VIDEO: ಆಘಾತಕಾರಿ ಸುದ್ದಿ… ಡೋರ್​ಗೆ ಡಿಕ್ಕಿ ಹೊಡೆದು ಕ್ರಿಕೆಟಿಗ ಸಾವು..!

ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 2022 ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಗಾಯದ ಕಾರಣ ಅವರು ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲು ಒಂದೂವರೆ ವರ್ಷ ತೆಗೆದುಕೊಂಡಿದ್ದರು.  ಈ ಕಹಿ ಘಟನೆ ಮಾಸುವ ಮುನ್ನವೇ ಇದೀಗ ಜಮ್ಮು-ಕಾಶ್ಮೀರದ ಕ್ರಿಕೆಟಿಗ ಫರೀದ್ ಹುಸೇನ್ ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ.

VIDEO: ಆಘಾತಕಾರಿ ಸುದ್ದಿ... ಡೋರ್​ಗೆ ಡಿಕ್ಕಿ ಹೊಡೆದು ಕ್ರಿಕೆಟಿಗ ಸಾವು..!
Fareed Hussain

Updated on: Aug 24, 2025 | 11:07 AM

ಜಮ್ಮು-ಕಾಶೀರದ ಕ್ರಿಕೆಟಿಗ ಫರೀದ್ ಹುಸೇನ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಫರೀದ್ ಕೆಲಸದ ನಿಮಿತ್ತ ಬೈಕ್​ನಲ್ಲಿ ಹೋಗುತ್ತಿದ್ದರು. ಇದೇ ವೇಳೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಡೋರ್ ಓಪನ್ ಮಾಡಿದ್ದಾರೆ. ಇದರಿಂದ ಫರೀದ್ ಹುಸೇನ್ ಅವರು ಬೈಕ್ ಕಾರಿನ ಡೋರ್​ಗೆ ಡಿಕ್ಕಿಯಾಗಿದೆ.

ಈ ಡಿಕ್ಕಿಯ ರಭಸಕ್ಕೆ ಫರೀದ್ ಹುಸೇನ್ ನೆಲಕ್ಕುರುಳಿದ್ದಾರೆ. ತಕ್ಷಣವೇ ಸ್ಥಳೀಯರು ಕ್ರಿಕೆಟಿಗನ ನೆರವಿಗೆ ಧಾವಿಸಿದ್ದು, ಆದರೆ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಫರೀದ್ ಹುಸೇನ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

ಇದೀಗ ಫರೀದ್ ಹುಸೇನ್ ಅವರ ಅಪಘಾತದ ದೃಶ್ಯದ ಸಿಸಿ ಟಿವಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜಮ್ಮು ಕಾಶ್ಮೀರದ ಕ್ರಿಕೆಟಿಗರು ಸೇರಿದಂತೆ ಅನೇಕರು ಫರೀದ್ ಹುಸೇನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಫರೀದ್ ಹುಸೇನ್ ಒಬ್ಬ ಅದ್ಭುತ ಕ್ರಿಕೆಟಿಗ ಮಾತ್ರವಲ್ಲದೆ, ಅವರ ಪ್ರದೇಶದ ಅನೇಕ ಯುವ ಆಟಗಾರರಿಗೆ ಸ್ಫೂರ್ತಿಯೂ ಆಗಿದ್ದರು. ಫರೀದ್ ಹುಸೇನ್ ಅವರ ಸಾವು ಅವರ ಕುಟುಂಬವನ್ನು ದುಃಖದಲ್ಲಿ ಮುಳುಗಿಸಿದೆ.

ಇದಕ್ಕೂ ಮುನ್ನ ಆಸ್ಟ್ರೇಲಿಯಾದ ದಂತಕಥೆಯ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕೂಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಮೇ 14, 2022 ರಂದು, ಸೈಮಂಡ್ಸ್ ಅವರ ಕಾರು ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆಯಲ್ಲಿ ರಸ್ತೆಯಲ್ಲಿ ಪಲ್ಟಿಯಾಯಿತು. ಈ  ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೈಮಂಡ್ಸ್ ಅಸುನೀಗಿದ್ದರು.

ಅಲ್ಲದೆ ಡಿಸೆಂಬರ್ 2022 ರಲ್ಲಿ ಕ್ರಿಕೆಟಿಗರಾದ ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಮತ್ತು ರಿಷಭ್ ಪಂತ್ ಕಾರು ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾದರು. ಬಿಬಿಸಿ ಕಾರ್ಯಕ್ರಮ ‘ಟಾಪ್ ಗೇರ್’ ನ ಸಂಚಿಕೆಯ ಚಿತ್ರೀಕರಣದ ವೇಳೆ ಆಂಡ್ರ್ಯೂ ಫ್ಲಿಂಟಾಫ್ ಅಪಘಾತಕ್ಕೀಡಾಗಿದ್ದರು. ಆದರೆ ದುರಾದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

ಇದನ್ನೂ ಓದಿ: ವಿಶ್ವ ದಾಖಲೆಯಾಟ… 378 ರನ್​​ಗಳೊಂದಿಗೆ ಇತಿಹಾಸ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್​ಕೆ

ಇನ್ನು ಡಿಸೆಂಬರ್ 30, 2022 ರ ಮುಂಜಾನೆ, ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ತಮ್ಮ ಬಿಎಂಡಬ್ಲ್ಯೂ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಭಾರತೀಯ ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಂತ್, ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲು ಒಂದೂವರೆ ವರ್ಷ ತೆಗೆದುಕೊಂಡಿದ್ದರು.  ಈ ಕಹಿ ಘಟನೆಗಳು ಮಾಸುವ ಮುನ್ನವೇ ಇದೀಗ ಜಮ್ಮು-ಕಾಶ್ಮೀರದ ಕ್ರಿಕೆಟಿಗ ಫರೀದ್ ಹುಸೇನ್ ಯಾರದ್ದೋ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದಾರೆ.

Published On - 10:54 am, Sun, 24 August 25