ಗೆಲುವಿನ ತೀರಾ ಹತ್ತಿರಕ್ಕೆ ಬಂದು ಸೋಲುವುದು ಹರ್ಟ್ ಮಾಡುತ್ತದೆ: ಮಯಾಂಕ್

ಗೆಲುವಿನ ತೀರಾ ಹತ್ತಿರಕ್ಕೆ ಬಂದು ಸೋಲುವುದು ಹರ್ಟ್ ಮಾಡುತ್ತದೆ: ಮಯಾಂಕ್

ಸೋಲಿನ ದವಡೆಯಿಂದ ಗೆಲುವನ್ನು ಕಿತ್ತುಕೊಂಡರು ಅಂತ ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ, ರವಿವಾರದಂದು ಕಿಂಗ್ಸ್ ಎಲೆವೆನ್ ಪಂಜಾಬ್ ತಂಡವು ತಾನಾಗೇ ಸೋಲಿನ ದವಡಗೆ ಸಿಕ್ಕಿಕೊಂಡಿದ್ದೂ ಅಲ್ಲದೆ ಆಲ್​ಮೋಸ್ಟ್​ ಗೆದ್ದಿದ್ದ ಪಂದ್ಯವನ್ನು ಕೊನೇ ಘಳಿಗೆಯಲ್ಲಿ ಸೋತುಬಿಟ್ಟಿತು. ಎರಡು ಬಾಲ್​ಗಳಲ್ಲಿ ಒಂದು ರನ್ ಮಾತ್ರ ಗಳಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ಖಾತೆ ಓಪನ್ ಮಾಡುವ ಅವಕಾಶ ಹೊಂದಿದ್ದ ಪಂಜಾಬ್ ಆ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು, ಪಂದ್ಯ ಟೈ ಮಾಡಿಕೊಂಡಿತಲ್ಲದೆ ಸೂಪರ್ ಓವರ್​ನಲ್ಲಿ ಸೋತುಬಿಟ್ಟಿತು. ಆಕ್ಷರಶ: ಏಕಾಂಗಿ ಹೋರಾಟ ನಡೆಸಿ […]

Arun Belly

|

Sep 21, 2020 | 3:50 PM

ಸೋಲಿನ ದವಡೆಯಿಂದ ಗೆಲುವನ್ನು ಕಿತ್ತುಕೊಂಡರು ಅಂತ ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ, ರವಿವಾರದಂದು ಕಿಂಗ್ಸ್ ಎಲೆವೆನ್ ಪಂಜಾಬ್ ತಂಡವು ತಾನಾಗೇ ಸೋಲಿನ ದವಡಗೆ ಸಿಕ್ಕಿಕೊಂಡಿದ್ದೂ ಅಲ್ಲದೆ ಆಲ್​ಮೋಸ್ಟ್​ ಗೆದ್ದಿದ್ದ ಪಂದ್ಯವನ್ನು ಕೊನೇ ಘಳಿಗೆಯಲ್ಲಿ ಸೋತುಬಿಟ್ಟಿತು. ಎರಡು ಬಾಲ್​ಗಳಲ್ಲಿ ಒಂದು ರನ್ ಮಾತ್ರ ಗಳಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ಖಾತೆ ಓಪನ್ ಮಾಡುವ ಅವಕಾಶ ಹೊಂದಿದ್ದ ಪಂಜಾಬ್ ಆ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು, ಪಂದ್ಯ ಟೈ ಮಾಡಿಕೊಂಡಿತಲ್ಲದೆ ಸೂಪರ್ ಓವರ್​ನಲ್ಲಿ ಸೋತುಬಿಟ್ಟಿತು.

ಆಕ್ಷರಶ: ಏಕಾಂಗಿ ಹೋರಾಟ ನಡೆಸಿ ಟೀಮನ್ನು ಗೆಲುವಿನ ಕೂದಲೆಳೆಯ ಸನಿಹಕ್ಕೆ ಕೊಂಡೊಯ್ದಿದ್ದ ಓಪನರ್ ಮಯಾಂಕ್ ಅಗರವಾಲ್ ಪಂದ್ಯದ ಫಲಿತಾಂಶದಿಂದ ತೀವ್ರ ನಿರಾಶೆಗೊಳಗಾದರು. ಬ್ಯಾಟಿಂಗ್​ಗೆ ಅಷ್ಟೇನು ಅನಕೂಲಕರವಾಗಿರದ ಪಿಚ್​ನಲ್ಲಿ ಒಂದೆಡೆ ವಿಕೆಟ್​ಗಳು ಬೀಳುತ್ತಿದ್ದರೂ, ಮೊದಲು ನೆಲಕಚ್ಚಿ ಆಡಿ ನಂತರ ಅಗತ್ಯಕ್ಕೆ ತಕ್ಕಂತೆ ಗೇರ್ ಬದಲಿಸಿದ ಮಾಯಾಂಕ್, ಮ್ಯಾಚ್ ಮುಗಿದ ನಂತರ ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಾ, ‘ರವಿವಾರ ನಮ್ಮ ಪಾಲಿಗೆ ಒಳ್ಳೆಯ ದಿನವಾಗಿರಲಿಲ್ಲ,’ ಎಂದರು.

‘‘ನಾವು ಪಂದ್ಯ ಸೋತರೂ ಒಂದಷ್ಟು ಪಾಸಿಟಿವ್ ಅಂಶಗಳು ಲಭ್ಯವಾಗಿವೆ. ಅತ್ಯಂತ ದುಸ್ಥಿಯಲ್ಲಿದ್ದ ನಾವು ಪಂದ್ಯದಲ್ಲಿ ವಾಪಸ್ಸು ಬಂದಿದ್ದು ಅಸಾಮಾನ್ಯವಾದ ಸಂಗತಿ. ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್ ಆರಂಭಿಸಿದಾಗ ನಮ್ಮ ಬೌಲರ್​ಗಳು ಅದ್ಭುತವಾಗಿ ಆಕ್ರಮಣ ನಡೆಸಿದರು. ಗೆಲ್ಲುವ ಸ್ಥಿತಿಯಲ್ಲಿದ್ದಾಗ ಪಂದ್ಯ ಸೋಲುವುದು ತುಂಬಾ ಹರ್ಟ್ ಮಾಡುತ್ತದೆ. ಇದಿನ್ನೂ ಮೊದಲ ಪಂದ್ಯ, ಆದರೆ ಉಳಿದಿರುವ ಪಂದ್ಯಗಳಲ್ಲಿ ನಾವು ಇನ್ನೂ ಚೆನ್ನಾಗಿ ಆಡುತ್ತೇವೆ. ಮೊದಲ ಪಂದ್ಯ ಅತ್ಯಂತ ರೋಚಕವಾಗಿ ಕೊನೆಗೊಂಡಿದ್ದು ಒಂದು ವಿಶಿಷ್ಟ ಅನುಭವ. ತಂಡದ ಪ್ರತಿಯೊಬ್ಬ ಆಟಗಾರ ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಿದರು. ಗೆಲುವಿಗೆ ಕೇವಲ ಒಂದು ರನ್ನಿನ ಅವಶ್ಯಕತೆಯಿದ್ದಾಗ ನಾವು ಸುಲಭವಾಗಿ ಅದನ್ನು ಗಳಿಸಬಹುದಿತ್ತು,’’ ಎಂದು ಅಗರವಾಲ್ ಹೇಳಿದರು.

Follow us on

Related Stories

Most Read Stories

Click on your DTH Provider to Add TV9 Kannada