ಸಹ ಕುಸ್ತಿಪಟುವಿನ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಕುಸ್ತಿಪಟು ಸುಶೀಲ್ ಕುಮಾರ್ ಅವರು ಮುಂಬರುವ ಟೋಕಿಯೊ ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿರುವುದರಿಂದ ಪ್ರೋಟೀನ್ ಪೂರಕ, ವ್ಯಾಯಾಮ ಬ್ಯಾಂಡ್ ಮತ್ತು ವಿಶೇಷ ಆಹಾರ ನೀಡಬೇಕೆಂದು ನ್ಯಾಯಲದಲ್ಲಿ ಮೊರೆ ಇಟ್ಟಿದ್ದಾರೆ. ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಸುಶೀಲ್ ಕುಮಾರ್ ಅವರು ತಮ್ಮ ಮನವಿಗಳೊಂದಿಗೆ ದೆಹಲಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಕುಸ್ತಿಪಟು ಸಾಗರ್ ಧಂಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಚಾಂಪಿಯನ್ ಕುಸ್ತಿಪಟು ಸುನೀಲ್ ಅವರನ್ನು ದೆಹಲಿ ಪೊಲೀಸರು ಮೇ 23 ರಂದು ಬಂಧಿಸಿದ್ದರು. ಸುಶೀಲ್ ಕುಮಾರ್ ಮತ್ತು ಅವರ ಸಹಚರರ ಮಾರಾಣಾಂತಿಕ ಹಲ್ಲೆಯಿಂದಾಗಿ, ಧಂಕರ್ ಮೇ ಮೊದಲ ವಾರದಲ್ಲಿ ದೆಹಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಹಲ್ಲೆಯ ವಿಡಿಯೋ ಕ್ಲಿಪ್ ಅನ್ನು ಪೊಲೀಸರು ಪತ್ತೆ ಮಾಡಿದ್ದು, ಇದರಲ್ಲಿ ಸುಶೀಲ್ ಕುಮಾರ್ ಮತ್ತು ಅವರ ಸಹಚರರು ದಂಕರ್ ಅವರನ್ನು ಹೊಡೆಯುತ್ತಿರುವುದು ಕಂಡುಬಂದಿದೆ.
6,000 ಮೌಲ್ಯದ ವಸ್ತುಗಳನ್ನು ಖರೀದಿಸಬಹುದು
ಸಾಮಾನ್ಯವಾಗಿ ಜೈಲಿನಲ್ಲಿ ಎಲ್ಲಾ ಅಪರಾದಿಗಳಿಗೂ ಆಹಾರವಾಗಿ ಐದು ರೊಟ್ಟಿಗಳು, ತರಕಾರಿ, ದಾಲ್ ಮತ್ತು ಅನ್ನ ನೀಡುತ್ತಾರೆ, ಇದನ್ನು ಕೈದಿಗಳು ದಿನಕ್ಕೆ ಎರಡು ಬಾರಿ ಸೇವಿಸುತ್ತಾರೆ. ಜೊತೆಗೆ ಖೈದಿಗಳು ಜೈಲು ಕ್ಯಾಂಟೀನ್‌ನಿಂದ ತಿಂಗಳಿಗೆ ರೂ 6,000 ಮೌಲ್ಯದ ವಸ್ತುಗಳನ್ನು ಖರೀದಿಸಬಹುದು. ಆದರೆ, ಸ್ನಾಯು ಮೈಕಟ್ಟುಗೆ ಹೆಸರುವಾಸಿಯಾದ ಸುಶೀಲ್ ಕುಮಾರ್ ಅವರಿಗೆ ಜೈಲಿನ ಆಹಾರವು ಸಾಕಾಗುವುದಿಲ್ಲ ಎಂದು ಸಾಬೀತಾಗಿದೆ. ವಿಶೇಷ ಆಹಾರದಡಿಯಲ್ಲಿ, ಸುಶೀಲ್ ಕುಮಾರ್ ಒಮೆಗಾ 3 ಕ್ಯಾಪ್ಸುಲ್ಗಳು, ಪೂರ್ವ-ತಾಲೀಮು ಪೂರಕಗಳು ಮತ್ತು ಮಲ್ಟಿವಿಟಮಿನ್ ಮಾತ್ರೆಗಳನ್ನು ಸೇವಿಸುತ್ತಾರೆ.
ನ್ಯಾಯಾಲಯ ವಿಚಾರಣೆ
ಸುಶೀಲ್ ಕುಮಾರ್ ಅವರು ತಮ್ಮ ಬೇಡಿಕೆಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದ್ದಾರೆ. ಹೀಗಾಗಿ ಅವರ ಅರ್ಜಿಯನ್ನು ನ್ಯಾಯಾಲಯ ಬುಧವಾರ ವಿಚಾರಣೆ ನಡೆಸುವ ನಿರೀಕ್ಷೆಯಿದೆ. ಸುಶೀಲ್ ಕುಮಾರ್ ಅವರನ್ನು ದೆಹಲಿಯ ಮಂಡೋಲಿ ಜೈಲಿನಲ್ಲಿರುವ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ, ಅವರು ಯಾರನ್ನೂ ಭೇಟಿಯಾಗಲು ಅನುಮತಿ ನೀಡಿಲ್ಲ.