MI vs SRH Predicted Playing 11: ಸನ್​ರೈಸರ್ಸ್- ಮುಂಬೈ ಇಂಡಿಯನ್ಸ್ ಮುಖಾಮುಖಿ; ತಂಡದಲ್ಲಿ ಏನೇನು ಬದಲಾವಣೆ?

MI vs SRH Predicted Playing 11: ಸನ್​ರೈಸರ್ಸ್- ಮುಂಬೈ ಇಂಡಿಯನ್ಸ್ ಮುಖಾಮುಖಿ; ತಂಡದಲ್ಲಿ ಏನೇನು ಬದಲಾವಣೆ?
ಮುಂಬೈ ಇಂಡಿಯನ್ಸ್- ಸನ್​ರೈಸರ್ಸ್ ಹೈದರಾಬಾದ್

1 ಪಂದ್ಯದಲ್ಲಿ ಸೋಲು, 1 ಪಂದ್ಯದಲ್ಲಿ ಗೆಲುವು ಕಂಡಿರುವ ಮುಂಬೈ ಇಂಡಿಯನ್ಸ್ ತಂಡ ತಾನಾಡಿದ ಎರಡೂ ಪಂದ್ಯದಲ್ಲಿ ಸೋತ ಸನ್​ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣೆಸಾಡಲಿದೆ.

TV9kannada Web Team

| Edited By: ganapathi bhat

Nov 30, 2021 | 12:19 PM

ಐಪಿಎಲ್ 2021 ಟೂರ್ನಿಯ 9ನೇ ಪಂದ್ಯ ಇಂದು (ಏಪ್ರಿಲ್ 17) ಸಂಜೆ 7.30ಕ್ಕೆ ಚೆನ್ನೈನ ಎಮ್.ಎ. ಚಿದಂಬರಂ ಮೈದಾನದಲ್ಲಿ ನಡೆಯಲಿದೆ. 1 ಪಂದ್ಯದಲ್ಲಿ ಸೋಲು, 1 ಪಂದ್ಯದಲ್ಲಿ ಗೆಲುವು ಕಂಡಿರುವ ಮುಂಬೈ ಇಂಡಿಯನ್ಸ್ ತಂಡ ತಾನಾಡಿದ ಎರಡೂ ಪಂದ್ಯದಲ್ಲಿ ಸೋತ ಸನ್​ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣೆಸಾಡಲಿದೆ. ಮೊದಲೆರಡು ಪಂದ್ಯದಲ್ಲಿ ಉತ್ತಮ ಆಟ ಆಡಿದ್ದರೂ ಸನ್​ರೈಸರ್ಸ್ ಸೋಲಿನ ಕಹಿಯನ್ನೇ ಕಂಡಿದೆ. ಮುಂಬೈ ಆರ್​ಸಿಬಿ ವಿರುದ್ಧ ಸೋತರೂ ನಂತರ ಕೋಲ್ಕತ್ತಾ ವಿರುದ್ಧ 10 ರನ್​ಗಳ ಗೆಲುವು ಕಂಡಿತ್ತು.

ಮುಂಬೈ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಬಲಿಷ್ಠವೇ ಆಗಿದೆ. ಈ ಮೊದಲ ಐಪಿಎಲ್ ಸರಣಿಗಳಲ್ಲಿ ಗೆದ್ದ ವಿಶ್ವಾಸವೂ ಮುಂಬೈಗಿದೆ. ರೋಹಿತ್ ಶರ್ಮಾ ನಾಯಕತ್ವದ ಬಗ್ಗೆಯೂ ಪ್ರಶಂಸೆ ಇದೆ. ಘಟಾನುಘಟಿ ಆಲ್​ರೌಂಡರ್ ಆಟಗಾರರು ತಂಡದಲ್ಲಿ ಇರುವುದು ತಂಡದ ಬಲ ಹೆಚ್ಚಿಸಿದೆ. ಒಂದು ಸೋಲು, ಒಂದು ಗೆಲುವು ಕಂಡು ಆಡುತ್ತಿರುವ ಮುಂಬೈ ಇಂದಿನ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಲಕ್ಷಣ ಕಾಣುತ್ತಿಲ್ಲ. ಅದೇ ತಂಡವನ್ನು ಮುಂಬೈ ಇಂದು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು.

ಸನ್​ರೈಸರ್ಸ್ ಹೈದರಾಬಾದ್ ತಂಡ ಶಹಬಾಜ್ ನದೀಮ್ ಬದಲು ಸಂದೀಪ್ ಶರ್ಮಾ ಆಡಿಸುವ ಸಾಧ್ಯತೆ ಇದೆ. ಉಳಿದಂತೆ ತಂಡದ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗೇ ಇದೆ. ಬ್ಯಾಟ್ಸ್​ಮನ್​ಗಳಿಂದ ರನ್ ಹೊಳೆ ಹರಿಯುವ ಅಗತ್ಯ ಸನ್​ರೈಸರ್ಸ್​ಗೆ ಇದೆಯಷ್ಟೆ. ಒಂದು ತಂಡವಾಗಿ ಗಮನಿಸಿದಾಗ ಹೈದರಾಬಾದ್ ಹೆಚ್ಚು ಸಂತುಲಿತವಾಗಿ ಕಾಣುವುದು ಸುಳ್ಳಲ್ಲ.

ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 1. ರೋಹಿತ್ ಶರ್ಮಾ (ನಾಯಕ) 2. ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) 3. ಸೂರ್ಯಕುಮಾರ್ ಯಾದವ್ 4. ಇಶಾನ್ ಕಿಶನ್ 5. ಹಾರ್ದಿಕ್ ಪಾಂಡ್ಯ 6. ಕೀರನ್ ಪೊಲಾರ್ಡ್ 7. ಕೃನಾಲ್ ಪಾಂಡ್ಯ 8. ಮಾರ್ಕೊ ಜಾನ್ಸೆನ್ 9. ರಾಹುಲ್ ಚಹರ್ 10. ಟ್ರೆಂಟ್ ಬೌಲ್ಟ್ 11. ಜಸ್ಪ್ರಿತ್ ಬುಮ್ರಾ

ಸನ್​ರೈಸರ್ಸ್ ಹೈದರಾಬಾದ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 1. ಡೇವಿಡ್ ವಾರ್ನರ್ (ನಾಯಕ) 2. ಜಾನಿ ಬೈರ್‌ಸ್ಟೋವ್ 3. ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್) 4. ಮನೀಶ್ ಪಾಂಡೆ 5. ಅಬ್ದುಲ್ ಸಮದ್ 6. ಜೇಸನ್ ಹೋಲ್ಡರ್ 7. ವಿಜಯ್ ಶಂಕರ್ 8. ರಶೀದ್ ಖಾನ್ 9. ಭುವನೇಶ್ವರ್ ಕುಮಾರ್ 10. ಸಂದೀಪ್ ಶರ್ಮಾ 11. ಟಿ ನಟರಾಜನ್

ಇದನ್ನೂ ಓದಿ: IPL 2021: ಸನ್​ರೈಸರ್ಸ್ ಹೈದರಾಬಾದ್​​ ಆಟಗಾರ ಮನೀಶ್​ ಪಾಂಡೆಗೆ ಇದು ಮಾಡು ಇಲ್ಲವೇ ಮಡಿ ಟೂರ್ನಿ!

ಇದನ್ನೂ ಓದಿ: MI vs SRH IPL 2021 Match Prediction: ಐಪಿಎಲ್ ಇತಿಹಾಸದಲ್ಲಿ ಚಾಂಪಿಯನ್ ಮುಂಬೈಗೆ ಸರಿಯಾಗಿಯೇ ಟಾಂಗ್​ ಕೊಟ್ಟಿದೆ ಹೈದರಾಬಾದ್!

(IPL 2021 MI vs SRH Predicted Playing 11 team prediction 9th match at Chennai)

Follow us on

Related Stories

Most Read Stories

Click on your DTH Provider to Add TV9 Kannada