ದಿಲೀಪ್​ ಕುಮಾರ್​ ನಿಧನಕ್ಕೆ ಪಾಕ್​ ಕ್ರಿಕೆಟರ್ ಶಾಹಿದ್​ ಅಫ್ರಿದಿ ಸಂತಾಪ; ಯೂಸುಫ್ ಖಾನ್ ಸಾಹೀಬ್​ ಸದಾ ನಮ್ಮ ಹೃದಯದಲ್ಲಿ ನೆಲೆಸಿರುತ್ತಾರೆ ಎಂದು ಟ್ವೀಟ್​

Dilip Kumar Death: ದಿಲೀಪ್​ ಕುಮಾರ್​ ಮೂಲತಃ ಮುಸ್ಲಿಂ ಕುಟುಂಬದಿಂದ ಬಂದವರು. ಅವರ ಮೊದಲ ಹೆಸರು ಮೊಹಮ್ಮದ್​ ಯೂಸುಫ್ ಖಾನ್​. ನಂತರ ಅವರು ನಿರ್ಮಾಪಕಿ ದೇವಿಕಾ ರಾಣಿಯ ಮಾತಿಗೆ ಬೆಲೆ ಕೊಟ್ಟು ದಿಲೀಪ್​ ಕುಮಾರ್​ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.

ದಿಲೀಪ್​ ಕುಮಾರ್​ ನಿಧನಕ್ಕೆ ಪಾಕ್​ ಕ್ರಿಕೆಟರ್ ಶಾಹಿದ್​ ಅಫ್ರಿದಿ ಸಂತಾಪ; ಯೂಸುಫ್ ಖಾನ್ ಸಾಹೀಬ್​ ಸದಾ ನಮ್ಮ ಹೃದಯದಲ್ಲಿ ನೆಲೆಸಿರುತ್ತಾರೆ ಎಂದು ಟ್ವೀಟ್​
ಶಾಹಿದ್ ಅಫ್ರಿದಿ
Follow us
TV9 Web
| Updated By: Lakshmi Hegde

Updated on:Jul 07, 2021 | 1:02 PM

ಇಂದು ಮುಂಜಾನೆ ನಿಧನರಾದ ದಿಲೀಪ್​ ಕುಮಾರ್​​ ಅವರಿಗೆ ದೇಶದ ಎಲ್ಲ ಕ್ಷೇತ್ರದ ಗಣ್ಯರು, ಅವರ ಅಭಿಮಾನಿಗಳು ಗೌರವ ಅರ್ಪಿಸುತ್ತಿದ್ದಾರೆ. ಅವರ ಸಾವಿನಿಂದಾದ ನೋವು ವ್ಯಕ್ತಪಡಿಸುತ್ತಿದ್ದಾರೆ. ಹಾಗೇ, ಪಾಕಿಸ್ತಾನದ ಕ್ರಿಕೆಟರ್ ಶಾಹಿದ್​ ಅಫ್ರಿದಿ ಕೂಡ ದಿಲೀಪ್​ ಕುಮಾರ್​ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿ ಗೌರವ ಸಲ್ಲಿಸಿದ್ದಾರೆ. ದಿಲೀಪ್​ ಕುಮಾರ್​ ಕಳೆದ ಕೆಲವು ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 7.30ರಹೊತ್ತಿಗೆ ಅವರು ನಿಧನರಾಗಿದ್ದಾರೆ.

ದಿಲೀಪ್​ ಕುಮಾರ್​ ಮೂಲತಃ ಮುಸ್ಲಿಂ ಕುಟುಂಬದಿಂದ ಬಂದವರು. ಅವರ ಮೊದಲ ಹೆಸರು ಮೊಹಮ್ಮದ್​ ಯೂಸುಫ್ ಖಾನ್​. ನಂತರ ಅವರು ನಿರ್ಮಾಪಕಿ ದೇವಿಕಾ ರಾಣಿಯ ಮಾತಿಗೆ ಬೆಲೆ ಕೊಟ್ಟು ದಿಲೀಪ್​ ಕುಮಾರ್​ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಇದೀಗ ಶಾಹೀದ್​ ಅಫ್ರಿದಿ ಯೂಸುಫ್​ ಖಾನ್​ ಹೆಸರನ್ನು ಉಲ್ಲೇಖಿಸಿಯೇ ತಮ್ಮ ಗೌರವ ಸಲ್ಲಿಸಿದ್ದಾರೆ. ದಿಲೀಪ್​ ಕುಮಾರ್ ಎಂಬ ಹ್ಯಾಷ್​ಟ್ಯಾಗ್ ಬಳಸಿದ್ದಾರೆ.

ನಾವೆಲ್ಲ ಅಲ್ಲಾನಿಗೇ ಸೇರಿದವರು..ಮತ್ತು ಒಂದು ದಿನ ಅವನಿದ್ದಲ್ಲಿಗೇ ಹೋಗುತ್ತೇವೆ. ಯೂಸುಫ್ ಖಾನ್​ ಸಾಹೀಬ್​ರನ್ನು ಕಳೆದುಕೊಂಡಿದ್ದು ನಮಗೆಲ್ಲರಿಗೂ ನಿಜಕ್ಕೂ ನಷ್ಟ. ಅವರು ನಮ್ಮ ಹೃದಯದಲ್ಲಿ ಸದಾ ನೆಲೆಸಿರುತ್ತಾರೆ. ಸೈರಾ ಬಾನು ಸಾಹೀಬಾರಿಗೆ ನನ್ನ ಸಾಂತ್ವನಗಳು ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ. ಭಾರತೀಯ ಕ್ರಿಕೆಟ್​ ಆಟಗಾರರಾದ ವೀರೇಂದ್ರ ಸೆಹ್ವಾಗ್​, ಧವನ್​ ಸೇರಿ ಹಲವರು ದಿಲೀಪ್​ ಕುಮಾರ್ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ಕೇರಳ ಮಾಡೆಲ್ ಅಂತಿದ್ರು, ಈಗ ಕರ್ನಾಟಕ ಮಾಡೆಲ್ ಆಗಿದೆ; ಸಚಿವ ಆರ್.ಅಶೋಕ್

Published On - 1:00 pm, Wed, 7 July 21