ಇಂಡಿಯನ್ ಪ್ರಿಮೀಯರ್ ಲೀಗ್ 2022 ಸೀಸನ್​ನಿಂದ ವಿಸ್ತರಣೆ, ಫಾರ್ಮಾಟ್​ನಲ್ಲಿ ಹಲವು ಬದಲಾವಣೆಗಳು

|

Updated on: Jul 06, 2021 | 10:35 PM

ಟೂರ್ನಿಯನ್ನು ಲೀಗ್ ಫಾರ್ಮಾಟ್​ ಮುಂದುವರೆಸಿದರೆ ಹೆಚ್ಚಿನ ಸಂಖ್ಯೆಯ ಪಂದ್ಯಗಳನ್ನು ಆಯೋಜಿಸಬೇಕಾಗುವುದರಿಂದ ಹಾಗೆ ಮಾಡುವುದು ಬಿಸಿಸಿಐಗೆ ಇಷ್ಟವಿಲ್ಲ ಎಂದು ಮೂಲಗಳಿಂದ ಗೊತ್ತಾಗಿದೆ.

ಇಂಡಿಯನ್ ಪ್ರಿಮೀಯರ್ ಲೀಗ್ 2022 ಸೀಸನ್​ನಿಂದ ವಿಸ್ತರಣೆ, ಫಾರ್ಮಾಟ್​ನಲ್ಲಿ ಹಲವು ಬದಲಾವಣೆಗಳು
IPL 2021ರ ದ್ವಿತಿಯಾರ್ಧ ಸೆಪ್ಟೆಂಬರ್ 19 ರಂದು ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ - ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಹಾಗೆಯೇ ಫೈನಲ್ ಪಂದ್ಯವು ಅಕ್ಟೋಬರ್ 15 ರಂದು ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
Follow us on

ಇಂಡಿಯನ್ ಪ್ರಿಮೀಯರ್ ಲೀಗ್ 2021 (14ನೇ ಸೀಸನ್) ಇನ್ನೂ ಮುಗಿದಿಲ್ಲ. ಆದರೆ ಈಗಾಗಲೇ 2022ಸೀಸನ್ ಕುರಿತು ಚರ್ಚೆಗಳು ಆರಂಭವಾಗಿವೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಬಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು, ಆಟಗಾರರ ಮೆಗಾ ಆಕ್ಷನ್​ ಮೊದಲುಗೊಂಡು ಹೊಸ ಸೀಸನ್​ಗೆ (2022) ಪ್ರಮುಖ ಬದಲಾವಣೆಗಳನ್ನು ತರುವ ನಿರ್ಧಾರ ಮಾಡಿಕೊಂಡಿದೆ. ನಿಮಗೆ ಗೊತ್ತಿರುವ ಹಾಗೆ 2020ರ ಐಪಿಎಲ್ ಸೀಸನ್​ ಸಹ ಕೋವಿಡ್-19 ಪಿಡುಗುನಿಂದಾಗಿ ಅಸ್ತವ್ಯಸ್ತಗೊಂಡಿತ್ತು. ಅದನ್ನು ಪೋಸ್ಟ್​ಪೋನ್ ಮಾಡಿದ್ದೂ ಅಲ್ಲದೆ ಇಡೀ ಟೂರ್ನಿಯನ್ನು ಯುನೈಟೆಡ್​ ಅರಬ್ ಎಮಿರೇಟ್ಸ್​ಗೆ ಶಿಫ್ಟ್​ ಮಾಡಲಾಗಿತ್ತು. 2020ರಲ್ಲೇ ಬಿಸಿಸಿಐ ಐಪಿಎಲ್​ ಅನ್ನು 10 ತಂಡಗಳ ಟೂರ್ನಮೆಂಟ್​ ಆಗಿ ವಿಸ್ತರಿಸಲು ನಿರ್ಧರಿಸಿತ್ತು. ಆದರೆ ಮಾಹಾಮಾರಿಯಿಂದಾಗಿ ಆ ಯೋಜನೆಯನ್ನು ಕೈಬಿಡಬೇಕಾಯಿತು.

ಆದರೆ, 2022 ರಿಂದ ಅಂದರೆ ಐಪಿಎಲ್ 15ನೇ ಸೀಸನ್​ನಿಂದ ಅದು ವಿಸ್ತರಣೆಯಾಗಲಿದೆಯೆಂದು ಬಿಸಿಸಿಐ ಮೂಲಗಳು ತಿಳಿಸಿವೆ. ಟೀಮುಗಳ ಸಂಖ್ಯೆ ಈಗಿನ 8 ರಿಂದ 10 ಕ್ಕೆ ಹೆಚ್ಚಲಿದ್ದು ಫಾರ್ಮಾಟ್​ನಲ್ಲೂ ಬದಲಾವಣೆ ಆಗೋದು ದೃಢಪಟ್ಟಿದೆ.

ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಪ್ರಸ್ತುತವಾಗಿ ಪ್ರತಿಯೊಂದು ತಂಡ ಉಳಿದ 7 ತಂಡಗಳೊಂದಿಗೆ ಎರಡೆರಡು ಬಾರಿ ರೌಂಡ್-ರಾಬಿನ್ ಫಾರ್ಮಾಟ್​​ನಲ್ಲಿ ಆಡುತ್ತಿದೆ. ಈ ಹಂತ ಮುಗಿದ ನಂತರ ಟೂರ್ನಿಯು ಪ್ಲೇ-ಆಫ್​ ಹಂತ ತಲುಪುತ್ತದೆ. ಈ ಹಂತದಲ್ಲಿ ಎರಡು ಕ್ವಾಲಿಫೈಯರ್, ಒಂದು ಎಲಿಮಿನೇಟರ್ ಮತ್ತು ಒಂದು ಫೈನಲ್ ಪಂದ್ಯ ನಡೆಯುತ್ತವೆ. ಆದರೆ ಇನ್ನು ಮುಂದೆ ರೌಂಡ್​-ರಾಬಿನ್ ಫಾರ್ಮಾಟನ್ನು ಗ್ರೂಪ್​ ಫಾರ್ಮಾಟ್​ನಲ್ಲಿ ಬದಲಾಯಿಸಲಾಗುತ್ತದೆ. 10ತಂಡಗಳನ್ನು ಐದೈದು ತಂಡಗಳ ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ.

ಟೂರ್ನಿಯನ್ನು ಲೀಗ್ ಫಾರ್ಮಾಟ್​ ಮುಂದುವರೆಸಿದರೆ ಹೆಚ್ಚಿನ ಸಂಖ್ಯೆಯ ಪಂದ್ಯಗಳನ್ನು ಆಯೋಜಿಸಬೇಕಾಗುವುದರಿಂದ ಹಾಗೆ ಮಾಡುವುದು ಬಿಸಿಸಿಐಗೆ ಇಷ್ಟವಿಲ್ಲ ಎಂದು ಮೂಲಗಳಿಂದ ಗೊತ್ತಾಗಿದೆ. ಅಲ್ಲದೆ ಲೀಗೆ ಫಾರ್ಮಾಟ್ ಮುಗಿಯಲು ಜಾಸ್ತಿ ದಿನಗಳು ಬೇಕಾಗುತ್ತವೆ ಮತ್ತು ಅದು ಫ್ಯೂಚರ್ ಟೂರ್ಸ್ ಪ್ರೊಗ್ರಾಮ್​ ಮೇಲೆ (ಎಫ್​ಟಿಪಿ) ಹಾಗೂ ಬೇರೆ ಕ್ರಿಕೆಟಿಂಗ್ ರಾಷ್ಟ್ರಗಳ ಅಂತರರಾಷ್ಟ್ರೀಯ ಕಮಿಟ್​ಮೆಂಟ್​ಗಳ ಮೇಲೆ ಪ್ರಭಾವ ಬೀರುತ್ತದೆ.

ಹಿದುಸ್ತಾನ್ ಟೈಮ್ಸ್ ಜೊತೆ ಮಾತಾಡಿರುವ ಬಿಸಿಸಿಐನ ಅಧಿಕಾರಿಯೊಬ್ಬರು, ‘ ಮುಂದಿನ ಐಪಿಎಲ್​ ಸೀಸನ್​ನಿಂದ ರೌಂಡ್​-ರಾಬಿನ್ ಫಾರ್ಮಾಟನಲ್ಲಿ ಪಂದ್ಯಗಳನ್ನಾಡಿಸಲು ನಾವು ಇನ್ನೂ ತಯಾರಿಲ್ಲ. ಪಂದ್ಯಗಳನ್ನು ಪ್ರಸಾರ ಮಾಡುವ ಹಕ್ಕು ಖರೀದಿಸಿರುವ ಬ್ರಾಡ್​ಕಾಸ್ಡರ್ ಸಹ ತಯಾರಿಲ್ಲ. ವಿದೇಶಿ ಆಟಗಾರರ ಲಭ್ಯತೆ ಕುರಿತಂತೆ ಸಮಸ್ಯೆಗಳು ಉದ್ಭವಿಸಿವೆ, ಅವರಿಗಾಗಿ ಸೂಕ್ತವಾದ ಕಿಂಡಿ ಸಿಗುತ್ತಿಲ್ಲ. ಮುಂಬರುವ ವರ್ಷಗಳಲ್ಲಿ ದೊಡ್ಡ ಕಿಂಡಿಯನ್ನು ನಾವು ಪರಿಗಣನೆಗೆ ತೆಗೆದುಕೊಳ್ಳಲಿದ್ದೇವೆ,’ ಎಂದು ಹೇಳಿದ್ದಾರೆ.

ಐಪಿಎಲ್ 2022 ಫಾರ್ಮಾಟ್​ನಲ್ಲಿ ಕೆಳಕಂಡ ಬದಲಾವಣೆಗಳು ಆಗಲಿವೆ:

-ಮೆಗಾ ಆಕ್ಷನ್​​ನಲ್ಲಿ ನಾಲ್ಕು ಆಟಗಾರರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆ

-94 ಪಂದ್ಯಗಳ ಲೀಗ್ ಫಾರ್ಮಾಟ್​ ಬದಲಿಗೆ ಎರಡು 10 ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಿ 74-ಪಂದ್ಯಗಳಲ್ಲಿ ಟೂರ್ನಿಯನ್ನು ಮುಗಿಸುವುದು

-54-ದಿನಗಳ ಸೀಸನ್ 60-ದಿನಗಳ ಸೀಸನ್​ಗೆ ವಿಸ್ತರಣೆ

-ಫ್ರಾಂಚೈಸಿಗಳ ಸಂಭಾವನೆ ಮಿತಿಯಲ್ಲಿ ಹೆಚ್ಚಳ

ಮೂಲಗಳ ಪ್ರಕಾರ ಹೊಸ ಫಾರ್ಮಾಟ್​ನಲ್ಲಿ ಹೆಚ್ಚು ಪಂದ್ಯಗಳು ಆಯೋಜನೆಗೊಳ್ಳುವುದರಿಂದ ಲಾಭಾಂಶ ಹೆಚ್ಚಿ, ಬಿಸಿಸಿಐ, ಫ್ರಾಂಚೈಸಿ ಮತ್ತು ಆಟಗಾರರ ಅದಾಯ ಹೆಚ್ಚಲಿದೆ. ಗಮನಿಸಬೇಕರುವ ಮತ್ತೊಂದು ಸಂಗತಿಯೆಂದರೆ. ಐಪಿಎಲ್ 2023 ಸೀಸನ್​ಗೆ ಮೊದಲು ಪ್ರಸರಣದ ಹಕ್ಕುಗಳ ನವೀಕರಣಗೊಳ್ಳುವುದರಿಂದ ಆದಾಯ ಮತ್ತಷ್ಟು ಹೆಚ್ಚಲಿದೆ. ಪ್ರಸ್ತುತವಾಗಿ 5 ವರ್ಚಗಳ ಅವಧಿಗೆ ಸ್ಟಾರ್ ಇಂಡಿಯಾ ಪ್ರಸರಧ ಹಕ್ಕುಗಳನ್ನು ಹೊಂದಿದ್ದು ಬಿಸಿಸಿಐ ಜೊತೆ ಅದು ಮಾಡಿಕೊಂಡಿರುವ ಒಪ್ಪಂದ 2022ರ ಸೀಸನ್​ಗೆ ನಂತರ ಕೊನೆಗೊಳ್ಳಲಿದೆ.

ಇದನ್ನೂ ಓದಿ: IPL: ಎರಡು ಹೊಸ ತಂಡಗಳ ಮೆಗಾ ಹರಾಜು ಯಾವಾಗ? ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದೇನು?

Published On - 8:02 pm, Tue, 6 July 21