AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಚಿಕ್ಕ ವಯಸ್ಸಿನಲ್ಲಿ ನಾಯಕತ್ವ ವಹಿಸಿಕೊಳ್ಳುವುದು ಸುಲಭದ ಮಾತಲ್ಲ! ಪಂತ್​ ಬಗ್ಗೆ ಕಪಿಲ್​ ದೇವ್​ ಹೀಗೆ ಹೇಳಿದ್ಯಾಕೆ?

IPL 2021: ತಂಡದಲ್ಲಿ ಅನೇಕ ಹಿರಿಯ ಆಟಗಾರರು ಇರುವಾಗ ಇದು ಸುಲಭದ ಕೆಲಸವಲ್ಲ. ಡಿಸಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ಎಲ್ಲಾ ಜನರು ಆತನನ್ನು ದೂಷಿಸಬಹುದು.

IPL 2021: ಚಿಕ್ಕ ವಯಸ್ಸಿನಲ್ಲಿ ನಾಯಕತ್ವ ವಹಿಸಿಕೊಳ್ಳುವುದು ಸುಲಭದ ಮಾತಲ್ಲ! ಪಂತ್​ ಬಗ್ಗೆ ಕಪಿಲ್​ ದೇವ್​ ಹೀಗೆ ಹೇಳಿದ್ಯಾಕೆ?
ರಿಷಭ್ ಪಂತ್
Follow us
ಪೃಥ್ವಿಶಂಕರ
|

Updated on:Apr 07, 2021 | 12:58 PM

23 ವರ್ಷದ ರಿಷಭ್ ಪಂತ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಮೊದಲ ನಾಯಕತ್ವದ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಏಕೆಂದರೆ ತಂಡದ ನಾಯಕ ಶ್ರೇಯಸ್ ಅಯ್ಯರ್ ಭುಜದ ಗಾಯದಿಂದ ಈ ಆವೃತ್ತಿಯಿಂದ ಹೊರಗುಳಿಯಲ್ಲಿದ್ದಾರೆ. ಆದರಿಂದ ತಮ್ಮ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಆವೃತ್ತಿಗೆ ಹೊಸ ನಾಯಕನನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿದರು. ಕಳೆದ ಕೆಲವು ತಿಂಗಳುಗಳಿಂದ ಅಂತರರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಪಂತ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅನೇಕ ಪಂದ್ಯಗಳನ್ನು ಅವರು ಏಕಾಂಗಿ ಹೋರಾಟ ನಡೆಸಿ ಗೆಲ್ಲಿಸಿದ್ದಾರೆ. ಆದರೆ, ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಐಪಿಎಲ್‌ನಲ್ಲಿ ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳುವುದು ಸುಲಭವಲ್ಲ ಎಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ನಾಯಕತ್ವದೊಂದಿಗೆ ಜವಾಬ್ದಾರಿ ಬರುತ್ತದೆ ಈ ಬಗ್ಗೆ ಮಾತಾನಾಡಿದ ಭಾರತದ ಮಾಜಿ ನಾಯಕ ಕಪಿಲ್ ದೇವ್, ಪಂತ್ ಕ್ಯಾಪ್ಟನ್ ಆಗಿದ್ದಾರೆ, ಅದಕ್ಕಿಂತ ಹೆಚ್ಚು ಸುರಕ್ಷಿತವಾದದ್ದು ಯಾವುದು. ಆದರೆ ನಾಯಕತ್ವದೊಂದಿಗೆ ಜವಾಬ್ದಾರಿ ಬರುತ್ತದೆ, ಪಂತ್‌ಗೆ ಅದು ಸುಲಭವಲ್ಲ. ಅವನ ನಿರ್ಭೀತ ಆಟವನ್ನು ಮುಂದುವರೆಸಬೇಕೆಂದು ನಾನು ಬಯಸಿದ್ದೆ ಆದರೆ ಮುಂದಿನ ದಿನಗಳಲ್ಲಿ ನಾಯಕನಾಗಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದೆಂದು ಮ್ಯಾನೇಜ್‌ಮೆಂಟ್ ಭಾವಿಸಿದೆ. ಈ ಆವೃತ್ತಿಯಲ್ಲಿ ಈ ಜವಾಬ್ದಾರಿಯ ಫಲಿತಾಂಶಕ್ಕಾಗಿ ನಾವು ಕಾಯಬೇಕಾಗಿದೆ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ಪಂತ್ ತಂಡವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ನಾವು ಗಮನಹರಿಸಬೇಕು. ಆದರೆ ತಂಡದಲ್ಲಿ ಅನೇಕ ಹಿರಿಯ ಆಟಗಾರರು ಇರುವಾಗ ಇದು ಸುಲಭದ ಕೆಲಸವಲ್ಲ. ಡಿಸಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ಎಲ್ಲಾ ಜನರು ಆತನನ್ನು ದೂಷಿಸಬಹುದು. ಸಮಯ ಕಳೆದಂತೆ, ಅವರು ಎಲ್ಲಾ ನ್ಯೂನತೆಗಳಿಂದ ಹೊರಬರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.

ಹಿರಿಯ ಆಟಗಾರರು ಬೆಂಬಲಿಸಿದರೆ ಅದು ಅವರಿಗೆ ಕಷ್ಟವಾಗುವುದಿಲ್ಲ ಭಾರತೀಯ ವಿಶ್ವಕಪ್ ವಿಜೇತ ಮಾಜಿ ನಾಯಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಆರಂಭಿಕ ದಿನಗಳಲ್ಲಿ ಇದೇ ರೀತಿಯ ಸವಾಲನ್ನು ಎದುರಿಸಿದ್ದರು ಎಂದು ಹೇಳಿದರು. ಗುಂಡಪ್ಪ ವಿಶ್ವನಾಥ್, ದಿಲೀಪ್ ವೆಂಗ್ಸಾರ್ಕರ್ ಮತ್ತು ಮದನ್ ಲಾಲ್ ಮುಂತಾದ ಅನುಭವಿ ಆಟಗಾರರನ್ನು ಹೊಂದಿದ್ದ ತಂಡವನ್ನು ಮುನ್ನಡೆಸಿದ್ದರಿಂದ ದೇವ್ ಅವರನ್ನು 23 ನೇ ವಯಸ್ಸಿನಲ್ಲಿ ಭಾರತೀಯ ನಾಯಕ ಎಂದು ಹೆಸರಿಸಲಾಯಿತು. ಹಿರಿಯ ಆಟಗಾರರು ಅವರನ್ನು ಬೆಂಬಲಿಸಿದರೆ ಅದು ಅವರಿಗೆ ಕಷ್ಟವಾಗುವುದಿಲ್ಲ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಕ್ಯಾಪ್ಟನ್ ಆಗಿದ್ದ ಅನುಭವವೂ ನನಗಿದೆ ಎಂದು ಭಾರತದ ಮಾಜಿ ನಾಯಕ ಹೇಳಿದ್ದಾರೆ.

ರಿಕಿ ಪಾಂಟಿಂಗ್ ಡ್ರೆಸ್ಸಿಂಗ್ ಕೋಣೆಯಲ್ಲಿ ಮಾತ್ರ ಆಟವನ್ನು ನಿಯಂತ್ರಿಸಬಹುದು. ತಂಡವು ಮೈದಾನದಿಂದ ಹೊರಬಂದ ನಂತರ, ಇದು ನಾಯಕನ ಚಿಂತನೆಯ ಪ್ರಕ್ರಿಯೆಯಾಗಿದೆ. ಮತ್ತು ಅನುಭವಿ ಆಟಗಾರರಾದ ರಹಾನೆ ಮತ್ತು ಧವನ್ ಯುವ ನಾಯಕನನ್ನು ಬೆಂಬಲಿಸಬೇಕಾಗುತ್ತದೆ ಎಂದು ದೇವ್ ಹೇಳಿದರು.

ಇದನ್ನೂ ಓದಿ:IPL 2021: ಒಂದೇ ಇನಿಂಗ್ಸ್.. ರಾತ್ರೋ ರಾತ್ರಿ ಸ್ಟಾರ್ ಆದ ಆರ್​ಸಿಬಿ ಆಟಗಾರ ಅಜರ್! ಅಜರುದ್ದೀನ್ ಹೆಸರಿನ ಹಿಂದಿದೆ ರೋಚಕ ಸ್ಟೋರಿ!

Published On - 12:53 pm, Wed, 7 April 21

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ