ಇಂಗ್ಲೆಂಡ್ ಆಟಗಾರರಿಗೆ ಕೋವಿಡ್-19 ಸೋಂಕು, ಆತಂಕದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ

ಎರಡು ರಾಷ್ಟ್ರಗಳ ಮಧ್ಯೆ ಒಡಿಐಗಳ ಸರಣಿ ಅರಂಭವಾಗಲು ಕೇವಲ ಎರಡು ದಿನಗಳು ಬಾಕಿಯಿರುವಾಗ ಅತಿಥೇಯ ತಂಡದ ಮೂರು ಆಟಗಾರರು ಮತ್ತು ಸಪೋರ್ಟ್ ಸ್ಟಾಫ್​ನ ನಾಲ್ವರು ಸದಸ್ಯರು ಕೋವಿಡ್-19 ಸೋಂಕಿಗೊಳಗಾಗಿದ್ದಾರೆ.

ಇಂಗ್ಲೆಂಡ್ ಆಟಗಾರರಿಗೆ ಕೋವಿಡ್-19 ಸೋಂಕು, ಆತಂಕದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ
ಪಾಕಿಸ್ತಾನ ಕ್ರಿಕೆಟ್ ಮಂಡಳಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jul 07, 2021 | 1:04 AM

ಇಂಗ್ಲೆಂಡ್​ನಲ್ಲಿ ಕೋವಿಡ್-19 ಪಿಡುಗು ಇನ್ನೂ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ ಮತ್ತು ಕ್ರಿಕೆಟ್ ಪಂದ್ಯಗಳ ಮೇಲೆ ತನ್ನ ಕರಿನೆರಳು ಬೀರುವ ಭೀತಿ ಮೂಡಿಸಿದೆ ಇಂಗ್ಲಿಷ್ ಕ್ರಿಕೆಟ್ ತಂಡದ ಮೂವರು ಆಟಗಾರರು ಮತ್ತು ಸಪೋರ್ಟ್ ಸ್ಟಾಫ್ನ ನಾಲ್ವರು ಕೊವಿಡ್ ಸೋಂಕಿಗೊಳಗಾಗಿರುವುದು ಅಲ್ಲಿನ ಕ್ರಿಕೆಟ್ ವ್ಯವಸ್ಥೆಯಲ್ಲಿ ಕೋಲಾಹಲ ಮೂಡಿಸಿದೆ. ಏತನ್ಮಧ್ಯೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ಗೆ (ಈಸಿಬಿ) ಮಂಗಳವಾರ ಪತ್ರವೊಂದನ್ನು ಬರೆದು ತನ್ನ ಆಟಗಾರರನ್ನು ಸುರಕ್ಷಿತವಾಗಿ ಇಟ್ಟಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ ಅವರಿಗಾಗಿ ಮಾಡಿರುವ ವ್ಯವಸ್ಥೆ ಬಗ್ಗೆ ಸಂತೃಪ್ತಯನ್ನು ವ್ಯಕ್ತಡಿಸಿದೆ.

‘ವೈದ್ಯಕೀಯ ಸಮಿತಿ ಪರವಾಗಿ ಪಾಕಿಸ್ತಾನದ ಆಟಗಾರರಿಗೆ ಒದಗಿಸಿರುವ ಎಲ್ಲ ಸೌಕರ್ಯಗಳಿಗೆ ಪಿಸಿಬಿ ಧನ್ಯವಾದಗಳನ್ನು ಸಲ್ಲಿಸುತ್ತದೆ. ನಮ್ಮ ಆಟಗಾರರ ಸುರಕ್ಷತೆಗಾಗಿ ಮಾಡಿರುವ ಎಲ್ಲ ವ್ಯವಸ್ಥೆಗಳು ನಮಗೆ ತೃಪ್ತಿ ನೀಡಿವೆ. ಆಟಗಾರರು ಮತ್ತು ಸಪೋರ್ಟ್ ಸಿಬ್ಬಂದಿ ಉಳಿದುಕೊಂಡಿರುವ ಸ್ಥಳದಲ್ಲಿ ಕೋವಿಡ್-19 ಸೋಂಕಿನ ವಿರುದ್ಧ ಜಾರಿಯಲ್ಲಿಟ್ಟಿರುವ ನಿಯಮಾವಳಿಗಳು ಅವರನ್ನು ಸರಣಿ ಮುಗಿಯುವವರೆಗೆ ಸುರಕ್ಷಿತವಾಗಿಡುತ್ತವೆ ಎಂಬ ಭರವಸೆ ನಮಗಿದೆ,’ ಎಂದು ಮಂಗಳವಾರದಂದು ತಾನು ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ಪಿಸಿಬಿ ತಿಳಿಸಿದೆ.

‘ಪಿಸಿಬಿ ಟೀಮ್ ಮ್ಯಾನೇಜ್ಮೆಂಟ್ ಜೊತೆ ಸಹ ಸತತವಾಗಿ ಸಂಪರ್ಕದಲ್ಲಿದ್ದು ಕೋವಿಡ್ ಸೋಂಕಿನ ಬಗ್ಗೆ ಹೋಟೆಲ್ನಲ್ಲಿ ಮತ್ತು ಪಂದ್ಯ ನಡೆಯುವಾಗ ಮೈದಾನದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ತಿಳಿಸಲಾಗಿದೆ,’ ಅಂತಲೂ ಪಿಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳ ಸರಣಿ ಗುರುವಾರದಿಂದ ಆರಂಭವಾಗಲಿದೆ.

ಎರಡು ರಾಷ್ಟ್ರಗಳ ಮಧ್ಯೆ ಒಡಿಐಗಳ ಸರಣಿ ಅರಂಭವಾಗಲು ಕೇವಲ ಎರಡು ದಿನಗಳು ಬಾಕಿಯಿರುವಾಗ ಅತಿಥೇಯ ತಂಡದ ಮೂರು ಆಟಗಾರರು ಮತ್ತು ಸಪೋರ್ಟ್ ಸ್ಟಾಫ್​ನ ನಾಲ್ವರು ಸದಸ್ಯರು ಕೋವಿಡ್-19 ಸೋಂಕಿಗೊಳಗಾಗಿದ್ದಾರೆ. ಬ್ರಿಸ್ಟಲ್ನಲ್ಲಿ ಶ್ರೀಲಂಕಾ ವಿರುದ್ಧ ಸೋಮವಾರದಂದು ನಡೆದ ಮೊದಲ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯ ನಂತರ ಆಟಗಾರರ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಟೆಸ್ಟ್ ಗೆ ಕಳಿಸಲಾಗಿತ್ತು. ಒಟ್ಟು 7 ಜನ ಸೋಂಕಿಗೀಡಾಗಿರುವುದು ಟೆಸ್ಟ್​ಗಳಿಂದ ಗೊತ್ತಾಗಿದೆ.

ಸೋಂಕು ತಾಕಿಸಿಕೊಂಡಿರುವರ ಹೆಸರುಗಳನ್ನು ಗೌಪ್ಯವಾಗಿಡಲಾಗಿದೆ. ಟೀಮಿನ ಇತರ ಸದಸ್ಯರನ್ನು ಸೋಂಕಿತರ ನಿಕಟವರ್ತಿಗಳೆಂದು ಪರಿಗಣಿಸಲಾಗಿದೆ.

ಪಾಕಿಸ್ತಾನದ ವಿರುದ್ಧ ನಿಗದಿಯಾಗಿರುವ ಮೂರು ಒಡಿಐ ಮತ್ತು ಮೂರು ಟಿ20ಐ ಪಂದ್ಯಗಳು ಶೆಡ್ಯೂಲ್ ಪ್ರಕಾರ ನಡೆಯಲಿವೆ ಎಂದು ಈಸಿಬಿ ಹೇಳಿದೆ.

ಪಿಡುಗಿನ ಪೀಡೆಯಿಂದಾಗಿ, ಪಾಕಿಸ್ತಾನವನ್ನು ಎದುರಿಸಲಿರುವ ಇಂಗ್ಲೆಂಡ್ ತಂಡದಲ್ಲಿ ಹೊಸ ಆಟಗಾರರನ್ನು ಆಡಿಸುವಂಥ ಅನಿವಾರ್ಯತೆ ಈಸಿಬಿಗೆ ಎದುರಾಗಿದೆ. ಭಾರತದ ವಿರುದ್ಧ ಸರಣಿ ಆಡಿದ ನಂತರ ವಿಶ್ರಾಂತಿ ಪಡೆದಿದ್ದ ಇಂಗ್ಲೆಂಡ್ ಮತ್ತು ವಿಶ್ವದ ಅಗ್ರಮಾನ್ಯ ಆಲ್-ರೌಂಡರ್ ಬೆನ್ಸ್ ಸ್ಸ್ಟೋಕ್ಸ್ ತಂಡಕ್ಕೆ ಮರಳಿದ್ದು ಅವರಿಗೆ ಟೀಮಿನ ನಾಯಕತ್ವವನ್ನೂ ವಹಿಸಿಕೊಡಲಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಟೀಮ್ ಇಂಡಿಯಾದ ಸದಸ್ಯರು ಸಹ ಇಂಗ್ಲೆಂಡನಲ್ಲೇ ಇದ್ದು ಎಲ್ಲರಿಗೂ ಜುಲೈ 14 ರವರೆಗೆ ರಜೆ ನೀಡಲಾಗಿದೆ. ಅವರೆಲ್ಲ ಜುಲೈ 14 ರಂದು ಜೊತೆಗೂಡಲಿದ್ದಾರೆ. ಬಯೋ-ಬಬಲ್ನಿಂದ ಅವರು ಆಚೆ ಇರುವುದರಿಂದ ಬಹಳ ಎಚ್ಚರಿಕೆಯಿಂದ ಇರುವ ಅವಶ್ಯಕತೆಯಿದೆ. ಯಾರಿಗಾದರೂ ಸೋಂಕು ತಗುಲಿದರೆ, ಸರಣಿಯನ್ನೇ ರದ್ದು ಮಾಡಬೇಕಾದ ಪ್ರಸಂಗ ಎದುರಾಗಬಹುದು.

ಇದನ್ನೂ ಓದಿ:  India vs England: ಬದುಕಿನ ಉತ್ಕೃಷ್ಟ ಕ್ರಿಕೆಟ್​ ಸೀಸನ್: ಇಂಗ್ಲೆಂಡ್ ವಿರುದ್ಧ ಸರಣಿಗಳನ್ನು ಗೆದ್ದ ನಂತರ ಕೋಚ್ ರವಿಶಾಸ್ತ್ರಿ ಉದ್ಗಾರ