MI vs SRH IPL 2021 Match Prediction: ಐಪಿಎಲ್ ಇತಿಹಾಸದಲ್ಲಿ ಚಾಂಪಿಯನ್ ಮುಂಬೈಗೆ ಸರಿಯಾಗಿಯೇ ಟಾಂಗ್​ ಕೊಟ್ಟಿದೆ ಹೈದರಾಬಾದ್!

MI vs SRH IPL match Prediction: ಮುಂಬೈ ಇಂಡಿಯನ್ಸ್ ಈ ಆವೃತ್ತಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಹೀಗಾಗಿ ಇಂದಿನ ಪಂದ್ಯವನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಮೇಲೆರುವ ತವಕದಲ್ಲಿದೆ.

MI vs SRH IPL 2021 Match Prediction: ಐಪಿಎಲ್ ಇತಿಹಾಸದಲ್ಲಿ ಚಾಂಪಿಯನ್ ಮುಂಬೈಗೆ ಸರಿಯಾಗಿಯೇ ಟಾಂಗ್​ ಕೊಟ್ಟಿದೆ ಹೈದರಾಬಾದ್!
ಡೇವಿಡ್ ವಾರ್ನರ್, ರೋಹಿತ್ ಶರ್ಮಾ

ಇಂಡಿಯನ್ ಪ್ರೀಮಿಯರ್ ಲೀಗ್‌ನ ನಡೆಯುತ್ತಿರುವ 14 ನೇ ಆವೃತ್ತಿಯ ಒಂಬತ್ತನೇ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಚೆನ್ನೈನಲ್ಲಿ ಇಂದು ನಡೆಯಲಿದೆ. ಬ್ಯಾಟಿಂಗ್ ಘಟಕವು ಎರಡೂ ತಂಡಗಳಲ್ಲೂ ಉತ್ತಮವಾಗಿದೆ. ಹೀಗಾಗಿ ಇದು ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಎರಡು ತಂಡಗಳಿಂದ ಜಿದ್ದಾಜಿದ್ದಿನ ಹೋರಾಟವನ್ನು ಕಾಣಬಹುದಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಆವೃತ್ತಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಹೀಗಾಗಿ ಇಂದಿನ ಪಂದ್ಯವನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಮೇಲೆರುವ ತವಕದಲ್ಲಿದೆ. ಆದರೆ ಹೈದರಾಬಾದ್​ ತಂಡ ಆಡಿರುವ ಎರಡು ಪಂದ್ಯದಲ್ಲಿ ಸೋತು, ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಎಂಐ vs ಎಸ್‌ಆರ್‌ಹೆಚ್ ಹೆಡ್ ಟು ಹೆಡ್ ರೆಕಾರ್ಡ್ಸ್

ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 16

ಎಂಐ ಗೆದ್ದ ಪಂದ್ಯಗಳು: 8

ಎಸ್‌ಆರ್‌ಹೆಚ್ ಗೆದ್ದ ಪಂದ್ಯಗಳು: 8

ಭಾರತದಲ್ಲಿ ಆಡಿದ ಪಂದ್ಯ: 13 (ಎಂಐ 7, ಎಸ್‌ಆರ್‌ಹೆಚ್ 6)

ಭಾರತದ ಹೊರಗೆ ಆಡಿದ ಪಂದ್ಯಗಳು: 3 (ಎಂಐ 1, ಎಸ್‌ಆರ್‌ಹೆಚ್ 2)

ಎಸ್‌ಆರ್‌ಹೆಚ್ ವಿರುದ್ಧ ಎಂಐ ಸರಾಸರಿ ಸ್ಕೋರ್: 145

ಎಂಐ ವಿರುದ್ಧ ಎಸ್‌ಆರ್‌ಹೆಚ್ ಸರಾಸರಿ ಸ್ಕೋರ್: 147

ಮುಂಬೈ ಪರ ಹೆಚ್ಚು ರನ್​ ಗಳಿಸಿದ ಆಟಗಾರ: ಕೀರನ್ ಪೊಲಾರ್ಡ್ (383)

ಎಸ್‌ಆರ್‌ಎಚ್‌ ಪರ ಹೆಚ್ಚು ರನ್​ ಗಳಿಸಿದ ಆಟಗಾರ : ಡೇವಿಡ್ ವಾರ್ನರ್ (488)

ಮುಂಬೈ ಪರ ಹೆಚ್ಚಿನ ವಿಕೆಟ್‌ಗಳು: ಜಸ್ಪ್ರಿತ್ ಬುಮ್ರಾ (12 ವಿಕೆಟ್)

ಎಸ್‌ಆರ್‌ಎಚ್‌ ಪರ ಹೆಚ್ಚಿನ ವಿಕೆಟ್‌ಗಳು: ಭುವನೇಶ್ವರ್ ಕುಮಾರ್ (16)

ಮುಂಬೈ ಪರ ಹೆಚ್ಚಿನ ಕ್ಯಾಚ್‌ಗಳು: ಕೀರನ್ ಪೊಲಾರ್ಡ್ (11 ಕ್ಯಾಚ್)

ಎಸ್‌ಆರ್‌ಎಚ್‌ ಪರ ಹೆಚ್ಚಿನ ಕ್ಯಾಚ್‌ಗಳು: ಭುವನೇಶ್ವರ್ ಕುಮಾರ್ (4 ಕ್ಯಾಚ್)

ಕಳೆದ ವರ್ಷ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ 150 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನಾಯಕ ಡೇವಿಡ್ ವಾರ್ನರ್ (ಔಟಾಗದೆ 85) ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ (ಔಟಾಗದೆ 58) ಅಜೇಯ 151 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಒಟ್ಟುಗೂಡಿಸಿ 10 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ರಾಹುಲ್ ಚಹರ್, ಮಾರ್ಕೊ ಜಾನ್ಸೆನ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ

ಬೆಂಚ್: ಅನ್ಮೋಲ್ಪ್ರೀತ್ ಸಿಂಗ್, ಸೌರಭ್ ತಿವಾರಿ, ಅನುಕುಲ್ ರಾಯ್, ಜೇಮ್ಸ್ ನೀಶಮ್, ಅರ್ಜುನ್ ತೆಂಡೂಲ್ಕರ್, ಪಿಯೂಷ್ ಚಾವ್ಲಾ, ನಾಥನ್ ಕೌಲ್ಟರ್ ನೈಲ್, ಆದಿತ್ಯ ತಾರೆ, ಜಯಂತ್ ಯಾದವ್, ಯುಧ್ವೀರ್ ಸಿಂಗ್, ಆಡಮ್ ಮಿಲ್ನೆ, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್, ಕ್ರಿಸ್ ಲಿನ್

ಸನ್‌ರೈಸರ್ಸ್ ಹೈದರಾಬಾದ್ ಡೇವಿಡ್ ವಾರ್ನರ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಜಾನಿ ಬೈರ್‌ಸ್ಟೋವ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ವಿಜಯ್ ಶಂಕರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಟಿ ನಟರಾಜನ್

ಬೆಂಚ್: ವಿರಾಟ್ ಸಿಂಗ್, ಜೇಸನ್ ರಾಯ್, ಕೇದಾರ್ ಜಾಧವ್, ಅಭಿಷೇಕ್ ಶರ್ಮಾ, ಮೊಹಮ್ಮದ್ ನಬಿ, ಶ್ರೀವಾತ್ಸ್ ಗೋಸ್ವಾಮಿ, ವೃದ್ಧಿಮಾನ್ ಸಹಾ, ಬೆಸಿಲ್ ಥಾಂಪಿ, ಜಗದೀಶಾ ಸುಚಿತ್, ಖಲೀಲ್ ಅಹ್ಮದ್, ಮುಜೀಬ್ ಉರ್ ರಹಮಾನ್, ಸಿದ್ಧಾರ್ಥ್ ಕೌಲ್, ಶಹಬಾಜ್ ನದೀಮ್

Click on your DTH Provider to Add TV9 Kannada