ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯ ಹೆಸರನ್ನು ಮರುನಾಮಕರಣ ಮಾಡುವ ಭಾರತದ ಸರ್ಕಾರದ ಕ್ರಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹಲವು ವರ್ಷಗಳಿಂದ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಕ್ರೀಡಾಪಟುಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಅವರ ಶ್ರೇಷ್ಠತೆಗಾಗಿ ನೀಡಲಾಗುತ್ತಿದೆ. ಆದಾಗ್ಯೂ, ಆಗಸ್ಟ್ 6, 2021 ರಿಂದ ಪ್ರಶಸ್ತಿಯ ಹೆಸರನ್ನು ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಬದಲಾಯಿಸಲಾಯಿತು.
ಈ ಬದಲಾವಣೆಯನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದರು. ದೇಶದಾದ್ಯಂತ ಅನೇಕ ಜನರ ಮನವಿಯ ಮೆರೆಗೆ ಅವರ ಹೆಸರನ್ನು ಬದಲಾಯಿಸುವಂತೆ ಮಾಡಿತು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ರಾಜೀವ್ ಗಾಂಧಿ ಸ್ವತಃ ಪ್ರಧಾನಿಯಾಗಿದ್ದರು. ಹೀಗಾಗಿ ಅವರ ಗೌರವಾರ್ಥವಾಗಿ ಅತ್ಯುನ್ನತ ಕ್ರೀಡಾ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಒಬ್ಬ ದಂತಕಥೆಗೆ ನೀಡುವ ಸೂಕ್ತವಾದ ಗೌರವವಾಗಿದೆ
ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, ಪ್ರಶಸ್ತಿಗೆ ಕ್ರೀಡಾ ದಂತಕಥೆಯ ಹೆಸರನ್ನು ಇಡಬೇಕು ಎಂದು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೇಜರ್ ಧ್ಯಾನ್ ಚಂದ್ ಭಾರತದ ಮೊದಲ ಕ್ರೀಡಾ ಪ್ರತಿಭೆಗಳಲ್ಲಿ ಒಬ್ಬರು. ಅವರು ಹಾಕಿ ಆಟಗಾರರಾಗಿದ್ದರು ಮತ್ತು ಭಾರತ ಸತತ ಮೂರು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. (1928, 1932, ಮತ್ತು 1936 ರಲ್ಲಿ). ಹೀಗಾಗಿ ಪ್ರಶಸ್ತಿಯನ್ನು ಮರುಹೆಸರಿಸುವುದು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಬ್ಬ ದಂತಕಥೆಗೆ ನೀಡುವ ಸೂಕ್ತವಾದ ಗೌರವವಾಗಿದೆ.
ಕ್ರೀಡೆಗಳಲ್ಲಿ ಇಂತಹ ಅನೇಕ ವಿಷಯಗಳ ಆರಂಭ: ಇರ್ಫಾನ್ ಪಠಾಣ್
ಟ್ವಿಟರ್‌ನಲ್ಲಿ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಇರ್ಫಾನ್ ಪಠಾಣ್ ಅವರು ಈ ನಡೆಯನ್ನು ಸಂಪೂರ್ಣವಾಗಿ ಪ್ರೀತಿಸುತ್ತೇನೆ ಎಂದು ಹೇಳಿದರು. ಇದು ಕ್ರೀಡೆಯಲ್ಲಿ ಇಂತಹ ಅನೇಕ ವಿಷಯಗಳ ಆರಂಭ ಎಂದು ಆಶಿಸುತ್ತೇನೆ ಎಂದು ಅವರು ಹೇಳಿದರು. ಅವರು ಇನ್ನೊಂದು ಟ್ವೀಟ್ನಲ್ಲಿ, ಮುಂಬರುವ ಸಮಯದಲ್ಲಿ ಕ್ರೀಡಾಂಗಣಗಳಿಗೆ ಕ್ರೀಡಾ ಪ್ರತಿಭೆಗಳ ಹೆಸರಿಡಲಾಗುವುದು ಎಂಬ ಭರವಸೆಯಿದೆ ಎಂದು ಬರೆದುಕೊಂಡಿದ್ದಾರೆ.
Hopefully in the future sports stadium names will be after sportsmen too.
— Irfan Pathan (@IrfanPathan) August 6, 2021
ಇರ್ಫಾನ್ ಪಠಾಣ್ ಪ್ರಧಾನಿ ಮೋದಿಯವರ ನಿರ್ಧಾರವನ್ನು ತಮ್ಮ ಚಾಣಾಕ್ಷತನದ ಅಭಿಪ್ರಾಯ ಹೊರಹಾಕಿದ್ದಾರಾ ಎಂಬ ಗುಮಾನಿ ಈಗ ಎಲ್ಲೆಡೆ ಆರಂಭವಾಗಿದೆ. ಏಕೆಂದರೆ ಕೆಲವು ತಿಂಗಳ ಹಿಂದೆ, ಟ್ವಿಟರ್‌ನಲ್ಲಿ ಜನರು ಹೊಸದಾಗಿ ನಿರ್ಮಿಸಿದ ಮೊಟೆರಾ ಕ್ರಿಕೆಟ್ ಕ್ರೀಡಾಂಗಣವನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಹೆಸರಿಸಿದ್ದಕ್ಕಾಗಿ ಪ್ರಧಾನಿ ಮತ್ತು ಅವರ ಸಹಚರರನ್ನು ಟೀಕಿಸಿದ್ದರು. ಅದೇನೇ ಇದ್ದರೂ, ಇದು ಕುತಂತ್ರದ ಹೇಳಿಕೆಯೋ ಅಥವಾ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ನಾಗರಿಕರು ಈ ಬದಲಾವಣೆಯ ನಿರ್ಧಾರವನ್ನು ಸ್ವೀಕರಿಸಿದ್ದಾರೆ.
Published On - 5:50 pm, Fri, 6 August 21