IPL 2021: ಆರ್​ಸಿಬಿಗೆ ಕೊರೊನಾ ಕಂಟಕ: ಪಡಿಕ್ಕಲ್​ ನಂತರ ತಂಡದ ಮತ್ತೊಬ್ಬ ಆಟಗಾರನಿಗೆ ವಕ್ಕರಿಸಿದ ಕೊರೊನಾ

|

Updated on: Apr 07, 2021 | 12:00 PM

IPL 2021: ತಂಡದ ಬೌಲರ್ ಡೇನಿಯಲ್ ಸೈಮ್ಸ್ ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಏಪ್ರಿಲ್ 7 ರ ಬುಧವಾರ ಬೆಳಿಗ್ಗೆ ಆರ್ಸಿಬಿ ಹೇಳಿಕೆ ನೀಡಿದ್ದು, ಸೈಮ್ಸ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

IPL 2021: ಆರ್​ಸಿಬಿಗೆ ಕೊರೊನಾ ಕಂಟಕ: ಪಡಿಕ್ಕಲ್​ ನಂತರ ತಂಡದ ಮತ್ತೊಬ್ಬ ಆಟಗಾರನಿಗೆ ವಕ್ಕರಿಸಿದ ಕೊರೊನಾ
ಆರ್​ಸಿಬಿ ತಂಡ
Follow us on

ಐಪಿಎಲ್ 2021 ಆವೃತ್ತಿ ಪ್ರಾರಂಭವಾಗಲು ಇನ್ನ 3 ದಿನಗಳು ಉಳಿದಿವೆ. ಆದರೆ ಅದಕ್ಕೂ ಮೊದಲು ಐಪಿಎಲ್​ ಆಟಗಾರರಿಗೆ ಕೊರೊನಾವೈರಸ್ ಇನ್ನಿಲ್ಲದಂತೆ ಕಾಡುತ್ತಿದೆ. ಇತ್ತೀಚಿನ ಪ್ರಕರಣವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರ್ಯಾಂಚೈಸ್‌ಗೆ ಸಂಬಂಧಿಸಿದೆ. ತಂಡದ ಬೌಲರ್ ಡೇನಿಯಲ್ ಸೈಮ್ಸ್ ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಏಪ್ರಿಲ್ 7 ರ ಬುಧವಾರ ಬೆಳಿಗ್ಗೆ ಆರ್ಸಿಬಿ ಹೇಳಿಕೆ ನೀಡಿದ್ದು, ಸೈಮ್ಸ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಹೇಳಿಕೆಯ ಪ್ರಕಾರ, ಸೈಮ್ಸ್ ಏಪ್ರಿಲ್ 3 ರಂದು ಚೆನ್ನೈಗೆ ಬಂದಿದ್ದಾರೆ ಈ ವೇಳೆ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿ ಅವರಿಗೆ ವರದಿ ನೆಗೆಟಿವ್ ಬಂದಿತ್ತು. ಆದರೂ ಅವರು ಪ್ರಸ್ತುತ ಕ್ಯಾರೆಂಟೈನ್‌ನಲ್ಲಿದ್ದರು, ಆದರೆ ಬುಧವಾರ ಅವರ ಎರಡನೇ ಪರೀಕ್ಷೆಯ ವರದಿಯು ಪಾಸಿಟಿವ್​ ಎಂದು ಕಂಡುಬಂದಿದೆ. ನಂತರ ಅವರನ್ನು ವೈದ್ಯಕೀಯ ಕೇಂದ್ರದಲ್ಲಿ ಇರಿಸಲಾಗಿದೆ.

ಪಡಿಕ್ಕಲ್ ಕೋವಿಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್
ಆರ್ಸಿಬಿ ಆಟಗಾರ ದೇವದತ್ ಪಡಿಕ್ಕಲ್ ಕೋವಿಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್ ಎಂದು ವರದಿಯಾಗಿದೆ. ಹೀಗಾಗಿ ಪಡಿಕ್ಕಲ್ ಶೀಘ್ರದಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆದ್ರೆ ಬಯೊ ಬಬಲ್ ನಿಯಮದ ಒಳಗಡೆ ಬರಲು, ಒಂದು ವಾರ ಬೇಕಾಗಿರುವದಿರಂದ ಮೊದಲ ಪಂದ್ಯವನ್ನ ಮಿಸ್ ಮಾಡಿಕೊಳ್ಳಲಿದ್ದಾರೆ.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಮೊದಲ ಪಂದ್ಯವನ್ನು ಆಡಬೇಕಿದೆ ಆದರೆ ಈಗ ಆ ಪಂದ್ಯದಲ್ಲಿ ದೇವದತ್‌ಗೆ ಆಡಲು ಕಷ್ಟವಾಗಿದೆ. ಕಳೆದ ಆವೃತ್ತಿಯಲ್ಲಿ, ದೇವದತ್ ಆರ್ಸಿಬಿಗೆ ಭರವಸೆಯ ಆಟಗಾರನಾಗಿ ಕಾಣಿಸಿಕೊಂಡರು. ಟಾಪ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಅವರು ಅದ್ಭುತ ಪ್ರದರ್ಶನ ನೀಡಿದರು. ಆರ್‌ಸಿಬಿಗೆ ಪ್ಲೇಆಫ್ ತಲುಪಲು ಸಹಾಯ ಮಾಡುವಲ್ಲಿ ಅವರ ಪಾತ್ರ ದೊಡ್ಡದಿದೆ. ಹೀಗಾಗಿ ಪಡಿಕಲ್​ ಮೊದಲ ಪಂದ್ಯದಲ್ಲಿ ಆಡದಿರುವುದು ತಂಡಕ್ಕೆ ದೊಡ್ಡ ಹಿನ್ನಸೆಯಾಗಿದೆ.

ಇದನ್ನೂ ಓದಿ:IPL 2021: ಐಪಿಎಲ್​ನಲ್ಲಿ ಡಬಲ್ ಸೆಂಚುರಿ ಬಾರಿಸಿದ ಧೋನಿ, ರೋಹಿತ್.. ದ್ವಿಶತಕದ ಸನಿಹದಲ್ಲಿ ಕೊಹ್ಲಿ, ರೈನಾ

Published On - 10:51 am, Wed, 7 April 21