IPL 2021: ಪಂಜಾಬ್​ ಸೋಲಿಗೆ ಕಾರಣರಾದ್ರ ಮೊಹಮ್ಮದ್ ಶಮಿ? ಈ ಫೋಟೋ ನೋಡಿದರೆ ನಿಮಗೂ ಅನುಮಾನ ಮೂಡದೇ ಇರದು!

|

Updated on: Apr 17, 2021 | 6:46 PM

IPL 2021: ಈ ಚಿತ್ರದಲ್ಲಿ ಸಿಎಸ್‌ಕೆ ವೇಗದ ಬೌಲರ್ ದೀಪಕ್ ಚಹರ್ ಅವರು ಪಂಜಾಬ್ ಕಿಂಗ್ಸ್ ಬೌಲರ್ ಮೊಹಮ್ಮದ್ ಶಮಿ ಅವರ ಪಾದಗಳನ್ನು ಮುಟ್ಟಿ ಅವರ ಆಶೀರ್ವಾದವನ್ನು ತೆಗೆದುಕೊಳ್ಳುತ್ತಿದ್ದಾರೆ.

IPL 2021: ಪಂಜಾಬ್​ ಸೋಲಿಗೆ ಕಾರಣರಾದ್ರ ಮೊಹಮ್ಮದ್ ಶಮಿ? ಈ ಫೋಟೋ ನೋಡಿದರೆ ನಿಮಗೂ ಅನುಮಾನ ಮೂಡದೇ ಇರದು!
ಮೊಹಮ್ಮದ್ ಶಮಿ
Follow us on

ಐಪಿಎಲ್ 2021 ರಲ್ಲಿ ಪಂಜಾಬ್ ಕಿಂಗ್ಸ್ ತಮ್ಮ ಮೊದಲ ಪಂದ್ಯದ ಗೆಲುವಿನ ನಂತರ ಚೆನ್ನೈ ವಿರುದ್ಧ ಹೀನಾಯವಾಗಿ ಸೋತು ಸುಣ್ಣವಾಗಿದೆ. ಆದರೆ ಮೊಹಮ್ಮದ್ ಶಮಿ ಅವರ ಕಾರಣದಿಂದಾಗಿ ಪಂಜಾಬ್​ ಸೋಲಬೇಕಾಯಿತ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಅದಕ್ಕೆ ಪೂರಕ ಎಂಬಂತೆ ಸಾಕ್ಷಿ ಕೂಡ ಸಿಕ್ಕಿದೆ. ಆದರೆ, ಈ ಚಿತ್ರದ ಸಂಪೂರ್ಣ ಸತ್ಯವನ್ನು ಅರ್ಥಮಾಡಿಕೊಳ್ಳುವ ಮೊದಲು ನೀವು ಪಂದ್ಯದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಬೇಕು. ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ ಕೇವಲ 106 ರನ್ ಗಳಿಸಲು ಸಾಧ್ಯವಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಚೆನ್ನೈ ಕೇವಲ 14.2 ಓವರ್‌ಗಳಲ್ಲಿ ಗುರಿ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ, ಚೆನ್ನೈನ ರನ್‌ರೇಟ್ ಸುಧಾರಿಸಿತು ಮಾತ್ರವಲ್ಲದೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ 3 ಸ್ಥಾನಗಳನ್ನು ಗಳಿಸಿತು.

ಚಿತ್ರದ ಸಂಪೂರ್ಣ ಸತ್ಯ!
ಈಗ ಪಂದ್ಯದಿಂದ ಹೊರಬಂದು ಚಿತ್ರದ ಬಗ್ಗೆ ಚರ್ಚೆ ಮಾಡೋಣ. ಶಮಿ ಅವರ ಈ ಚಿತ್ರವು ಪಂದ್ಯ ಆರಂಭಕ್ಕೂ ಮುನ್ನವೇ ತೆಗೆಯಲಾಗಿದೆ. ಈ ಚಿತ್ರದಲ್ಲಿ ಸಿಎಸ್‌ಕೆ ವೇಗದ ಬೌಲರ್ ದೀಪಕ್ ಚಹರ್ ಅವರು ಪಂಜಾಬ್ ಕಿಂಗ್ಸ್ ಬೌಲರ್ ಮೊಹಮ್ಮದ್ ಶಮಿ ಅವರ ಪಾದಗಳನ್ನು ಮುಟ್ಟಿ ಅವರ ಆಶೀರ್ವಾದವನ್ನು ತೆಗೆದುಕೊಳ್ಳುತ್ತಿದ್ದಾರೆ.

ಶಮಿಯ ಆಶೀರ್ವಾದ ಪರಿಣಾಮ ಬೀರಿರಬಹುದ?
ಶಾಮಿಯಂತಹ ಹಿರಿಯ ಬೌಲರ್‌ ಆಶೀರ್ವದಿಸಿದರೆ, ಅದು ಕೂಡ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿರಬಹುದು. ಪಂದ್ಯದಲ್ಲಿ ದೀಪಕ್ ಚಹರ್ 4 ಓವರ್‌ಗಳಲ್ಲಿ 13 ರನ್‌ಗಳಿಗೆ 4 ವಿಕೆಟ್ ಪಡೆದರು. ಅವರು ಒಟ್ಟು 24 ಎಸೆತಗಳನ್ನು ಎಸೆದರು, ಇದರಲ್ಲಿ 18 ಎಸೆತಗಳು ಚುಕ್ಕೆ ಎಸೆತಗಳಾಗಿವೆ. ಈ ಪರಿಣಾಮಕಾರಿ ಬೌಲಿಂಗ್ ಪಂಜಾಬ್ ಕಿಂಗ್ಸ್ನ ಬ್ಯಾಟಿಂಗ್​ ವಿಭಾಗವನ್ನು ಬೇಗನೆ ಪೆವಿಲಿಯನ್​ಗೆ ಅಟ್ಟಿತು. ಏಕೆಂದರೆ ಚಹರ್ ಅವರ 4 ವಿಕೆಟ್‌ಗಳಲ್ಲಿ ಪಂಜಾಬ್‌ನ ಟಾಪ್ ಆರ್ಡರ್‌ನ ಎಲ್ಲ ದೊಡ್ಡ ಬ್ಯಾಟ್ಸ್‌ಮನ್‌ಗಳು ಸೇರಿದ್ದರು.

ಶಮಿ ಕಾಲ್ಮುಟ್ಟಿ ಆರ್ಶೀವಾದ ಪಡೆದ ದೀಪಕ್ ಚಹರ್

ಶಮಿ ಕೂಡ ಅದ್ಭುತವಾಗಿ ಬೌಲಿಂಗ್ ಮಾಡಿದರು
ಆಶೀರ್ವಾದ ಪಡೆದವರು ಮಾತ್ರ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ತಮ್ಮ ತಂಡದ ಯಶಸ್ವಿ ಬೌಲರ್ ಆಗಿದ್ದರೆ, ಆಶೀರ್ವಾದವನ್ನು ನೀಡಿದ ಶಮಿ ಕೂಡ ತಂಡದ ಅತ್ಯುತ್ತಮ ಬೌಲರ್ ಆಗಿದ್ದರು. ಪಂದ್ಯದಲ್ಲಿ 4 ಓವರ್‌ಗಳ ಬೌಲಿಂಗ್‌ನಲ್ಲಿ ಶಮಿ 21 ರನ್‌ಗಳಿಗೆ 2 ವಿಕೆಟ್ ಪಡೆದರು.