RCB vs PBKS IPL 2021 Match Prediction: ನಮ್ಮವರು vs ನಮ್ಮ ಹುಡುಗರ ನಡುವಿನ ಕದನ! ಕೊಹ್ಲಿ ಎದುರು ನಡೆಯುತ್ತಾ ರಾಹುಲ್ ಆಟ?

|

Updated on: Apr 30, 2021 | 2:21 PM

IPL 2021: ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನ ಸೋತಿರುವ ಪಂಜಾಬ್ ಕಿಂಗ್ಸ್ ತಂಡವನ್ನ ಹಗುರವಾಗಿ ಪರಿಗಣಿಸುವಂತಿಲ್ಲ. ಯಾಕಂದ್ರೆ ಆರ್ಸಿಬಿ ಮತ್ತು ಪಂಜಾಬ್ ತಂಡದಲ್ಲಿ ರನ್ ಮಳೆ ಹರಿಸುವ ಸ್ಟಾರ್ ಬ್ಯಾಟ್ಸ್ಮನ್ಗಳಿದ್ದಾರೆ.

RCB vs PBKS IPL 2021 Match Prediction: ನಮ್ಮವರು vs ನಮ್ಮ ಹುಡುಗರ ನಡುವಿನ ಕದನ! ಕೊಹ್ಲಿ ಎದುರು ನಡೆಯುತ್ತಾ ರಾಹುಲ್ ಆಟ?
ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್
Follow us on

ಪ್ರಸ್ತುತ ಐಪಿಎಲ್ನಲ್ಲಿ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಅದ್ದೂರಿ ಗೆಲುವು.. ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲು.. ಈ ಸಲ ಕಪ್ ನಮ್ದೇ ಎನ್ನುವ ಅಭಿಮಾನಿಗಳ ಕನಸನ್ನ ಕೊಹ್ಲಿ ಹುಡುಗ್ರು, ಈ ಸೀಸನ್ನಲ್ಲಿ ನನಸು ಮಾಡುವ ಭರವಸೆ ಮೂಡಿಸಿದ್ದಾರೆ. ಸತತ 4 ಪಂದ್ಯಗಳನ್ನ ಗೆದ್ದು ಚೆನ್ನೈ ವಿರುದ್ಧ ಮುಗ್ಗರಿಸಿದ್ದ ಆರ್ಸಿಬಿ, ಡೆಲ್ಲಿ ಮಣಿಸಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಗೆಲುವಿನ ಜೊತೆಯಲ್ಲೇ ಸೋಲಿನ ಕಹಿ ಅನುಭವಿಸಿರುವ ಕೊಹ್ಲಿ ಪಡೆ, ಇಂದು ಅಹಮದಾಬಾದ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಖಾಮುಖಿಯಾಗುತ್ತಿದೆ.

ಪಂದ್ಯದ ದಿಕ್ಕು ಬದಲಿಸ್ತಾರೆ ಸ್ಟಾರ್ ಬ್ಯಾಟ್ಸ್ಮನ್ಗಳು!
ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನ ಸೋತಿರುವ ಪಂಜಾಬ್ ಕಿಂಗ್ಸ್ ತಂಡವನ್ನ ಹಗುರವಾಗಿ ಪರಿಗಣಿಸುವಂತಿಲ್ಲ. ಯಾಕಂದ್ರೆ ಆರ್ಸಿಬಿ ಮತ್ತು ಪಂಜಾಬ್ ತಂಡದಲ್ಲಿ ರನ್ ಮಳೆ ಹರಿಸುವ ಸ್ಟಾರ್ ಬ್ಯಾಟ್ಸ್ಮನ್ಗಳಿದ್ದಾರೆ. ಅದ್ರಲ್ಲೂ ಗೆಲುವಿನ ಒತ್ತಡದಲ್ಲಿರುವ ಪಂಜಾಬ್, ಆರ್ಸಿಬಿಗೆ ಬಿಗ್ ಟಾರ್ಗೆಟ್ ನೀಡುವ ಗುರಿ ಹೊಂದಿದೆ. ಮತ್ತೊಂದೆಡೆ ಆರ್ಸಿಬಿಯನ್ನ ಬೆಟ್ಟದಂತ ಗುರಿಯನ್ನ ಬೆನ್ನಟ್ಟಬಲ್ಲ ಆಟಗಾರರಿದ್ದಾರೆ. ಹೀಗಾಗಿ ಇವತ್ತು ಮೋದಿ ಮೈದಾನದಲ್ಲಿ ಬ್ಯಾಟ್ಸ್ಮನ್ಗಳೇ ಪಂದ್ಯದ ದಿಕ್ಕು ಬದಲಿಸುವ ಸಾಧ್ಯತೆಯಿದೆ.

ಬ್ಯಾಟಿಂಗ್ ವಿಭಾಗದಲ್ಲಿ ಆರ್ಸಿಬಿಗಿಲ್ಲ ಯಾವುದೇ ಆತಂಕ!
ಆರ್ಸಿಬಿ ಬ್ಯಾಟಿಂಗ್ ವಿಭಾಗಕ್ಕೆ ಬಂದ್ರೆ, ಯಾವುದೇ ಆತಂಕವಿಲ್ಲ.. ವಿರಾಟ್ ಕೊಹ್ಲಿ, ಪಡಿಕ್ಕಲ್, ಎಬಿಡಿ, ಮ್ಯಾಕ್ಸಿ ಪೈಕಿ ಒಬ್ಬರಲ್ಲಾ ಒಬ್ಬರು, ತಂಡದ ಸ್ಕೋರ್ ಹೆಚ್ಚಿಸ್ತಾರೆ. ಇನ್ನು ಇಬ್ಬರು ಬ್ಯಾಟ್ಸ್ಮನ್ಗಳೇನಾದ್ರೂ ಸೆಟಲ್ ಆಗಿಬಿಟ್ರೆ, ಪಂಜಾಬ್ ಪಂಕ್ಚರ್ ಆಗೋದ್ರಲ್ಲಿ ಯಾವ ಅನುಮಾನವೂ ಇರೋದಿಲ್ಲ.

ಬ್ಯಾಟಿಂಗ್ನಲ್ಲಿ ಬಲಿಷ್ಠ ಪಂಜಾಬ್ಗೆ ಬೌಲರ್ಗಳೇ ವಿಲನ್!
ಪಂಜಾಬ್ ಕಿಂಗ್ಸ್ ಪ್ರಸ್ತುತ ಸೀಸನ್ನಲ್ಲಿ ಸೋಲಿನ ಸುಳಿಯಲ್ಲಿ ಗಿರಕಿ ಹೊಡೆಯುತ್ತಿದೆ. ಪಂಜಾಬ್ ಅದಃಪತನಕ್ಕೆ ಕಾರಣವಾಗಿರುವುದು, ಬೌಲರ್ಗಳು. ರಾಹುಲ್, ಮಯಾಂಕ್, ಗೇಲ್, ಹೂಡಾ, ಶಾರುಕ್ ಬ್ಯಾಟಿಂಗ್ನಲ್ಲಿ ಬೆಟ್ಟದಂತ ರನ್ ಕಲೆಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಆದ್ರೆ ಪಂಜಾಬ್ ಬೌಲರ್ಗಳು ತಂಡದ ಗೆಲುವಿನ ವಿಚಾರದಲ್ಲಿ ಮ್ಯಾಚ್ ವಿನ್ನಿಂಗ್ ಸ್ಪೆಲ್ ಮಾಡುವಲ್ಲಿ ಎಡವುತ್ತಿದ್ದಾರೆ.

ಕಡಿಮೆ ಸ್ಕೋರ್ ಇದ್ರೂ ಚುರುಕಿನ ಸ್ಪೆಲ್ ಮಾಡ್ತಾರೆ ಕೊಹ್ಲಿ ಬೌಲರ್ಸ್!
ಪಂಜಾಬ್ ಬೌಲಿಂಗ್ ಲೈನ್ ಅಪ್ಗೆ ಹೋಲಿಸಿದ್ರೆ, ಆರ್ಸಿಬಿ ಬೌಲರ್ಗಳು ಕಡಿಮೆ ಸ್ಕೋರ್ ಇದ್ರೂ ಚುರುಕಿನ ಸ್ಪೆಲ್ ಮಾಡಿ ಗೆಲುವು ತಂದುಕೊಡ್ತಿದ್ದಾರೆ. ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಕೈಲ್ ಜೆಮಿಸನ್ ವೇಗಿಗಳಾಗಿ ಮಿಂಚಿದ್ರೆ, ಸ್ಪಿನ್ ವಿಭಾಗದಲ್ಲಿ ಯುಜ್ವಿಂದರ್ ಚಹಲ್ ಮತ್ತು ವಾಷಿಂಗ್ಟನ್ ಸುಂದರ್ ಅದ್ಭುತವದ ಕೈಚಳಕ ತೋರಿಸಲಿದ್ದಾರೆ.

ಐಪಿಎಲ್ನಲ್ಲಿ RCB vs PBKS
ಐಪಿಎಲ್ನಲ್ಲೂ ಇದುವರೆಗೂ ಆರ್ಸಿಬಿ ಮತ್ತು ಪಂಜಾಬ್ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದ್ರಲ್ಲಿ ಆರ್ಸಿಬಿ 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ರೆ, ಪಂಜಾಬ್ 14 ಪಂದ್ಯಗಳಲ್ಲಿ ಗೆಲುವಿನ ಕೇಕೆ ಹಾಕಿದೆ. ಐಪಿಎಲ್ ಅಂಕಿ ಅಂಶಗಳ ಪ್ರಕಾರ, ಪಂಜಾಬ್ ಮೇಲುಗೈ ಸಾಧಿಸಿರಬಹುದು. ಆದ್ರೆ ಈ ಸೀಸನ್ನಲ್ಲಿ ಆರ್ಸಿಬಿ ಪಂಜಾಬ್ಗಿಂತ ಬಲಿಷ್ಟವಾಗಿದೆ. ಬ್ಯಾಟಿಂಗ್ ಬೌಲಿಂಗ್ ವಿಭಾಗದಲ್ಲಿ ಪಜಾಬ್ಗಿಂತ ಬಲಿಷ್ಠವಾಗಿರುವ ಆರ್ಸಿಬಿ, ಮೋದಿ ಮೈದಾನದಲ್ಲಿ ರಾಹುಲ್ ಪಡೆ ಹುಟ್ಟಡಗಿಸಲು ತುದಿಗಾಲಲ್ಲಿ ನಿಂತಿದೆ.