ಶ್ರೇಯಸ್ ಅಯ್ಯರ್ಗೆ ಏಪ್ರಿಲ್ನಲ್ಲಿ ಶಸ್ತ್ರಚಿಕಿತ್ಸೆ, 5 ತಿಂಗಳು ಅವಧಿಗೆ ಕ್ರಿಕೆಟ್ನಿಂದ ದೂರ!
ಮುಂದಿನ ತಿಂಗಳು ಆರಂಭವಾಗಲಿರುವ ಐಪಿಎಲ್ನಲ್ಲಿ ಅಯ್ಯರ್ ಭಾಗವಹಿಸುವುದಿಲ್ಲ. ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕ ಹೆಸರನ್ನು ಘೋಷಿಸಬೇಕಿದೆ. ಅವರು ಕೇವಲ ಐಪಿಎಲ್ ಮಾತ್ರವಲ್ಲ, ಮುಂದಿನ 5 ತಿಂಗಳು ಕಾಲ ಕ್ರಿಕೆಟ್ ಮೈದಾನಕ್ಕಿಳಿಯಲಾರರು ಎಂದು ಮೂಲಗಳು ತಿಳಿಸಿವೆ
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇಂಡಿಯನ್ ಪ್ರಿಮೀಯರ್ ಸೀಸನ್ 14 ಶುರುವಾಗುವ ಮೊದಲೇ ಭಾರಿ ಆಘಾತ ಎದುರಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ಫೀಲ್ಡ್ ಮಾಡುವಾಗ ಎಡಭುಜದ ಮೂಳೆಯನ್ನು ಡಿಸ್ಲೊಕೇಟ್ ಮಾಡಿಕೊಂಡ ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಟೀಮಿನ ನಾಯಕ ಶ್ರೇಯಸ್ ಆಯ್ಯರ್ ಶಸ್ತ್ರಚಿಕಿತ್ಸೆಗೊಳಗಾಗಲಿದ್ದು, 5 ತಿಂಗಳು ಕಾಲ ಕ್ರಿಕೆಟ್ನಿಂದ ದೂರವುಳಿಯಲಿದ್ದಾರೆ. ಅವರ ಚೇತರಿಸಿಕೊಳ್ಳಲೇ 5 ತಿಂಗಳು ಬೇಕಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲಗಳು ತಿಳಿಸಿವೆ.
ಇಂಗ್ಲೆಂಡ್ ಇನ್ನಿಂಗ್ಸ್ನ 8ನೇ ಓವರ್ನಲ್ಲಿ (ಶಾರ್ದುಲ್ ಠಾಕೂರ್ ಬೌಲರ್) ಅಯ್ಯರ್ ಗಾಯಗೊಂಡರು. ಟೀಮ್ ಇಂಡಿಯಾದ ಫಿಸಿಯೋಥೆರಪಿಸ್ಟ್, ಅಯ್ಯರ್ಗೆ ಮೈದಾನದಲ್ಲೇ ಚಿಕಿತ್ಸೆ ಒದಗಿಸಿದರಾದರೂ ನೋವು ತಡೆದುಕೊಳ್ಳುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಅವರನ್ನು ಕೂಡಲೇ ಸ್ಕ್ಯಾನಿಂಗ್ ಮಾಡಿಸಲು ಕರೆದೊಯ್ಯಲಾಯಿತು.
ಮುಂದಿನ ತಿಂಗಳು ಆರಂಭವಾಗಲಿರುವ ಐಪಿಎಲ್ನಲ್ಲಿ ಅಯ್ಯರ್ ಭಾಗವಹಿಸುವುದಿಲ್ಲ. ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕ ಹೆಸರನ್ನು ಘೋಷಿಸಬೇಕಿದೆ. ಅವರು ಕೇವಲ ಐಪಿಎಲ್ ಮಾತ್ರವಲ್ಲ, ಮುಂದಿನ 5 ತಿಂಗಳು ಕಾಲ ಕ್ರಿಕೆಟ್ ಮೈದಾನಕ್ಕಿಳಿಯಲಾರರು ಎಂದು ಮೂಲಗಳು ತಿಳಿಸಿವೆ. ಸೆಪ್ಟಂಬರ್ನಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟಿ20 ಸರಣಿಗಳ ಮೊದಲು ಅವರ ಚೇತರಿಕೆ ಹಂತದ ಬಗ್ಗೆ ಪರಶೀಲಿಸಲಾಗುವುದು.
ಅಯ್ಯರ್ ಶಸ್ತ್ರಚಿಕಿತ್ಸೆ ಒಳಗಾಗಲಿರುವುದರಿಂದ ಐಪಿಎಲ್ ಮತ್ತು ಆಗಸ್ಟ್ನಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸವನ್ನು ತಪ್ಪಿಸಿಕೊಳ್ಳಲಿದ್ದಾರೆ. ಅವರ ಆಪರೇಶನ್ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ, ಎಂದು ಮೂಲಗಳು ತಿಳಿಸಿವೆ. ಈ ಮೊದಲು ಅಯ್ಯರ್ ಐಪಿಎಲ್ 2021 ಮೊದಲಾರ್ಧ ಮಾತ್ರ ಅಡಲಾರರು ಅಂತ ಹೇಳಲಾಗಿತ್ತು.
ಹಾಗಾದರೆ, ಡೆಲ್ಲಿ ಕ್ಯಾಪಿಟಲ್ಸ್ ಟೀಮಿನ ನಾಯಕತ್ವ ಯಾರಿಗೆ ಒಲಿಯಲಿದೆ ಎಂಬ ಚರ್ಚೆಗಳು ಕ್ರಿಕೆಟ್ ವಲಯದಲ್ಲಿ ಶುರುವಾಗಿವೆ. ಅಯ್ಯರ್ ಕೇವಲ ಉತ್ತಮ ಬ್ಯಾಟ್ಸ್ಮನ್ ಆಗಿರದೆ ಟೀಮನ್ನು ಅದ್ಭುತವಾಗಿ ಮುನ್ನಡೆಸಿದ್ದರು. ಮೂಲಗಳ ಪ್ರಕಾರ, ಶಿಖರ್ ಧವನ್ ಇಲ್ಲವೇ ರಿಷಭ್ ಪಂತ್ ಅವರಿಗೆ ನಾಯಕತ್ವದ ಹೊಣೆಗಾರಿಕೆಯನ್ನು ನೀಡುವ ಸಾಧ್ಯತೆಗಳಿವೆ. ಈ ಹಿಂದೆ ಐಪಿಎಲ್ನ ಬೇರೆ ಬೇರೆ ತಂಡಗಳಿಗೆ ನಾಯಕರಾಗಿದ್ದ ರವಿಚಂದ್ರನ್ ಅಶ್ವಿನ್ ಮತ್ತು ಅಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಸಹ ನಾಯಕತ್ವಕ್ಕೆ ಪರಿಗಣಿಸಲಾಗುತ್ತಿದೆ ಎಂದು ಟೀಮಿನ ಮೂಲಗಳು ತಿಳಿಸಿವೆ.
ಕಳೆದ ಬಾರಿ ರನ್ನರ್ಸ್-ಅಪ್ ಆಗಿದ್ದ ಡೆಲ್ಲಿ ತಂಡ ಈ ಬಾರಿಯ ಅಭಿಯಾನವನ್ನು ಮೂರು ಬಾರಿ ಪ್ರಶಸ್ತಿ ಗೆದ್ದಿರುವ ಚೆನೈ ಸೂಪರ್ ಕಿಂಗ್ಸ್ ವಿರುದ್ಧ ಏಪ್ರಿಲ್ 10 ರಂದು ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆಯುವ ಪಂದ್ಯದೊಂದಿಗೆ ಆರಂಭಿಸಲಿದೆ.
ಅಯ್ಯರ್ ಅವರ ಗಾಯ ಮತ್ತು ಅಲಭ್ಯತೆ ಬಗ್ಗೆ ಮಾರ್ಚ್ 25ರಂದು ಟ್ವೀಟ್ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಮಾಲೀಕರಲ್ಲಿ ಒಬ್ಬರಾಗಿರುವ ಪಾರ್ಥ ಜಿಂದಾಲ್, ‘ನಮ್ಮ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅವರಿಗೆ ಗಾಯವಾಗಿರುವ ಸಂಗತಿ ಕೇಳಿ ಆಘಾತಕಕ್ಕೊಳಗಾಗಿದ್ದೇನೆ, ಕ್ಯಾಪ್ಟನ್ ನೀವು ಎದೆಗುಂದಬಾರದು, ನೀವು ಮೇಗ ಗುಣಮುಖರಾಗುವ ನಿರೀಕ್ಷೆಯಿದೆ. ನೀವು ಮತ್ತಷ್ಟು ಸದೃಢರಾಗಿ ವಾಪಸ್ಸಾಗುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಟಿ20 ವಿಶ್ವಕಪ್ನಲ್ಲಾಡುವ ಭಾರತೀಯ ತಂಡಕ್ಕೆ ನಿಮ್ಮ ಅವಶ್ಯಕತೆಯಿದೆ,’ ಎಂದಿದ್ದಾರೆ.
Absolutely devastated and gutted for our skipper @ShreyasIyer15 – stay strong captain – hope for a very quick recovery. Have full faith that you will come back even stronger from this. India needs you in the T20 World Cup. @DelhiCapitals @BCCI
— Parth Jindal (@ParthJindal11) March 25, 2021
ಐಸಿಸಿ 2021 ಟಿ20 ವಿಶ್ವಕಪ್ ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲೇ ನಡೆಯಲಿದೆ.
ಇದನ್ನೂ ಓದಿ: India vs England: ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್- ಶ್ರೇಯಸ್ ಇಂಜುರಿ! ಅಯ್ಯರ್ ಐಪಿಎಲ್ ಆಡುವುದು ಡೌಟ್?
Published On - 11:19 pm, Mon, 29 March 21