AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಐಪಿಎಲ್ ಸ್ಥಗಿತ! ಬಿಸಿಸಿಐ ಮುಂದೆ ಬಿಗ್ ಸವಾಲು.. ವಿದೇಶಿ ಆಟಗಾರರು ಸ್ವದೇಶಕ್ಕೆ ಮರಳುವುದಾದರೂ ಹೇಗೆ?

IPL 2021: ಐಪಿಎಲ್ 2021 ರಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ಆಟಗಾರರು ಸೇರಿದ್ದಾರೆ.

IPL 2021: ಐಪಿಎಲ್ ಸ್ಥಗಿತ! ಬಿಸಿಸಿಐ ಮುಂದೆ ಬಿಗ್ ಸವಾಲು.. ವಿದೇಶಿ ಆಟಗಾರರು ಸ್ವದೇಶಕ್ಕೆ ಮರಳುವುದಾದರೂ ಹೇಗೆ?
ಬಿಸಿಸಿಐ ಆಡಳಿತ ಮಂಡಳಿ
ಪೃಥ್ವಿಶಂಕರ
|

Updated on: May 04, 2021 | 4:08 PM

Share

ಐಪಿಎಲ್ 2021 ಅನ್ನು ಮುಂದೂಡಲಾಗಿದೆ. ಪಂದ್ಯಾವಳಿಗೆ ಸಂಬಂಧಿಸಿದ ಆಟಗಾರರು ಕೊರೊನಾ ಪಾಸಿಟಿವ್ ಎಂದು ಕಂಡುಬಂದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಐಪಿಎಲ್ 2021 ರಲ್ಲಿ ಕಳೆದ ಎರಡು ದಿನಗಳಲ್ಲಿ, ನಾಲ್ವರು ಆಟಗಾರರು ಸೇರಿದಂತೆ ಸಹಾಯಕ ಸಿಬ್ಬಂದಿ ಸದಸ್ಯರೊಬ್ಬರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಐಪಿಎಲ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಆಟಗಾರರ ಆರೋಗ್ಯಕ್ಕೆ ಆದ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಪಂದ್ಯಾವಳಿಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಈ ನಿರ್ಧಾರದ ನಂತರ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಅವರ ಮುಂದೆ ಈಗ ದೊಡ್ಡ ಸವಾಲು ಉದ್ಭವಿಸಿದೆ.

ಅನೇಕ ದೇಶಗಳು ಇಲ್ಲಿಂದ ವಿಮಾನ ಪ್ರಯಾಣವನ್ನು ನಿಲ್ಲಿಸಿವೆ ಈ ಸವಾಲು ವಿದೇಶಿ ಆಟಗಾರರನ್ನು ಹೇಗೆ ತಮ್ಮ ಮನೆಗೆ ತಲುಪಿಸುವುದಾಗಿದೆ. ಐಪಿಎಲ್ 2021 ರಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ಆಟಗಾರರು ಸೇರಿದ್ದಾರೆ. ಭಾರತದಲ್ಲಿ ಕೊರೊನಾದ ಎರಡನೇ ಅಲೆಯಿಂದಾಗಿ, ಅನೇಕ ದೇಶಗಳು ಇಲ್ಲಿಂದ ವಿಮಾನ ಪ್ರಯಾಣವನ್ನು ನಿಲ್ಲಿಸಿವೆ. ಹೀಗಾಗಿ ಪ್ರತಿ ಆಟಗಾರರನ್ನು ಸ್ವದೇಶಕ್ಕೆ ಮರಳಿಸಿರುವುದು ದೊಡ್ಡ ತಲೆನೋವಾಗಿದೆ.

10 ದಿನಗಳ ಕ್ವಾರಂಟೈನ್ ವಿಧಿಸಿದೆ ಆಸ್ಟ್ರೇಲಿಯಾದ ಅನೇಕ ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಅನೇಕ ಮಾಜಿ ಕ್ರಿಕೆಟಿಗರು ಬೆಂಬಲ ಸಿಬ್ಬಂದಿಯ ಭಾಗವಾಗಿದ್ದಾರೆ. ಆದರೆ ಭಾರತದಿಂದ ಬರುವ ಜನರ ಪ್ರವೇಶವನ್ನು ಆಸ್ಟ್ರೇಲಿಯಾ ನಿಷೇದಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಆಟಗಾರರನ್ನು ತಮ್ಮ ಮನೆಗೆ ವಾಪಸ್ ಕಳುಹಿಸಲು ಬಿಸಿಸಿಐ ಪ್ರಯತ್ನ ಮಾಡಬೇಕಾಗುತ್ತದೆ. ಅದೇ ಸಮಯದಲ್ಲಿ, ಅಲ್ಲಿನ ಸರ್ಕಾರವು ಬ್ರಿಟನ್‌ಗೆ ಹೋಗುವವರಿಗೂ 10 ದಿನಗಳ ಕ್ವಾರಂಟೈನ್ ವಿಧಿಸಿದೆ. ಇದರ ಅಡಿಯಲ್ಲಿ, ಎರಡನೇ ಮತ್ತು ಎಂಟನೇ ದಿನದಂದು ಪರೀಕ್ಷೆ ನಡೆಯಲಿದ್ದು, ಸರ್ಕಾರ ಅನುಮೋದಿಸಿದ ಹೋಟೆಲ್‌ನಲ್ಲಿ ಇರಬೇಕಾಗುತ್ತದೆ. ಆದಾಗ್ಯೂ, ನ್ಯೂಜಿಲೆಂಡ್ನಲ್ಲಿ ಭಾರತದಿಂದ ಬರುವವರಿಗೆ ಪ್ರವೇಶವನ್ನು ಇನ್ನೂ ನಿಲ್ಲಿಸಿಲ್ಲ. ಅದೇ ರೀತಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಕ್ಕೆ ಹೋಗುವುದನ್ನು ನಿಷೇಧಿಸಲಾಗಿಲ್ಲ.

ಯುಎಇ ಭಾರತೀಯ ವಿಮಾನಯಾನವನ್ನೂ ನಿಷೇಧಿಸಿದೆ ಎಲ್ಲಾ ಆಟಗಾರರನ್ನು ಮನೆಗೆ ಕಳುಹಿಸಿದ ನಂತರವೇ ಐಪಿಎಲ್ ಪೂರ್ಣಗೊಳ್ಳಲಿದೆ ಎಂದು ಬಿಸಿಸಿಐ ಕಳೆದ ವಾರ ಹೇಳಿತ್ತು. ಅಂತಹ ಪರಿಸ್ಥಿತಿಯಲ್ಲಿ, ಭಾರತೀಯ ಕ್ರಿಕೆಟ್ ಮಂಡಳಿಯು ಆಟಗಾರರನ್ನು ತಮ್ಮ ಸಂಪರ್ಕಗಳ ಮೂಲಕ ತಮ್ಮ ಮನೆಗೆ ಸಾಗಿಸುತ್ತದೆ ಎಂದು ನಂಬಲಾಗಿದೆ. ಇದಕ್ಕಾಗಿ ಅವರು ಆಟಗಾರರ ಆಯಾ ಕ್ರಿಕೆಟ್ ಮಂಡಳಿಯೊಂದಿಗೆ ಮಾತನಾಡುತ್ತಿದ್ದಾರೆ. ಬಿಸಿಸಿಐ ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಏನೆಂದರೆ, ಯುಎಇ ಭಾರತದಿಂದ ಬರುವ ವಿಮಾನಗಳನ್ನು ಸಹ ನಿಷೇಧಿಸಿದೆ. ಯುಎಇ ವಿಶ್ವದ ಯಾವುದೇ ದಶಕ್ಕೆ ಬಾರತಿಂದ ಹೋಗುವುದನ್ನು ಸುಲಭಗೊಳಿಸುತ್ತದೆ. ಆದರೆ ಈಗ ಅಲ್ಲಿ ಭಾರತೀಯ ವಿಮಾನಗಳ ಅನುಪಸ್ಥಿತಿಯಿಂದಾಗಿ ಬಿಸಿಸಿಐ ಬೇರೆ ದಾರಿ ಹುಡುಕಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಚಾರ್ಟರ್ ಪ್ಲೇನ್ ಮೂಲಕ ಆಟಗಾರರನ್ನು ಕಳುಹಿಸಲು ಮಂಡಳಿಯು ವ್ಯವಸ್ಥೆಗಳನ್ನು ಮಾಡಬೇಕಾಗಬಹುದು.