ಪ್ಯಾಟ್​ ಕಮ್ಮಿನ್ಸ್ ನಂತರ ಸೋಂಕಿತರ ನೆರವಿಗೆ ಧಾವಿಸಿರುವ ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಯಿಂದ ರೂ 7.5 ಕೋಟಿ ನೆರವು

ಕೊಲ್ಕತಾ ನೈಟ್​ ರೈಡರ್ಸ್​ ಪರ ಆಡುವ ಪ್ಯಾಟ್​ ಕಮ್ಮಿನ್ಸ್ ಅವರು ಪಿ ಎಮ್​ ಕೇರ್ಸ್ ನಿಧಿಗೆ 50,000 ಡಾಲರ್​ಗಳ ದೇಣಿಗೆ ನೀಡಿದ ಒಂದು ದಿನದ ನಂತರ ರಾಜಸ್ತಾನ ರಾಯಲ್ಸ್​ ತನ್ನ ದೇಣಿಗೆಯನ್ನು ಪ್ರಕಟಿಸಿದೆ.

ಪ್ಯಾಟ್​ ಕಮ್ಮಿನ್ಸ್ ನಂತರ ಸೋಂಕಿತರ ನೆರವಿಗೆ ಧಾವಿಸಿರುವ ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಯಿಂದ ರೂ 7.5 ಕೋಟಿ ನೆರವು
ರಾಜಸ್ತಾನ ರಾಯಲ್ಸ್
Arun Belly

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 29, 2021 | 9:28 PM

ಇಂಡಿಯನ್ ಪ್ರಿಮೀಯರ್ ಲೀಗ್​ನ ಫ್ರಾಂಚೈಸಿಯಾಗಿರುವ ರಾಜಸ್ತಾನ್ ರಾಯಲ್ಸ್ ಒಂದು ರಾಯಲ್ ಧೋರಣೆಯನ್ನು ಪ್ರದರ್ಶಿಸಿ ಭಾರತದಲ್ಲಿ ಕೊವಿಡ್​ ಸೋಂಕಿನಿಂದ ನರಳುತ್ತಿರುವ ಜನರ ಚಿಕಿತ್ಸೆಗೆ 7.5 ಕೋಟಿ ರೂಪಾಯಿಗಳ ದೇಣಿಗೆಯನ್ನು ನೀಡಿದೆ. ‘ಭಾರತದಲ್ಲಿ ಕೊವಿಡ್​-19 ಸೋಂಕು ಭಯಾನಕವಾಗಿ ಹೆಚ್ಚಿದ್ದು ಅದರಿಂದ ಪೀಡಿತರಾಗಿರುವ ಜನರ ಚಿಕಿತ್ಸೆಗೆ 7.5 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಲು ರಾಜಸ್ತಾನ್ ರಾಯಲ್ಸ್​ಗೆ ತುಂಬಾ ಸಂತೋಷವೆನಿಸುತ್ತಿದೆ,’ ಎಂದು ಫ್ರಾಂಚೈಸಿ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆ ತಿಳಿಸುತ್ತದೆ. ರಾಯಲ್ಸ್ ಫ್ರಾಂಚೈಸಿಯು ತನ್ನ ಚಾರಿಟಿ ಸಂಸ್ಥೆಯಾಗಿರುವ ರಾಜಸ್ತಾನ್ ರಾಯಲ್ಸ್ ಫೌಂಡೇಶನ್ ಮತ್ತು ದಿ ಬ್ರಿಟಿಷ್ ಏಷ್ಯನ್ ಟ್ರಸ್ಟ್​ ಮೂಲಕ ಸಹಾಯವನ್ನು ಒದಗಿಸುತ್ತಿದೆ.

‘ಮೊದಲ ಫೋಕಸ್ ರಾಜಸ್ತಾನ್​ನಲ್ಲಿ ಸೋಂಕಿತರಿಗೆ ಅನೇಕ ಕಾರ್ಯಕ್ರಮಗಳ ಮೂಲಕ ನೆರವಾಗುತ್ತಿರುವ ರಂಜಿತ್ ಬರ್​ಠಾಕುರ್ ಅವರು ನಡೆಸುತ್ತಿರುವ ಆರ್​ಆರ್​ಎಫ್ ಸಂಸ್ಥೆಯ ಮೇಲಿರುವುದಾದರೂ ರಾಜಸ್ತಾನ್ ರಾಯಲ್ಸ್ ನೀಡುವ ದೇಣಿಗೆಯು ಭಾರತದೆಲ್ಲೆಡೆ ಉಪಯೋಗವಾಗಲಿದೆ’ ಎಂದು ಫ್ರಾಂಚೈಸಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ರಾಯಲ್ಸ್ ಟೀಮಿನ ಮಾಲೀಕರು ಮತ್ತು ಅದರ ಆಟಗಾರರು ಈ ಕೆಲಸಕ್ಕಾಗಿ ಕೈಜೋಡಿಸಿದ್ದಾರೆ. ಭಾರತದಲ್ಲಿ ಈ ತಲೆದೋರಿರುವ ಕೊವಿಡ್​ ಬಿಕ್ಕಟ್ಟಿನಲ್ಲಿ ಅತ್ಯಂತ ಅವಶ್ಯಕವಾಗಿರುವ ಆಕ್ಸಿಜನ್ ಅನ್ನು ಜನ ಪಡೆದುಕೊಳ್ಳುವಂತಾಗಲು ಈ ಹಣ ನೆರವಾಗುತ್ತದೆ,’ ಎಂದು ಹೇಳಿಕೆ ತಿಳಿಸುತ್ತದೆ. ಕೊಲ್ಕತಾ ನೈಟ್​ ರೈಡರ್ಸ್​ ಪರ ಆಡುವ ಪ್ಯಾಟ್​ ಕಮ್ಮಿನ್ಸ್ ಅವರು ಪಿ ಎಮ್​ ಕೇರ್ಸ್ ನಿಧಿಗೆ 50,000 ಡಾಲರ್​ಗಳ ದೇಣಿಗೆ ನೀಡಿದ ಒಂದು ದಿನದ ನಂತರ ರಾಜಸ್ತಾನ ರಾಯಲ್ಸ್​ ತನ್ನ ದೇಣಿಗೆಯನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಸಹ ಈ ನಿಧಿಗೆ ಒಂದು ಬಿಟ್​ಕಾಯಿನ್ (ಸುಮಾರು 50,000 ಅಮೇರಿಕನ್ ಡಾಲರ್) ದೇಣಿಗೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ಭಾರತ ಕಷ್ಟದಲ್ಲಿದೆ ಕ್ರಿಕೆಟಿಗರು ನೆರವಿಗೆ ಬನ್ನಿ! ಪಿಎಂ ಕೇರ್ಸ್ ಫಂಡ್‌ಗೆ 50,000 ಡಾಲರ್ ಹಣ​ ದೇಣಿಗೆ ನೀಡಿದ ಆಸಿಸ್ ಕ್ರಿಕೆಟಿಗ​ ಪ್ಯಾಟ್ ಕಮ್ಮಿನ್ಸ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada