ಇತ್ತೀಚೆಗೆ ಟಿವಿ ನಿರೂಪಕಿ ಸಂಜನಾ ಗಣೇಶನ್ ಅವರನ್ನು ವಿವಾಹವಾದ ಜಸ್ಪ್ರೀತ್ ಬುಮ್ರಾ ಅವರು ಶುಕ್ರವಾರ ತಮ್ಮ ಪತ್ನಿಯೊಂದಿಗಿರುವ ಒಂದೆರಡು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಬುಮ್ರಾ ಅವರು ಹಂಚಿಕೊಂಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಮಾರ್ಚ್ 19ರಂದು ಜಸ್‌ಪ್ರೀತ್ ಬುಮ್ರಾ ಒಂದು ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ ಬುಮ್ರಾ ಮತ್ತು ಸಂಜನಾ ಜೊತೆಯಾಗಿ ನಡೆಯುತ್ತಿದ್ದರೆ ಸುತ್ತ ನಿಂತಿದ್ದವರು ನಕ್ಷತ್ರ ಕಡ್ಡಿ ಹಚ್ಚಿ ನವ ಜೋಡಿಯ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡಿದ್ದರು. ಆ ಚಿತ್ರ ಆಕರ್ಷಕವಾಗಿ ಇತ್ತು ಕೂಡ.
#saynotocrackers ಹ್ಯಾಷ್ ಟ್ಯಾಗ್ ಬಳಸಿದ್ದರು..
ಆದರೆ ಬೂಮ್ರಾ ಕಳೆದ ಬಾರಿ ದೀಪಾವಳಿ ಶುಭಾಶಯ ಹೇಳುವಾಗ ಟ್ರೆಂಡ್‌ನಲ್ಲಿದ್ದ #saynotocrackers ಹ್ಯಾಷ್ ಟ್ಯಾಗ್ ಬಳಸಿದ್ದರು. ಹೀಗಾಗಿ ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸಬೇಡಿ ಎಂದು ಹ್ಯಾಷ್ಟ್ಯಾಗ್ ಬಳಸಿದ್ದ ಬುಮ್ರಾ ತನ್ನ ಮದುವೆ ಸಮಾರಂಭದಲ್ಲಿ ಪಟಾಕಿ ಸಿಡಿಸಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯತೊಡಗಿದ್ದಾರೆ. ಮಾರ್ಚ್ 15 ರಂದು ತಮ್ಮ ವಿವಾಹದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಬರ್ಮ್ರಾ ಮತ್ತು ಸಂಜನಾ ಗಣೇಶನ್ ತಮ್ಮ ಮದುವೆಯ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದರು.
ಟ್ವೀಟ್ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ
ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ, ಪಟಾಕಿ ಬೇಡ ಎಂದು ದೀಪಾವಳಿ ಸಮಯದಲ್ಲಿ ಮಾತ್ರ ಹೇಳಿದರೆ ಸಾಕೆ? ಹಿಂದೂಗಳ ಹಬ್ಬದ ಸಮಯದಲ್ಲಿ ಮಾತ್ರವೇ ನಮ್ಮ ಜನಪ್ರಿಯ ವ್ಯಕ್ತಿಗಳು ಪರಿಸರವಾದಿಗಳಾಗುತ್ತಾರೆ. ಆದರೆ ಅವರದ್ದೇ ವಾದಗಳನ್ನು ಅವರ ಸಮಾರಂಭಗಳ ಸಮಯದಲ್ಲಿ ಗಾಳಿಗೆ ತೂರುತ್ತಾರೆ. ಪ್ರೀತಿಯ ಜಸ್‌ಪ್ರೀತ್ ಬುಮ್ರಾ ಯಾವ ನೀತಿ ಪಾಠ ಮಾಡುತ್ತೀರೋ ಅದನ್ನು ಮೊದಲು ಅನುಸರಿಸುವುದನ್ನೂ ಕಲಿಯಿರಿ,” ಎಂದು ಮಾತಿನ ಚಾಟಿಯೇಟು ಕೊಟ್ಟಿದ್ದಾರೆ.
#saynotocrackers only during Deepavali!
Our celebrities turn into environmental activists only during Hindu festivals but their activism disappears during their own celebrations.
Dear @Jaspritbumrah93, practice what you preach! pic.twitter.com/7HnxXuxgWf
— Shobha Karandlaje (@ShobhaBJP) March 19, 2021
ಟೀಂ ಇಂಡಿಯಾದಿಂದ ರಜೆ ಪಡೆದಿದ್ದ ಬುಮ್ರಾ
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಂತರ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾದಿಂದ ರಜೆ ಪಡೆದಿದ್ದರು. ನಾಲ್ಕನೇ ಟೆಸ್ಟ್ ಪಂದ್ಯದ ಮೊದಲು ಬುಮ್ರಾ ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದಾರೆ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿತ್ತು. ಇದರಿಂದಾಗಿ ಅಹಮದಾಬಾದ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಬುಮ್ರಾ ಆಡಲು ಸಾಧ್ಯವಾಗಲಿಲ್ಲ. ಕೆಲವು ದಿನಗಳ ನಂತರ, ಬುಮ್ರಾ ಮದುವೆಗೆ ಸಿದ್ಧತೆಯಲ್ಲಿ ನಿರತರಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಆ ಹೊತ್ತಿಗೆ ವೇಗದ ಬೌಲರ್ ಯಾರನ್ನು ಮದುವೆಯಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಗಿರಲಿಲ್ಲ.
ಟೀಂ ಇಂಡಿಯಾದ ಅನುಭವಿ ಬೌಲರ್ ಜಸ್‌ಪ್ರೀತ್ ಬುಮ್ರಾ 2016 ರಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ನಂತರ 19 ಟೆಸ್ಟ್, 67 ಏಕದಿನ ಮತ್ತು 50 ಟಿ 20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ, ಬುಮ್ರಾ 83 ವಿಕೆಟ್ ಪಡೆದಿದ್ದಾರೆ. 50 ಓವರ್‌ಗಳ ಸ್ವರೂಪದಲ್ಲಿ, ಭಾರತೀಯ ವೇಗಿ 4.65 ರ ಆರ್ಥಿಕ ದರದಲ್ಲಿ 108 ವಿಕೆಟ್‌ಗಳನ್ನು ಪಡೆದಿದ್ದಾರೆ.
On Diwali, Jasprit Bumrah said #SayNoToCrackers in his post. But now shamelessly.. pic.twitter.com/Jp0pzecCpy
— G O A T ?? (@GoatHesson) March 19, 2021
Say yes to crackers except Diwali. pic.twitter.com/Ehk4yJrOiT
— Anshul Saxena (@AskAnshul) March 19, 2021
Diwali came early this year pic.twitter.com/RD516YOdQh
— ????? ?? (@rahulmsd_91) March 19, 2021
(Jasprit Bumrah trolled for using firecrackers at his wedding)
Published On - 11:56 am, Sat, 20 March 21