನಾಯಕ), ಆಕ್ಸಾರ್ ಪಟೇಲ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಲಲಿತ್ ಯಾದವ್, ಹರ್ಷಲ್ ಪಟೇಲ್, ಅವೇಶ್ ಖಾನ್, ಪ್ರವೀಣ್ ದುಬೆ, ಕಗಿಸೊ ರಬಡಾ, ಅನ್ರಿಕ್ ನಾರ್ಟ್ಜೆ, ಮಾರ್ಕಸ್ ಸ್ಟೊಯೆನಿಸ್ , ಡೇನಿಯಲ್ ಸ್ಯಾಮ್ಸ್, ಸ್ಟೀವ್ ಸ್ಮಿತ್, ಉಮೇಶ್ ಯಾದವ್, ರಿಪಾಲ್ ಪಟೇಲ್, ವಿಷ್ಣು ವಿನೋದ್, ಲುಕ್ಮನ್ ಮೆರಿವಾಲಾ, ಎಂ ಸಿದ್ಧಾರ್ಥ್, ಟಾಮ್ ಕುರ್ರನ್, ಸ್ಯಾಮ್ ಬಿಲ್ಲಿಂಗ್ಸ್.

ಕೋಲ್ಕತ್ತಾ ನೈಟ್ ರೈಡರ್ಸ್: ಶುಬ್ಮನ್ ಗಿಲ್, ನಿತೀಶ್ ರಾಣಾ, ಟಿಮ್ ಸೀಫರ್ಟ್ , ರಾಹುಲ್ ತ್ರಿಪಾಠಿ, ರಿಂಕು ಸಿಂಗ್, ದಿನೇಶ್ ಕಾರ್ತಿಕ್, ಇಯೊನ್ ಮೋರ್ಗಾನ್ (ನಾಯಕ), ಆಂಡ್ರೆ ರಸ್ಸೆಲ್, ಸುನಿಲ್ ನರೈನ್, ವರುಣ್ ಸಿ.ವಿ, ಕುಲದೀಪ್ ಯಾದವ್, ಪ್ಯಾಟ್ ಕಮ್ಮಿನ್ಸ್, ಲಾಕಿ ಫರ್ಗುಸನ್, ಕಮಲೇಶ್ ನಾಗರ್ಕೋಟಿ, ಶಿವಂ ಮಾವಿ, ಸಂದೀಪ್ ವಾರಿಯರ್, ಪ್ರಸಿದ್ ಕೃಷ್ಣ, ಶಕೀಬ್ ಅಲ್ ಹಸನ್, ಶೆಲ್ಡನ್ ಜಾಕ್ಸನ್, ವೈಭವ್ ಅರೋರಾ, ಕರುಣ್ ನಾಯರ್, ಹರ್ಭಜನ್ ಸಿಂಗ್, ಬೆನ್ ಕಟಿಂಗ್, ವೆಂಕಟೇಶ್ ಅಯ್ಯರ್, ಪವನ್ ನೇಗಿ.