IPL 2021: ಪಡಿಕ್ಕಲ್ಗೆ ಗಂಭೀರ್ ರೋಲ್ ಮಾಡೆಲ್ ಅಂತೆ! ಆರ್ಸಿಬಿ ಪರ ಆಡಲು ಹೆಮ್ಮೆ ಪಡುತ್ತೇನೆ ಎಂದ ಎಬಿ ಡಿವಿಲಿಯರ್ಸ್!
IPL 2021: ನಾನು ಆರ್ಸಿಬಿ ಪರ ಆಡಲು ತುಂಬಾ ಹೆಮ್ಮೆ ಪಡುತ್ತೇನೆ. ವಿಶ್ವದಲ್ಲೇ ಅದ್ಭುತವಾದ ಅಭಿಮಾನಿಗಳು ಆರ್ಸಿಬಿ ತಂಡಕ್ಕಿದ್ದಾರೆ. ಅದ್ರಲ್ಲೂ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆಡಲು ತುಂಬಾ ಖುಷಿಯಾಗುತ್ತೆ
ಐಪಿಎಲ್ ಆರಂಭವಾಗಲು ಇನ್ನೇನೂ ಕೆಲವೇ ದಿನಗಳು ಬಾಕಿ ಇದ್ದು ಎಲ್ಲಾ ತಂಡಗಳು ಅಂತಿಮ ಹಂತದ ತಯಾರಿಯಲ್ಲಿವೆ. ಪ್ರತಿ ತಂಡಗಳಿಗೂ ಕೊರೊನಾ ಆತಂಕ ಹೆಚ್ಚಾಗಿದ್ದು ಇದರ ಹೊರತಾಗಿಯೂ ಪ್ರತಿ ತಂಡಗಳು ಪ್ರತಿ ದಿನ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿವೆ. ತಂಡದ ಕೆಲವು ಆಟಗಾರರು ಬ್ಯಾಟಿಂಗ್ ಹಾಗೂ ಬೌಲಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದರೆ, ಇನ್ನೂ ಕೆಲವು ತಂಡಗಳು ಕ್ರಿಕೆಟ್ ಆಟವನ್ನು ಹೊರತುಪಡಿಸಿ ವಾಲಿಬಾಲ್ ಮೊರೆಹೋಗಿದ್ದಾರೆ. ತಾನೂ ಆರ್ಸಿಬಿ ಆಟುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಆರ್ಸಿಬಿ ಆರಂಭಿಕ ಆಟಗಾರ ಎಬಿಡಿ ಹೇಳಿಕೊಂಡಿದ್ದಾರೆ. ಹೀಗೆ ಐಪಿಎಲ್ಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳು ಇಲ್ಲಿವೆ.
ಪಡಿಕ್ಕಲ್ಗೆ ಗಂಭೀರ್ ರೋಲ್ ಮಾಡೆಲ್ ಆರ್ಸಿಬಿ ತಂಡದಲ್ಲಿರುವ ನಮ್ಮ ಹೆಮ್ಮೆಯ ಕನ್ನಡಿಗ ದೇವದತ್ ಪಡಿಕ್ಕಲ್, ಗೌತಮ್ ಗಂಭೀರ್ ತಮ್ಮ ಕ್ರಿಕೆಟ್ ಬದುಕಿನ ರೋಲ್ ಮಾಡೆಲ್ ಎಂದಿದ್ದಾರೆ. ಗಂಭೀರ್ ಅವರ ಆಟದ ವಿಡಿಯೋಗಳನ್ನು ನಾನು ಈಗಲೂ ನೋಡುತ್ತಿರುತ್ತೇನೆ ಎಂದು ಪಡಿಕ್ಕಲ್ ಹೇಳಿದ್ದಾರೆ.
ಆರ್ಸಿಬಿ ಪರ ಆಡಲು ಹೆಮ್ಮೆ ಪಡುತ್ತೇನೆ ನಾನು ಆರ್ಸಿಬಿ ಪರ ಆಡಲು ತುಂಬಾ ಹೆಮ್ಮೆ ಪಡುತ್ತೇನೆ. ವಿಶ್ವದಲ್ಲೇ ಅದ್ಭುತವಾದ ಅಭಿಮಾನಿಗಳು ಆರ್ಸಿಬಿ ತಂಡಕ್ಕಿದ್ದಾರೆ. ಅದ್ರಲ್ಲೂ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆಡಲು ತುಂಬಾ ಖುಷಿಯಾಗುತ್ತೆ ಎಂದು, ಆರ್ಸಿಬಿ ತಂಡದಲ್ಲಿರುವ ಮಿಸ್ಟರ್ ತ್ರಿಸಿಕ್ಸ್ಟಿ ಬ್ಯಾಟ್ಸ್ಮನ್ ಎಬಿ. ಡಿವಿಲಿಯರ್ಸ್ ತಿಳಿಸಿದ್ದಾರೆ.
ಚಮಕ್ ತೋರಿಸಲು ಚಹಲ್ ರೆಡಿ ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಅದ್ಭುತ ಬೌಲಿಂಗ್ ಮಾಡಿ ಮಿಂಚಿದ್ದ ಯಜ್ವಿಂದರ್ ಚಹಲ್, ಈ ಸೀಸನ್ನಲ್ಲೂ ಅದ್ಭುತ ಸ್ಪೆಲ್ ಮಾಡುವ ವಿಶ್ವಾಸದಲ್ಲಿದ್ದಾರೆ. ಆರ್ಸಿಬಿ ತಂಡದೊಂದಿಗುರುವ ಚಹಲ್, ಚೆನ್ನೈನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
ನಮ್ಮ ಹುಡುಗರು ಫಾರ್ಮ್ನಲ್ಲಿದ್ದಾರೆ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಪ್ರತಿಯೊಬ್ಬ ಆಟಗಾರನು ಅದ್ಭುತ ಫಾರ್ಮ್ನಲ್ಲಿದ್ದಾನೆ. ಈ ಬಾರಿ ಐಪಿಎಲ್ನಲ್ಲಿ ಹೈದ್ರಾಬಾದ್ ಅದ್ಭುತ ಪ್ರದರ್ಶನ ನೀಡಲಿದೆ. ಪ್ರತಿಯೊಬ್ಬ ಆಟಗಾರನು ಎಸ್ಆರ್ಎಚ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಲಿದ್ದಾನೆ ಎಂದು, ಹೆಡ್ ಕೋಚ್ ಟ್ರಾವೆರ್ ಬೈಲಾಸಿಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ..
ಕೋಚಿಂಗ್ ಸ್ಟಾಫ್ ಬಲಿಷ್ಠವಾಗಿದೆ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಕೋಚಿಂಗ್ ಸ್ಟಾಫ್ ಬಲಿಷ್ಟವಾಗಿದೆ. ಪ್ರತಿಯೊಬ್ಬ ಆಟಗಾರನಿಂದಲೂ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ಹೊರ ತಗೆಯುವಲ್ಲಿ ಯಶಸ್ವಿಯಾಗುತ್ತಾರೆ ಎಂಬ ನಂಬಿಕೆ ನನಗಿದೆ ಎಂದು, ಹೈದ್ರಾಬಾದ್ ತಂಡದ ನಿರ್ದೇಶಕ ಟಾಮ್ ಮೂಡಿ ಹೇಳಿದ್ದಾರೆ.
ಧೋನಿ ಬಳಗ ಸೇರಿದ ಡುಪ್ಲೆಸಿಸ್ ದಕ್ಷಿಣ ಆಫ್ರಿಕಾದ ಫಾ ಡುಪ್ಲೆಸಿಸ್ ಕ್ವಾರಂಟೈನ್ ಪೂರೈಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಸೇರಿಕೊಂಡಿದ್ದಾರೆ. ತಮ್ಮ ಮೊದಲ ದಿನದ ಅಭ್ಯಾಸದಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿದ ಡುಪ್ಲೆಸಿಸ್, ಕೋಚ್ ಸ್ಟೀಫನ್ ಫ್ಲೆಮಿಂಗ್ ಜೊತೆಗೆ ಚರ್ಚಿಸಿದ್ದಾರೆ.
ವಾಲಿಬಾಲ್ ಆಡಿದ ಮುಂಬೈ ಆಟಗಾರರು ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ವಾಲಿಬಾಲ್ ಆಡಿ ಎಂಜಾಯ್ ಮಾಡಿದ್ದಾರೆ. ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯಾ, ಅರ್ಜುನ್ ತೆಂಡುಲ್ಕರ್ ಮತ್ತು ಇಶಾನ್ ಕಿಶನ್, ತಂಡದ ಆಟಗಾರರೊಂದಿಗೆ ವಾಲಿಬಾಲ್ ಆಡಿ ಮಸ್ತಿ ಮಾಡಿದ್ದಾರೆ. ಎಫ್ರಿಲ್ 9ರಂದು ಮುಂಬೈ ಆರ್ಸಿಬಿ ವಿರುದ್ಧ ಮುಖಾಮುಖಿಯಾಗಲಿದೆ.
P??L & GAMES – The #MI way! ?
Take a look at how our team is bonding off the field ahead of the #IPL2021 ?#OneFamily #MumbaiIndians pic.twitter.com/3TpytiMC3I
— Mumbai Indians (@mipaltan) April 6, 2021
ಕಿರಣ್ ಮೋರೆಗೆ ಕೊರೊನಾ ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾನ್ವೇಶಕ ಹಾಗೂ ವಿಕೆಟ್ ಕೀಪಿಂಗ್ ಕನ್ಸಲ್ಟೆಂಟ್ ಆಗಿರುವ ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಕಿರಣ್ ಮೋರೆಗೆ ಸೋಂಕು ತಗುಲಿರುವ ವಿಚಾರವನ್ನ ಮುಂಬೈ ಇಂಡಿಯನ್ಸ್ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದೆ.
ಬೂಮ್ರಾ ಯಾರ್ಕರ್ ಅಭ್ಯಾಸ ಇತ್ತಿಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ಮುಂಬೈ ಇಂಡಿಯನ್ಸ್ ತಂಡವನ್ನ ಸೇರಿಕೊಂಡಿದ್ದಾರೆ. ಚೆನ್ನೈನಲ್ಲಿರುವ ಬೂಮ್ರಾ, ಯಾರ್ಕರ್ ಬೌಲಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನ ಮುಂಬೈ ಫ್ರಾಂಚೈಸಿ ಹಂಚಿಕೊಂಡಿದೆ.
BOOM…ED! ?#OneFamily #MumbaiIndians #MI #IPL2021 @Jaspritbumrah93 pic.twitter.com/8P6OrZJysq
— Mumbai Indians (@mipaltan) April 4, 2021