IPL 2021: ನಾನೀಗಲೂ ಅತೀ ವೇಗದ ಚಿರತೆ! ಆರ್ಸಿಬಿ ಜರ್ಸಿ ತೊಟ್ಟು, ಕೊಹ್ಲಿ- ಎಬಿಡಿಗೆ ಚಾಲೆಂಜ್ ಹಾಕಿದ ಬೋಲ್ಟ್
IPL 2021: ಆರ್‌ಸಿಬಿ ಜೆರ್ಸಿ ಧರಿಸಿ ಪೋಸ್ ನೀಡಿರುವ ಉಸೇನ್ ಬೋಲ್ಟ್, ಟ್ವೀಟ್ ಮೂಲಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಕಾಲೆಳೆದಿದ್ದಾರೆ.
ಐಪಿಎಲ್ ಆರಂಭಕ್ಕೆ ಇನ್ನ ಕೇವಲ ಒಂದೇ ಒಂದು ದಿನ ಬಾಕಿ ಇದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಹೀಗಾಗಿ ಲಕ್ಷಾಂತರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಎಲ್ಲಾ ತಂಡಗಳಿಗೆ ಹೋಲಿಸಿ ನೋಡಿದರೆ, ಆರ್ಸಿಬಿಗೆ ಅಭಿಮಾನಿಗಳ ಬಳಗ ಕೊಂಚ ಹೆಚ್ಚಾಗಿಯೇ ಇದೆ. ಸುಪ್ರಸಿದ್ದ ಆಟಗಾರರು, ಸೆಲಬ್ರೆಟಿಗಳು ಆರ್ಸಿಬಿ ತಂಡಕ್ಕೆ ತಮ್ಮ ಬೆಂಬಲ ಘೋಷಿಸಿವೆ. ಹೀಗಾಗಿ ಪ್ರಸಿದ್ಧ ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಅವರು ಆರ್ಸಿಬಿ ಜರ್ಸಿ ತೊಟ್ಟಿರುವ ತಮ್ಮ ಫೋಟೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಮತ್ತು ಇಡೀ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಬೆಂಬಲವನ್ನು ನೀಡಿದ್ದಾರೆ.
ನಾನೀಗಲೂ ವಿಶ್ವದಲ್ಲಿ ಅತಿ ವೇಗದ ಚಿರತೆ ಬೋಲ್ಟ್ ಮತ್ತು ಕೊಹ್ಲಿ ಜಾಗತಿಕ ಕ್ರೀಡಾ ಉಡುಪು ಬ್ರಾಂಡ್ ಪೂಮಾದೊಂದಿಗೆ ಸಂಬಂಧ ಹೊಂದಿದ್ದಾರೆ. ಆರ್‌ಸಿಬಿ ಜೆರ್ಸಿ ಧರಿಸಿ ಪೋಸ್ ನೀಡಿರುವ ಉಸೇನ್ ಬೋಲ್ಟ್, ಟ್ವೀಟ್ ಮೂಲಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಕಾಲೆಳೆದಿದ್ದಾರೆ. ಮೈದಾನದಲ್ಲಿ ಯಾರು ಹೆಚ್ಚು ವೇಗಿ ಅನ್ನೋದನ್ನು ನೋಡೋಣ ಎಂದು ಬೋಲ್ಟ್ ಬರೆದುಕೊಂಡಿದ್ದಾರೆ. ಹಿಂದೊಮ್ಮೆ ಬೋಲ್ಟ್ ತನಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಲಭಿಸಿದ್ದರೆ ಆರ್‌ಸಿಬಿ ಪರ ಆಡಬಯಸುತ್ತೇನೆ ಎಂದಿದ್ದರು ಈ ಮೂಲಕ ಆರ್ಸಿಬಿ ತಂಡದ ಮೇಲಿರುವ ಅಭಿಮಾನವನ್ನು ಈ ರೀತಿ ವ್ಯಕ್ತಪಡಿಸಿದರು. ಬೋಲ್ಟ್ ಅವರ ಟ್ವೀಟ್‌ನಲ್ಲಿ, ‘ಚಾಲೆಂಜರ್‌ಗಳೆ, ನಾನೀಗಲೂ ವಿಶ್ವದಲ್ಲಿ ಅತಿ ವೇಗದ ಚಿರತೆ ಅನ್ನೋದನ್ನು ನಾನು ನಿಮಗೆ ತಿಳಿಸಬಯಸುತ್ತೇನೆ,’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೊಹ್ಲಿ ಮತ್ತು ಎಬಿಡಿಯನ್ನು ಈ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.
Challengers, just letting you know, I’m still the fastest cat around. @imVkohli @ABdeVilliers17 @pumacricket @RCBTweets pic.twitter.com/cIz3dmW3uI
— Usain St. Leo Bolt (@usainbolt) April 7, 2021
ಕೊಹ್ಲಿ, ಎಬಿಡಿ ರನ್ನಿಂಗ್ ಚಾಲೆಂಜ್ ಕೆಲವು ದಿನಗಳ ಹಿಂದೆ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿದ ನಂತರ ಕೊಹ್ಲಿ, ತಾವು ಥ್ರೆಡ್‌ಮಿಲ್ ಮೇಲೆ ಓಡುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿ ವಿಶ್ರಾಂತಿಯೇ ಇಲ್ಲ. ಇಲ್ಲಿಂದ ಏನಿದ್ದರೂ ವೇಗಕ್ಕೆ ಪ್ರಾಮುಖ್ಯತೆ ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಬಿಡಿ, ನಿಮ್ಮ ಲಯ ಖುಷಿ ನೀಡುತ್ತಿದೆ. ತಂಡ ಸೇರಿಕೊಳ್ಳಲು ಹೊರಟಿದ್ದೇನೆ ಎಂದು, ತಾವು ಬ್ಯಾಗ್ ತೋಟ್ಟಿರುವ ಫೋಟೋವೊಂದನ್ನು ಹರಿಬಿಟ್ಟರು. ಇದಕ್ಕೆ ಉತ್ತರಿಸಿದ ಕೊಹ್ಲಿ, ನೀವು ವಿಕೆಟ್ಸ್ ಮಧ್ಯೆ ಈಗಲೂ ಅತಿವೇಗದ ಓಟಗಾರರಾಗಿದ್ದೀರಿ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಬಿಡಿ ನಾಳೆ ಇಬ್ಬರು ಒಟ್ಟಿಗೆ ಓಡಿ ಪರೀಕ್ಷಿಸೋಣ ಎಂದಿದ್ದರು. ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 2021 ಓಪನರ್ ಏಪ್ರಿಲ್ 9 ರಂದು ನಡೆಯಲಿದೆ.
ದೇವದತ್ ಪಡಿಕ್ಕಲ್ ಅನುಪಸ್ಥಿತಿ ಮೊದಲ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಅವರ ಅನುಪಸ್ಥಿತಿಯು ದೊಡ್ಡ ಹೊಡೆತವಾಗಿದೆ. ಕರ್ನಾಟಕ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಲ್ಕು ಶತಕಗಳು ಮತ್ತು ಮೂರು ಅರ್ಧಶತಕಗಳನ್ನು ಒಳಗೊಂಡಂತೆ ಏಳು ಇನ್ನಿಂಗ್ಸ್‌ಗಳಲ್ಲಿ 737 ರನ್ ಗಳಿಸಿದ್ದಾರೆ. ಪಡಿಕ್ಕಲ್ ತಮ್ಮ ಐಪಿಎಲ್ 2020ಯಲ್ಲಿ ಉತ್ತಮವಾಗಿ ಆಡಿದ್ದರು. 15 ಪಂದ್ಯಗಳಲ್ಲಿ 31.33 ಸರಾಸರಿಯಲ್ಲಿ 473 ರನ್ ಗಳಿಸಿದ್ದಾರೆ. ಈ ಬಾರಿ ವಿರಾಟ್ ಕೊಹ್ಲಿ ಅವರು ಆರ್ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿಯಲ್ಲಿದ್ದೇನೆ ಎಂದು ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ:IPL 2021: ಐಪಿಎಲ್ 14ನೇ ಆವೃತ್ತಿಯಲ್ಲಿ ಆರ್ಸಿಬಿ ಪರ ಕಣಕ್ಕಿಳಿಯಲ್ಲಿರುವ 4 ವಿದೇಶಿ ಆಟಗಾರರು ಇವರೆ!