ಬೆಳ್ಳಿತೆರೆ ಮೇಲೆ ಕಪಿಲ್ ದೇವ್ ಜೀವನಾಧಾರಿತ ಕತೆ: ಸಿನಿಮಾಗೆ ವಿರೋಧ ವ್ಯಕ್ತಪಡಿಸಿದವರಿಂದಲೇ ಕಾತುರ

|

Updated on: Nov 22, 2020 | 6:39 AM

ಕ್ರಿಕೆಟ್ ದಂತಕತೆ ಕಪೀಲ್ ದೇವ್ ಜೀವನಾಧಾರಿತ ಕತೆ ಸಿನಿಮಾ ರೂಪದಲ್ಲಿ ಬೆಳ್ಳಿ ಪರದೆ ಮೇಲೆ ಅಪ್ಪಳಿಸೋಕೆ ರೆಡಿಯಾಗಿದೆ. ಲಾಕ್​ಡೌನ್‌ಗೂ ಮುಂಚೆಯೇ ರಿಲೀಸ್ ಮಾಡೋ ಪ್ಲ್ಯಾನ್ ಮಾಡಿದ್ದ ಸಿನಿಮಾ ತಂಡ ಈಗ ಮತ್ತೆ ಸಿನಿಮಾ ಕುರಿತ ಒಂದೊಂದೇ ಇಂಟರೆಸ್ಟಿಂಗ್ ಸಂಗತಿಗಳನ್ನ ಹೊರ ಹಾಕ್ತಿದೆ. ಸದ್ಯ ಕಪೀಲ್ ದೇವ್‌ಗೆ ಸಿನಿಮಾದ ಬಗ್ಗೆ ಇದ್ದ ಕುತೂಹಲ ಹೇಗಿತ್ತು. ತಮ್ಮ ಕಥೆ ಸಿನಿಮಾ ಆಗ್ತಿದೆ ಅಂದಾಗ ಆದ ಭಯ ಎಂಥಾದ್ದು ಅನ್ನೋದರ ಡಿಟೇಲ್ಸ್ ಇಲ್ಲಿದೆ. ಕ್ರಿಕೆಟ್ ದಂತಕತೆ ಕಪಿಲ್ ದೇವ್ 1983 ವಿಶ್ವಕಪ್ […]

ಬೆಳ್ಳಿತೆರೆ ಮೇಲೆ ಕಪಿಲ್ ದೇವ್ ಜೀವನಾಧಾರಿತ ಕತೆ: ಸಿನಿಮಾಗೆ ವಿರೋಧ ವ್ಯಕ್ತಪಡಿಸಿದವರಿಂದಲೇ ಕಾತುರ
Follow us on

ಕ್ರಿಕೆಟ್ ದಂತಕತೆ ಕಪೀಲ್ ದೇವ್ ಜೀವನಾಧಾರಿತ ಕತೆ ಸಿನಿಮಾ ರೂಪದಲ್ಲಿ ಬೆಳ್ಳಿ ಪರದೆ ಮೇಲೆ ಅಪ್ಪಳಿಸೋಕೆ ರೆಡಿಯಾಗಿದೆ. ಲಾಕ್​ಡೌನ್‌ಗೂ ಮುಂಚೆಯೇ ರಿಲೀಸ್ ಮಾಡೋ ಪ್ಲ್ಯಾನ್ ಮಾಡಿದ್ದ ಸಿನಿಮಾ ತಂಡ ಈಗ ಮತ್ತೆ ಸಿನಿಮಾ ಕುರಿತ ಒಂದೊಂದೇ ಇಂಟರೆಸ್ಟಿಂಗ್ ಸಂಗತಿಗಳನ್ನ ಹೊರ ಹಾಕ್ತಿದೆ. ಸದ್ಯ ಕಪೀಲ್ ದೇವ್‌ಗೆ ಸಿನಿಮಾದ ಬಗ್ಗೆ ಇದ್ದ ಕುತೂಹಲ ಹೇಗಿತ್ತು. ತಮ್ಮ ಕಥೆ ಸಿನಿಮಾ ಆಗ್ತಿದೆ ಅಂದಾಗ ಆದ ಭಯ ಎಂಥಾದ್ದು ಅನ್ನೋದರ ಡಿಟೇಲ್ಸ್ ಇಲ್ಲಿದೆ.

ಕ್ರಿಕೆಟ್ ದಂತಕತೆ ಕಪಿಲ್ ದೇವ್ 1983 ವಿಶ್ವಕಪ್ ಗೆದ್ದ ಭಾರತ ತಂಡ ನಾಯಕತ್ವ ವಹಿಸಿದ್ರು. ಅಂದಿನ ಕ್ರಿಕೆಟ್ ಆಟದ ರೋಚಕ ಕಥೆ ಜೊತೆ ಕಪಿಲ್ ದೇವ್ ಕ್ರಿಕೆಟ್ ಜಗತ್ತಿನಲ್ಲಿ ಸಾಗಿ ಬಂದ ಸಾಧನೆಯ ಹಾದಿ ಹೇಗಿತ್ತು ಅನ್ನೋದು ಸಿನಿಮಾ ರೂಪದಲ್ಲಿ ಬೆಳ್ಳಿ ಪರದೆ ಮೇಲೆ ಅಪ್ಪಳಿಸೋಕೆ ರೆಡಿಯಾಗಿದೆ.

ಕಬೀರ್ ಖಾನ್ ಆಕ್ಷನ್ ಕಟ್ ಹೇಳ್ತಿರೋ ಸಿನಿಮಾದಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನಟಿಸ್ತಿದ್ದಾರೆ. ಅಂದ ಹಾಗೆ ಈಗಾಗಲೇ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆದ್ರೆ ಕಪಿಲ್ ದೇವ್‌ಗೆ ಈ ಸಿನಿಮಾ ಮಾಡೋ ಬಗ್ಗೆ ಚಿತ್ರತಂಡ ಮಾತುಕತೆ ನಡೆಸಿದಾಗ ಭಯ ಕಾಡಿತ್ತಂತೆ.

ಮೊದ ಮೊದಲು ತಮ್ಮ ಕಥೆ ಸಿನಿಮಾ ಮಾಡೋದಕ್ಕೆ ವಿರೋಧ ವ್ಯಕ್ತಪಡಿಸಿದ್ರಂತೆ. ತಾವು ಬದುಕಿರುವಾಗಲೇ ತಮ್ಮನ್ನ ಹೀರೋ ತರ ತೋರಿಸೋ ಬಗ್ಗೆ ಕಪಿಲ್ ದೇವ್ ಅವರಿಗೆ ಇಷ್ಟ ಇರಲಿಲ್ವಂತೆ. ಇದೆಲ್ಲದರ ಜೊತೆಗೆ ಮುಜುಗರ ಕೂಡ ಆಗಿತ್ತಂತೆ. ಇನ್ನು ತಮ್ಮ ಕಥೆ, ಅಂದುಕೊಂಡ ಮಟ್ಟಕ್ಕೆ ಸಿನಿಮಾ ಆಗುತ್ತೋ ಇಲ್ವೋ ಅನ್ನೋ ಆತಂಕ ಕಪಿಲ್ ದೇವ್ ಅವರಿಗಿತ್ತು ಅನ್ನೋ ಮಾಹಿತಿ ಹೊರ ಬಿದ್ದಿದೆ.

ನಂತರ ಸಿನಿಮಾಗೆ ರಣವೀರ್ ಸಿಂಗ್ ಡೆಡಿಕೇಟ್ ಆಗಿದ್ದ ರೀತಿ ಕಪಿಲ್ ಅವ್ರ ಜೊತೆ ಮಾತುಕತೆ ನಡೆಸಿ ಬರೋಬ್ಬರಿ ಒಂದು ಪಾತ್ರಕ್ಕಾಗಿ 8 ಗಂಟೆ ಕ್ರಿಕೆಟ್ ಪ್ರ್ಯಾಕ್ಟೀಸ್‌ ಮಾಡಿ ರಣವೀರ್ ಸಿಂಗ್ ಬಣ್ಣ ಹಚ್ಚಿದ ರೀತಿ ನೋಡಿದ್ ಮೇಲೆ ಕಪಿಲ್ ದೇವ್ ಅವರಿಗೆ ನಂಬಿಕೆ ಬಂದಿದೆ. ನಂತರ ಈಗ ತಮ್ಮ ಪಾತ್ರ ಇನ್ನು ಹೇಗೆ ಮೂಡಿ ಬಂದಿರಬಹುದು ಅನ್ನೋ ಕುತೂಹಲ ಕೂಡ ಹೆಚ್ಚಾಗಿದೆ.

ಒಟ್ಟಿನಲ್ಲಿ ವಿರೋಧ ಹಾಗೂ ಮುಜುಗರದ ನಡುವೆಯೂ ತಮ್ಮ ಕಥೆಯನ್ನ ಸಿನಿಮಾ ಮಾಡೋಕೆ ಒಪ್ಪಿಗೆ ನೀಡಿದ ಕಪಿಲ್ ದೇವ್ ಪಾತ್ರ ಮುಂದೆ ಅಭಿಮಾನಿಗಳಿಗೆ ಅದ್ಹೇಗೆ ಮೋಡಿ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.