ಐಪಿಎಲ್ ಶಿಷ್ಟಾಚಾರ ಮುರಿದ.. ಈ ಬಾರಿಯ ಗೆಲುವಿನ ಕುದುರೆ, ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಕಿವಿಹಿಂಡಿದ ಐಪಿಎಲ್!
ಕ್ಯಾಪ್ಟನ್ ಕೊಹ್ಲಿ ಐಪಿಎಲ್ ಅಪರಾಧ 2.2 ಸಂಹಿತೆಯಲ್ಲಿ ಲೆವೆಲ್ 1 ಅಪರಾಧ ಎಸಗಿದ್ದಾರೆ ಎಂದು ಐಪಿಎಲ್ ಮ್ಯಾನೇಜ್ಮೆಂಟ್ ಕಿಡಿಕಾರಿದೆ. ಅಂದರೆ ಪಂದ್ಯದ ವೇಳೆ ಕ್ರಿಕೆಟ್ ಸಲಕರಣೆ/ವಸ್ತ್ರಗಳಿಗೆ ಅಗೌರವ ತೋರುವುದು, ಮೈದಾನದಲ್ಲಿನ ಕ್ರಿಕೆಟ್ ಉಪಕರಣಗಳಿಗೆ ಧಕ್ಕೆಯುಂಟುಮಾಡುವುದು ಶಿಸ್ತು ಉಲ್ಲಂಘನೆಯಾಗುತ್ತದೆ.
ಪ್ರಸಕ್ತ ಐಪಿಎಲ್ 2021ರಲ್ಲಿ ಆಡಿದ ಮೊದಲ ಎರಡು ಪಂದ್ಯಗಳನ್ನೂ ಗೆದ್ದು ಬೀಗುತ್ತಿರುವ, ಗೆಲುವಿನ ಕುದುರೆ ಎನಿಸಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಐಪಿಎಲ್ ಶಿಷ್ಟಾಚಾರ ಮುರಿದಿದ್ದಕ್ಕೆ ದಂಡ ಹಾಕಲಾಗಿದೆ. ಮೊದಲೇ ಕ್ರಿಕೆಟ್ ಅಂದರೆ ಶಿಸ್ತಿನ ಆಟ. ಅಂತಹುದರಲ್ಲಿ ಶಿಸ್ತು, ಶಿಷ್ಟಾಚಾರಗಳನ್ನು ಉಲ್ಲಂಘಿಸಿವುದು ಭಾರೀ ಅಪಚಾರವಾದೀತು. ಐಪಿಎಲ್ ಆಟಗಾರರು ಯಾರೇ ಇರಲಿ, ಜನ ಅವರನ್ನು ಅನುಕರಿಸುವುದು ಹೆಚ್ಚು. ಹಾಗಾಗಿ ಅಂತಹವರು ಹೆಚ್ಚು ಜವಾಬ್ದಾರಿಯಿಂದ ಆಡಬೇಕಾಗುತ್ತದೆ. ಅಶಿಸ್ತು, ತೋರುವುದೇ ಆಗಲಿ ಅಥವಾ ಆಟದ ರೀತಿರಿವಾಜುಗಳಿಗೆ ಧಕ್ಕೆ ತರುವುದೇ ಆಗಲಿ ಸರ್ವತಾ ಸಾಧುವಲ್ಲ.
ಪರಿಸ್ಥಿತಿ ಹೀಗಿರುವಾಗ ಕ್ಯಾಪ್ಟನ್ ಕೊಹ್ಲಿ ಐಪಿಎಲ್ ಅಪರಾಧ 2.2 ಸಂಹಿತೆಯಲ್ಲಿ ಲೆವೆಲ್ 1 ಅಪರಾಧ ಎಸಗಿದ್ದಾರೆ ಎಂದು ಐಪಿಎಲ್ ಮ್ಯಾನೇಜ್ಮೆಂಟ್ ಕಿಡಿಕಾರಿದೆ. ಅಂದರೆ ಪಂದ್ಯದ ವೇಳೆ ಕ್ರಿಕೆಟ್ ಸಲಕರಣೆ/ವಸ್ತ್ರಗಳಿಗೆ ಅಗೌರವ ತೋರುವುದು, ಮೈದಾನದಲ್ಲಿನ ಕ್ರಿಕೆಟ್ ಉಪಕರಣಗಳಿಗೆ ಧಕ್ಕೆಯುಂಟುಮಾಡುವುದು ಶಿಸ್ತು ಉಲ್ಲಂಘನೆಯಾಗುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂತಹ ದುರ್ನಡತೆ ತೋರಿದ ಆರೋಪದ ಮೇಲೆ ಐಪಿಎಲ್ ಶಿಸ್ತುಪಾಲನಾ ಸಮಿತಿ ಅವರಿಗೆ ಕಿವಿ ಹಿಂಡಿದೆ. ನಿನ್ನೆ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆದ ಪ್ರಸಕ್ತ ಟೂರ್ನಿಯ 6ನೆ ಪಂದ್ಯದಲ್ಲಿ 29 ಬಾಲ್ಗೆ 33 ರನ್ ಗಳಿಸಿದ್ದ ವಿರಾಟ್ ಕೊಹ್ಲಿಯನ್ನು ಜಾಸನ್ ಹೋಲ್ಡರ್ ಔಟ್ ಮಾಡಿದ್ದರು. ಹೋಲ್ಡರ್ ಬೌಲಿಂಗ್ ವೇಳೆ ಕೊಹ್ಲಿ ಸಿಕ್ಸ್ ಹೊಡೆಯುವ ಪ್ರಯತ್ನ ಮಾಡಿದ್ದರು. ಎಡ್ಜ್ ಆಗಿ ಅದು ಕ್ಯಾಚ್ ಆಗಿತ್ತು. ಈ ಮೂಲಕ ಕೊಹ್ಲಿ ಕೇವಲ 33 ರನ್ಗಳಿಗೆ ನಿರ್ಗಮಿಸಿದರು.
ಆದರೆ ಹೀಗೆ ಸಡನ್ ಆಗಿ ಔಟ್ ಆದ್ದರಿಂದ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅಸಮಾಧಾನಗೊಂಡಿದ್ದರು. ಇದರಿಂದ ಮೈದಾನದಿಂದ ನಿರ್ಗಮಿಸುವಾಗ ಆರ್ಸಿಬಿ ನಾಯಕ ಕೊಹ್ಲಿ ಬೌಂಡರಿ ಗೆರೆಯ ಬಳಿ ಜೋಡಿಸಿದ್ದ ಜಾಹೀರಾತು ಕಟ್ಟೆಗೆ ಬ್ಯಾಟ್ನಿಂದ ಬಡಿದಿದ್ದಾರೆ. ಮುಂದೆ.. ತಂಡ ಕುಳಿತುಕೊಳ್ಳುವ ಜಾಗದಲ್ಲಿಯೂ ಆಕ್ರೋಶದಿಂದ ಚೇರ್ಗೆ ಗುದ್ದಿದ್ದಾರೆ. ಇದು ಶಿಸ್ತು ಉಲ್ಲಂಘನೆಯಾಗುತ್ತದೆ. ಇದರಲ್ಲಿ ಮ್ಯಾಚ್ ರೆಫರಿ ತೀರ್ಮಾನವೇ ಅಂತಿಮ ಮತ್ತು ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ ಎಂದು ಐಪಿಎಲ್ ಶಿಸ್ತುಪಾಲನಾ ಸಮಿತಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ನಿನ್ನೆಯ ಪಂದ್ಯ ಹೀಗೆ ಸಾಗಿತ್ತು.. ನಿನ್ನೆ ನಡೆದ ಆರ್ಸಿಬಿ-ಎಸ್ಆರ್ಎಚ್ ನಡುವಿನ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ರನ್ಗಳ ರೋಚಕ ಗೆಲುವು ದಾಖಲಿಸಿದೆ. ಹೈದರಾಬಾದ್ ತಂಡದ ಪರ ನಾಯಕ ಡೇವಿಡ್ ವಾರ್ನೆರ್ ಹಾಗೂ ಮನೀಶ್ ಪಾಂಡೆ ಉತ್ತಮ ಆಟವಾಡಿ ಗೆಲ್ಲುವ ಸೂಚನೆ ನೀಡಿದ್ದರು. ಆದರೆ, ಅವರಿಬ್ಬರು ಔಟ್ ಆದ ಬಳಿಕ ಕ್ರೀಸ್ಗೆ ಇಳಿದ ಆಟಗಾರರು ತಂಡವನ್ನು ಮುನ್ನಡೆಸುವ ಮನಮಾಡಲಿಲ್ಲ.
ಆರ್ಸಿಬಿ ಬೌಲರ್ಗಳು ಡೆತ್ ಓವರ್ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು. ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಲೈನ್ಅಪ್ ಧೂಳಿಪಟ ಮಾಡಿದರು. ಆರ್ಸಿಬಿ ಪರ ಶಹಬಾಜ್ ಅಹ್ಮದ್ 2 ಓವರ್ ಬೌಲ್ ಮಾಡಿ ಕೇವಲ 7 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದರು. ಒಂದೇ ಓವರ್ನಲ್ಲಿ ಶಹಬಾಜ್ 3 ವಿಕೆಟ್ ಪಡೆದಿದ್ದು ಪಂದ್ಯದ ದಿಕ್ಕನ್ನೇ ಬದಲಿಸಿತು.
ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 149 ರನ್ ದಾಖಲಿಸಿತ್ತು. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ಗೆ ಗೆಲ್ಲಲು 150 ರನ್ಗಳ ಸುಲಭ ಟಾರ್ಗೆಟ್ ನೀಡಿತ್ತು.
Published On - 11:55 am, Thu, 15 April 21