ಸರಣಿ ಗೆದ್ದ ಪಾಕಿಸ್ತಾನ: ಐಪಿಎಲ್ಗಾಗಿ ದೇಶ ತೊರೆದ ದಕ್ಷಿಣ ಆಫ್ರಿಕಾ ಆಟಗಾರರ ಮೇಲೆ ಸಿಟ್ಟಾದ ಶಾಹಿದ್ ಅಫ್ರಿದಿ!
ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಸರಣಿ ಮಧ್ಯದಲ್ಲಿ ಆಟಗಾರರಿಗೆ ಐಪಿಎಲ್ ಆಡಲು ಅವಕಾಶ ನೀಡಿದ್ದನ್ನು ನೋಡಿ ಆಶ್ಚರ್ಯವಾಯಿತು ಎಂದರು. ಜೊತೆಗೆ ಒಂದು ದೇಶಿ ಟಿ 20 ಲೀಗ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೇಲುಗೈ ಸಾಧಿಸುತ್ತಿರುವುದು ಒಳ್ಳೆಯದಲ್ಲ ಎಂದಿದ್ದಾರೆ.
ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಭಾರತದ ಟಿ20 ಲೀಗ್ ಐಪಿಎಲ್ ಮೇಲೆ ಯಾಕೋ ಮುನಿದವರಂತೆ ಕಾಣಿಸತೋಡಗಿದ್ದಾರೆ. ಐಪಿಎಲ್ ಮೇಲೆ ತಮ್ಮ ಕೋಪವನ್ನು ಹೊರಹಾಕಿರುವ ಅಫ್ರಿದಿ, ಪರೋಕ್ಷವಾಗಿ ದಕ್ಷಿಣ ಆಫ್ರಿಕಾ ತಂಡವನ್ನು ದೂರುವ ಮೂಲಕ ಭಾರತದ ವಿರುದ್ದ ತಮ್ಮ ವಾಗ್ದಾಳಿ ಆರಂಭಿಸಿದ್ದಾರೆ. ನಿನ್ನೆಗೆ ಅಂತ್ಯವಾದ ಪಾಕಿಸ್ತಾನ- ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ 2-1 ರಿಂದ ಗೆದ್ದುಕೊಂಡಿತು. ತಾಯ್ನಾಡಿನ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಅಫ್ರಿದಿ ತಂಡಕ್ಕೆ ಶುಭಾಷಯ ತಿಳಿಸಿದ್ದಾರೆ. ಜೊತೆಗೆ ಅಂತಿಮ ಪಂದ್ಯಕ್ಕೆ ಆಫ್ರಿಕಾ ತಂಡದಲ್ಲಿ ಪ್ರಮುಖ ಆಟಗಾರರು ಇಲ್ಲದಿರುವುದನ್ನು ಶಾಹಿದ್ ಕಟ್ಟುವಾಗಿ ಟೀಕಿಸಿದ್ದಾರೆ. ಅಫ್ರಿದಿ ಈ ಕೋಪಕ್ಕೆ ಕಾರಣವಾಗಿರುವುದೇ ಐಪಿಎಲ್. ನಾಳೆಯಿಂದ ಐಪಿಎಲ್ ಆರಂಭವಾಗಲಿದ್ದು, ಇದರ ಪ್ರಯುಕ್ತ ದಕ್ಷಿಣ ಆಫ್ರಿಕಾ ತಂಡದಲ್ಲಿದ್ದ ಪ್ರಮುಖ ಆಟಗಾರರು ಅಂತಿಮ ಪಂದ್ಯದಿಂದ ಹೊರನಡೆದು ಭಾರತದತ್ತ ಪ್ರಯಾಣ ಬೆಳೆಸಿದ್ದಾರೆ. ಇದರಿಂದಾಗಿ ಸೌತ್ ಆಫ್ರಿಕಾ ತಂಡ ಪ್ರಮುಖ ಆಟಗಾರರ ಅಲಭ್ಯತೆಯಿಂದ ಪಂದ್ಯವನ್ನು ಕಳೆದುಕೊಂಡಿತು.
7 ವಿಕೆಟ್ ಕಳೆದುಕೊಂಡು 320 ರನ್ ಗಳಿಸಿತು ಏಕದಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಪಾಕಿಸ್ತಾನ ಸರಣಿಯನ್ನು ಗೆದ್ದಿದೆ. ಈ ಪಂದ್ಯವನ್ನು ಅವರು 28 ರನ್‌ಗಳಿಂದ ಗೆದ್ದರು. ಪಾಕಿಸ್ತಾನ ಮೊದಲು 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 320 ರನ್ ಗಳಿಸಿತು. ಎರಡನೇ ಏಕದಿನ ಪಂದ್ಯದಲ್ಲಿ 193 ರನ್‌ಗಳ ದೊಡ್ಡ ಇನ್ನಿಂಗ್ಸ್ ಆಡಿದ ಫಖರ್ ಜಮಾನ್, ಮೂರನೇ ಏಕದಿನ ಪಂದ್ಯದಲ್ಲಿ ಮತ್ತೊಮ್ಮೆ 101 ರನ್ ಗಳಿಸಿದರು. ಅದೇ ಸಮಯದಲ್ಲಿ, ನಾಯಕ ಬಾಬರ್ ಅಜಮ್ 82 ಎಸೆತಗಳಲ್ಲಿ 94 ರನ್ ಗಳಿಸಿ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಇದಲ್ಲದೆ, ಇಮಾಮ್-ಉಲ್-ಹಕ್ ಅವರ 54 ರನ್ ಮತ್ತು ಹಸನ್ ಅಲಿಯ ಕೇವಲ 11 ಎಸೆತಗಳಲ್ಲಿ 32 ರನ್ ಸಹ ಕೊಡುಗೆ ನೀಡಿತು. ಇದು ದಕ್ಷಿಣ ಆಫ್ರಿಕಾದ ಮುಂದೆ 321 ರನ್ಗಳ ಗುರಿಯನ್ನು ಹೊಂದಲು ಪಾಕಿಸ್ತಾನಕ್ಕೆ ಸಹಾಯ ಮಾಡಿತು.
ಪಾಕಿಸ್ತಾನ ಏಕದಿನ ಸರಣಿಯನ್ನು 2-1ರಿಂದ ಗೆದ್ದುಕೊಂಡಿತು ಪ್ರತಿಕ್ರಿಯೆಯಾಗಿ, ಆತಿಥೇಯ ದಕ್ಷಿಣ ಆಫ್ರಿಕಾ ಈ ಗುರಿಯನ್ನು ಭೇದಿಸಲು ಪ್ರಾರಂಭಿಸಿತು. ಜೊತೆಗೆ ಉತ್ತಮ ಆರಂಭವನ್ನು ಪಡೆಯಿತು. ಆದರೆ ಮದ್ಯಮ ಕ್ರಮಾಂಕ ಸರಿಯಾದ ಪ್ರತಿರೋದ ತೊರದಿರುವುದರಿಂದ ದಕ್ಷಿಣ ಆಫ್ರಿಕಾವು 49.3 ಓವರ್‌ಗಳಲ್ಲಿ ಕೇವಲ 294 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ರೀತಿಯಾಗಿ ಪಾಕಿಸ್ತಾನ 3 ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ಗೆದ್ದು ಸರಣಿ ತನ್ನದಾಗಿಸಿಕೊಂಡಿತು.
ಪಾಕಿಸ್ತಾನದ ಗೆಲುವಿಗೆ ಅಫ್ರಿದಿ ಅಭಿನಂದನೆ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಪಾಕಿಸ್ತಾನದ ಗೆಲುವಿನಿಂದ ಸಂತೋಷಪಟ್ಟರು. ಈ ಬಗ್ಗೆ ಟ್ವೀಟ್ ಮಾಡಿದ ಅಫ್ರಿದಿ, ಪಾಕಿಸ್ತಾನದ ಒಂದು ದೊಡ್ಡ ಸರಣಿ ಗೆಲುವಿಗೆ ಅಭಿನಂದನೆಗಳು ಎಂದಿದ್ದಾರೆ. ಫಖರ್ ಬಲವಾದ ಇನ್ನಿಂಗ್ಸ್ ಆಡಿ ಮತ್ತೆ ಒಂದು ಶತಕ ಬಾರಿಸುವುದನ್ನು ನೋಡಿ ಸಂತೋಷವಾಯಿತು. ಬಾಬರ್ ಮತ್ತೊಮ್ಮೆ ತನ್ನ ಸಾಮಥ್ರ್ಯವನ್ನು ತೋರಿಸಿದ್ದಾನೆ. ಬೌಲಿಂಗ್‌ಗೆ ಸಹ ಉತ್ತಮವಾಗಿತ್ತು ಎಂದಿದ್ದಾರೆ.
ಐಪಿಎಲ್ ಮೇಲೆ ಕೋಪಗೊಂಡ ಅಫ್ರಿದಿ ಇದರ ನಂತರ ಶಾಹಿದ್ ಅಫ್ರಿದಿ ಬರೆದದ್ದು ಐಪಿಎಲ್‌ನ ನೇರ ಗುರಿಯಾಗಿಸಿಕೊಂಡು. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯನ್ನು ಶಪಿಸಿದ ಅಫ್ರಿದಿ. ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ಗೈರಾಗಿ ಐಪಿಎಲ್ ಆಡಲಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟ್‌ನ ಪ್ರಸಿದ್ದ ಆಟಗಾರರ ಬಗ್ಗೆ ಕೋಪಗೊಂಡ ಶಾಹಿದ್ ಅಫ್ರಿದಿ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಸರಣಿ ಮಧ್ಯದಲ್ಲಿ ಆಟಗಾರರಿಗೆ ಐಪಿಎಲ್ ಆಡಲು ಅವಕಾಶ ನೀಡಿದ್ದನ್ನು ನೋಡಿ ಆಶ್ಚರ್ಯವಾಯಿತು ಎಂದರು. ಜೊತೆಗೆ ಒಂದು ದೇಶಿ ಟಿ 20 ಲೀಗ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೇಲುಗೈ ಸಾಧಿಸುತ್ತಿರುವುದು ಒಳ್ಳೆಯದಲ್ಲ ಎಂದಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಯೋಚಿಸುವ ಅವಶ್ಯಕತೆಯಿದೆ ಎಂದರು.
ಇದನ್ನೂ ಓದಿ:Sugar price in Pakistan: ಭಾರತದಿಂದ ಆಮದು ನಿಷೇಧಿಸಿದ ಪಾಕಿಸ್ತಾನದಲ್ಲಿ ಸಕ್ಕರೆ ಕೇಜಿಗೆ 100 PKR