IPL 2021 PBKS vs CSK Preview: ಇಂದು ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು​ ಪಂಜಾಬ್​ ಕಿಂಗ್ಸ್​ ನಡುವೆ ಹಣಾಹಣಿ: ಗೆಲುವು ಯಾರಿಗೆ?

| Updated By: ganapathi bhat

Updated on: Apr 16, 2021 | 2:44 PM

ಐಪಿಎಲ್​ 2021 ಪಂದ್ಯ 8ರಲ್ಲಿ ಮೂರು ಬಾರಿ ಐಪಿಎಲ್ ಕಪ್​ ಗೆದ್ದಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಪುಟಿದೆದ್ದಿರುವ ಪಂಜಾಬ್​ ಕಿಂಗ್ಸ್​ ತಂಡದ ವಿರುದ್ಧ ಮುಂಬೈನಲ್ಲಿ ಇಂದು ಕಾದಾಡಲಿವೆ. ಸಂಜು ಸ್ಯಾಮ್ಸನ್ ಅಮೋಘ ಆಟದಿಂದಾಗಿ ಪಂಜಾಬ್​ ಕಿಂಗ್ಸ್​ ಪ್ರಸಕ್ತ IPL 14 ಟೂರ್ನಿಯಲ್ಲಿ ಆತ್ಮವಿಶ್ವಾಸದ ಆರಂಭ ಪಡೆದಿದೆ. ಅದೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿರುದ್ಧ ಕಳಾಹೀನವಾಗಿ ಸೋತುಸುಣ್ಣವಾಗಿದೆ.

IPL 2021 PBKS vs CSK Preview: ಇಂದು ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು​ ಪಂಜಾಬ್​ ಕಿಂಗ್ಸ್​ ನಡುವೆ ಹಣಾಹಣಿ: ಗೆಲುವು ಯಾರಿಗೆ?
ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು​ ಪಂಜಾಬ್​ ಕಿಂಗ್ಸ್
Follow us on

ಐಪಿಎಲ್​ 2021 ಪಂದ್ಯ 8ರಲ್ಲಿ ಮೂರು ಬಾರಿ ಐಪಿಎಲ್ ಕಪ್​ ಗೆದ್ದಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಪುಟಿದೆದ್ದಿರುವ ಪಂಜಾಬ್​ ಕಿಂಗ್ಸ್​ ತಂಡದ ವಿರುದ್ಧ ಮುಂಬೈನಲ್ಲಿ ಇಂದು ಕಾದಾಡಲಿದೆ. ಸಂಜು ಸ್ಯಾಮ್ಸನ್ ಅಮೋಘ ಆಟದಿಂದಾಗಿ ಪಂಜಾಬ್​ ಕಿಂಗ್ಸ್​ ಪ್ರಸಕ್ತ IPL 14 ಟೂರ್ನಿಯಲ್ಲಿ ಆತ್ಮವಿಶ್ವಾಸದ ಆರಂಭ ಪಡೆದಿದೆ. ಅದೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿರುದ್ಧ ಕಳಾಹೀನವಾಗಿ ಸೋತುಸುಣ್ಣವಾಗಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡ: ಮೂರು ಬಾರಿ ಚಾಂಪಿಯಜನ್​ ತಂಡವು ಮೊದಲ ಪಂದ್ಯದಲ್ಲೇ ಹೀನಾಯವಾಗಿ ಸೋತಿದೆಯಾದರೂ ಸಿಎಸ್​ಕೆ ತಂಡದಲ್ಲಿ ಕೆಲ ಆಶಾಭಾವನೆಗಳೂ ಇವೆ. ಸುರೇಶ್​ ರೈನಾ ಆಕರ್ಷಕ ಅರ್ಧ ಶತಕದೊಂದಿಗೆ ಲಯ ಕಂಡುಕೊಂಡಿದ್ದಾರೆ. ಓಪನಿಂಗ್​ ಬ್ಯಾಟ್ಸ್​ಮನ್​ಗಳು ಹೆಚ್ಚಿನ ಕೊಡುಗೆ ನೀಡದೇಹೋದರೂ ತಂಡವು 188 ರನ್​ ಗಳಿಸುವಲ್ಲಿ ಶಕ್ತವಾಗಿತ್ತು. ಓಪನರ್ಸ್​ ಜೊತೆಗೆ ಕ್ಯಾಪ್ಟನ್​ ಎಂಎಸ್​ ಧೋನಿ ಸಹ ನಿರಾಶೆ ಮೂಡಿಸಿದರಾದರೂ ಉಳಿದವರು ತಮ್ಮ ಶಕ್ತ್ಯಾನುಸಾರ ಬ್ಯಾಟ್​ ಬೀಸಿ, ತಂಡ ಉತ್ತಮ ಮೊತ್ತ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೆನ್​ ಇನ್​ ಯೆಲ್ಲೋ ಆಟಗಾರರನ್ನೊಳಗೊಂಡ ತಂಡದ ಮುಖ್ಯ ಸಮಸ್ಯೆಯೆಂದರೆ ಬೌಲಿಂಗ್​ ವಿಭಾಗ. 188 ರನ್​ ಮೊತ್ತವನ್ನು ಡಿಫೆಂಡ್​ ಮಾಡಿಕೊಳ್ಳಲು ತಂಡದ ಬೌಲರ್​ಗಳು ವಿಫಲರಾದರು ಎಂಬುದು ಶೋಚನೀಯ. ಇದಕ್ಕಿಂತ ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟ್ಸ್​ಮನ್​ಗಳೇ ವಿಜೃಂಭಿಸಿದರು ಎಂಬುದು ಸೂಕ್ತವಾದೀತು.

ಪಂಜಾಬ್​ ಕಿಂಗ್ಸ್​ ತಂಡ: ರಾಜಸ್ಥಾನ್​ ರಾಯಲ್ಸ್​ ತಂಡದ ವಿರುದ್ಧ ಪಂಜಾಬ್​ ಕಿಂಗ್ಸ್ 221 ಬೃಹತ್​ ಮೊತ್ತ ಪೇರಿಸಿದರು. ಪಂಜಾಬ್​ ಕಿಂಗ್ಸ್​ ಬ್ಯಾಟ್ ಹಿಡಿದು ಗುಟುರು ಹಾಕುತ್ತಿದ್ದಾರೆ. ಕೆ ಎಲ್​ ರಾಹುಲ್​ 90ರ ಗಡಿಯಲ್ಲಿ ಔಟಾದರು ಎಂಬುದು ಬೇಸರದ ಸಂಗತಿಯೇ ಆದರೂ ಅವರು ಕೇವಲ 50 ಬಾಲ್​ನಲ್ಲಿ ಅಷ್ಟೂ ರನ್​ ಕಲೆ ಹಾಕಿದರು ಎಂಬುದು ನಿಜಕ್ಕೂ ಶ್ಲಾಘನಾರ್ಹ. ಕ್ರಿಸ್​ ಗೇಲ್ ತಮ್ಮ ಖ್ಯಾತಿಗೆ ತಕ್ಕಂತೆ 28 ಬಾಲ್​ನಲ್ಲಿ 40 ರನ್​ ಬಾರಿಸಿ ನಡೆದರು. ಆದರೆ ರಾಜಸ್ಥಾನ್​ ರಾಯಲ್ಸ್​ ತಂಡದ ವಿರುದ್ಧ ನಿಜಕ್ಕೂ ಮಿಂಚಿದ್ದು ದೀಪಕ್​ ಹೂಡಾ. ಇವಯ್ಯ 28 ಬಾಲ್​ಗಳಲ್ಲಿ 64 ರನ್​ ಬಾರಿಸಿದರು. ಮಯಾಂಕ್​ ಅಗರ್ವಾಲ್​ ಮತ್ತು ನಿಕಲೋಸ್​ ಪೂರನ್​ ಸಹ ಬ್ಯಾಟ್​ ಬೀಸಿ, ಒಂದಷ್ಟು ರನ್​ ಸೇರಿಸಿದರು. ಪಂಜಾಬ್​ ಕಿಂಗ್ಸ್​ ಬ್ಯಾಟಿಂಗ್ ಲೈನ್​ ಅದ್ಭುತ ಫಾರಂನಲ್ಲಿದೆ ಎಂಬುದು ಗಮನಾರ್ಹ.

ಆದರೆ ಪಂಜಾಬ್​ ಕಿಂಗ್ಸ್​ ಸಮಸ್ಯೆ ಅದೇ ಬೌಲಿಂಗ್. ಇಬ್ಬರು ವಿದೇಶಿ ವೇಗದ ಬೌಲರ್​ಗಳಾದ ಜೆಯ್​ ರಿಚರ್ಡ್ಸನ್ ಮತ್ತು ರಿಲೆ ಮೆರೆಡಿತ್ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ವಿಪರೀತ ಎನಿಸುವಷ್ಟು ರನ್​ಗಳನ್ನು ನೀಡಿದರು. ಮೊಹಮದ್​ ಶಮಿ ಉತ್ತಮವಾಗಿಯೇ ಬೌಲ್​ ಮಾಡಿದರು. ಆದರೂ ಐಪಿಎಲ್​ ಹೋರಾಟದಲ್ಲಿ ಸಾಲದು ಎಂಬಂತಿದೆ. ಎಂ ಅಶ್ವಿನ್ ಒಂದೂ ವಿಕೆಟ್​ ಪಡೆಯಲಿಲ್ಲ. ಆದರೆ 4 ಓವರ್​ಗಳಲ್ಲಿ 43 ರನ್​ ನೀಡಿ, ದುಬಾರಿ ಎನಿಸಿದರು. ಒಂದೇ ಆಶಾಕಿರಣವೆಂದರೆ ಅರ್ಶದೀಪ್​ ಸಿಂಗ್. ಒತ್ತಡದ ನಡುವೆಯೂ ಆತ ತನ್ನ ಗಟ್ಟಿತನ ತೋರಿದರು. ಸಂಜು ಸ್ಯಾಮ್ಸನ್ ಮತ್ತು ಕ್ರಿಸ್​ ಮೋರಿಸ್​ ಜೋಡಿಯ ವಿರುದ್ಧ ಕೊನೆಯ ಓವರ್​ನಲ್ಲಿ 13 ರನ್​ಗಳನ್ನು ಉತ್ತಮವಾಗಿ ಕಾಪಾಡಿಕೊಂಡರು.

ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ತಂಡ ನೇರ ಹಣಾಹಣಿ ದಾಖಲೆ:
ಐಪಿಎಲ್ ಟೂರ್ನಿಯ​ 23 ಪಂದ್ಯಗಳಲ್ಲಿ ಚೆನ್ನೈ ತಮಡ 14 ಪಂದ್ಯಗಳನ್ನು ಗೆದ್ದಿದೆ. ಅದೇ ಪಂಜಾಬ್​ ಕಿಂಗ್​ಗಳು ಕೇವಲ 9 ಪಂದ್ಯಗಳ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರಷ್ಟೇ. ಇನ್ನು ಕಳೆದ ಬಾರಿ ಒಂದು ಟೂ ಆಗಿತ್ತು.

ಏನೆಲ್ಲಾ ನಿರೀಕ್ಷಿಸಬಹುದು?: ವಾಂಖೇಡೆ ಸ್ಟೇಡಿಯಂನಲ್ಲಿನ ಪಿಚ್​ ಬ್ಯಾಟ್ಸ್​ನ್​ಗಳಿಗೆ ಸ್ವರ್ಗದಂತಿದೆ. ಕೆ ಎಲ್ ರಾಹುಲ್​, ಕ್ರಿಸ್​ ಗೇಲ್, ಸಂಜು ಸ್ಯಾಮ್ಸನ್ ಮತ್ತು ಜೋ ಬಟ್ಲರ್​ ಅವರಂತಹ ಬಲಾಢ್ಯ ಬ್ಯಾಟ್ಸ್​ಮನ್​ಗಳು ನಿಜಕ್ಕೂ ಅದ್ಭುತ ಪ್ರದರ್ಶನ ನೀಡಬಲ್ಲರು. ಎರಡೂ ತಂಡಗಳಿಂದ ಉತ್ತಮ ಸ್ಕೋರ್​ ಬರುವ ಅಂದಾಜಿದೆಯಾದರೂ ಕೊನೆಗೆ ಯಾವ ತಂಡದ ಬೌಲರ್​ಗಳು ಹಿಡಿತ ಸಾಧಿಸುತ್ತಾರೋ ಆ ತಂಡವೇ ಜಯಭೇರಿ ಬಾರಿಸುವುದು ಖಂಡಿತಾ.

ಪಂಜಾಬ್​ ಕಿಂಗ್ಸ್​ ತಂಡದ ಸಂಭಾವ್ಯ ಆಟಗಾರರು: ಋತುರಾಜ್​ ಗಾಯಕ್ವಾಡ್, ಫಾಪ್​ ದೂಪ್ಲೆಸಿಸ್, ಸುರೇಶ್​ ರೈನಾ, ಅಂಬಟಿ ರಾಯ್ಡು, ಮೊಯೀನ್​ ಅಲಿ, ಎಂ ಎಸ್​ ಧೋನಿ (ಕ್ಯಾಪ್ಟನ್​-ವಿಕೆಟ್​ ಕೀಪರ್), ರವೀದ್ರ ಜಡೇಜಾ, ಸ್ಯಾಮ್​ ಕರ್ರನ್, ಡಿ. ಬ್ರೇವೊ, ಶಾರ್ದೂಲ್ ಠಾಕೂರ್, ದೀಪಕ್​ ಚಹಾರ್.

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಸಂಭಾವ್ಯ ಆಟಗಾರರು: ಕೆ ಎಲ್ ರಾಹುಲ್ (ಕ್ಯಾಪ್ಟನ್​-ವಿಕೆಟ್​ ಕೀಪರ್), ಮಯಾಂಕ್​ ಅಗರ್ವಾಲ್, ಕ್ರಿಸ್ ಗೇಲ್, ನಿಖೊಲಸ್ ಪೂರನ್, ದೀಪಕ್ ಹೂಡಾ, ಶಾರೂಕ್​ ಖಾನ್, ಜೇಯ್​ ರಿಚರ್ಡ್​ಸನ್​, ಮುರುಗನ್​ ಅಶ್ವಿನ್, ರಿಲೆ ಮೆರೆಡಿತ್, ಮೊಹಮದ್​ ಶಮಿ, ಅರ್ಶದೀಪ್​ ಸಿಂಗ್.

Published On - 7:18 am, Fri, 16 April 21