IPL 2021: 100 ದೇಶಗಳ ಡಿಜಿಟಲ್ ಪ್ರಸಾರದ ಹಕ್ಕು ಯುಪ್​ ಟಿವಿ ಪಾಲು! ಭಾರತೀಯರಿಗಿಲ್ಲ ಕಡಿಮೆ ದರದಲ್ಲಿ ಐಪಿಎಲ್ ವೀಕ್ಷಿಸುವ ಭಾಗ್ಯ

IPL 2021: ಭಾರತದಲ್ಲಿ ಯುಪ್​ ಟಿವಿ ಸದಸ್ಯತ್ವ ತಿಂಗಳಿಗೆ 49 ರೂ ನೀಡಿ ಪಡೆಯಬಹುದಾಗಿದೆ. ಮತ್ತು ಜೂಮ್, ಟೈಮ್ಸ್ ನೌ, ಎನ್‌ಡಿಟಿವಿ ಇಂಡಿಯಾ, ಆಜ್ ತಕ್, ಮತ್ತು ಇನ್ನೂ ಅನೇಕ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ.

IPL 2021: 100 ದೇಶಗಳ ಡಿಜಿಟಲ್ ಪ್ರಸಾರದ ಹಕ್ಕು ಯುಪ್​ ಟಿವಿ ಪಾಲು! ಭಾರತೀಯರಿಗಿಲ್ಲ ಕಡಿಮೆ ದರದಲ್ಲಿ ಐಪಿಎಲ್ ವೀಕ್ಷಿಸುವ ಭಾಗ್ಯ
ಯುಪ್​ ಟಿವಿ
Follow us
ಪೃಥ್ವಿಶಂಕರ
|

Updated on: Apr 07, 2021 | 1:54 PM

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಗಾಗಿ ಯುಪ್​ ಟಿವಿ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯ ಮೂಲಕ ಹಂಚಿಕೊಂಡಿದೆ. ಯುಪ್​ ಟಿವಿ ಚಂದಾದಾರರು ಈಗ ಏಪ್ರಿಲ್ 9 ರಿಂದ ಐಪಿಎಲ್ 2021 ಕ್ಕೆ ನಿಗದಿಯಾಗಿರುವ ಎಲ್ಲಾ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಸುಮಾರು 100 ದೇಶಗಳ ಅಭಿಮಾನಿಗಳು ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಆಟವನ್ನು ಮೈದಾನಕ್ಕೆ ಹೋಗಿ ವೀಕ್ಷಿಸುವಂತಿಲ್ಲ. ಆದರಿಂದ ಪಂದ್ಯಗಳನ್ನು ಲೈವ್​ ಸ್ಟಿಮಿಂಗ್​ ಮುಖಾಂತರ ನೇರಪ್ರಸಾರ ವೀಕ್ಷಿಸಬಹುದಾಗಿದೆ.

100 ದೇಶಗಳಿಗೆ ಪ್ರಸಾರ ಮಾಡುವುದಾಗಿ ಯುಪ್​ ಟಿವಿ ಪ್ರಕಟಿಸಿದೆ ವಿವೋ ಐಪಿಎಲ್ 2021 ಅನ್ನು ಆಸ್ಟ್ರೇಲಿಯಾ, ಭೂತಾನ್, ಕಾಂಟಿನೆಂಟಲ್ ಯುರೋಪ್, ಮಧ್ಯ ಮತ್ತು ದಕ್ಷಿಣ ಅಮೆರಿಕಾ, ಮಧ್ಯ ಏಷ್ಯಾ, ಶ್ರೀಲಂಕಾ, ಆಗ್ನೇಯ ಏಷ್ಯಾ (ಸಿಂಗಾಪುರ ಮತ್ತು ಮಲೇಷ್ಯಾ ಹೊರತುಪಡಿಸಿ), ಮಾಲ್ಡೀವ್ಸ್ ಮತ್ತು ನೇಪಾಳದ 100 ದೇಶಗಳಿಗೆ ಪ್ರಸಾರ ಮಾಡುವುದಾಗಿ ಯುಪ್​ ಟಿವಿ ಪ್ರಕಟಿಸಿದೆ. ಎಲ್ಲಾ 60 ಟ್ವೆಂಟಿ -20 ಪಂದ್ಯಗಳು ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತಾ, ಮತ್ತು ಮುಂಬೈ ಸೇರಿದಂತೆ ಭಾರತದ ವಿವಿಧ ಸ್ಥಳಗಳಲ್ಲಿ ನಡೆಯಲಿವೆ. ಪ್ಲೇಆಫ್ ಪಂದ್ಯಗಳು ಮತ್ತು ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಯುಪ್ ಟಿವಿ ದೇಶದ ಕ್ರೀಡೆಗಳ ಬೆಳವಣಿಗೆಗೆ ಬದ್ಧವಾಗಿದೆ ಮತ್ತು ಕ್ರಿಕೆಟ್ ಶಕ್ತಿಯಿಂದ ಮುಂದುವರಿಯುತ್ತದೆ. ನಮ್ಮ ಬಳಕೆದಾರರು ತಮ್ಮ ಮನೆಗಳಲ್ಲೇ ನೈಜ ಸಮಯದಲ್ಲಿ ತಮ್ಮ ನೆಚ್ಚಿನ ಕ್ರೀಡಾಕೂಟವನ್ನು ಆನಂದಿಸಬಹುದು ಎಂದು ಯುಪ್ ಟಿವಿಯ ಸ್ಥಾಪಕ ಮತ್ತು ಸಿಇಒ ಉದಯ್ ರೆಡ್ಡಿ ಹೇಳಿದರು.

ಐಪಿಎಲ್ 2021 ಭಾರತದಲ್ಲಿ ಲೈವ್ ವೀಕ್ಷಿಸುವುದು ಹೇಗೆ ಭಾರತದಲ್ಲಿ ಯುಪ್​ ಟಿವಿ ಸದಸ್ಯತ್ವ ತಿಂಗಳಿಗೆ 49 ರೂ ನೀಡಿ ಪಡೆಯಬಹುದಾಗಿದೆ. ಮತ್ತು ಜೂಮ್, ಟೈಮ್ಸ್ ನೌ, ಎನ್‌ಡಿಟಿವಿ ಇಂಡಿಯಾ, ಆಜ್ ತಕ್, ಮತ್ತು ಇನ್ನೂ ಅನೇಕ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ. ಜೊತೆಗೆ ಹಲವಾರು ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳು ಹಾಗೂ 14 ಭಾಷಾ ಆಯ್ಕೆಗಳಿವೆ. ಆದಾಗ್ಯೂ, ದೇಶದಲ್ಲಿ ಐಪಿಎಲ್ 2021 ಗಾಗಿ ಡಿಸ್ನಿ + ಹಾಟ್‌ಸ್ಟಾರ್‌ಗೆ ವಿಶೇಷ ರೈಟ್ಸ್​ ಇರುವುದರಿಂದ ಪಂದ್ಯಗಳನ್ನು ಯುಪ್ ಟಿವಿ ಮೂಲಕ ಭಾರತದಲ್ಲಿ ಸ್ಟ್ರೀಮ್ ಮಾಡಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಭಾರತದಲ್ಲಿ, ನೀವು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಮಾತ್ರ ಐಪಿಎಲ್ ಅನ್ನು ನೇರ ಪ್ರಸಾರ ಮಾಡಬಹುದು. ಸ್ಟಾರ್ ಇಂಡಿಯಾದ ಸ್ಪೋರ್ಟ್ಸ್ ಚಾನೆಲ್ ಕ್ಯಾಟಲಾಗ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೀವು ಪಂದ್ಯಗಳನ್ನು ವೀಕ್ಷಿಸಬಹುದು.

ಐಪಿಎಲ್‌ನ 14 ನೇ ಆವೃತ್ತಿಯಲ್ಲಿ ವಿವೋ ಐಪಿಎಲ್ 2021 ಒಟ್ಟು 60 ಪಂದ್ಯಗಳು ಎಂಟು ತಂಡಗಳ ನಡುವೆ ನಡೆಯುತ್ತಿದ್ದು, ಇದು ಏಪ್ರಿಲ್ 9 ರಿಂದ ಸಂಜೆ 7: 30 ಕ್ಕೆ ಪ್ರಾರಂಭವಾಗಲಿದೆ. ಅಭಿಮಾನಿಗಳು ಯುಪ್​ ಟಿವಿ ವೆಬ್‌ಸೈಟ್‌ನಲ್ಲಿ ಐಪಿಎಲ್ 2021 ಅನ್ನು ಸ್ಟ್ರೀಮ್ ಮಾಡಬಹುದು ಅಥವಾ ತಮ್ಮ ಸ್ಮಾರ್ಟ್‌ಫೋನ್ ಅಥವಾ ಸ್ಮಾರ್ಟ್ ಟಿವಿಯಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು.

29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ