Photo Shoot ಪಂಜಾಬ್ ಬಾಯ್ಸ್ ಡ್ಯಾನ್ಸ್ ಡ್ಯಾನ್ಸ್.. ಮೆಲ್ಲನೆ ಕಾಲೆಳೆದ ಪ್ರೀತಿ ಜಿಂಟಾ!

|

Updated on: Sep 14, 2020 | 2:25 PM

ಫೋಟೋಶೂಟ್ ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಇದಕ್ಕೆ ತಂಡದ ಓನರ್ ಪ್ರೀತಿ ಜಿಂಟಾ ಆಟಗಾರರ ಕಾಲೆಳೆದಿದ್ದಾರೆ. ನಮ್ಮ ಹುಡುಗರು ಶ್ರಮಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. https://www.instagram.com/reel/CFCSrxEJOk0/?utm_source=ig_embed ಜಾಂಟಿಗೆ ಕೋಚಿಂಗ್! ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್​ಮನ್ ಕನ್ನಡಿಗ ಮಯಾಂಕ್ ಅಗರ್ವಾಲ್, ಫೀಲ್ಡಿಂಗ್ ಲೆಜೆಂಡ್​ಗೆ ಕೋಚಿಂಗ್ ಕೊಟ್ಟಿದ್ದಾರೆ. ಟ್ರೈನಿಂಗ್ ಸೆಷನ್​ನಲ್ಲಿ ಮಯಾಂಕ್, ಜಾಂಟಿ ರೋಡ್ಸ್​​ಗೆ ಕ್ಯಾಚ್ ಹಿಡಿಯೋ ಅಭ್ಯಾಸ ಮಾಡಿಸ್ತಿರೋ ವಿಡಿಯೋ ವೈರಲ್ ಆಗಿದೆ. Is that… is that @mayankcricket […]

Photo Shoot ಪಂಜಾಬ್ ಬಾಯ್ಸ್ ಡ್ಯಾನ್ಸ್ ಡ್ಯಾನ್ಸ್.. ಮೆಲ್ಲನೆ ಕಾಲೆಳೆದ ಪ್ರೀತಿ ಜಿಂಟಾ!
Follow us on

ಫೋಟೋಶೂಟ್ ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಇದಕ್ಕೆ ತಂಡದ ಓನರ್ ಪ್ರೀತಿ ಜಿಂಟಾ ಆಟಗಾರರ ಕಾಲೆಳೆದಿದ್ದಾರೆ. ನಮ್ಮ ಹುಡುಗರು ಶ್ರಮಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
https://www.instagram.com/reel/CFCSrxEJOk0/?utm_source=ig_embed

ಜಾಂಟಿಗೆ ಕೋಚಿಂಗ್!
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್​ಮನ್ ಕನ್ನಡಿಗ ಮಯಾಂಕ್ ಅಗರ್ವಾಲ್, ಫೀಲ್ಡಿಂಗ್ ಲೆಜೆಂಡ್​ಗೆ ಕೋಚಿಂಗ್ ಕೊಟ್ಟಿದ್ದಾರೆ. ಟ್ರೈನಿಂಗ್ ಸೆಷನ್​ನಲ್ಲಿ ಮಯಾಂಕ್, ಜಾಂಟಿ ರೋಡ್ಸ್​​ಗೆ ಕ್ಯಾಚ್ ಹಿಡಿಯೋ ಅಭ್ಯಾಸ ಮಾಡಿಸ್ತಿರೋ ವಿಡಿಯೋ ವೈರಲ್ ಆಗಿದೆ.

ಕೆಕೆಆರ್ ತಂಡ ಸೇರಿಕೊಂಡ ರಸ್ಸೆಲ್
ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪಾಲ್ಗೊಂಡಿದ್ದ ಕೆಕೆಆರ್ ತಂಡದ ಆಟಗಾರರು ದುಬೈಗೆ ಬಂದಿಳಿದಿದ್ದಾರೆ. ಌಂಡ್ರೂ ರಸ್ಸೆಲ್, ಸುನಿಲ್ ನರೈನ್, ಕೋಚ್ ಬ್ರೆಂಡನ್ ಮೆಕ್​ಲಮ್ ಕೆಕೆಆರ್ ತಂಡ ಸೇರಿಕೊಂಡಿದ್ದಾರೆ. ಈ ವೇಳೆ ರಸ್ಸೆಲ್ ಮಾಡಿದ ಮಸ್ತಿ ಫನ್ನಿಯಾಗಿತ್ತು.

ಚೆನ್ನೈ ತಂಡಕ್ಕೆ ತೊಂದರೆಯಿಲ್ಲ
ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮದಿಂದ ಸುರೇಶ್ ರೈನಾ ಚೆನ್ನೈ ತಂಡವನ್ನ ತೊರೆದು ಹೋಗಿದ್ದಾರೆ. ಆದ್ರೆ ಇದು ಚೆನ್ನೈ ತಂಡದ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಾಗೋದಿಲ್ಲ. ಟೂರ್ನಿಯ ಟಾಪ್ ಫೋರ್ ತಂಡಗಳಲ್ಲಿ ಚೆನ್ನೈ ಇರಲಿದೆ ಎಂದು ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಂದೇ ಕೈನಲ್ಲಿ ಕ್ಯಾಚ್ ಹಿಡಿದ ರೋಹಿತ್
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಪ್ರಾಕ್ಟೀಸ್ ವೇಳೆ ಹೊಡೆದ ಸಿಕ್ಸ್ ಬಸ್​ನ ಟಾಪ್ ಮೇಲೆ ಬಿದ್ದಿತ್ತು. ಇದೀಗ ರೋಹಿತ್ ಶರ್ಮಾ ಪ್ರಾಕ್ಟೀಸ್ ಸೆಷನ್​ನಲ್ಲಿ ಒಂದೇ ಕೈನಲ್ಲಿ ಹಿಡಿದ ಅದ್ಭುತ ಕ್ಯಾಚ್ ಎಲ್ಲೆಡೆ ವೈರಲ್ ಆಗಿದೆ.

ಪಬ್​ಜಿ ಬದಲು ಪಾಂಡ್ಯಾ ಆಡ್ತೀರೋದೇನು?
ಮುಂಬೈ ಇಂಡಿಯನ್ಸ್ ತಂಡದ ಹಾರ್ದಿಕ್ ಪಾಂಡ್ಯಾ ಪಬ್​ಜಿ ನಿಷೇಧಗೊಂಡ ನಂತರ ಭಾರತ ಮೂಲದ ಮಾಸ್ಕ್ ಗನ್- ಶೂಟಿಂಗ್ ಗೇಮ್ ಆಡುತ್ತಿದ್ದಾರೆ. ಅಷ್ಟು ಮಾತ್ರವಲ್ಲ. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

ಸ್ಟೀವ್ ಸ್ಮಿತ್ ಲಭ್ಯ
ನೆಟ್ ಪ್ರಾಕ್ಟೀಸ್ ವೇಳೆ ಗಾಯಗೊಂಡಿದ್ದ ರಾಜಸ್ಥಾನ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್, ಗುಣಮುಖರಾಗಿದ್ದಾರೆ. ಸ್ಮಿತ್ ಗಾಯಗೊಂಡಿದ್ದು ರಾಯಲ್ಸ್ ತಂಡದಲ್ಲಿ ಆತಂಕ ಮನೆಮಾಡಿತ್ತು. ಆದ್ರೆ, ಎರಡನೇ ಪಂದ್ಯದಲ್ಲಿ ಸ್ಮಿತ್ ಕಣಕ್ಕಿಳಿಯದಿದ್ರೂ, ಐಪಿಎಲ್​ನಲ್ಲಿ ರಾಜಸ್ಥಾನ್ ತಂಡವನ್ನ ಮುನ್ನಡೆಸಲಿದ್ದಾರೆ.

ಹರಾಜಿಗೆ 150ವಿದೇಶಿ ಆಟಗಾರರು
ಶ್ರೀಲಂಕಾ ಪ್ರೀಮಿಯರ್ ಲೀಗ್​ನ ಮೊದಲ ಆವೃತ್ತಿ ಹಾರಾಜು ಪ್ರಕ್ರಿಯೆ ಅಕ್ಟೋಬರ್ 1ರಂದು ನಡೆಯಲಿದೆ. ಮುನಾಫ್ ಪಟೇಲ್, ಕ್ರಿಸ್ ಗೇಲ್, ಡ್ಯಾರೇನ್ ಸ್ಯಾಮಿ ಸೇರಿದಂತೆ ಒಟ್ಟು 150ಆಟಗಾರರು ಹೆಸರು ಹಾರಾಜು ಪ್ರಕ್ರಿಯೆಯಲ್ಲಿರಲಿದೆ.

ಬಂಧಮುಕ್ತ ಶ್ರೀಶಾಂತ್
ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಲುಕಿ 7 ವರ್ಷಗಳ ನಿಷೇಧಕ್ಕೊಳಗಾದ ಕೇರಳದ ಸ್ಪಿಡ್‌ಸ್ಟಾರ್‌ ಎಸ್‌. ಶ್ರೀಶಾಂತ್‌ ಈಗ ಬಂಧಮುಕ್ತ. ಶ್ರೀ ಮೇಲಿನ ನಿಷೇಧದ ರವಿವಾರ ಕೊನೆಗೊಂಡಿದೆ. ತಾನೀಗ ಸ್ವತಂತ್ರ ಎಂಬುದಾಗಿ ಶ್ರೀಶಾಂತ್ ಸಂತಸ ವ್ಯಕ್ತಪಡಿಸಿದ್ದಾರೆ.

ತೂಗುಗತ್ತಿಯಡಿಯಲ್ಲಿ ಆಫ್ರಿಕಾ ಕ್ರಿಕೆಟಿಗರು
ದಕ್ಷಿಣ ಆಫ್ರಿಕಾ ಸರ್ಕಾರ ಆಫ್ರಿಕಾ ಕ್ರಿಕೆಟ್ ಮಂಡಳಿಯನ್ನ ಅಮಾನತು ಮಾಡಿದೆ. ಯಾವುದೇ ದೇಶದ ಕ್ರಿಕೆಟ್ ಮಂಡಳಿಯಲ್ಲಿ ಆ ದೇಶದ ಸರ್ಕಾರದ ಹಸ್ತಕ್ಷೇಪವನ್ನ ಐಸಿಸಿ ಬಯಸೋದಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಜೀವನದ ಮೇಲೆ ಐಸಿಸಿ ತೂಗುಗತ್ತಿ ನೇತಾಡುತ್ತಿದೆ.

Published On - 2:20 pm, Mon, 14 September 20