IPL 2021: ನಾಳಿನ ಪಂದ್ಯದಲ್ಲಿ ಮುಂಬೈ ಎದುರು ಗೆದ್ದು ಬೀಗಲಿದೆ ಆರ್​ಸಿಬಿ! ಇದು ಅಂಕಿ- ಅಂಶಗಳು ನುಡಿದಿರುವ ಭವಿಷ್ಯ

|

Updated on: Apr 08, 2021 | 3:03 PM

IPL 2021: ವಾಸ್ತವವಾಗಿ, 2013 ರಿಂದ ಮುಂಬೈ ಇಂಡಿಯನ್ಸ್ ಐಪಿಎಲ್ ಆರಂಭಿಕ ಪಂದ್ಯವನ್ನು ಗೆದ್ದಿಲ್ಲ. 2013 ರ ಐಪಿಎಲ್ ಆವೃತ್ತಿಯಲ್ಲಿಯೂ ಅವರು ಆರ್‌ಸಿಬಿಯ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು.

IPL 2021: ನಾಳಿನ ಪಂದ್ಯದಲ್ಲಿ ಮುಂಬೈ ಎದುರು ಗೆದ್ದು ಬೀಗಲಿದೆ ಆರ್​ಸಿಬಿ! ಇದು ಅಂಕಿ- ಅಂಶಗಳು ನುಡಿದಿರುವ ಭವಿಷ್ಯ
ಮುಂಬೈ ತಂಡದ ನಾಯಕ ಹಾಗೂ ಆರ್​ಸಿಬಿ ತಂಡದ ನಾಯಕ
Follow us on

ಐಪಿಎಲ್ 2021 ರ ಆರಂಭಿಕ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಕಳೆದುಕೊಳ್ಳಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಂಬೈ ಗೆಲ್ಲುವುದು ಅಸಾಧ್ಯದ ಮಾತು. ಹೌದು, ನಾವು ಇದನ್ನು ಹೇಳುತ್ತಿಲ್ಲ ಬದಲಿಗೆ ಐಪಿಎಲ್ ಇತಿಹಾಸ ಈ ಮಾತನ್ನು ಹೇಳುತ್ತಿದೆ. ಈ ಇತಿಹಾಸ ನಿಜವಾಗಬೇಕಾದರೆ, ನಾವು ನಾಳಿನ ಪಂದ್ಯದವರೆಗೆ ಕಾಯಲೇಬೇಕಿದೆ. ಐಪಿಎಲ್ 2021 ರ ಆರಂಭವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಪಂದ್ಯಾವಳಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದ್ದು ಈ ಪಂದ್ಯದಲ್ಲಿ ಗೆಲ್ಲುವ ತಂಡವಾಗಿ ಆರ್​ಸಿಬಿ ಹೊರಹೊಮ್ಮಿದೆ. ಇದಕ್ಕೆ ಕಾರಣವೂ ಇದೆ.

ಐಪಿಎಲ್ 2021 ರ ಮೂಲಕ ಪಂದ್ಯಾವಳಿ ಎರಡು ವರ್ಷಗಳ ನಂತರ ಭಾರತಕ್ಕೆ ಮರಳುತ್ತಿದೆ. ಕೊನೆಯ ಬಾರಿಗೆ ಐಪಿಎಲ್ 2019 ಅನ್ನು ಭಾರತೀಯ ನೆಲದಲ್ಲಿ ಆಡಲಾಯಿತು. ನಂತರ ಐಪಿಎಲ್ 2020 ಯುಎಇಯಲ್ಲಿ ನಡೆಯಿತು. ಆದರೆ, ಎರಡು ವರ್ಷಗಳ ನಂತರ ಭಾರತಕ್ಕೆ ಮರಳುತ್ತಿರುವ ಪಂದ್ಯಾವಳಿ, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ಸೋಲಿನೊಂದಿಗೆ ಪ್ರಾರಂಭವಾಗಬಹುದು.

ಎಂಐ 2013 ರಿಂದ ಆರಂಭಿಕ ಪಂದ್ಯವನ್ನು ಗೆದ್ದಿಲ್ಲ
ಆರ್ಸಿಬಿ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲಿಗೆ ಸಾಕ್ಷಿಯಾದ ಇತಿಹಾಸ ಏನು? ವಾಸ್ತವವಾಗಿ, 2013 ರಿಂದ ಮುಂಬೈ ಇಂಡಿಯನ್ಸ್ ಐಪಿಎಲ್ ಆರಂಭಿಕ ಪಂದ್ಯವನ್ನು ಗೆದ್ದಿಲ್ಲ. 2013 ರ ಐಪಿಎಲ್ ಆವೃತ್ತಿಯಲ್ಲಿಯೂ ಅವರು ಆರ್‌ಸಿಬಿಯ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಆಗ ರಿಕಿ ಪಾಂಟಿಂಗ್ ಆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರು. ಮತ್ತು ಜಸ್ಪ್ರೀತ್ ಬುಮ್ರಾ ಚೊಚ್ಚಲ ಪ್ರವೇಶ ಮಾಡಿದರು. 2013 ರಿಂದ, 7 ಐಪಿಎಲ್ ಆವೃತ್ತಿಗಳು ಕಳೆದಿವೆ, ಆದರೆ ಮುಂಬೈ ಇಂಡಿಯನ್ಸ್ ಇಲ್ಲಿಯವರೆಗೆ ಐಪಿಎಲ್ ಆರಂಭಿಕ ಪಂದ್ಯವನ್ನು ಗೆದ್ದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈಗ 8 ನೇ ಆವೃತ್ತಿಯಲ್ಲಿ, ಇತಿಹಾಸವು ಬದಲಾಗುತ್ತದಾ? ಅಥವಾ ಎಂದಿನಂತೆ ಅದೇ ಪಲಿತಾಂಶ ಪುನರಾವರ್ತನೆಯಾಗುತ್ತದ? ಎಂಬುದನ್ನು ಕಾದು ನೋಡಬೇಕಿದೆ.

ಚೆನ್ನೈನಲ್ಲಿ ರೋಹಿತ್​ಗಿಲ್ಲ ಸರಿಸಾಟಿ
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಈ ಇತಿಹಾಸವನ್ನು ಗಮನಿಸಿದಾಗ, ಚೆನ್ನೈನಲ್ಲಿ ನಾಯಕ ರೋಹಿತ್ ಶರ್ಮಾ ಅವರ ಗೆಲುವಿಗೆ ಸಂಬಂಧಿಸಿದಂತೆ ಇದು ಬ್ರೇಕ್ ಹಾಕುತ್ತಿರುವಂತೆ ತೋರುತ್ತದೆ. ವಾಸ್ತವವಾಗಿ, ಮುಂಬೈ ಇಂಡಿಯನ್ಸ್ ತಂಡ ರೋಹಿತ್ ನೇತೃತ್ವದಲ್ಲಿ ಚೆನ್ನೈನಲ್ಲಿ 3 ಪಂದ್ಯಗಳನ್ನು ಆಡಿದ್ದು, ಈ ಮೂರೂ ಪಂದ್ಯಗಳಲ್ಲಿ ಗೆದ್ದಿದೆ. ಅಂದರೆ, ಸೋಲು ಹಿಟ್‌ಮ್ಯಾನ್‌ನಿಂದ ದೂರವಿದೆ. ಆದರೆ, ಕಳೆದ 7 ವರ್ಷಗಳಿಂದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳುವ ಅಭ್ಯಾಸ ಮುಂದುವರಿದರೆ, ಈ ಬಾರಿ ಚೆನ್ನೈನಲ್ಲಿ ರೋಹಿತ್ ಅವರ ಅಜೇಯ ಅಭಿಯಾನವು ಮುಕ್ತಾಯವಾಗಲಿದೆ.

ಇದನ್ನೂ ಓದಿ:IPL 2021: 49ಬಾಲ್​ಗಳಲ್ಲಿ 104ರನ್! ದೇಸಿ ಕ್ರಿಕೆಟ್​ನಲ್ಲಿ ರನ್ ಮಳೆ ಹರಿಸಿರುವ ರಜತ್​ಗೆ ಆರ್​ಸಿಬಿ ತಂಡದಲ್ಲಿ ಸಿಗುತ್ತಾ ಅವಕಾಶ?

Published On - 2:52 pm, Thu, 8 April 21