Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಐಪಿಎಲ್​ 14ನೇ ಆವೃತ್ತಿಯಲ್ಲಿ ಆರ್​​ಸಿಬಿ ಪರ ಕಣಕ್ಕಿಳಿಯಲ್ಲಿರುವ 4 ವಿದೇಶಿ ಆಟಗಾರರು ಇವರೆ!

IPL 2021: ಈ ಬಾರಿಯ ಐಪಿಎಲ್ನಲ್ಲಿ ಪರಿಪೂರ್ಣವಾದ ತಂಡದೊಂದಿಗೆ ಕಣಕ್ಕಿಳಿಯುವುದು ನಮ್ಮ ಮೊದಲ ಗುರಿ ಎಂದು ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

IPL 2021: ಐಪಿಎಲ್​ 14ನೇ ಆವೃತ್ತಿಯಲ್ಲಿ ಆರ್​​ಸಿಬಿ ಪರ ಕಣಕ್ಕಿಳಿಯಲ್ಲಿರುವ 4 ವಿದೇಶಿ ಆಟಗಾರರು ಇವರೆ!
ಆರ್​ಸಿಬಿ ತಂಡ
Follow us
ಪೃಥ್ವಿಶಂಕರ
|

Updated on: Apr 07, 2021 | 4:09 PM

ಈ ಬಾರಿಯ ಐಪಿಎಲ್ನಲ್ಲಿ ಪರಿಪೂರ್ಣವಾದ ತಂಡದೊಂದಿಗೆ ಕಣಕ್ಕಿಳಿಯುವುದು ನಮ್ಮ ಮೊದಲ ಗುರಿ ಎಂದು ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಇದೇ ಕಾರಣಕ್ಕೆ ವಿರಾಟ್, ಆಡುವ ಹನ್ನೊಂದರ ಬಳಗದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಆಲ್ರೌಂಡರ್ ವಿಭಾಗದಲ್ಲಿ ಸಮನ್ವಯ ಸಾಧಿಸಿ, ಬಲಿಷ್ಟ ತಂಡ ಕಟ್ಟಲು ಕೊಹ್ಲಿ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ವಿರಾಟ್, ಮೊದಲಿಗೆ ತಂಡದಲ್ಲಿ ಆಡುವ ನಾಲ್ಕು ಮಂದಿ ವಿದೇಶಿ ಆಟಗಾರರ ವಿಚಾರದಲ್ಲಿ, ಅಳೆದು ತೂಗಿ ಲೆಕ್ಕಾಚಾರ ಹಾಕಿದ್ದಾರೆ. ಹಾಗಾದ್ರೆ ಈ ಸೀಸನ್ನಲ್ಲಿ ಆರ್ಸಿಬಿ ತಂಡದಲ್ಲಿ ಬಹುತೇಕವಾಗಿ ಆಡುವ ಆ ನಾಲ್ಕು ಮಂದಿ ವಿದೇಶಿ ಆಟಗಾರ್ಯಾರು? ವಿರಾಟ್ ಯಾವ ಮಾನದಂಡದ ಮೇಲೆ ಆ ನಾಲ್ವರು ಆಟಗಾರರಿಗೆ ಮಣೆ ಹಾಕಿದ್ದಾರೆ ಅನ್ನೋದನ್ನ ಬನ್ನಿ ನೋಡೋಣ.

ವಿದೇಶಿ ಆಟಗಾರ ನಂ.1 ಎಬಿ ಡಿವಿಲಿಯರ್ಸ್ ಕಳೆದ 10 ವರ್ಷಗಳಿಂದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, ಆರ್ಸಿಬಿ ತಂಡದಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಆರ್ಸಿಬಿ ಸೋಲು ಗೆಲುವನ್ನ ನಿರ್ಧರಿಸೋದೇ ಎಬಿಡಿ. ಹೀಗಾಗಿ ಮಿಸ್ಟರ್ 360 ಬ್ಯಾಟ್ಸ್ಮನ್ನ ವಿಚಾರದಲ್ಲಿ ವಿರಾಟ್, ಯಾವ ಮಾನದಂಡವನ್ನು ಪ್ರಯೋಗಿಸಿಲ್ಲ. ಹೀಗಾಗಿ ಎಬಿಡಿ ಆರ್ಸಿಬಿ ತಂಡದಲ್ಲಿರುವ ಖಾಯಂ ವಿದೇಶಿ ಆಟಗಾರನಾಗಿದ್ದಾರೆ.

ವಿದೇಶಿ ಆಟಗಾರ ನಂ.2 ಗ್ಲೇನ್ ಮ್ಯಾಕ್ಸ್​ವೆಲ್ ಕಳೆದ ಸೀಸನ್ನಲ್ಲಿ ವಿರಾಟ್ ಆಲ್ರೌಂಡರ್ ಕೋಟಾದಲ್ಲಿ ಕೈ ಸುಟ್ಟುಕೊಂಡಿದ್ರು. ಇಂಗ್ಲೆಂಡ್ನ ಮೋಯಿನ್ ಅಲಿ, ಶಿವಂ ದುಬೆ, ಗುರುಕೀರತ್ ಸಿಂಗ್ ಕ್ಯಾಪ್ಟನ್ ಕೊಹ್ಲಿಗೆ ನಿರಾಸೆ ಮಾಡಿದ್ರು. ಹೀಗಾಗಿ ಈ ಬಾರಿ ಆಲ್ರೌಂಡರ್ ಕೋಟಾಕ್ಕೆ ಪಂದ್ಯದ ದಿಕ್ಕು ಬದಲಿಸುವ ಆಟಗಾರನನ್ನೇ ವಿರಾಟ್ ಆಯ್ಕೆ ಮಾಡಿದ್ದಾರೆ. ಆತ ಬೇರ್ಯಾರೂ ಅಲ್ಲ.. ಆಸ್ಟ್ರೇಲಿಯಾದ ಬಿಗ್ ಹಿಟ್ಟರ್ ಗ್ಲೇನ್ ಮ್ಯಾಕ್ಸ್​ವೆಲ್.

ಈಗಾಗಲೇ ಚೆನ್ನೈನಲ್ಲಿ ಆರ್ಸಿಬಿ ತಂಡವನ್ನ ಸೇರಿಕೊಂಡಿರುವ ಗ್ಲೇನ್ ಮ್ಯಾಕ್ಸ್​ವೆಲ್, ಭರ್ಜರಿ ತಾಲೀಮು ನಡೆಸಿತ್ತಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ಕೂಡ ಮ್ಯಾಕ್ಸಿ ಜೊತೆಗೆ ಸುದೀರ್ಘವಾದ ಚರ್ಚೆ ನಡೆಸಿದೆ. ಇದರರ್ಥ ಮ್ಯಾಕ್ಸಿ, ಆಲ್ರೌಂಡರ್ ಕೋಟಾದಲ್ಲಿ ಆರ್ಸಿಬಿ ತಂಡವನ್ನ ಸೇರಿಕೊಳ್ಳುವ 2ನೇ ವಿದೇಶಿ ಆಟಗಾರನಾಗಿದ್ದಾರೆ.

ವಿದೇಶಿ ಆಟಗಾರ ನಂ.3 ಡೇನಿಯಲ್ ಕ್ರಿಶ್ಚಿಯನ್ ಮ್ಯಾಕ್ಸ್​ವೆಲ್ ಬ್ಯಾಟಿಂಗ್ ಆಲ್ರೌಂಡರ್ ಕೋಟಾದಲ್ಲಿ ಆರ್ಸಿಬಿ ತಂಡವನ್ನ ಸೇರಿಕೊಂಡ್ರೆ, ಡೇನಿಯಲ್ ಕ್ರಿಶ್ಚಿಯನ್ ಆಲ್ರೌಂಡರ್ ಕೋಟಾದಲ್ಲಿ ಆರ್ಸಿಬಿ ತಂಡವನ್ನ ಸೇರಿಕೊಳ್ಳುವ ಮೂರನೇ ವಿದೇಶಿ ಆಟಗಾರನಾಗಿದ್ದಾರೆ. ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಪಂದ್ಯಕ್ಕೆ ತಿರುವು ನೀಡುವ ಆಸ್ಟ್ರೇಲಿಯಾದ ಡೇನ್ ಕ್ರಿಶ್ಚಿಯನ್, ಟಿಟ್ವೆಂಟಿ ಕ್ರಿಕೆಟ್ಗೆ ಹೇಳಿ ಮಾಡಿಸಿದ ಕ್ರಿಕೆಟಿಗ. ಬಿಗ್ಬ್ಯಾಷ್ ಲೀಗ್ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿರುವ ಡೇನ್, ಈ ಬಾರಿ ಆರ್ಸಿಬಿಯ ಆಡುವ ಹನ್ನೊಂದರ ಬಳಗದಲ್ಲಿರಲಿದ್ದಾರೆ. ಯಾಕಂದ್ರೆ ಆರ್ಸಿಬಿ, ಬ್ಯಾಟಿಂಗ್ ವಿಭಾಗದಲ್ಲಿ ತಾನು ಮತ್ತು ಎಬಿಡಿ ಮೇಲೆ ಹೆಚ್ಚು ಅವಲಂಬಿತವಾಗಿದೆ ಅನ್ನೋದು ಕೊಹ್ಲಿಗೆ ಗೊತ್ತಿದೆ. ಹೀಗಾಗಿ ವಿರಾಟ್, ಮ್ಯಾಕ್ಸಿ ಜೊತೆಯಲ್ಲೇ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನ ಬಲಿಷ್ಠಗೊಳಿಸಲು ಕ್ರಿಶ್ಚಿಯನ್ಗೆ ಮಣೆ ಹಾಕಲಿದ್ದಾರೆ..

ವಿದೇಶಿ ಆಟಗಾರ ನಂ.4 ಕೈಲ್ ಜೆಮಿಸನ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ಬರೋಬ್ಬರಿ $15 ಕೋಟಿ ಕೊಟ್ಟು ನ್ಯೂಜಿಲೆಂಡ್ನ ವೇಗಿ ಕೈಲ್ ಜೆಮಿಸನ್ರನ್ನ ಖರೀದಿ ಮಾಡಿದೆ. ಕಳೆದ ಸೀಸನ್ನಲ್ಲಿ ಆರ್ಸಿಬಿ ಡೆತ್ ಓವರ್ಗಳಲ್ಲಿ ರನ್ ಬಿಟ್ಟು ಕೊಟ್ಟು ಮುಗ್ಗರಿಸಿತ್ತು. ಹೀಗಾಗಿ ಡೆತ್ ಒವರ್ಗಳಲ್ಲಿ ಎದುರಾಳಿಗಳಿಗೆ ಕಡಿವಾಣ ಹಾಕಲೆಂದೇ, ಜೆಮಿಸನ್ರನ್ನ ಖರೀದಿ ಮಾಡಿದೆ. ಎಫೆಕ್ಟೀವ್ ಬೌಲಿಂಗ್ ಜತೆಯಲ್ಲೇ ಜೆಮಿಸನ್ ಬ್ಯಾಟಿಂಗ್ನಲ್ಲೂ ತಂಡಕ್ಕೆ ಆಧಾರವಾಗುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಕಳೆದ ಸೀಸನ್ನಲ್ಲಿ ಇಸುರು ಉದಾನಾ, ಡೇಲ್ ಸ್ಟೇನ್ ದುಬಾರಿಯಾಗಿದ್ರು. ಹೀಗಾಗಿ ಜೆಮಿಸನ್ ಆರ್ಸಿಬಿ ತಂಡದಲ್ಲಿ ನಾಲ್ಕನೇ ವಿದೇಶಿ ಆಟಗಾರನಾಗಿ ಆಯ್ಕೆಯಾಗೋದ್ರಲ್ಲಿ ಅನುಮಾನವೇ ಇಲ್ಲ.

ಇನ್ನು ಕಳೆದ ಸೀಸನ್ನಲ್ಲಿ ಆಡಿದ್ದ ಌಡಮ್ ಜಂಪಾ, ಚಹಲ್ ಮುಂದೆ ದೊಡ್ಡ ಆಯ್ಕೆಯಲ್ಲ. ಹಾಗೇ ಹೊಸದಾಗಿ ತಂಡವನ್ನ ಸೇರಿಕೊಂಡಿರುವ ಆಸ್ಟ್ರೇಲಿಯಾದ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡಸನ್ ಮತ್ತು ನ್ಯೂಜಿಲೆಂಡ್ನ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಫಿನ್ ಅಲೆನ್, ಕೊಹ್ಲಿಗೆ ಹೆಚ್ಚುವರಿ ಆಯ್ಕೆಯ ಆಟಗಾರರಾಗಿರಲಿದ್ದಾರೆ.

ಇದನ್ನೂ ಓದಿ:IPL 2021: ಪಡಿಕ್ಕಲ್​ಗೆ ಗಂಭೀರ್ ರೋಲ್ ಮಾಡೆಲ್ ಅಂತೆ! ಆರ್ಸಿಬಿ ಪರ ಆಡಲು ಹೆಮ್ಮೆ ಪಡುತ್ತೇನೆ ಎಂದ ಎಬಿ ಡಿವಿಲಿಯರ್ಸ್!

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ