India vs England: ಬದುಕಿನ ಉತ್ಕೃಷ್ಟ ಕ್ರಿಕೆಟ್​ ಸೀಸನ್: ಇಂಗ್ಲೆಂಡ್ ವಿರುದ್ಧ ಸರಣಿಗಳನ್ನು ಗೆದ್ದ ನಂತರ ಕೋಚ್ ರವಿಶಾಸ್ತ್ರಿ ಉದ್ಗಾರ

India vs England: ಪುಣೆಯಲ್ಲಿ ಕೊನೆಗೊಂಡ ಮೂರನೇ ಹಾಗೂ ಅಂತಿಮ ಒಡಿಐ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಪಡೆ ಇಂಗ್ಲೆಂಡನ್ನು 7 ರನ್​ಗಳಿಂದ ಸೋಲಿಸಿದ ನಂತರ ಕೋಚ್ ರವಿಶಾಸ್ತ್ರಿ ತಮ್ಮ ಟ್ವಿಟ್ಟರ್​ ಹ್ಯಾಂಡಲ್​ನಲ್ಲಿ ಟೀಮಿನ ಸದಸ್ಯರನ್ನು ಮನಸಾರೆ ಕೊಂಡಾಡಿದ್ದಾರೆ.

India vs England: ಬದುಕಿನ ಉತ್ಕೃಷ್ಟ ಕ್ರಿಕೆಟ್​ ಸೀಸನ್: ಇಂಗ್ಲೆಂಡ್ ವಿರುದ್ಧ ಸರಣಿಗಳನ್ನು ಗೆದ್ದ ನಂತರ  ಕೋಚ್ ರವಿಶಾಸ್ತ್ರಿ ಉದ್ಗಾರ
ರವಿ ಶಾಸ್ತ್ರೀ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 29, 2021 | 11:20 PM

ಪುಣೆ: ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ವಿಶ್ವದ ಎರಡು ಅಗ್ರಮಾನ್ಯ ಟೀಮುಗಳನ್ನು ಸೋಲಿಸಿರುವ ಟೀಮ್ ಇಂಡಿಯಾ ಹೆಮ್ಮೆಯಿಂದ ಬೀಗುತ್ತಾ ಆಕಾಶದಲ್ಲಿ ತೇಲಾಡುತ್ತಿದೆ. ಇಂಡಿಯನ್ ಪ್ರಿಮೀಯರ್ ಲೀಗ್​ನ ಎರಡು ಸೀಸನ್​ಗಳ ನಡುವೆ ಭಾರತವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಆಡಿದ 6 ಸರಣಿಗಳಲ್ಲಿ (ಎಲ್ಲ ಫಾರ್ಮಾಟ್​ಗಳು ಸೇರಿ) ಐದರಲ್ಲಿ ಗೆದ್ದು ಕೇವಲ ಒಂದನ್ನು ಮಾತ್ರ ಸೋತಿದೆ. ಮೊದಲಿಗೆ ಭಾರತ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್, 3 ಒಡಿಐ ಹಾಗೂ 3 ಟಿ20ಐ ಪಂದ್ಯಗಳ ಸರಣಿಗಳನ್ನು ಆಡಿ, ಸ್ವದೇಶದಲ್ಲಿ ಇಂಗ್ಲೆಂಡ್​ ವಿರುದ್ಧ 4 ಟೆಸ್ಟ್​, 5 ಟಿ20ಐ ಮತ್ತು 3 ಒಡಿಐಗಳ ಸರಣಿಗಳನ್ನಾಡಿತು. ಭಾರತ ಈ ಸರಣಿಗಳಲ್ಲಿ ಪಡೆದ ಅಭೂತಪೂರ್ವ ಯಶಸ್ಸಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ ಅವರು ತಮ್ಮ ‘ಬದುಕಿನ ಅತ್ಯುತ್ತಮ ಕ್ರಿಕೆಟ್​ ಸೀಸನ್’ ಅಂತ ಉದ್ಗರಿಸಿದ್ದಾರೆ.

ರವಿವಾರದಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಸಂಸ್ಥೆ ಮೈದಾನದಲ್ಲಿ ಅತ್ಯಂತ ರೋಮಾಂಚಕಾರಿಯಾಗಿ ಕೊನೆಗೊಂಡ ಮೂರನೇ ಹಾಗೂ ಅಂತಿಮ ಒಡಿಐ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಪಡೆ ಇಂಗ್ಲೆಂಡನ್ನು 7 ರನ್​ಗಳಿಂದ ಸೋಲಿಸಿದ ನಂತರ ರವಿ ಟ್ವಿಟ್ಟರ್​ ಹ್ಯಾಂಡಲ್​ನಲ್ಲಿ ಟೀಮಿನ ಸದಸ್ಯರನ್ನು ಮನಸಾರೆ ಕೊಂಡಾಡಿದ್ದಾರೆ. ಈ ಎರಡು ಸೀಸನ್​ಗಲ್ಲಿ ನೀಡಿದ ಅಪ್ರತಿಮ ಪ್ರದರ್ಶನಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

‘ವಿಶ್ವದ ಎರಡು ವಿಭಿನ್ನ ಗೋಳಾರ್ಧಗಳಲ್ಲಿ ಅತ್ಯಂತ ವಿಷಮ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಎರಡು ಬಲಿಷ್ಠ ಕ್ರಿಕೆಟಿಂಗ್ ರಾಷ್ಟ್ರಗಳ ವಿರುದ್ಧ ಕ್ರಿಕೆಟ್​ನ​ ಎಲ್ಲ ಫಾರ್ಮಾಟ್​ಗಳಲ್ಲಿ ಅಪ್ರತಿಮ ಪ್ರದರ್ಶಗಳನ್ನು ನೀಡಿ ಈ ಜೀವನ ಪರ್ಯಂತ ಮರೆಯಲಾದಗಂಥ ಸೀಸನ್ ನೀಡಿದ್ದಕ್ಕೆ ಎಲ್ಲ ಸದಸ್ಯರಿಗೆ ಅಭಿನಂದನೆಗಳು. ನಿಮಗೆಲ್ಲರಿಗೆ ನನ್ನ ಸಲಾಂ’ ಎಂದು ರವಿ ಟ್ವೀಟ್ ಮಾಡಿದ್ದಾರೆ.

ರವಿ ಹೇಳುತ್ತಿರುವ ಈ ಸೀಸನ್ ಶುರುವಾಗಿದ್ದು ಆಸ್ಟ್ರೇಲಿಯಾ ವಿರುದ್ಧ ಕಳೆದ ನವೆಂಬರ್ ತಿಂಗಳಿನ ಕೊನೆಭಾಗದಲ್ಲಿ. ಕಾಂಗರೂಗಳಿಗೆ ಒಂದು ದಿನದ ಪಂದ್ಯಗಳ ಸರಣಿಯನ್ನು 1-2 ರಿಂದ ಬಿಟ್ಟಕೊಟ್ಟ ಭಾರತ, ನಂತರ ನಡೆದ 3-ಪಂದ್ಯಗಳ ಟಿ20ಐ ಸರಣಿಯನ್ನು ಗೆದ್ದಿದಲ್ಲದೆ 4- ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಆಂತರದಿಂದ ಗೆದ್ದು ಇತಿಹಾಸ ನಿರ್ಮಿಸಿತು. ನಿಮಗೆ ಚೆನ್ನಾಗಿ ಗೊತ್ತಿದೆ, ಮೊದಲೆ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ಕೇವಲ 36 ರನ್​ಗಳಿಗೆ ಅಲೌಟ್​ ಆಗಿ ದಯನೀಯ ಸೋಲು ಅನುಭವಿಸಿತ್ತು.

ಕಳೆದ 32 ವರ್ಷಗಳವರೆಗೆ ಬ್ರಿಸ್ಬೇನ್​ನ ಗಬ್ಬಾ ಮೈದಾನದಲ್ಲಿ ಅಜೇಯವಾಗಿ ಉಳಿದಿದ್ದ ಆಸ್ಟ್ರೇಲಿಯಾವನ್ನು ಸರಣಿಯ ಕೊನೆಯ ಟೆಸ್ಟ್​ನಲ್ಲಿ ಸೋಲಿಸಿ ಭಾರತ ಪಾರಮ್ಯ ಮೆರೆದಿತ್ತು.

ಇಂಗ್ಲೆಂಡ್​ ವಿರುದ್ಧ ಆಡಿದ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲೂ ಭಾರತ 227 ರನ್ಗಳ ಆವಮಾನಕರ ಸೋಲು ಆನುಭವಿಸಿತ್ತು. ಆದರೆ ಉಳಿದ ಮೂರು ಟೆಸ್ಟ್​ಗಳಲ್ಲಿ ಚಾಂಪಿಯನ್​ಗಳಂತೆ ಆಡಿ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತು. ಅಹಮದಾಬಾದಿನ ವಿಶ್ವದ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ 5 ಪಂದ್ಯಗಳ ಟಿ20 ಸರಣಿಯನ್ನು ಜಿದ್ದಾಜಿದ್ದಿನ ಹೋರಾಟದ ನಂತರ 3-2 ಅಂತರದ ಜಯ ಸಾಧಿಸಿತು. ಕೊನೆಯಲ್ಲಿ, ನಿನ್ನೆ ಮುಕ್ತಾಯವಾದ ಒಂದು ದಿನದ ಪಂದ್ಯಗಳ ಸರಣಿಯಲ್ಲೂ 2-1 ಪಂದ್ಯಗಳ ರೋಚಕ ಗೆಲುವು ಸಾಧಿಸಿತು.

ರವಿ ಉಲ್ಲೇಖಿಸಿರುವ ಈ ಋತುವಿನ ಮತ್ತೊಂದು ಪ್ರಮುಖ ಅಂಶವೆಂದರೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದ ಭಾರತೀಯ ಆಟಗಾರರೆಲ್ಲ ಸಾಮರ್ಥ್ಯ ಪ್ರದರ್ಶಿಸಿ ತಮ್ಮ ಅಯ್ಕೆ ಅಕಸ್ಮಿಕವಲ್ಲ ಅನ್ನುವುದನ್ನು ಸಾಬೀತು ಮಾಡಿದರು. ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಟಿ.ನಟರಾಜನ್ ಮೊದಲಾದವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವಕಾಶ ಪಡೆದು ಮಿಂಚಿದರು. ಹಾಗೆಯೇ, ಅಕ್ಷರ್ ಪಟೇಲ್, ಇಶಾನ್ ಕಿಷನ್, ಸೂರ್ಯಕುಮಾರ್ ಯಾದವ್, ಪ್ರಸಿಧ್ ಕ್ರಿಷ್ಣ, ಕೃಣಾಲ್ ಪಾಂಡ್ಯ ಮುಂತಾವರಿಗೆ ಇಂಗ್ಲೆಂಡ್ ವಿರುದ್ಧ ಆಡಿದ ಸರಣಿಗಳಲ್ಲಿ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಾಗ ಎಲ್ಲರೂ ತಮ್ಮ ತಮ್ಮ ಸಾಮರ್ಥ್ಯಗಳಿಗೆ ತಕ್ಕ ಪ್ರದರ್ಶನಗಳನ್ನು ನೀಡಿದರು. ದೇಶವನ್ನು ಪ್ರತಿನಿಧಿಸುತ್ತಾ ಅಂತರರಾಷ್ಟ್ರೀಯ ಕ್ರಿಕೆಟ್​ ಆಡುವಾಗ ಆಟಗಾರರು ಅನುಭವಿಸುವ ಒತ್ತಡವನ್ನು ಇವರೆಲ್ಲ ಅತ್ಯಂತ ಸಮರ್ಥವಾಗಿ ನಿಭಾಯಿದರು.

ಇವರ ಯಶಸ್ಸು ಭಾರತದಲ್ಲಿನ ಕ್ರಿಕೆಟ್ ವ್ಯವಸ್ಥೆ ಮತ್ತು ಬೆಂಚ್ ಸ್ಟ್ರೆಂಗ್ತ್ ಹೇಗಿದೆ ಅನ್ನೋದನ್ನು ವಿವರಿಸುತ್ತದೆ. ಇವರಷ್ಟೇ ಪ್ರತಿಭಾವಂತ ಆಟಗಾರರು ತಮ್ಮ ಸರದಿ ಯಾವಾಗ ಬಂದೀತು ಅಂತ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಇದನ್ನೂ ಓದಿ: India vs England | ಕ್ರಿಕೆಟನ್ನೇ ವೃತ್ತಿಬದುಕು ಮಾಡಿಕೊಳ್ಳುವಂತೆ ಯಾರೂ ನನಗೆ ಸಲಹೆ ನೀಡಲಿಲ್ಲ: ಪ್ರಸಿಧ್ ಕ್ರಿಷ್ಣ

ಇದನ್ನೂ ಓದಿ: India vs England: ನಾನೆಂದಿಗೂ ಶತಕಗಳಿಗೋಸ್ಕರ ಆಡಿದವನಲ್ಲ! ನಿವೃತ್ತಿಯ ಬಳಿಕ ಅಂಕಿ- ಅಂಶ ಗಣನೆಗೆ ಬರುವುದಿಲ್ಲ: ಕಿಂಗ್ ಕೊಹ್ಲಿ

Published On - 8:23 pm, Mon, 29 March 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ