ಇವತ್ತು ರಾಯಲ್ಸ್ ಮತ್ತು ಕೊಲ್ಕತಾ ನಡುವೆ ಸೆಣಸಾಟ, ಎಲ್ಲರ ಕಣ್ಣು ಸಂಜು ಮೇಲೆ

| Updated By: ಸಾಧು ಶ್ರೀನಾಥ್​

Updated on: Sep 30, 2020 | 6:14 PM

ಇಂಡಿಯನ್ ಪ್ರಿಮೀಯರ್ ಲೀಗ್​ನ ಎರಡನೇ ವಾರ ಕೆಲವು ಮೈನವಿರೇಳಿಸುವ ಫಲಿತಾಂಶಗಳಿಂದ ಮತ್ತಷ್ಟು ರೋಚಕವಾಗುತ್ತಾ ಸಾಗಿದೆ. 13ನೇ ಆವೃತಿಯ 12ನೇ ದಿನವಾಗಿರುವ ಇಂದು ಭರ್ಜರಿ ಫಾರ್ಮ್​ನಲ್ಲಿರುವ ರಾಜಸ್ತಾನ ರಾಯಲ್ಸ್ ಮತ್ತು ಕ್ರಮೇಣ ಫಾರ್ಮ್ ಕಂಡುಕೊಳ್ಳುತ್ತಿರುವ ಕೊಲ್ಕತಾ ನೈಟ್​ರೈಡರ್ಸ್ ನಡುವೆ ದುಬೈನ ಇಂಟರ್​ನ್ಯಾಶನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪವಾಡ ಸದೃಶ ರೀತಿಯಲ್ಲಿ ತನ್ನ ಮೊದಲೆರಡು ಪಂದ್ಯಗಳನ್ನು ಗೆದ್ದ ರಾಯಲ್ಸ್ಣ ಫಾರ್ಮ್ ಕಂಡುಕೊಳ್ಳುತ್ತಿರುವ ಕೊಲ್ಕತಾ ನೈಟ್​ರೈಡರ್ಸ್ ನಡುವೆ ದುಬೈನ ಇಂಟರ್​ನ್ಯಾಶನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪವಾಡ ಸದೃಶ ರೀತಿಯಲ್ಲಿ ತನ್ನ ಮೊದಲೆರಡು ಪಂದ್ಯಗಳನ್ನು ಗೆದ್ದ […]

ಇವತ್ತು ರಾಯಲ್ಸ್ ಮತ್ತು ಕೊಲ್ಕತಾ ನಡುವೆ ಸೆಣಸಾಟ, ಎಲ್ಲರ ಕಣ್ಣು ಸಂಜು ಮೇಲೆ
Follow us on

ಇಂಡಿಯನ್ ಪ್ರಿಮೀಯರ್ ಲೀಗ್​ನ ಎರಡನೇ ವಾರ ಕೆಲವು ಮೈನವಿರೇಳಿಸುವ ಫಲಿತಾಂಶಗಳಿಂದ ಮತ್ತಷ್ಟು ರೋಚಕವಾಗುತ್ತಾ ಸಾಗಿದೆ. 13ನೇ ಆವೃತಿಯ 12ನೇ ದಿನವಾಗಿರುವ ಇಂದು ಭರ್ಜರಿ ಫಾರ್ಮ್​ನಲ್ಲಿರುವ ರಾಜಸ್ತಾನ ರಾಯಲ್ಸ್ ಮತ್ತು ಕ್ರಮೇಣ ಫಾರ್ಮ್ ಕಂಡುಕೊಳ್ಳುತ್ತಿರುವ ಕೊಲ್ಕತಾ ನೈಟ್​ರೈಡರ್ಸ್ ನಡುವೆ ದುಬೈನ ಇಂಟರ್​ನ್ಯಾಶನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪವಾಡ ಸದೃಶ ರೀತಿಯಲ್ಲಿ ತನ್ನ ಮೊದಲೆರಡು ಪಂದ್ಯಗಳನ್ನು ಗೆದ್ದ ರಾಯಲ್ಸ್ಣ ಫಾರ್ಮ್ ಕಂಡುಕೊಳ್ಳುತ್ತಿರುವ ಕೊಲ್ಕತಾ ನೈಟ್​ರೈಡರ್ಸ್ ನಡುವೆ ದುಬೈನ ಇಂಟರ್​ನ್ಯಾಶನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪವಾಡ ಸದೃಶ ರೀತಿಯಲ್ಲಿ ತನ್ನ ಮೊದಲೆರಡು ಪಂದ್ಯಗಳನ್ನು ಗೆದ್ದ ರಾಯಲ್ಸ್ ಈ ಟೂರ್ನಿಯಲ್ಲಿ ಪ್ರಥಮ ಬಾರಿಗೆ ಶಾರ್ಜಾದಿಂದ ಹೊರಬಂದು ಬೇರೆ ಮೈದಾನದಲ್ಲಿ ಕೆಕೆಆರ್ ವಿರುದ್ಧ ಸೆಣಸಲಿದೆ.

ಸಂಜು ಸ್ಯಾಮ್ಸನ್, ನಾಯಕ ಸ್ಟೀವ್ ಸ್ಮಿತ್, ಜೊಸ್ ಬಟ್ಲರ್, ಯಶಸ್ವೀ ಜೈಸ್ವಾಲ್, ರಾಹುಲ್ ತೆವಾಟಿಯ, ರಾಬಿನ್ ಉತ್ತಪ್ಪ, ಡೇವಿಡ್ ಮಿಲ್ಲರ್ ಮೊದಲಾದವರನ್ನೊಳಗೊಂಡ ರಾಯಲ್ಸ್​ನ ಬ್ಯಾಟಿಂಗ್ ಬಲಿಷ್ಠವಾಗಿದೆ. ಸಂಜು ಅವರಂತೂ ತಮ್ಮ ಕರೀಯರ್​ನ ಉತ್ಕೃಷ್ಟ ಫಾರ್ಮ್​ನಲ್ಲಿದದ್ದಾರೆ.

ನೀರು ಕುಡಿದಷ್ಟು ಸುಲಭವಾಗಿ ಚೆಂಡನ್ನು ಮೈದಾನದ ಖಾಲಿ ಗ್ಯಾಲರಿಗಳಿಗೆ ಕಳಿಸುತ್ತಿರುವ ಸಂಜು ಅವರ ಬ್ಯಾಟ್​ನಿಂದ ಸಿಡಿಯುತ್ತಿರುವ ಸಿಕ್ಸ್​ರ್​ಗಳನ್ನು ತಡೆಯುವುದು ಬೌಲರ್​ಗಳಿಗೆ ಸಾಧ್ಯವಾಗುತ್ತಿಲ್ಲ. ಅವರು ಹೊಡೆತಗಳು ನಿಸ್ಸಂಶಯವಾಗಿ ಎದುರಾಳಿ ಬೌಲರ್​ಗಳ ಬೆವರಿಳಿಸುತ್ತಿವೆ.
[yop_poll id=”1″]

ಅವರಂತೆಯೇ, ಸ್ಮಿತ್ ಸಹ ಉತ್ತಮವಾಗಿ ಆಡುತ್ತಿದ್ದಾರೆ. ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ತೆವಾಟಿಯ ಆಕಸ್ಮಿಕ ಹಿರೊ ಆಗಿಬಿಟ್ಟರು. ಅವರು ಶೆಲ್ಡನ್ ಕಾರ್ಟೆಲ್​ರನ್ನು ದಂಡಿಸಿದ ಪರಿ ಬಹಳ ದಿನಗಳವರೆಗೆ ನೆನಪಿನಲ್ಲಿ ಉಳಿಯಲಿದೆ. ಜೈಸ್ವಾಲ್​ಗೆ ಎರಡನೆ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಈ ಯುವ ಆಟಗಾರ ಸಹ ನೋಡುಗರನ್ನು ಮೋಡಿ ಮಾಡುವ ಹೊಡೆತಗಳನ್ನು ಬಾರಿಸುತ್ತಾರೆ. ಬಟ್ಲರ್ ಇನ್ನೂ ಆಟಕ್ಕೆ ಕುದುರಿಕೊಂಡಿಲ್ಲ. ಒಮ್ಮೆ ಬೆನ್ ಸ್ಟೋಕ್ಸ್ ತಂಡಕ್ಕೆ ವಾಪಸ್ಸಾದರೆ, ರಾಯಲ್ಸ್ ಮತ್ತಷ್ಟು ಬಲ ಹೊಂದಲಿದೆ. ಯಾಕೆಂದರೆ, ಬೌಲಿಂಗ್ ಅಗಲಿ, ಬ್ಯಾಟಿಂಗ್ ಅಥವಾ ಫೀಲ್ಡಿಂಗ್; ಎಲ್ಲ ವಿಭಾಗಗಳಲ್ಲೂ ಅವರು ಮಿಂಚುತ್ತಾರೆ. ಹಾಗಾಗೇ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಅಂತ ಕರೆಯೋದು.
ಬೌಲಿಂಗ್ ವಿಷಯಕ್ಕೆ ಬಂದರೆ ಅತಿ ವೇಗದ ಎಸೆತ ಬೌಲ್ ಮಾಡಿರುವ ಖ್ಯಾತಿಯ ಌಂಡ್ರ್ಯೂ ಟೈಗೆ ಇನ್ನೂ ಅವಕಾಶ ದೊರೆತಿಲ್ಲ. ಜೊಫ್ರಾ ಆರ್ಚರ್, ಜಯದೇವ್ ಉನಾಡ್ಕಟ್, ಟಾಮ್ ಕರನ್ ವೇಗದ ದಾಳಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಆರ್ಚರ್ ಅವರ ಬ್ಯಾಟ್​ನಿಂದ ಮಿಂಚಿನ ಗತಿಯಲ್ಲಿ ರನ್ ಸಹ ಬರುತ್ತಿವೆ. ತೆವಾಟಿಯಾ ಮತ್ತು ಶ್ರೆಯಸ್ ಗೋಪಾಲ್ ಬೌಲಿಂಗ್​ನಲ್ಲಿ ಅಷ್ಟೊಂದು ಪರಿಣಾಮಕಾರಿ ಅನಿಸುತ್ತಿಲ್ಲವಾದರೂ ದುಬಾರಿಯಾಗುತ್ತಿಲ್ಲ.

ಇದನ್ನೂ ಓದಿ: IPL 2020: RR vs KKR Live Score

ಆಡಿದ ಮೊದಲ ಪಂದ್ಯವನ್ನು ಸೋತು, ಎರಡನೆಯದರಲ್ಲಿ ಸನ್​ರೈಸರ್ಸ್ ಹೈದರಾಬಾದನ್ನು ಸೋಲಿಸಿ ವಿಶ್ವಾಸ ಹೆಚ್ಚಿಸಿಕೊಂಡಿರುವ ಕೊಲ್ಕತಾಗೆ ಬೌಲರ್​ಗಳ ಫಾರ್ಮ್ ಖುಷಿ ಕೊಡುತ್ತಿದೆ. ಪ್ಯಾಟ್ ಕಮಿನ್ಸ್, ಶಿವಮ್ ಮಾವಿ, ಕಮ್ಲೇಶ್ ನಾಗರ್​ಕೋಟಿ, ಪ್ರಸಿಧ್ ಕೃಷ್ಣ, ಲಾಕಿ ಫರ್ಗುಸನ್, ಸಂದೀಪ್ ವಾರಿಯರ್ ಮತ್ತು ಆಂದ್ರೆ ರಸ್ಸೆಲ್ ಮುಂತಾದ ವೇಗಿಗಳನ್ನು ತನ್ನ ಱಂಕ್ಸ್​ನಲ್ಲಿ ಹೊಂದಿರುವ ಕೊಲ್ಕತಾ ಅತ್ಯಂತ ವಿವೇಚನೆಯಿಂದ ಅವರನ್ನು ಆಡುವ ಎಲೆವೆನ್​ನಲ್ಲಿ ಆಯ್ಕೆ ಮಾಡುತ್ತಿದೆ.

ಈ ಟೀಮಿನ ಸ್ಪಿನ್ನರ್​ಗಳಾದ ಸುನಿಲ್ ನರೈನ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಎದುರಾಳಿ ಬ್ಯಾಟ್ಸ್​ಮನ್​ಗಳನ್ನು ಕಟ್ಟಿ ಹಾಕುವಲ್ಲಿ ಯಶ ಕಾಣುತ್ತಿದ್ದಾರೆ. ಹಾಗಾಗಿ ನಾಯಕ ದಿನೇಶ್ ಕಾರ್ತೀಕ್​ಗೆ ಈ ವಿಭಾಗದ ಚಿಂತೆ ಜಾಸ್ತಿಯಿಲ್ಲ.

ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ, ಹೈದರಾಬಾದ್ ವಿರುದ್ಧ ಓಪನರ್ ಶುಭ್​ಮನ್ ಗಿಲ್ ಮೆಚೂರ್ಡ್ ಇನ್ನಿಂಗ್ಸ್ ಆಡಿ ಟಿಮಿಗೆ ಜಯ ದೊರಕಿಸಿಕೊಟ್ಟರು. ಅವರೊಂದಿಗೆ ಅಯಾನ್ ಮೊರ್ಗನ್ ಸಹ ಬ್ಯಾಟಿಂಗ್​ನಲ್ಲಿ ಮಿಂಚಿದರು. ಕಾರ್ತೀಕ್ ಬ್ಯಾಟ್​ನಿಂದ ರನ್ ಬಂದಿಲ್ಲ. ಟಾಪ್ ಆರ್ಡರ್​ನಲ್ಲಿ ಸುನಿಲ್ ನರೈನ್ ಆಡಿದ ಮೊದಲೆರಡು ಮ್ಯಾಚ್​ಗಳಲ್ಲಿ ಫೇಲಾದರು. ನಿತಿಷ್ ರಾಣಾ ಅವಸರದ ಪ್ರವೃತ್ತಿ ತೋರಿ ವಿಕೆಟ್ ಒಪ್ಪಿಸುತ್ತಿದ್ದಾರೆ. 

ಎಲ್ಲಕ್ಕೂ ಮಿಗಿಲಾಗಿ ಕೊಲ್ಕತಾದ ಟ್ರಂಪ್​ಕಾರ್ಡ್ ರಸ್ಸೆಲ್ ಅವರ ಬ್ಯಾಟ್ ಇನ್ನೂ ಝಳಪಳಿಸುತ್ತಿಲ್ಲ. ಅವರಿಗೆ ಆಡುವ ಅವಕಾಶ ಸಿಗಬೇಕಾದರೆ ಬ್ಯಾಟಿಂಗ್​ನಲ್ಲಿ ಬಡ್ತಿ ನೀಡಬೇಕು, ಕಾರ್ತೀಕ್ ಇವತ್ತಿನ ಪಂದ್ಯದಲ್ಲಿ ಅದನ್ನು ಮಾಡುವರೆ ಅಂತ ಕಾದು ನೋಡಬೇಕು.

ಅಂದಹಾಗೆ, ರಾಯಲ್ಸ್ ಮತ್ತು ಕೊಲ್ಕತಾ ಇದುವರೆಗೆ 20 ಸಲ ಪರಸ್ಪರ ಎದುರಿಸಿದ್ದು ತಲಾ ಹತ್ತತ್ತು ಸಲ ಗೆದ್ದು ಸಮಬಲ ಸಾಧಿಸಿವೆ.

Published On - 4:42 pm, Wed, 30 September 20