IPL 2021: ಕ್ರೀಡಾಂಗಣದಲ್ಲಿ ಐಪಿಎಲ್ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ! ಆದರೆ ಷರತ್ತುಗಳು ಅನ್ವಯ

| Updated By: Digi Tech Desk

Updated on: Jun 01, 2021 | 6:26 PM

IPL 2021: ಕ್ರೀಡಾಂಗಣದ ಸಾಮರ್ಥ್ಯದ 50% ಆಸನಗಳನ್ನು ಮಾತ್ರ ಭರ್ತಿ ಮಾಡಲು ಅವಕಾಶ ನೀಡಬಹುದಾಗಿದೆ. ಜೊತೆಗೆ ಕ್ರೀಡಾಂಗಣದೊಳಕ್ಕೆ ಪ್ರವೇಶ ಪಡೆಯಲು ಇಚ್ಚಿಸುವವರು ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆದಿರಲೇಬೇಕು.

IPL 2021: ಕ್ರೀಡಾಂಗಣದಲ್ಲಿ ಐಪಿಎಲ್ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ! ಆದರೆ ಷರತ್ತುಗಳು ಅನ್ವಯ
ಪ್ರಾತಿನಿಧಿಕ ಚಿತ್ರ
Follow us on

ಐಪಿಎಲ್ 2021 ರ ಉಳಿದ ಪಂದ್ಯಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಘೋಷಿಸಿದೆ. ಕಳೆದ ಆವೃತ್ತಿ ನಡೆದಿದ್ದ ಯುಎಇಯಲ್ಲಿ ಈ ಪಂದ್ಯಗಳನ್ನು ಆಡಲಾಗುವುದು. ಅಂದಹಾಗೆ, ಐಪಿಎಲ್ 2021 ರ ಎರಡನೇ ಭಾಗ ಸೆಪ್ಟೆಂಬರ್ ಮಧ್ಯದಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ ಮಧ್ಯದ ವೇಳೆಗೆ ಕೊನೆಗೊಳ್ಳಲಿದೆ ಎಂಬುದು ಸ್ಪಷ್ಟವಾಗಿದೆ. ಆದರೆ ಈಗ ಬಲ್ಲ ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಯುಎಇ ಸರ್ಕಾರವು ಲಾಜಿಸ್ಟಿಕ್ಸ್ ಬಗ್ಗೆ ಮತ್ತು ಕ್ರೀಡಾಂಗಣಗಳ ಒಳಗೆ ಅಭಿಮಾನಿಗಳ ಪ್ರವೇಶದ ಬಗ್ಗೆ ಮಾತುಕತೆ ನಡೆಸುತ್ತಿದೆ.

ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆದಿರಲೇಬೇಕು
ಕ್ರಿಕ್‌ಬಝ್ ವರದಿ ಮಾಡಿದಂತೆ, ಭಾರತದಲ್ಲಿ ಆಡಿದ ಎಲ್ಲಾ ಐಪಿಎಲ್ 2021 ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ಆಡಲಾಗಿತ್ತು. ಆದರೆ ಯುಎಇಯಲ್ಲಿ ನಡೆಯುವ ಉಳಿದ ಐಪಿಎಲ್​ ಪಂದ್ಯಗಳಿಗೆ ಆಟವನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿ ಈಗ ಹೊರಬಿದ್ದಿದೆ. ಆದರೆ ಕ್ರೀಡಾಂಗಣದ ಸಾಮರ್ಥ್ಯದ 50% ಆಸನಗಳನ್ನು ಮಾತ್ರ ಭರ್ತಿ ಮಾಡಲು ಅವಕಾಶ ನೀಡಬಹುದಾಗಿದೆ. ಜೊತೆಗೆ ಕ್ರೀಡಾಂಗಣದೊಳಕ್ಕೆ ಪ್ರವೇಶ ಪಡೆಯಲು ಇಚ್ಚಿಸುವವರು ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆದಿರಲೇಬೇಕು. ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ಪಂದ್ಯ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ.

ಯುಎಇಗೆ ಹಾರಿದ ಬಿಸಿಸಿಐನ ಪದಾಧಿಕಾರಿಗಳು
ಏತನ್ಮಧ್ಯೆ, ಬಿಸಿಸಿಐನ ಪದಾಧಿಕಾರಿಗಳು ಇಸಿಬಿ ಮತ್ತು ಯುಎಇ ಸರ್ಕಾರದೊಂದಿಗೆ ಅಂತಿಮ ವ್ಯವಸ್ಥೆಯನ್ನು ಮಾಡಲು ದುಬೈಗೆ ತೆರಳಿದ್ದಾರೆ. ಮಂಡಳಿಯ ಕಾರ್ಯದರ್ಶಿ ಜೇ ಷಾ, ಖಜಾಂಚಿ ಅರುಣ್ ಸಿಂಗ್ ಧುಮಾಲ್, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಅವರು ಸೋಮವಾರ ದುಬೈಗೆ ಬಂದಿಳಿದಿದ್ದಾರೆ ಎಂದು ತಿಳಿದುಬಂದಿದೆ.

ಬಿಸಿಸಿಐ ನಿಯೋಗದ ಆಗಮನಕ್ಕೆ ವಿಶೇಷ ಅನುಮತಿ ಪಡೆಯುವ ಅಗತ್ಯವಿದೆ ಎಂದು ತಿಳಿದು ಬಂದಿದೆ. ಭಾರತಕ್ಕೆ ಮತ್ತು ಅಲ್ಲಿಂದ ಬರುವವಿಗೆ ಯುಎಇ ಸರ್ಕಾರ ಪ್ರಯಾಣ ನಿರ್ಬಂಧಗಳನ್ನು ಹೇರಿದೆ. ಹೀಗಾಗಿ ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು, ಇಸಿಬಿ ಅಧಿಕಾರಿಗಳು ಯುಎಇ ಸರ್ಕಾರದ ಬಳಿ ಪದಾಧಿಕಾರಿಗಳ ಆಗಮನಕ್ಕೆ ಅನುಮತಿ ಪಡೆಯಲು ಮುಂದಾಗಿದ್ದಾರೆ, ಬಿಸಿಸಿಐ ನಿಯೋಗ ಚಾರ್ಟರ್ ಫ್ಲೈಟ್​ನಲ್ಲಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.

Published On - 3:52 pm, Mon, 31 May 21