IPL 2021: ವಾಂಖೆಡೆಯಲ್ಲಿ ಮತ್ತೆ ಸುರಿಯಲಿದೆ ರನ್ ಮಳೆ! ಕ್ಯಾಪ್ಟನ್ ಕೂಲ್-ಕಿಂಗ್ ಕೊಹ್ಲಿ ಮುಖಾಮುಖಿ.. ಗೆಲ್ಲೋದ್ಯಾರು?

IPL 2021 RCB vs CSK: ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿರುವ ವಾಂಖೆಡೆಯಲ್ಲಿ ಪ್ರತಿ ಪಂದ್ಯದಲ್ಲೂ ಭರ್ಜರಿ ರನ್ ಹರಿದು ಬರ್ತಿದೆ. 200 ರನ್ ಟಾರ್ಗೆಟ್ ನೀಡಿದ್ರೂ ಇಲ್ಲಿ ಗುರಿ ಮುಟ್ಟೋದು ಕಷ್ಟಕರವೇನಲ್ಲ.

IPL 2021: ವಾಂಖೆಡೆಯಲ್ಲಿ ಮತ್ತೆ ಸುರಿಯಲಿದೆ ರನ್ ಮಳೆ! ಕ್ಯಾಪ್ಟನ್ ಕೂಲ್-ಕಿಂಗ್ ಕೊಹ್ಲಿ ಮುಖಾಮುಖಿ.. ಗೆಲ್ಲೋದ್ಯಾರು?
ವಿರಾಟ್ ಕೊಹ್ಲಿ, ಎಂ ಎಸ್ ಧೋನಿ
Follow us
ಪೃಥ್ವಿಶಂಕರ
|

Updated on: Apr 25, 2021 | 2:42 PM

ಈ ಐಪಿಎಲ್ ಸೀಸನ್ನಲ್ಲಿ ಆರ್ಸಿಬಿ ಗೆಲುವಿನ ಓಟ ಭರ್ಜರಿಯಾಗಿ ಮುಂದುವರಿದಿದೆ. ಸತತ ನಾಲ್ಕು ಪಂದ್ಯಗಳಲ್ಲೂ ಕೊಹ್ಲಿ ಪಡೆ ಗೆಲುವಿನ ಕೇಕೆ ಹಾಕಿದೆ. ಐಪಿಎಲ್ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ, ಸೋಲಿಲ್ಲದ ಸರದಾರರಂತೆ ಮುನ್ನುಗ್ಗುತ್ತಿರುವ ಕೊಹ್ಲಿ ಹುಡುಗ್ರು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮೊದಲ ಪಂದ್ಯದಲ್ಲೇ ಬಲಿಷ್ಟ ಮುಂಬೈ ಮಣಿಸಿದ ಆರ್ಸಿಬಿ, ನಂತರ ಹೈದರಾಬಾದ್, ಕೊಲ್ಕತ್ತಾ ಮತ್ತು ರಾಜಸ್ಥಾನ್ವನ್ನ ಮಣಿಸಿದೆ. ಇಂದು ವಾಂಖೆಡೆ ಮೈದಾನದಲ್ಲಿ ರಾಯಲ್ ಆಟಗಾರರು, ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಮುಖಾಮುಖಿಯಾಗ್ತಿದ್ದಾರೆ.

ಕ್ಯಾಪ್ಟನ್ ಕೂಲ್-ಕಿಂಗ್ ಕೊಹ್ಲಿ ಮುಖಾಮುಖಿ.. ಗೆಲ್ಲೋದ್ಯಾರು? ಆರ್ಸಿಬಿ ಸತತ 4 ಪಂದ್ಯಗಳಲ್ಲೂ ಗೆಲುವು ದಾಖಲಿಸಿದ್ರೆ, ಚೆನ್ನೈ 3 ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ದಾಖಲಿಸಿ ಒಂದು ಪಂದ್ಯದಲ್ಲಿ ಮುಗ್ಗರಿಸಿದೆ. ಪ್ರಸ್ತುತ ಸೀಸನ್ನಲ್ಲಿ ಎರಡೂ ಬಲಿಷ್ಟ ತಂಡಗಳಾಗಿ ಗುರುತಿಸಿಕೊಂಡಿವೆ. ಹೀಗಾಗಿ ಇಂದು ವಾಂಖೆಡೆಯಲ್ಲಿ ನಡೆಯುವ ಪಂದ್ಯ ಕ್ಯಾಪ್ಟನ್ ಕೂಲ್ ಮತ್ತು ಕಿಂಗ್ ಕೊಹ್ಲಿ ನಡುವಿನ ಕದನ ಅಂತಾನೇ ಬಿಂಬಿತವಾಗಿದೆ.

ವಾಂಖೆಡೆಯಲ್ಲಿ ಮತ್ತೆ ಸುರಿಯಲಿದೆ ರನ್ ಮಳೆ! ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿರುವ ವಾಂಖೆಡೆಯಲ್ಲಿ ಪ್ರತಿ ಪಂದ್ಯದಲ್ಲೂ ಭರ್ಜರಿ ರನ್ ಹರಿದು ಬರ್ತಿದೆ. 200 ರನ್ ಟಾರ್ಗೆಟ್ ನೀಡಿದ್ರೂ ಇಲ್ಲಿ ಗುರಿ ಮುಟ್ಟೋದು ಕಷ್ಟಕರವೇನಲ್ಲ. ಹೀಗಾಗಿ ಇಂದು ಚೆನ್ನೈ ಮತ್ತು ಆರ್ಸಿಬಿ ತಂಡಗಳು, ದೊಡ್ಡ ಮೊತ್ತವನ್ನೇ ಗುರಿಯಾಗಿ ನೀಡುವ ಪ್ಲ್ಯಾನ್ ರೂಪಿಸಿಕೊಂಡಿವೆ. ಹೀಗಾಗಿ ವಾಂಖಡೆಯಲ್ಲಿ ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಯಲಿದೆ.

ಹನ್ನೊಂದರ ಬಳಗದ ಬಗ್ಗೆ ವಿರಾಟ್ಗಿಲ್ಲ ಟೆನ್ಶನ್! ಸದ್ಯ ಚೆನ್ನೈ ವಿರುದ್ಧದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ, ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಯಾಕಂದ್ರೆ ಎಲ್ಲಾ ವಿಭಾಗದಲ್ಲೂ ಆಟಗಾರರು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ವಿರಾಟ್ ಸೇಮ್ ಪ್ಲೇಯಿಂಗ್ ಇಲೆವೆನ್ ಅನ್ನೇ, ಚೆನ್ನೈ ವಿರುದ್ಧ ಆಡಿಸುವ ಸಾಧ್ಯತೆಯಿದೆ..

ಚೆನ್ನೈ ವಿರುದ್ಧ 901 ರನ್ಗಳಿಸಿ ಅಬ್ಬರಿಸಿದ್ದಾರೆ ಕೊಹ್ಲಿ! ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಯಕ ಕೊಹ್ಲಿ ಸಾಧನೆ ಅದ್ಭುತವಾಗಿದೆ. ವಿರಾಟ್ ಆರ್ಸಿಬಿ ಪರ ಅತೀ ಹೆಚ್ಚು ರನ್ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಚೆನ್ನೈ ವಿರುದ್ಧ ವಿರಾಟ್ ಇದುವರೆಗೂ 901 ರನ್ಗಳಿಸಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಬ್ಯಾಟ್ ಸಿಡಿದೇಳುತ್ತೆ ಅನ್ನೋ ನಿರೀಕ್ಷೆ ಅಭಿಮಾನಿಗಳಲ್ಲಿದೆ..

ಆರ್ಸಿಬಿ ವಿರುದ್ಧ ಬಾಹುಬಲಿ ಮಹೇಂದ್ರ ಸಿಂಗ್ ಧೋನಿ! ಸಿಎಸ್ಕೆ ವಿರುದ್ಧ ಕೊಹ್ಲಿ ಬ್ಯಾಟ್ ರನ್ ಮಳೆ ಹರಿಸಿದ್ರೆ, ಆರ್ಸಿಬಿ ವಿರುದ್ಧ ಸಿಎಸ್ಕೆ ನಾಯಕ ಧೋನಿ ಬ್ಯಾಟ್ ಘರ್ಜಿಸಿದೆ. ಅದ್ರಲ್ಲೂ ಆರ್ಸಿಬಿ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದ ದಾಖಲೆ ಹೊಂದಿರುವ ಧೋನಿ, 735 ರನ್ ಕಲೆಹಾಕಿದ್ದಾರೆ..

RCBಗೆ ಯುಜ್ವಿಂದರ್ ಚಹಲ್.. CSKಗೆ ಡ್ವೇನ್ ಬ್ರ್ಯಾವೋ ಬೌಲಿಂಗ್ ವಿಚಾರದಲ್ಲಿ ಆರ್ಸಿಬಿ ಪರ ಚೆನ್ನೈ ವಿರುದ್ಧ ಚಹಲ್ ಪರಿಣಾಮಕಾರಿ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು ಚೆನ್ನೈ ಪರ ಡ್ವೇನ್ ಬ್ರಾವೋ ಆರ್ಸಿಬಿ ವಿರುದ್ಧ ಸೂಪರ್ ಸ್ಪೆಲ್ ಮಾಡಿದ ಸಾಧನೆ ಹೊಂದಿದ್ದಾರೆ. ಚಹಲ್ ಚೆನ್ನೈ ವಿರುದ್ಧ 12 ವಿಕೆಟ್ ಕಬಳಿಸಿದ್ರೆ, ಬ್ರ್ಯಾವೋ 13 ಬಲಿ ಪಡೆದಿದ್ದಾರೆ..

ಐಪಿಎಲ್ನಲ್ಲಿ RCB vs CSK ಐಪಿಎಲ್ನಲ್ಲಿ ಇದುವರೆಗೂ ಆರ್ಸಿಬಿ ಮತ್ತು ಚೆನ್ನೈ ತಂಡಗಳು 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆರ್ಸಿಬಿ 9 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ರೆ, ಚೆನ್ನೈ 17 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನೊಂದು ಪಂದ್ಯ ಫಲಿತಾಂಶವಿಲ್ಲದೇ ಅಂತ್ಯ ಕಂಡಿದೆ. ಐಪಿಎಲ್ನ ಈ ಅಂಕಿ ಅಂಶಗಳು ಚೆನ್ನೈ ತಂಡ ಆರ್ಸಿಬಿ ಮೇಲೆ ಪಾರಮ್ಯ ಸಾಧಿಸಿದೆ ಎನ್ನುತ್ತಿದೆ. ಆದ್ರೆ ಪ್ರಸ್ತುತ ಆರ್ಸಿಬಿ ತೋಳ್ಬಲ.. ಅಂಕಿ ಅಂಶಗಳು ಲೆಕ್ಕಾಚಾರಕ್ಕೆ ಸಿಗದಂತೆ ಮಾಡಿದೆ. ಹೀಗಾಗಿ ಕೊಹ್ಲಿ ಮತ್ತು ಧೋನಿ ನಡುವಿನ ಪ್ರತಿಷ್ಟೆಯ ಪಂದ್ಯ, ಐಪಿಎಲ್ ರಣರೋಚಕತೆ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!