VIDEO: ಕಟೌಟ್, ಬಿಜಿಎಂ… ಸಿನಿಮಾ ಸ್ಟೈಲ್ನಲ್ಲಿ ಸಂಜು ಸ್ಯಾಮ್ಸನ್ ಆಗಮನ
IPL 2026 Sanju Samson: ಜೈಲರ್ ಮೂವಿ ಬಿಜಿಎಂ, ಕಟೌಟ್ನೊಂದಿಗೆ ರಾರಾಜಿಸಿರುವ ಈ ವಿಡಿಯೋ ತುಣುಕಿನಲ್ಲಿ ಸಂಜು ಸ್ಯಾಮ್ಸನ್ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಸಹ ಬಳಸಲಾಗಿದೆ. ಇದೀಗ ಸಂಜು ಸ್ಯಾಮ್ಸನ್ ಅವರ ಸಿಎಸ್ಕೆ ಎಂಟ್ರಿಯ ವಿಡಿಯೋದೊಂದಿಗೆ ಐಪಿಎಲ್ 2026 ರಲ್ಲೂ ಅವರು 11 ನಂಬರ್ನ ಜೆರ್ಸಿ ಧರಿಸಿ ಕಣಕ್ಕಿಳಿಯುವುದು ಖಚಿತವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಸಂಜು ಸ್ಯಾಮ್ಸನ್ ಧರಿಸಲಿರುವ ಜೆರ್ಸಿ ನಂಬರ್ ಅನ್ನು ಚೆನ್ನೈ ಸೂಪರ್ ಕಿಂಗ್ಸ್ ಅನಾವರಣಗೊಳಿಸಿದೆ. ಅದು ಕೂಡ ಥೇಟ್ ಸಿನಿಮಾ ಸ್ಟೈಲ್ನಲ್ಲಿ. ಐಪಿಎಲ್ 2026 ರಿಟೈನ್ ಪ್ರಕ್ರಿಯೆಗೂ ಮು್ನ್ನ ಸಿಎಸ್ಕೆ ಫ್ರಾಂಚೈಸಿಯು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಸಂಜು ಸ್ಯಾಮ್ಸನ್ ಅವರನ್ನು ಟ್ರೇಡ್ ಮಾಡಿಕೊಂಡಿತ್ತು.
ಸ್ವಾಪ್ ಡೀಲ್ನಲ್ಲಿ ನಡೆದ ಈ ಟ್ರೇಡಿಂಗ್ನಲ್ಲಿ ಸಿಎಸ್ಕೆ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ನೀಡಿ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಿದ್ದರು. ಅದರಂತೆ ಮುಂಬರುವ ಐಪಿಎಲ್ನಲ್ಲಿ ಸ್ಯಾಮ್ಸನ್ ಯೆಲ್ಲೋ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಈ ಜೆರ್ಸಿ ಅನಾವರಣದ ವಿಡಿಯೋವೊಂದನ್ನು ಸಿಎಸ್ಕೆ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಸಂಜು ಸ್ಯಾಮ್ಸನ್ ಅವರ ಆಪ್ತನಾಗಿರುವ ಮಲಯಾಳಂ ಚಿತ್ರನಟ/ನಿರ್ದೇಶಕ ಬೆಸಿಲ್ ಜೋಸೆಫ್ ಕೂಡ ಕಾಣಿಸಿಕೊಂಡಿದ್ದಾರೆ.
ಜೈಲರ್ ಮೂವಿ ಬಿಜಿಎಂ, ಕಟೌಟ್ನೊಂದಿಗೆ ರಾರಾಜಿಸಿರುವ ಈ ವಿಡಿಯೋ ತುಣುಕಿನಲ್ಲಿ ಸಂಜು ಸ್ಯಾಮ್ಸನ್ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಸಹ ಬಳಸಲಾಗಿದೆ. ಇದೀಗ ಸಂಜು ಸ್ಯಾಮ್ಸನ್ ಅವರ ಸಿಎಸ್ಕೆ ಎಂಟ್ರಿಯ ವಿಡಿಯೋದೊಂದಿಗೆ ಐಪಿಎಲ್ 2026 ರಲ್ಲೂ ಅವರು 11 ನಂಬರ್ನ ಜೆರ್ಸಿ ಧರಿಸಿ ಕಣಕ್ಕಿಳಿಯುವುದು ಖಚಿತವಾಗಿದೆ.